CBFC: ಕೇಂದ್ರ ಸರ್ಕಾರದಿಂದ ಸಿಬಿಎಫ್‌ಸಿ ಪುನರ್ ರಚನೆ; ಕನ್ನಡಿಗನಿಗೂ ಒಲಿದ ಸೆನ್ಸಾರ್ ಮಂಡಳಿ ಸದಸ್ಯತ್ವ!

Published : Sep 16, 2026, 08:27 PM IST
CBFC

ಸಾರಾಂಶ

ಕೇಂದ್ರ ಸರ್ಕಾರವು ಮುಂದಿನ ಮೂರು ವರ್ಷಗಳ ಅವಧಿಗೆ ಸೆನ್ಸಾರ್ ಮಂಡಳಿಯನ್ನು (CBFC) ಪುನರ್ ರಚಿಸಿದೆ. 18 ಸದಸ್ಯರ ಈ ನೂತನ ಸಮಿತಿಯಲ್ಲಿ ಗ್ರ್ಯಾಮಿ ಪ್ರಶಸ್ತಿ ವಿಜೇತ ಕನ್ನಡಿಗನಿಗನಿಗೂಸ್ಥಾನ ನೀಡಲಾಗಿದೆ. ಸುನೀಲ್ ಶೆಟ್ಟಿ, ಪ್ರೀತಿ ಜಿಂಟಾ ಸೇರಿದಂತೆ ಹಲವು ಗಣ್ಯರು ಈ ಮಂಡಳಿಯಲ್ಲಿದ್ದಾರೆ.

ಕೇಂದ್ರ ಸರ್ಕಾರವು ಭಾರತೀಯ ಚಲನಚಿತ್ರ ಪ್ರಮಾಣೀಕರಣ ಮಂಡಳಿಯನ್ನು (CBFC - ಸೆನ್ಸಾರ್ ಮಂಡಳಿ) ತಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ ಮೂರು ವರ್ಷಗಳ ಅವಧಿಗೆ ಪುನರ್ ರಚಿಸಿ ಆದೇಶ ಹೊರಡಿಸಿದೆ. ಪ್ರಸಾರ ಭಾರತಿ ಹಾಗೂ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಸೆಪ್ಟೆಂಬರ್ 16, 2026 ರಂದು ಈ ಕುರಿತು ಅಧಿಕೃತ ಅಧಿಸೂಚನೆಯನ್ನು ಪ್ರಕಟಿಸಿದೆ.

18 ಜನರ ನೂತನ ಸಮಿತಿ ರಚನೆ!

ಸಿನೆಮಾಟೋಗ್ರಾಫ್ ಕಾಯ್ದೆ 1952 ರ ಸೆಕ್ಷನ್ 3(1) ಹಾಗೂ ಸಿನೆಮಾಟೋಗ್ರಾಫ್ (ಪ್ರಮಾಣೀಕರಣ) ನಿಯಮಗಳು 2024 ರ ರೂಲ್ 3 ರ ಅಡಿಯಲ್ಲಿ ನೀಡಲಾದ ಅಧಿಕಾರವನ್ನು ಬಳಸಿ ಕೇಂದ್ರ ಸರ್ಕಾರವು ಈ 18 ಸದಸ್ಯರ ನೂತನ ಸಮಿತಿಯನ್ನು ರಚಿಸಿದೆ. ಈ ಮಂಡಳಿಯು ಭಾರತೀಯ ಸಿನಿಮಾಗಳ ಪ್ರಮಾಣೀಕರಣ, ಗುಣಮಟ್ಟ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಕಾಯ್ದುಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ.

ಕನ್ನಡಿಗ, ಗ್ರ್ಯಾಮಿ ಪ್ರಶಸ್ತಿ ವಿಜೇತ ರಿಕ್ಕಿ ಕೇಜ್‌ಗೆ ಸ್ಥಾನ!

ಈ ಬಾರಿಯ ನೂತನ ಸಿಬಿಎಫ್‌ಸಿ ಮಂಡಳಿಯಲ್ಲಿ ಕರ್ನಾಟಕದ ಸಂಗೀತ ನಿರ್ದೇಶಕ ಹಾಗೂ ಮೂರು ಬಾರಿಯ ಗ್ರ್ಯಾಮಿ ಪ್ರಶಸ್ತಿ ವಿಜೇತ ರಿಕ್ಕಿ ಕೇಜ್ ಅವರಿಗೆ ಸ್ಥಾನ ನೀಡಲಾಗಿದೆ. ಭಾರತೀಯ ಸಂಗೀತವನ್ನು ಜಾಗತಿಕ ಮಟ್ಟದಲ್ಲಿ ಎತ್ತಿಹಿಡಿದ ಕನ್ನಡಿಗನಿಗೆ ಈ ಜವಾಬ್ದಾರಿ ಸಿಕ್ಕಿರುವುದು ಕನ್ನಡ ಚಿತ್ರರಂಗ ಹಾಗೂ ಕನ್ನಡಿಗರಿಗೆ ಭಾರಿ ಹೆಮ್ಮೆಯ ವಿಷಯವಾಗಿದೆ.

ಚಿತ್ರರಂಗದ ಖ್ಯಾತ ನಟ-ನಟಿಯರು, ನಿರ್ದೇಶಕರ ದಂಡು!

ಸಿನಿಮಾ ರಂಗದ ವಿವಿಧ ವಿಭಾಗಗಳಲ್ಲಿ ಸುದೀರ್ಘ ಅನುಭವ ಹೊಂದಿರುವ ನಟರು, ನಿರ್ದೇಶಕರು, ನಿರ್ಮಾಪಕರು ಹಾಗೂ ತಜ್ಞರನ್ನು ಈ ಸಮಿತಿಯಲ್ಲಿ ಸೇರ್ಪಡೆಗೊಳಿಸಲಾಗಿದೆ. ನಟ ಸುನೀಲ್ ಶೆಟ್ಟಿ, ಪ್ರಸಿದ್ಧ ನಟಿ ಪ್ರೀತಿ ಜಿಂಟಾ, ಖ್ಯಾತ ನಟ ಪಂಕಜ್ ತ್ರಿಪಾಠಿ, ಪ್ರಸನ್ನಜಿತ್ ಚಟರ್ಜಿ, ಪಲ್ಲವಿ ಜೋಶಿ, ಟಿವಿ ಧಾರಾವಾಹಿ ನಟಿ ರೂಪಾಲಿ ಗಂಗೂಲಿ, ಹೆಸರಾಂತ ನಿರ್ದೇಶಕರಾದ ಪ್ರಿಯದರ್ಶನ್, ನೀಲ ಮಾಧವ್ ಪಂಡಾ ಹಾಗೂ ಸಂಸದ-ಗಾಯಕ ಹಂಸರಾಜ್ ಹಂಸ್ ಈ ಹೊಸ ಮಂಡಳಿಯ ಪ್ರಮುಖ ಆಕರ್ಷಣೆಯಾಗಿದ್ದಾರೆ.

ನೂತನ ಸಿಬಿಎಫ್‌ಸಿ (CBFC) ಸದಸ್ಯರ ಸಂಪೂರ್ಣ ಪಟ್ಟಿ!

ವಿನೋದ್ ಅನುಪಮ್, ಮನೋಜ್ ಜೋಶಿ, ಅಭಿಷೇಕ್ ಜೈನ್, ರಿಕ್ಕಿ ಕೇಜ್, ಪ್ರಿಯದರ್ಶನ್, ಸುನೀಲ್ ಶೆಟ್ಟಿ, ಹಂಸರಾಜ್ ಹಂಸ್, ಸುಪ್ರಿಯಾ ಯಾರ್ಲಗಡ್ಡ, ಯತೀಂದ್ರ ಮಿಶ್ರಾ, ರೂಪಾಲಿ ಗಂಗೂಲಿ, ಪ್ರೀತಿ ಜಿಂಟಾ ನೀಲ ಮಾಧವ್ ಪಂಡಾ, ಪಂಕಜ್ ತ್ರಿಪಾಠಿ, ಪ್ರಸನ್ನಜಿತ್ ಚಟರ್ಜಿ, ಪಲ್ಲವಿ ಜೋಶಿ, ನಿಶಿಗಂಧ ವಾಡ್, ವಾಮನ್ ಕೇಂಗ್ರೆ, ರಮೇಶ್ ಪತಂಗೆ

ಮೂರು ವರ್ಷಗಳ ಅವಧಿಗೆ ಜಾರಿ!

ಈ ನೂತನ ಸಮಿತಿಯು ಅಧಿಕಾರ ವಹಿಸಿಕೊಂಡ ದಿನದಿಂದ ಮೂರು ವರ್ಷಗಳ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ಕಾರ್ಯನಿರ್ವಹಿಸಲಿದೆ. ಭಾರತೀಯ ಚಿತ್ರರಂಗದಲ್ಲಿ ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಹಾಗೂ ಒಟಿಟಿ ವಿಷಯಗಳ ಸೆನ್ಸಾರ್‌ಶಿಪ್ ಕುರಿತು ವ್ಯಾಪಕ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ, ಈ ವೈವಿಧ್ಯಮಯ ಮತ್ತು ಅನುಭವಸ್ಥರನ್ನೊಳಗೊಂಡ ಮಂಡಳಿಯ ರಚನೆಯು ಮಹತ್ವದ ಹೆಜ್ಜೆಯಾಗಿ ಹೊರಹೊಮ್ಮಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Amruthadhaare Serial: ರಿಯಲ್​ ಮದ್ವೆಗಾಗಿ ಜೈದೇವ್​ ಪ್ಲಾಸ್ಟಿಕ್​ ಸರ್ಜರಿ? ಹೊಸ ಅವತಾರದಲ್ಲಿ ಜೈ- ಯಾರೀ ನಟ
Amruthadhaare Serial ರಣರೋಚಕ ಟ್ವಿಸ್ಟ್​: ಸಿಸಿಟಿವಿಯಲ್ಲಿ ಕಂಡುಬಂದ ಜೈದೇವ ಸಮಾಧಿಯ ಭಯಾನಕ ದೃಶ್ಯ