Viral: ಬಿಗ್‌ ಬಾಸ್‌ನಲ್ಲಿ ಸುದೀಪ್ ರಾಜಕೀಯ ಮಾತು; 'ನೆಟ್ಟು ಬೋಲ್ಟು ಸರಿಯಾಗೇ ಟೈಟಾಗಿದೆ' ಎಂದ ನೆಟ್ಟಿಗರು!

Published : Sep 14, 2026, 07:58 PM IST
Bigg Boss Sudeep

ಸಾರಾಂಶ

ಬಿಗ್ ಬಾಸ್ ವೇದಿಕೆಯಲ್ಲಿ ಕಿಚ್ಚ ಸುದೀಪ್ ಅವರು ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಹೊಗಳಿದ್ದು ದೊಡ್ಡ ಚರ್ಚೆಗೆ ಕಾರಣವಾಗಿದೆ. ಮನರಂಜನಾ ಕಾರ್ಯಕ್ರಮದಲ್ಲಿ ರಾಜಕೀಯ ಪ್ರಸ್ತಾಪದ ಅಗತ್ಯವೇನಿತ್ತು ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದು, 'ನೆಟ್ಟು-ಬೋಲ್ಟು ಟೈಟ್' ಎಂಬ ಮೀಮ್‌ಗಳ ಮೂಲಕ ವ್ಯಂಗ್ಯವಾಡುತ್ತಿದ್ದಾರೆ. ಈ ಘಟನೆಯು ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧ ಚರ್ಚೆಗಳನ್ನು ಹುಟ್ಟುಹಾಕಿದೆ.

ಕನ್ನಡ ಕಿರುತೆರೆಯ ರಿಯಾಲಿಟಿ ಶೋ 'ಬಿಗ್ ಬಾಸ್' ದಿನಕ್ಕೊಂದು ಹೊಸ ತಿರುವು ಪಡೆಯುತ್ತಾ ಸಾಗುತ್ತಿದೆ. ಮನೆಯ ಒಳಗಡೆ ಸ್ಪರ್ಧಿಗಳ ನಡುವೆ ನಡೆಯುವ ಜಗಳ, ತಂಟೆ-ತಕಾಲಿಗಳು ಒಂದೆಡೆಯಾದರೆ, ವಾರಾಂತ್ಯದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಖಡಕ್ ನಿರೂಪಣೆ ನೋಡುವುದೇ ವೀಕ್ಷಕರಿಗೆ ಹಬ್ಬ. ಆದರೆ ಈ ಬಾರಿಯ 'ವಾರದ ಕಥೆ ಕಿಚ್ಚನ ಜೊತೆ' ಸಂಚಿಕೆಯಲ್ಲಿ ನಡೆದ ಒಂದು ಪ್ರಸಂಗ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದ್ದು, ರಾಜಕೀಯ ಹಾಗೂ ಗಾಂಧಿನಗರದ ಅಂಗಳದಲ್ಲಿ ಬಿಸಿಬಿಸಿ ಚರ್ಚೆ ಸೃಷ್ಟಿಸಿದೆ.

ಅಚ್ಚರಿ ಮೂಡಿಸಿದ ಸುದೀಪ ನಡೆ!

ಬಿಗ್ ಬಾಸ್ ವೇದಿಕೆ ಎಂದರೆ ಸಾಮಾನ್ಯವಾಗಿ ಮನರಂಜನೆ, ಸ್ಪರ್ಧಿಗಳ ಕ್ಲಾಸ್ ತೆಗೆದುಕೊಳ್ಳುವುದು ಮತ್ತು ಎಲಿಮಿನೇಷನ್ ವಿಚಾರಗಳಷ್ಟೇ ಪ್ರಮುಖವಾಗಿರುತ್ತವೆ. ಆದರೆ ಇತ್ತೀಚಿನ ಸಂಚಿಕೆಯೊಂದರಲ್ಲಿ ಸುದೀಪ್ ಅವರು ರಾಜಕೀಯ ವಿಚಾರವೊಂದನ್ನು ಪ್ರಸ್ತಾಪಿಸಿದ್ದು ಎಲ್ಲರ ಅಚ್ಚರಿಗೆ ಕಾರಣವಾಯಿತು. ರಾಜ್ಯ ಸರ್ಕಾರ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಕುರಿತಾಗಿ ಸುದೀಪ್ ಆಡಿದ ಮಾತುಗಳು, ನಂತರದ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಪ್ರೇಕ್ಷಕರ ಮತ್ತು ನೆಟ್ಟಿಗರ ಗಮನ ಸೆಳೆದಿವೆ.

ನೆಟ್ಟಿಗರ ಪ್ರಶ್ನೆ ಏನು?

ವರದಿಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಪೋಸ್ಟ್‌ಗಳ ಪ್ರಕಾರ, ಬಿಗ್ ಬಾಸ್ ವೇದಿಕೆಯಲ್ಲಿ ಸುದೀಪ್ ಅವರು ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಸರ್ಕಾರದ ಸಾಧನೆಗಳು ಹಾಗೂ ಅವರ ಆಡಳಿತ ಶೈಲಿಯನ್ನು ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂಬ ಮಾತುಗಳು ಹರಿದಾಡುತ್ತಿವೆ. ರಿಯಾಲಿಟಿ ಶೋ ಒಂದರ ವೇದಿಕೆಯಲ್ಲಿ ಪ್ರಚಲಿತ ರಾಜಕೀಯ ನಾಯಕರನ್ನು ಹೊಗಳುವ ಹಾಗೂ ಸರ್ಕಾರದ ಸಾಧನೆಗಳನ್ನು ಪ್ರಸ್ತಾಪಿಸುವ ಅವಶ್ಯಕತೆ ಏನಿತ್ತು ಎಂಬ ಪ್ರಶ್ನೆಯನ್ನು ನೆಟ್ಟಿಗರು ಎತ್ತಿದ್ದಾರೆ.

ವ್ಯಂಗ್ಯಾತ್ಮಕ ಪೋಸ್ಟ್ಸ್ ವೈರಲ್! 

ಈ ಬೆನ್ನಲ್ಲೇ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಹಾಗೂ ಮೀಮ್ ಕ್ರಿಯೇಟರ್‌ಗಳು ಭಾರಿ ಸಕ್ರಿಯರಾಗಿದ್ದಾರೆ. 'ನಮ್ಮ ಕಲ್ಬುರ್ಗಿ ಮೀಮ್ಸ್' ಸೇರಿದಂತೆ ಹಲವು ಜನಪ್ರಿಯ ಮೀಮ್ ಪೇಜ್‌ಗಳಲ್ಲಿ ಈ ಕುರಿತು ತಮಾಷೆಯ ಹಾಗೂ ವ್ಯಂಗ್ಯಾತ್ಮಕ ಪೋಸ್ಟ್‌ಗಳು ವೈರಲ್ ಆಗುತ್ತಿವೆ. ಸುದೀಪ್ ಅವರ ಈ ರಾಜಕೀಯ ಹೇಳಿಕೆಯನ್ನು ಉಲ್ಲೇಖಿಸಿ, "ಈಗ ನೆಟ್ಟು ಬೋಲ್ಟು ಸರಿಯಾಗೇ ಟೈಟಾಗಿದೆ!" ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕಲಾವಿದರು ಮತ್ತು ಸರ್ಕಾರಗಳ ನಡುವಿನ ಸಂಬಂಧ ಹಾಗೂ ಐಟಿ/ಇಡಿ ದಾಳಿಗಳು ಅಥವಾ ಸರ್ಕಾರಿ ಬೆಂಬಲದಂತಹ ವಿಚಾರಗಳನ್ನು ಪರೋಕ್ಷವಾಗಿ ನೆನಪಿಸುತ್ತಾ, "ಇಂತಹ ಮಾತುಗಳಿಂದ ನೆಟ್ಟು-ಬೋಲ್ಟು ಟೈಟ್ ಆಗಿದೆ" ಎಂದು ವ್ಯಂಗ್ಯವಾಡಲಾಗುತ್ತಿದೆ.

ಸೋಶಿಯಲ್‌ ಮೀಡಿಯಾದಲ್ಲಿ ವಿಭಿನ್ನ ಪ್ರತಿಕ್ರಿಯೆ!

ವೀಕ್ಷಕರ ಅಸಮಾಧಾನ: ಬಿಗ್ ಬಾಸ್ ಸಂಪೂರ್ಣವಾಗಿ ಒಂದು ಕುಟುಂಬ ಸಮೇತ ಕುಳಿತು ನೋಡುವ ಮನರಂಜನಾ ಕಾರ್ಯಕ್ರಮ. ಇಲ್ಲಿ ರಾಜಕೀಯವನ್ನು ತರುವುದು ಸರಿಯಲ್ಲ. ಮನರಂಜನೆಯ ವೇದಿಕೆಯನ್ನು ರಾಜಕೀಯ ನಾಯಕರನ್ನು ಪ್ರಮೋಟ್ ಮಾಡಲು ಅಥವಾ ಓಲೈಸಲು ಬಳಸಿಕೊಳ್ಳಬಾರದು ಎಂಬುದು ಬಹುತೇಕ ವೀಕ್ಷಕರ ಅಭಿಪ್ರಾಯ.

ನೆಟ್ಟಿಗರ ವ್ಯಂಗ್ಯ; ಸುದೀಪ್ ಅವರ ಮೇಲಿದ್ದ 'ನೆಟ್ಟು-ಬೋಲ್ಟು' ಸಡಿಲವಾಗಿತ್ತು, ಈಗ ಸರ್ಕಾರಕ್ಕೆ ಮೆಚ್ಚುಗೆ ಸೂಚಿಸಿದ ಮೇಲೆ ಸರಿಯಾಗಿ ಟೈಟ್ ಆಗಿದೆ" ಎಂದು ಹಲವರು ಕಾಲೆಳೆಯುತ್ತಿದ್ದಾರೆ.

ಮತ್ತೊಂದು ಬಣ ಹೇಳೊದೇನು?

ಇನ್ನು ಕೆಲವರು ಸುದೀಪ್ ಅವರ ಪರವಾಗಿಯೂ ಧ್ವನಿ ಎತ್ತಿದ್ದು, ರಾಜಕೀಯ ನಾಯಕರ ಜೊತೆಗಿನ ವೈಯಕ್ತಿಕ ಸ್ನೇಹ ಅಥವಾ ಅವರ ಕಾರ್ಯವೈಖರಿಯನ್ನು ಪ್ರಶಂಸಿಸುವುದು ಒಬ್ಬ ನಟನಾಗಿ ಅವರ ವೈಯಕ್ತಿಕ ಹಕ್ಕು, ಅದಕ್ಕೆ ಇಷ್ಟೊಂದು ದೊಡ್ಡ ಮಟ್ಟದ ವಿವಾದದ ಬಣ್ಣ ಹಚ್ಚುವ ಅಗತ್ಯವಿಲ್ಲ ಎಂದು ವಾದಿಸುತ್ತಿದ್ದಾರೆ. ಅದರಲ್ಲೂ ಜಾಹೀರಾತು ಸಹ ಆಗಿರಬಹುದು ಎಂದಿದ್ದಾರೆ. ಏನೇ ಆಗಲಿ, ಬಿಗ್ ಬಾಸ್ ಮನೆಯ ಒಳಗಿನ ಜಗಳಗಳಿಗಿಂತ ಹೊರಗಡೆ ಸುದೀಪ್ ಅವರ ಈ 'ರಾಜಕೀಯ ಮಾತು' ಹಾಗೂ ನೆಟ್ಟಿಗರ 'ನೆಟ್ಟು-ಬೋಲ್ಟು ಟೈಟ್' ಕಾಮೆಂಟ್‌ಗಳು ಸದ್ಯ ಡಿಜಿಟಲ್ ಜಗತ್ತಿನಲ್ಲಿ ಟ್ರೆಂಡಿಂಗ್ ವಿಷಯವಾಗಿ ಹೊರಹೊಮ್ಮಿವೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ವೋಟ್ ಮಾಡಿದ್ರೂ ಹೇಟ್‌ ಮಾಡಿದ್ರೂ ನಿಮ್ಮಿಷ್ಟ, ಆದರೆ..': ಬಿಗ್‌ ಬಾಸ್‌ ಎಲಿಮಿನೇಷನ್‌ ಬಳಿಕ ಪ್ರಥಮಾ ಮಾತು
ಡೋಲು-ಮೋಲು, ಕಿತ್ತೊಗಿರೋ ಆಕ್ಟಿಂಗ್: ಬೆಂಕಿ ಹಚ್ಚಿ ತೆಪ್ಪೆಗೆ ಕುಳಿತ ಶಾಸ್ತ್ರಿ! ಗಗನ್ ಗರಂ!