
ಬ್ರಹ್ಮಗಂಟು ಈಗ ಟ್ವಿಸ್ಟ್ ಪಡೆದಿದೆ. ಅತ್ತಿಗೆಯ ಮಾತು ಕೇಳಿ ಪತ್ನಿಯನ್ನೇ ದೂಷಿಸುವ, ಪತ್ನಿ ಕಂಡರೆ ಕಿರಿಕಿರಿ ಮಾಡುವ ಚಿರುಗೆ ಈಗ ಪತ್ನಿ ದೀಪಾಳ ಮೇಲೆ ಲವ್ ಶುರುವಾಗಿದೆ. ದೀಪಾ ಮತ್ತು ಚಿರು ಯಾವುದೇ ಕಾರಣಕ್ಕೂ ಒಂದಾಗಬಾರದು ಎಂದು ಅತ್ತಿಗೆ ಸೌಂದರ್ಯ, ಚಿರುನಿಗೆ ಮತ್ತೊಂದು ಮದ್ವೆ ಮಾಡಲು ನೋಡುತ್ತಿದ್ದಾಳೆ. ಆದರೆ, ಇದೇ ವೇಳೆ ಚಿರು ಮಾತ್ರ ದೀಪಾಳ ಲವ್ನಲ್ಲಿ ಬಿದ್ದಿದ್ದಾನೆ. ಅಷ್ಟಕ್ಕೂ, ಯಾವುದೇ ದುರುದ್ದೇಶ ಇಲ್ಲದೆಯೇ ಸೌಂದರ್ಯಳಿಂದ ತೊಟ್ಟಿಲ ಪೂಜೆ ಮಾಡಿಸಲು ದೀಪಾ ಮುಂದಾಗಿದ್ದಳು. ಆದರೆ ಮಗು ಎಂದ್ರೆ ಆಗದ ಸೌಂದರ್ಯ ಅದನ್ನೇ ದೀಪಾಳ ವಿರುದ್ಧ ಅಸ್ತ್ರವಾಗಿ ಬಳಸಿಕೊಂಡಿದ್ದಾಳೆ. ಇದನ್ನು ನೋಡಿ ಚಿರು ದೀಪಾ ವಿರುದ್ಧ ತಿರುಗಿ ಬಿದ್ದಿದ್ದು ಆಕೆಯನ್ನು ಮನೆಯಿಂದ ಹೊರಕ್ಕೆ ಹಾಕಿದ್ದಾನೆ. ಇನ್ನು ನನ್ನ- ನಿಮ್ಮ ಸಂಬಂಧ ಮುಗಿಯಿತು, ಮತ್ತೆ ಮನೆಗೆ ಬರಬೇಡಿ ಎಂದು ಹೇಳಿದ್ದಾನೆ. ಇದೇ ಕಾರಣಕ್ಕೆ ಪೆದ್ದು ನಾಯಕರ ವಿರುದ್ಧ ನೆಟ್ಟಿಗರು ಕಿಡಿ ಕಾರುತ್ತಿದ್ದು, ನೀವು ಹೊರಗೆ ಬಂದ್ರೆ ಕಪಾಳಮೋಕ್ಷ ಮಾಡ್ತೇವೆ, ನಮ್ಮ ಕೈಗೆ ನೀವು ಸಿಗಿ, ಇದೆ ಹಬ್ಬ ಎಂದೆಲ್ಲಾ ಕಮೆಂಟ್ ಮಾಡಿದ್ದರು.
ಆದರೆ ದೀಪಾ, ಚಿರುಗೆ ನೀವೆಷ್ಟು ಸ್ವಾರ್ಥಿಯಾದ್ರಿ, ಅತ್ತಿಗೆ ನಿಮ್ಮನ್ನೇ ಮಗ ಎಂದು ತಿಳಿದು ಮತ್ತೊಂದು ಮಗು ಮಾಡಿಕೊಳ್ಳಲಿಲ್ಲ. ನೀವು ಕೂಡ ಅತ್ತಿಗೆಗೆ ಪ್ರೋತ್ಸಾಹ ಮಾಡಿದ್ರಿ. ಅವರಿಗೂ ಅಮ್ಮ ಆಗಬೇಕು, ಮಗು ಬೇಕು ಎನ್ನುವ ಆಸೆ ಇರತ್ತಲ್ವಾ ಎಂದಾಗ ಚಿರುಗೆ ಹೌದು ಎನ್ನಿಸಿದೆ. ಅಷ್ಟಕ್ಕೂ ಸೌಂದರ್ಯ ಮಗು ಮಾಡಿಕೊಳ್ಳದೇ ಇರಲು ಕಾರಣ ಎಲ್ಲಿ ತನ್ನ ಸೌಂದರ್ಯ ಹಾಳಾಗುತ್ತದೆಯೋ ಎನ್ನುವ ಕಾರಣಕ್ಕೆ. ಆದರೆ ಚಿರುನನ್ನೇ ತನ್ನ ಮಗು ಎಂದು ಅಂದುಕೊಂಡಿರುವುದಾಗಿ, ಅದಕ್ಕಾಗಿ ತಾನು ಮಕ್ಕಳನ್ನು ಮಾಡಿಕೊಳ್ಳುತ್ತಿಲ್ಲ ಎಂದು ಎಲ್ಲರನ್ನೂ ನಂಬಿಸಿ ಇಟ್ಟಿದ್ದಾಳೆ. ಯಾರಿಗೂ ಈ ಸತ್ಯ ಮಾತ್ರ ಗೊತ್ತಿಲ್ಲ. ಚಿರುಗೆ ತಾನು ಮಾಡ್ತಿರೋದು ತಪ್ಪು ಎನ್ನಿಸಿ ದೀಪಾಳ ಮೇಲೆ ಲವ್ ಶುರುವಾಗಿದೆ.
ಭೂಮಿಕಾ ಕೈಯಲ್ಲಿ ಬಂದೇ ಬಿಡ್ತು ಚಪ್ಪಲ್ಲು! ಇನ್ನು ಮುಗೀತು ವಿಷಕನ್ಯೆ ಕಥೆ...
ಅದಕ್ಕಾಗಿ ಈಗ ದೀಪಾಳಿಗೆ ಲವ್ ಲೆಟರ್ ಬರೆಯಲು ಮುಂದಾಗಿದ್ದಾನೆ. ಈಗ ಲೆಟರ್ ಅಂದ್ರೆ ವಾಟ್ಸ್ಆ್ಯಪ್ ಮೆಸೇಜ್ ತಾನೆ? ಹೇಗೆ ಶುರು ಮಾಡಬೇಕು ಎಂದು ತಿಳಿಯದೇ ಕೊನೆಯದಾಗಿ, ಪ್ರೀತಿಯ 'ದೀಪ'... ಎಂದು ಬರೆದು, ಕುಟುಂಬಕ್ಕಾಗಿ ನೀವು ಮಾಡ್ತಿರೋ ತ್ಯಾಗ ಎಲ್ಲಾ ಇಷ್ಟ ಆಯ್ತು. ಹಾಗೆ... ಹೀಗೆ... ಹೊಗಳಿದ್ದಾನೆ. ಆದರೆ, ನೆಟ್ಟಿಗರ ಪೈಕಿ ಕೆಲವರು ಈತ ಬರೆದಿದ್ದರಲ್ಲೂ ಸ್ಪೆಲ್ಲಿಂಗ್ ಮಿಸ್ಟೆಕ್ ಹುಡುಕಿದ್ದಾರೆ. ಅದು ದೀಪ ಅಲ್ಲ... ದೀಪಾ ಆಗಬೇಕು... ಪಾ ಅನ್ನು ಎಳೀಬೇಕು ಮಗಾ. ಪತ್ನಿ ಹೆಸ್ರನ್ನೇ ತಪ್ಪು ಬರೀಬೇಡಾ ಎಂದು ಕಮೆಂಟ್ ಹಾಕಿದ್ದು, ಅದಕ್ಕೆ ಹಲವರು ರಿಪ್ಲೈ ಮಾಡಿದ್ದಾರೆ. ಅಯ್ಯೋ ಒಟ್ನಲ್ಲಿ ಅವನಿಗೆ ಲವ್ ಶುರುವಾಯ್ತಲ್ಲಾ, ಅಷ್ಟೇಸಾಕು. ಅದನ್ನು ಬಿಟ್ಟು ಎಳೀಬೇಕು ಹಾಗೆ ಮಾಡ್ಬೇಕು ಅಂದ್ರೆ ಹೇಗೆ ಎಂದು ಪ್ರಶ್ನಿಸಿದ್ದಾರೆ.
ಒಟ್ಟಿನಲ್ಲಿ ಇವರಿಬ್ಬರ ಪ್ರೀತಿಗೆ ಯಾರ ಕಣ್ಣೂ ತಾಗದಿರಲಿ ಎಂದು ಹೇಳುತ್ತಿದ್ದಾರೆ. ಅತ್ತ ಸೌಂದರ್ಯ ಇಬ್ಬರನ್ನೂ ದೂರ ಮಾಡುವ ಪ್ಲ್ಯಾನ್ ಮಾಡ್ತಿದ್ದಾಳೆ. ಅತ್ತಿಗೆ ತನಗಾಗಿ ಎಲ್ಲಾ ತ್ಯಾಗ ಮಾಡಿದ್ದಾಳೆ ಎಂದು ಅವಳು ಹೇಳಿದಂತೆ ಕೇಳುವುದಾಗಿ ಚಿರು ಬೇರೆ ಭಾಷೆ ಕೊಟ್ಟಿದ್ದಾನೆ. ಟೈಮ್ ಬಂದಾಗ ನಾನು ವಿಷಯ ಹೇಳುವೆ, ಭಾಷೆಯನ್ನು ನೆನಪಿನಲ್ಲಿ ಇಟ್ಕೊ ಎಂದು ಸೌಂದರ್ಯ ಹೇಳಿದ್ದಾಳೆ. ಈಗ ಮುಂದಿನ ಸಂಚಿಕೆಯಲ್ಲಿ ಅಡಕತ್ತರಿಯಲ್ಲಿ ಸಿಲುಕುವ ಚಿರು ಏನು ಮಾಡ್ತಾನೋ ನೋಡಬೇಕಿದೆ!
ಹೆಂಡ್ತಿ ಒಡವೆ ಕೇಳಿದ್ರೆ 'ಈ ತಿಂಗಳು ಆಗಲ್ಲ' ಅನ್ನೋ ಗಂಡಂದಿರು ನೋಡಬೇಕಾದ ವಿಡಿಯೋ ಇದು!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.