Bhagyalakshmi Serial: ಅಯ್ಯಯ್ಯೋ..! ಇಷ್ಟವಿಲ್ಲದೆ ಪೂಜಾ ಮದುವೆ ನಡೆದೋಯ್ತಾ? ಕುಣಿಯುತ್ತಿರೋ ಮನೆಹಾಳ ತಾಂಡವ್!‌

Published : May 10, 2025, 10:09 AM ISTUpdated : May 12, 2025, 01:08 PM IST
Bhagyalakshmi Serial: ಅಯ್ಯಯ್ಯೋ..! ಇಷ್ಟವಿಲ್ಲದೆ ಪೂಜಾ ಮದುವೆ ನಡೆದೋಯ್ತಾ? ಕುಣಿಯುತ್ತಿರೋ ಮನೆಹಾಳ ತಾಂಡವ್!‌

ಸಾರಾಂಶ

ಪೂಜಾಳ ವಿವಾಹಕ್ಕೆ ಮತ್ತೆ ಅಡ್ಡಿ! ಕಿಶನ್‌ನ ಪ್ರೇಮ ನಿವೇದನೆ ತಿರಸ್ಕರಿಸಿದ ಪೂಜಾಳಿಗೆ ಹಿರಿಯರು ಮದುವೆ ಮಾಡಿಸಲು ಮುಂದಾದರು. ತಾಂಡವ್‌ ಪೂಜಾಳ ಈ ಸ್ಥಿತಿಗೆ ಖುಷಿಪಟ್ಟಿದ್ದಾನೆ. ಭಾಗ್ಯ ಮಾತ್ರ ಪೂಜಾಳ ಮದುವೆಗೆ ಪಣ ತೊಟ್ಟಿದ್ದಾಳೆ. ಕುಟುಂಬದವರ ಪ್ರತಿಕ್ರಿಯೆ ಏನಾಗಬಹುದು?

ʼಭಾಗ್ಯಲಕ್ಷ್ಮೀʼ ಧಾರಾವಾಹಿಯಲ್ಲಿ ಪೂಜಾಳನ್ನು ನೋಡಲು ಬಂದಿದ್ದ ಗಂಡಿನ ಕಡೆಯವರು ಹಾಗೆಯೇ ಹೋದರು. ಭಾಗ್ಯ ಗಂಡನ ಬಿಟ್ಟವಳು ಎಂದು ಈಗ ಪೂಜಾಳನ್ನು ಮದುವೆ ಆಗಲು ಯಾರೂ ಮುಂದೆ ಬರುತ್ತಿಲ್ಲ. ಇನ್ನೊಂದು ಕಡೆ ಪೂಜಾಳನ್ನು ಕಿಶನ್‌ ಎನ್ನುವ ಅವಳ ಕಾಲೇಜು ಸೀನಿಯರ್‌ ಪ್ರೀತಿ ಮಾಡ್ತಿರೋದು ಕೂಡ ಈಗ ದೊಡ್ಡ ತಿರುವು ತಗೊಂಡಿದೆ. 

ಪಾರ್ಕ್‌ನಲ್ಲಿ ಮಾತಾಡುತ್ತಿದ್ದ ಪೂಜಾ-ಕಿಶನ್!‌ 
ಪೂಜಾ ಈಗ ಅವಳ ಕಾಲೇಜು ಸೀನಿಯರ್‌ ಆಫೀಸ್‌ನಲ್ಲಿ ಕೆಲಸ ಮಾಡುತ್ತಿದ್ದಾಳೆ. ಅವಳ ಸೀನಿಯರ್‌ ಕಿಶನ್‌, ಪೂಜಾಗೆ ಪ್ರೇಮ ನಿವೇದನೆ ಮಾಡಿದರೂ ಕೂಡ ಅವಳು ಒಪ್ಪಿಕೊಂಡಿಲ್ಲ. ಇದೇ ವಿಚಾರಕ್ಕೆ ಇವರ ಮಧ್ಯೆ ಸಂಘರ್ಷ ನಡೆಯುತ್ತಿದೆ. ಹೀಗಿರುವಾಗ ಕಿಶನ್, ಪೂಜಾ ಪಾರ್ಕ್‌ನಲ್ಲಿ ಮಾತನಾಡುತ್ತಿದ್ದರು.

ಖುಷಿಪಟ್ಟ ತಾಂಡವ್!‌ 
ಮದುವೆ ಆಗುವಂತೆ ಪೂಜಾಳನ್ನು ಕಿಶನ್‌ ಪೀಡಿಸುತ್ತಿದ್ದ. ಅದೇ ಸಮಯಕ್ಕೆ ಅಲ್ಲಿದ್ದ ಹಿರಿಯರು ಬಂದು, “ನೀವು ಲವ್‌ ಮಾಡ್ತಿದೀರಾ. ನಿಮಗೆಲ್ಲ ಮದುವೆ ಮಾಡಿಸಿ ಬುದ್ಧಿ ಕಲಿಸುತ್ತೇವೆ” ಎಂದು ಹೇಳಿದ್ದಾರೆ. ಈ ಮಾತು ಕೇಳಿ ಕಿಶನ್‌ಗೂ, ಪೂಜಾಗೂ ಶಾಕ್‌ ಆಗಿದೆ. ಯಾರಿಗೂ ಹೇಳದೆ, ಮನೆಯವರಿಗೂ ತಿಳಿಸದೆ ಮದುವೆ ಆಗೋದು ಅಂದ್ರೇನು? ಆದರೆ ಆ ಹಿರಿಯರು ಏನೂ ವಿಷಯ ಗೊತ್ತಿಲ್ಲದೆ ಮದುವೆ ಮಾಡಿಸೋಕೆ ಮುಂದಾಗಿದ್ದಾರೆ. ಇದನ್ನು ತಾಂಡವ್‌ ನೋಡಿ, ಫುಲ್‌ ಖುಷಿಪಟ್ಟಿದ್ದಾನೆ. 

ಮನೆಹಾಳನಿಗೆ ಇನ್ನೂ ಖುಷಿ! 
ಭಾಗ್ಯ ತಂಗಿ ಪೂಜಾಳ ಲೈಫ್‌ ಹಾಳಾದರೆ ತಾಂಡವ್‌ಗೆ ಹಾಲು ಕುಡಿದಷ್ಟು ಸಂತೋಷ. ಪೂಜಾಳನ್ನು ನೋಡಲು ಬಂದ ಹುಡುಗನಿಗೆ ಇಲ್ಲಸಲ್ಲದ್ದು ಹೇಳಿ ಆ ಮದುವೆ ಸಂಬಂಧವನ್ನು ತಪ್ಪಿಸಿದ್ದು ಕೂಡ ಇದೇ ಮನೆಹಾಳಾನೇ. 

ಮನೆಯವರು ಏನಂತಾರೆ?
ಎಷ್ಟೇ ಕಷ್ಟ ಆದರೂ ನನ್ನ ತಂಗಿ ಪೂಜಾಳ ಮದುವೆ ಮಾಡ್ತೀನಿ ಅಂತ ಭಾಗ್ಯ ಅಂದುಕೊಂಡಿದ್ದಳು. ಇನ್ನೊಂದು ಕಡೆ ನನ್ನ ಅಕ್ಕ ಭಾಗ್ಯಗೆ ಗೌರವ ಇಲ್ಲದೆ ಕಡೆ ಚಪ್ಪಲಿಯನ್ನು ಬಿಡೋದಿಲ್ಲ ಅಂತ ಪೂಜಾ ಪಣತೊಟ್ಟಿದ್ದಳು. ಹೀಗಿರುವಾಗ ಪಾರ್ಕ್‌ನಲ್ಲೇ ಕಿಶನ್‌, ಪೂಜಾ ಮದುವೆ ನಡೆದರೆ ಅವರ ಮನೆಯವರು ಯಾವ ರೀತಿ ರಿಯಾಕ್ಟ್‌ ಮಾಡ್ತಾರೆ? ಪೂಜಾ ತಾಯಿ ಸುನಂದ, ಭಾಗ್ಯ ಅತ್ತೆ ಕುಸುಮಾ ಸುಮ್ಮನೆ ಇರ್ತಾರಾ? ಇನ್ನೊಂದು ಕಡೆ ಪೂಜಾಳ ಪರಿಸ್ಥಿತಿಯನ್ನು ಪೂಜಾ ಅರ್ಥ ಮಾಡಿಕೊಳ್ತಾಳಾ? 

ವೀಕ್ಷಕರು ಏನು ಹೇಳ್ತಾರೆ?
ನೋಡಿ ನೋಡಿ ಮನೆಹಾಳ ತಾಂಡಾವ್ ಅಂತ ಅವ್ರೆ ಒಪಿಕೊಂಡವ್ರೆ
ಯಾರೇನೇ ಹೇಳಿದ್ರು ಪೂಜಾ ಕೆಟ್ಟ ದಾರಿ ತುಳಿಯೋಲ್ಲ

ಧಾರಾವಾಹಿ ಕಥೆ ಏನು?
ತಾಂಡವ್-ಭಾಗ್ಯಳಿಗೆ ಮದುವೆ ಆಗಿ ಇಬ್ಬರು ಮುದ್ದಾದ ಮಕ್ಕಳಿದ್ದಾರೆ. ಯಾವಾಗಲೂ ಭಾಗ್ಯಳನ್ನು ಹೀಯಾಳಿಸೋ ತಾಂಡವ್‌ಗೆ ಪತ್ನಿ ಕಂಡರೆ ಆಗೋದಿಲ್ಲ. ಮನೆಯವರು ಎಷ್ಟೇ ಬೇಡ ಅಂದ್ರೂ ಕೂಡ ಅವನು ಇನ್ನೊಂದು ಹುಡುಗಿಯನ್ನು ಪ್ರೀತಿಸಿ ಮದುವೆ ಆಗಿದ್ದಾನೆ. ಭಾಗ್ಯ ಬೇಡ ಅಂದ್ರೂ ಕೂಡ ಶ್ರೇಷ್ಠ ಹಠ ಮಾಡಿ ತಾಂಡವ್‌ನನ್ನು ಮದುವೆ ಆಗಿದ್ದಾಳೆ. ಎಲ್ಲರೂ ಭಾಗ್ಯಳನ್ನು ಹೊಗಳ್ತಾರೆ, ಅವನು ಹಾಳಾಗಬೇಕು, ಅವಳಿಗೆ ಎಲ್ಲರ ಮುಂದೆ ಅವಮಾನ ಆಗಬೇಕು ಎನ್ನೋದು ದುಷ್ಟ ತಾಂಡವ್‌ನ ಉದ್ದೇಶವಾಗಿದೆ. ಭಾಗ್ಯ ಸೋಲಬೇಕು ಅಂತ ಅವನು, ಶ್ರೇಷ್ಠ ಜೊತೆ ಸೇರಿ ಏನು ಬೇಕಿದ್ರೂ ಮಾಡ್ತಾನೆ. ಈಗ ಭಾಗ್ಯಳ ತಂಗಿ ಪೂಜಾ ಕೂಡ ಚೆನ್ನಾಗಿರಬಾರದು ಅಂತ ಅವಳ ಮದುವೆಗೆ ಕಲ್ಲು ಹಾಕುತ್ತಿದ್ದಾನೆ.

ಪಾತ್ರಧಾರಿಗಳು
ತಾಂಡವ್ ಪಾತ್ರದಲ್ಲಿ ಸುದರ್ಶನ್‌ ರಂಗಪ್ರಸಾದ್‌, ಭಾಗ್ಯ ಪಾತ್ರದಲ್ಲಿ ಸುಷ್ಮಾ ಕೆ ರಾವ್‌, ಪೂಜಾ ಪಾತ್ರದಲ್ಲಿ ಆಶಾ ಅಯ್ಯನರ್‌, ಶ್ರೇಷ್ಠ ಪಾತ್ರದಲ್ಲಿ ಕಾವ್ಯ ಗೌಡ ಅವರು ನಟಿಸುತ್ತಿದ್ದಾರೆ.  
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಹೊಸ ವರ್ಷಕ್ಕೆ ಶ್ವೇತಾ ಪ್ರಸಾದ್ ಸ್ಪೆಷಲ್ ಗಿಫ್ಟ್… ರಾಧಾ ಮಿಸ್ ಅಂದಕ್ಕೆ ಫ್ಯಾನ್ಸ್ ಫಿದಾ
Karna Serial: ಎಲ್ಲ ಖುಷಿಯಿಂದ ಇರ್ಬೇಕಿದ್ರೆ, ಈ ಥರ ಮಾಡಿದ್ರೆ ಚೆನ್ನಾಗಿರಲ್ಲ: ಡೈರೆಕ್ಟರ್‌ಗೆ ವಾರ್ನಿಂಗ್