'ಗೌರಿ' ನೋಡಲು ಬಂದ ನಿವೇದಿತಾ: ಅಂಗಡಿ ಮುಚ್ಕೊಳಮ್ಮಾ ಅಂತೆಲ್ಲಾ ಹೇಳೋದಾ ನೆಟ್ಟಿಗರು?

By Suchethana D  |  First Published Aug 15, 2024, 3:50 PM IST

ಇಂದ್ರಜಿತ್‌ ಲಂಕೇಶ್‌ ನಿರ್ದೇಶನದ ಗೌರಿ ಚಿತ್ರ ವೀಕ್ಷಣೆಗೆ ಬಂದ ನಿವೇದಿತಾ ಗೌಡರನ್ನು ನೋಡಿ ಟ್ರೋಲಿಗರು ಹೀಗೆಲ್ಲಾ ಹೇಳೋದಾ? 
 


ಇಂದ್ರಜಿತ್‌ ಲಂಕೇಶ್‌ ನಿರ್ದೇಶನದ, ಸಮರ್ಜಿತ್‌ ಲಂಕೇಶ್‌ ಹಾಗೂ ಸಾನ್ಯಾ ಅಯ್ಯರ್‌ ನಾಯಕ-ನಾಯಕಿಯಾಗಿರುವ  ಚಿತ್ರ ‘ಗೌರಿ’ ಇಂದು ಬಿಡುಗಡೆಯಾಗಿದೆ.   ಇಂದ್ರಜಿತ್ ಲಂಕೇಶ್ ತಮ್ಮ ಮಗ ಸಮರ್ಜಿತ್ ಲಂಕೇಶ್ ನನ್ನು ಗೌರಿ ಸಿನಿಮಾ ಮೂಲಕ  ಸ್ಯಾಂಡಲ್​ವುಡ್​ಗೆ  ಪರಿಚಯಿಸಿದ್ದಾರೆ.   2017 ರಲ್ಲಿ ಬೆಂಗಳೂರಿನಲ್ಲಿ ಗುಂಡಿಕ್ಕಿ ಹತ್ಯೆಯಾದ ಅವರ ಹಿರಿಯ ಸಹೋದರಿ, ಪತ್ರಕರ್ತೆ ಮತ್ತು ಹೋರಾಟಗಾರ್ತಿ ಗೌರಿ ಲಂಕೇಶ್ ಅವರ ಹೆಸರನ್ನು ಚಿತ್ರಕ್ಕೆ ಇಡಲಾಗಿದೆ. ಇದಾಗಲೇ ಇಂದ್ರಜಿತ್ ಅವರು  ಗೌರಿಗೆ ಹೃದಯಸ್ಪರ್ಶಿಯಾಗಿ ಹಾಡೊಂದನ್ನು ಅರ್ಪಿಸಿದ್ದರು. ಕಳೆದ ಸೋಮವಾರ ಎರಡು ಹಾಡುಗಳನ್ನು ಬಿಡುಗಡೆ ಮಾಡಿದ್ದರು. ಇಂದು ಚಿತ್ರ ಬಿಡುಗಡೆಯಾಗಿದ್ದು, ಪ್ರೇಕ್ಷಕರು ಸಿನಿಮಾವನ್ನು ಹೇಗೆ ಸ್ವೀಕರಿಸುತ್ತಾರೋ ಎಂದು ನೋಡಬೇಕಿದೆ. ಈ ಚಿತ್ರವನ್ನು ವೀಕ್ಷಿಸಲು ಕೆಲವು ಸೆಲೆಬ್ರಿಟಿಗಳು ಚಿತ್ರಮಂದಿರಕ್ಕೆ ಹೋಗಿದ್ದಾರೆ.

ಅದರಂತೆಯೇ ಬಿಗ್​ಬಾಸ್​ ಖ್ಯಾತಿಯ, ಚಂದನ್​ ಶೆಟ್ಟಿ ಮಾಜಿ ಪತ್ನಿ ನಿವೇದಿತಾ ಗೌಡ ಕೂಡ ಗೌರಿ ಸಿನಿಮಾ ನೋಡಲು ಹೋಗಿದ್ದು, ಕ್ಯಾಮೆರಾ ಕಣ್ಣಿಗೆ ಸಿಕ್ಕಿದ್ದಾರೆ. ಎಂದಿನಂತೆ ನಿವೇದಿತಾ ಮಿಂಚುತ್ತಿದ್ದಾರೆ. ಆದರೆ ಇದೀಗ ಅವರು ಹೆಚ್ಚಾಗಿ ಷಾರ್ಟ್​ ಡ್ರೆಸ್​ಗಳಿಗೆ ಹೆಚ್ಚು ಗಮನ ಕೊಡುತ್ತಿರುವ ಕಾರಣ, ಅಂಥದ್ದೇ ಒಂದು ಡ್ರೆಸ್​ನಲ್ಲಿ ಸಿನಿಮಾಕ್ಕೆ ಹೋಗಿದ್ದಾರೆ. ಆದರೆ ಅದ್ಯಾಕೋ ಡಿವೋರ್ಸ್​ ನಂತರ ನಿವೇದಿತಾ ಅವರನ್ನು ಕೆಲವರು ನೋಡುವ ದೃಷ್ಟಿಯೇ ಬೇರೆಯಾದಂತಿದೆ. ಡಿವೋರ್ಸ್​ಗೂ ಮುನ್ನ ಕೆಟ್ಟ ಕಮೆಂಟ್​ ಮಾಡುತ್ತಿದ್ದವರು ಬಹಳ ಮಟ್ಟದಲ್ಲಿ ಇದ್ದರೂ, ಚಂದನ್​ ಶೆಟ್ಟಿ ಅವರಿಗೆ ಡಿವೋರ್ಸ್​ ನೀಡಿದ ಬಳಿಕ, ಈ ಕಮೆಂಟ್ಸ್​ಗಳೆಲ್ಲಾ ಬೇರೆ ದಿಕ್ಕಿಗೇ ತಿರುಗುತ್ತಿವೆ. ಈಗಲೂ ನಿವೇದಿತಾ ಅವರ ಓಪನ್ ಡ್ರೆಸ್​ ಕುರಿತು ಸಾಕಷ್ಟು ಟ್ರೋಲ್​  ಮಾಡಲಾಗಿದ್ದು, ನೀನು ಮೊದ್ಲು ಅಂಗಡಿ ಮುಚ್ಚಿಕೋ, ಆಮೇಲೆ ನಗುವಿಯಂತೆ ಎಂದು ಹೇಳುತ್ತಿದ್ದಾರೆ. ಇದಕ್ಕೆ ಇನ್ನೊಂದು ಕಾರಣವೂ ಇದೆ. ಅದೇನೆಂದರೆ ಡಿವೋರ್ಸ್​ ಬಳಿಕ ನಿವೇದಿತಾ ದಿನಕ್ಕೊಂದರಂತೆ ಸೆಕ್ಸಿ ಡ್ರೆಸ್​ನಲ್ಲಿ ರೀಲ್ಸ್​ ಮಾಡುತ್ತಿದ್ದಾರೆ. ಹಿಂದೊಮ್ಮೆ ಈಕೆಯನ್ನು ಕನ್ನಡದ ಬೆತ್ತಲೆರಾಣಿ ತೃಪ್ತಿ ಡಿಮ್ರಿ ಎಂದೂ ಹೇಳಲಾಗಿತ್ತು. 

Tap to resize

Latest Videos

   ನಿವೇದಿತಾ ಸೆಕ್ಸಿ ವಿಡಿಯೋ: ನೀನೇ ಕಣಮ್ಮಾ ಕನ್ನಡದ ಮುಂದಿನ ತೃಪ್ತಿ ಡಿಮ್ರಿ ಎನ್ನೋದಾ ಟ್ರೋಲಿಗರು?

 ಅಷ್ಟಕ್ಕೂ, ಬಿಗ್​ಬಾಸ್​ನಿಂದಲೇ ಖ್ಯಾತಿ ಪಡೆದು, ಇದೀಗ ಡಿವೋರ್ಸ್ ಬಳಿಕ ಮತ್ತಷ್ಟು ಹೆಸರು ಮಾಡುತ್ತಿರುವವರೆಂದರೆ ನಿವೇದಿತಾ ಗೌಡ. ಗಾಯಕ, ರ್ಯಾಪರ್​ ಚಂದನ್​  ಶೆಟ್ಟಿ ಜೊತೆ  ನಿವೇದಿತಾ ಗೌಡ ಡಿವೋರ್ಸ್​ ಆದ್ಮೇಲೆ ಹೊಸ ಹೊಸ ರೂಪದಲ್ಲಿ ರೀಲ್ಸ್​ ಮಾಡುತ್ತಿದ್ದಾರೆ. ಹಿಂದಿಗಿಂತಲೂ ಅತಿ ಎನ್ನುವಷ್ಟು ದೇಹ ಪ್ರದರ್ಶನ ಮಾಡುತ್ತಿರುವಿರಿ ಎಂದು ನೆಟ್ಟಿಗರು ಈಗ ತರಾಟೆಗೆ ತೆಗೆದುಕೊಳ್ಳುವುದು ಹೆಚ್ಚುತ್ತಲೇ ಇದೆ. ಈ ಹಿಂದೆ ಕೂಡ ದಿನವೂ ಬೇರೆ ಬೇರೆ ಥರನಾಗಿ ಪೋಸ್​ ಕೊಡುತ್ತಲೇ ಬಾರ್ಬಿಡಾಲ್​, ಗೊಂಬೆ ಎಂದೆಲ್ಲಾ ಹೊಗಳಿಸಿಕೊಳ್ಳುತ್ತಿದ್ದರು ನಿವೇದಿತಾ. ಡಿವೋರ್ಸ್​ ಬಳಿಕವೂ ದಿನಕ್ಕೊಂದರಂತೆ ರೀಲ್ಸ್​ ಮಾಡುತ್ತಿದ್ದರೂ ಕಮೆಂಟಿಗರು ಕಮೆಂಟ್​ ಮಾಡುವ ವಿಧಾನ ಬೇರೆಯಾಗಿದೆಯಷ್ಟೇ. ಮೊದಲೆಲ್ಲಾ ಹುಡುಗಾಟ ಬಿಡು, ಮಕ್ಕಳು ಮಾಡಿಕೋ ಎನ್ನುವವರೇ ಹೆಚ್ಚಾಗಿದ್ದರು. ಆದರೆ ಇದೀಗ ಪ್ರತಿ ಬಾರಿಯೂ ಚಂದನ್​ ಶೆಟ್ಟಿ ಹೆಸರು ಎಳೆದು ತಂದು ನಿವೇದಿತಾ ಅವರನ್ನು ಟ್ರೋಲ್​ ಮಾಡಲಾಗುತ್ತಿದೆ.  

ಅದೇನೇ ಇದ್ದರೂ, ನಿವೇದಿತಾಗೂ ಚೆನ್ನಾಗಿ ಗೊತ್ತು, ಟ್ರೋಲ್​ನಿಂದಲೇ ರೀಲ್ಸ್​ ಮಾಡುವವರ ಜೀವನ ಸಾಗುವುದು ಎನ್ನುವುದು. ಅದೇ ಕಾರಣಕ್ಕೆ ಹೆಚ್ಚಿನ ರೀಲ್ಸ್​ ತಾರೆಯರು ತಮಗೆ ಬಂದಿರುವ ಕೆಟ್ಟ ಕಮೆಂಟ್ಸ್​ಗಳನ್ನು ಡಿಲೀಟ್​ ಮಾಡುವುದಿಲ್ಲ. ಏಕೆಂದರೆ ಅದೇ ಅವರಿಗೆ ಜೀವನ. ಹೆಚ್ಚೆಚ್ಚು ಕೆಟ್ಟ ಕಮೆಂಟ್​  ಪಡೆದರೆ, ಹೆಚ್ಚೆಚ್ಚು ಜನಪ್ರಿಯರಾಗಬಹುದು ಎನ್ನುವ ಸತ್ಯ ಅವರಿಗೆ ಗೊತ್ತಿದೆ. ಇದೇ ರೀತಿಯ ಕಮೆಂಟ್​ ಮೂಲಕವೇ ಕೆಲವು ಜನಪ್ರಿಯ ರಿಯಾಲಿಟಿ ಷೋಗಳಲ್ಲಿಯೂ ತಮಗೆ ಸ್ಥಾನ ಸಿಕ್ಕು ಇನ್ನಷ್ಟು ಉತ್ತುಂಗಕ್ಕೆ ಏರಬಹುದು ಎನ್ನುವುದು ರೀಲ್ಸ್​ ತಾರೆಯರಿಗೆ ಚೆನ್ನಾಗಿ ಅರಿವಿದೆ. ಇನ್ನು ನಿವೇದಿತಾ ಅಂತೂ ಮೊದಲೂ ಇಂಥ ಕಮೆಂಟಿಗೆ ತಲೆ ಕೆಡಿಸಿಕೊಂಡವರಲ್ಲ, ಈಗಲೂ ತಲೆ ಕೆಡಿಸಿಕೊಳ್ಳುತ್ತಿಲ್ಲ.

ನೀನು ನನ್ನನ್ನೇ ಲವ್​ ಮಾಡೋದು ಚೆನ್ನಾಗಿ ಗೊತ್ತು ಎಂದಳಲ್ಲಾ ನಿವೇದಿತಾ! ಮಂಚದಲ್ಲಿ ಕುಳಿತು ಏನಿದು ಹೊಸ ಸ್ಟೋರಿ?

 

 
 
 
 
 
 
 
 
 
 
 
 
 
 
 

A post shared by old_kfimedia (@old_kfimedia)

click me!