ಶ್ರೀರಸ್ತು ಶುಭಮಸ್ತು ಸೀರಿಯಲ್ನಲ್ಲಿ ಶಾರ್ವರಿ ಪಾತ್ರ ಮಾಡಿದ್ದ ನೇತ್ರಾ ಜಾಧವ್, ಇಲ್ಲಿಂದ ಮಿಸ್ ಆಗಿ ಮಹಾಲಕ್ಷ್ಮಿಯಾಗಿ ಕಾಣಿಸಿಕೊಂಡಿದ್ದಾರೆ. ಫ್ಯಾನ್ಸ್ ಹೇಳ್ತಿರೋದೇನು?
ನಾಳೆ ವರಮಹಾಲಕ್ಷ್ಮಿ ಹಬ್ಬ. ಎಲ್ಲೆಲ್ಲೂ ಹಬ್ಬಕ್ಕೆ ಭರ್ಜರಿ ಸಿದ್ಧತೆ ನಡೆಯುತ್ತಿದೆ. ಇನ್ನು ಕೆಲವು ಮಹಿಳೆಯರಂತೂ ಹಬ್ಬದ ಬಣ್ಣಬಣ್ಣದ ಉಡುಗೆ ತೊಟ್ಟು, ಚಿನ್ನಾಭರಣಗಳಿಂದ ಮಿಂಚಲು ಭರದ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಇದೀಗ ಕಿರುತೆರೆ ನಟಿ ನೇತ್ರಾ ಜಾಧವ್ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು ಎನ್ನುವ ಮೂಲಕ ರೇಷ್ಮೆ ಸೀರೆಯನ್ನುಟ್ಟು ಸಾಕ್ಷಾತ್ ಲಕ್ಷ್ಮಿಯ ರೀತಿಯಲ್ಲಿ ವಿಡಿಯೋಶೂಟ್ ಮಾಡಿಸಿಕೊಂಡಿದ್ದಾರೆ. ಅಷ್ಟಕ್ಕೂ ನೇತ್ರಾ ಜಾಧವ್ ಎಂದರೆ ಬಹುತೇಕ ಮಂದಿಗೆ ತಿಳಿಯಲ್ಲಿಕ್ಕಿಲ್ಲ. ಆದರೆ ಶಾರ್ವರಿ ಎಂದರೆ ಸುಲಭದಲ್ಲಿ ಸೀರಿಯಲ್ ಪ್ರಿಯರಿಗೆ ತಿಳಿಯುತ್ತದೆ. ಆದರೆ ಈಕೆ ಈ ಶಾರ್ವರಿಯಲ್ಲ, ಬದಲಿಗೆ ಹಳೆಯ ಶಾರ್ವರಿ! ಹೌದು. ಶ್ರೀರಸ್ತು ಶುಭಮಸ್ತುವಿನ ಹಳೆಯ ಶಾರ್ವರಿಯೇ ನೇತ್ರಾ ಜಾಧವ್. ತಮ್ಮ ಕಣ್ಣುಗಳಿಂದಲೇ ಅಭಿಯನ ಮಾಡುವ ಮುದ್ದು ಮೊಗದ ಸುಂದರಿ ಶಾರ್ವರಿ ಈಗ ಈ ಸೀರಿಯಲ್ನಿಂದ ಹೊರಕ್ಕೆ ಬಂದು ಸೀರಿಯಲ್ ಪ್ರೇಮಿಗಳಿಗೆ ಶಾಕ್ ನೀಡಿದ್ದರು. ಹೊಸ ಶಾರ್ವರಿ ಎಂಟ್ರಿ ಕೊಟ್ಟು ಕೆಲ ತಿಂಗಳುಗಳೇ ಕಳೆದಿದ್ದರೂ, ಈ ಹಳೆಯ ಶಾರ್ವರಿಯನ್ನು ಮಾತ್ರ ಸೀರಿಯಲ್ ಪ್ರೇಮಿಗಳು ಸಕತ್ ಮಿಸ್ ಮಾಡಿಕೊಳ್ಳುತ್ತಿದ್ದಾರೆ ಎನ್ನುವುದಕ್ಕೆ ಅವರ ಕಮೆಂಟ್ಸ್ ಸಾಕ್ಷಿಯಾಗಿದೆ.
ಒಂದು ಪಾತ್ರದಲ್ಲಿ ಒಬ್ಬರನ್ನೇ ಬಹು ತಿಂಗಳು, ವರ್ಷ ನೋಡುವ ಸೀರಿಯಲ್ ಪ್ರೇಮಿಗಳಿಗೆ ಅದೇ ಪಾತ್ರಕ್ಕೆ ಹೊಸ ಮುಖವನ್ನು ಕಲ್ಪನೆ ಮಾಡಿಕೊಳ್ಳುವುದು ಬಹು ಕಷ್ಟ. ಅದರಲ್ಲಿಯೂ ಯಾರಿಗೂ ಡೌಟ್ ಬರದಂತೆ, ಒಳ್ಳೆಯವಳು ಎನಿಸಿಕೊಂಡು ಕುತಂತ್ರ ಬುದ್ಧಿಯ ಶಾರ್ವರಿ ಪಾತ್ರಕ್ಕೆ ನೇತ್ರಾ ಅವರು ನ್ಯಾಯ ಒದಗಿಸಿಕೊಟ್ಟಿದ್ದರು. ಹೆಸರಿಗೆ ತಕ್ಕಂತೆಯೇ ಕಣ್ಣಿನಲ್ಲಿಯೇ ಅಭಿನಯ ಮಾಡುವಲ್ಲಿ ಇವರದ್ದು ಎತ್ತಿದ ಕೈ. ಅದಕ್ಕಾಗಿಯೇ ಇವರು ಸೀರಿಯಲ್ನಿಂದ ನಿರ್ಗಮಿಸಿರುವುದು ಬಹಳ ಮಂದಿಗೆ ಬೇಸರ ತಂದಿದೆ. ಮತ್ತೊಮ್ಮೆ ಅವರನ್ನು ವಾಪಸ್ ಕರೆದುಕೊಂಡು ಬರುವಂತೆಯೂ ಹಲವರು ಸೋಷಿಯಲ್ ಮೀಡಿಯಾದಲ್ಲಿ ಕಮೆಂಟ್ ಕೂಡ ಹಾಕುತ್ತಿದ್ದರು. ಈಗಲೂ ಅದು ನಿಂತಿಲ್ಲ. ನೇತ್ರಾ ಅವರು ಸೀರಿಯಲ್ ಬಿಟ್ಟದ್ದು ಯಾಕೆ ಎಂದು ಗುಟ್ಟಾಗಿಯೇ ಉಳಿದಿದೆ. ಆದರೆ ಅವರು ಇನ್ನೊಂದು ಸೀರಿಯಲ್ನಲ್ಲಿ ಪ್ರತ್ಯಕ್ಷರಾಗಿದ್ದಾರೆ. ಆದರೆ ಆ ಸೀರಿಯಲ್ ಕನ್ನಡದ್ದು ಅಲ್ಲ. ಬದಲಿಗೆ ತೆಲಗು ಸೀರಿಯಲ್. ಮಗುವಾ ಓ ಮಗುವಾ. ಇದರಲ್ಲಿ ಅವರು ಫುಲ್ ಆ್ಯಕ್ಷನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದನ್ನು ಖುದ್ದು ಅವರು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದರು. ಆಗಲೂ ಕನ್ನಡ ಬಿಟ್ಟ ಬಗ್ಗೆ ಅವರಿಗೆ ಪ್ರಶ್ನೆಗಳ ಸುರಿಮಳೆಯೇ ಆಗಿತ್ತು.
ಪಾರ್ವತಮ್ಮನವ್ರು ಹಾಗೆ ಯಾಕೆ ಮಾಡಿದ್ರಂತ ಕೊನೆಗೂ ಗೊತ್ತಾಗ್ಲೇ ಇಲ್ಲ! ಸುಧಾರಾಣಿ ಹೇಳಿದ್ದೇನು?
ಅಷ್ಟಕ್ಕೂ ಶ್ರೀರಸ್ತು ಶುಭಮಸ್ತು ಸೀರಿಯಲ್ನಲ್ಲಿ ಶಾರ್ವರಿಯ ಪಾತ್ರಕ್ಕೆ ಸ್ವಪ್ನಾ ದೀಕ್ಷಿತ್ ಅವರು ಬಂದಿದ್ದಾರೆ. ಅವರು ಕೂಡ ಅದ್ಭುತ ಕಲಾವಿದೆಯೇ. ಆದರೆ ಸೀರಿಯಲ್ನ ಬಹಳಷ್ಟು ವೀಕ್ಷಕರಿಗೆ ನೇತ್ರಾ ಅವರೇ ಬೇಕಂತೆ. ಈ ಸೀರಿಯಲ್ ಪ್ರೊಮೋ ಹಾಕಿದಾಗಲೆಲ್ಲವೂ ನೇತ್ರಾ ಅವರನ್ನು ಮಿಸ್ ಮಾಡಿಕೊಳ್ಳುವ ಬಗ್ಗೆ ಕಮೆಂಟಿಗರು ಹೇಳುತ್ತಲೇ ಇರುತ್ತಾರೆ. ನೇತ್ರಾ ಅವರು, ಈ ಹಿಂದೆ ಸುಧಾರಾಣಿ ಅವರ ಜೊತೆ ರಥಸಪ್ತಮಿ ಧಾರಾವಾಹಿಯಲ್ಲಿ ಅವರ ತಂಗಿಯ ಪಾತ್ರದಲ್ಲಿ ನಟಿಸಿದ್ದರು. ನಂತರ ಅವರದ್ದೇ ಜೊತೆ ನೆಗಟಿವ್ ರೋಲ್ನಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು. ಈ ಹಿಂದೆ ಉದಯ ಟಿವಿಯಲ್ಲಿ ಆಕೃತಿ ಎನ್ನುವ ಧಾರವಾಹಿಯಲ್ಲಿ ನಟಿಸುತ್ತಿದ್ದರು. ನಂತರ ಸುಂದರಿ ಧಾರವಾಹಿಯಲ್ಲಿಯೂ ಬಣ್ಣ ಹಚ್ಚಿದ್ದರು. ಅಂದಹಾಗೆ ಶಾರ್ವರಿ ಅವರ ಮಕ್ಕಳು ಇನ್ನೂ ಚಿಕ್ಕವರು. ಶ್ರೀರಸ್ತು ಶುಭಮಸ್ತು ಸೀರಿಯಲ್ನಲ್ಲಿ ಮಕ್ಕಳಿಗೆ ಮದುವೆಯಾಗಿದ್ದರೆ ರಿಯಲ್ ಲೈಫ್ನ ಮಕ್ಕಳು ಶಾಲೆಗೆ ಹೋಗುತ್ತಿದ್ದಾರೆ. ಆಗಾಗ್ಗೆ ಮಾಡರ್ನ್ ಫೋಟೋಶೂಟ್ ಮಾಡಿಸಿಕೊಂಡು ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿರುತ್ತಾರೆ.
ಶ್ರೀರಸ್ತು ಶುಭಮಸ್ತು ಸೀರಿಯಲ್ನ 400ನೇ ಎಪಿಸೋಡ್ ಸಂಭ್ರಮದ ವಿಡಿಯೋ ಈಚೆಗೆ ವೈರಲ್ ಆಗಿತ್ತು. ಅದರಲ್ಲಿ ಸೀರಿಯಲ್ನ ಎಲ್ಲಾ ನಟಿ-ನಟರು ಇದ್ದರೂ ಸೀರಿಯಲ್ ಪ್ರೇಮಿಗಳು ನೇತ್ರಾ ಅವರನ್ನು ಮಿಸ್ ಮಾಡಿಕೊಳ್ಳುವುದಾಗಿ ಹೇಳುತ್ತಿದ್ದಾರೆ. ಬಹುಶಃ ಈ ಶೂಟಿಂಗ್ ನೇತ್ರಾ ಅವರು ಸೀರಿಯಲ್ನಲ್ಲಿ ಇದ್ದ ಸಂದರ್ಭದಲ್ಲಿಯೇ ಮಾಡಿದ್ದು ಎಂದು ತೋರುತ್ತಿದೆ. ಅದಕ್ಕಾಗಿ 400ರ ಸಂಭ್ರಮದಲ್ಲಿ ನೇತ್ರಾ ಕಾಣಿಸಿಕೊಂಡಿದ್ದು ಸ್ವಪ್ನಾ ಕಾಣಿಸುತ್ತಿಲ್ಲ. ಆದರೆ ನೇತ್ರಾ ಅವರೇ ತಮಗೆ ಬೇಕು ಎಂದು ಅಭಿಮಾನಿಗಳು ಪಟ್ಟುಹಿಡಿಯುತ್ತಿದ್ದಾರೆ. ಈಗಲೂ ಅವರೇ ಬೇಕು ಎನ್ನುತ್ತಿದ್ದಾರೆ ಫ್ಯಾನ್ಸ್.
ಪ್ರಕಾಶ್ ರಾಜ್ ಜೊತೆ ಕೆಲಸ ಮಾಡುವ ಅನುಭವ ಹೇಗಿರತ್ತೆ? ಪ್ರಿಯಾಮಣಿ ಓಪನ್ ಮಾತಿದು...