ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಎಐ ಘಿಬ್ಲಿ ಇಮೇಜ್‌ನಲ್ಲಿರುವ ವ್ಯಕ್ತಿ ಕನ್ನಡ ಕಿರುತೆರೆಯ ಬಿಗ್ ಬಾಸ್ ವಿನ್ನರ್ ಯಾರೆಂದು ಗೆಸ್ ಮಾಡಿ..
ಸೋಶಿಯಲ್ ಮಡಿಯಾದಲ್ಲಿ ಭಾರೀ ಟ್ರೆಂಡ್‌ನಲ್ಲಿರುವ ಎಐ ಘಿಬ್ಲಿ ಇಮೇಜ್‌ನಿಂದ ಸೃಷ್ಟಿಸಲಾದ ಈ ಫೋಟೋ ಯಾರದ್ದು? ಕನ್ನಡ ಕಿರುತೆರೆಯಲ್ಲಿ ರಿಯಾಲಿಟಿ ಶೋಗಳಿಂದಲೇ ಖ್ಯಾತಿಯಾದ ಹಾಗೂ ಬಿಗ್ ಬಾಸ್ ವಿನ್ನರ್ ಇರುವ ಫೋಟೋ ಇದಾಗಿದೆ. ಹಾಗಾದರೆ, ಈ ಫೋಟೋದಲ್ಲಿ ಇರುವವರು ಯಾರೆಂದಯ ನೀವು ಗೆಸ್ ಮಾಡಿ...
ಇಲ್ಲಿ ನೀವು ನೋಡುತ್ತಿರುವ ಫೋಟೋ ಕೃತಕ ಬುದ್ಧಿಮತ್ತೆ (AI) ಘಿಬ್ಲಿ ಸ್ಟೂಡಿಯೋ ಇಮೇಜ್‌ನಿಂದ (Ghibli Image) ಸೃಷ್ಟಿಸಿದ ಫೋಟೋ ಎಂದು ಗೊತ್ತಾಗುತ್ತದೆ. ಆದರೆ, ಇಲ್ಲಿರುವ ಫೋಟೋ ಮಾತ್ರ ಕನ್ನಡ ಕಿರುತೆರೆಯಲ್ಲಿ ಕೋಟಿ ಕೋಟಿ ಜನರ ಮನಸ್ಸಿ ಗೆದ್ದ ಬಿಗ್ ಬಾಸ್ ವಿನ್ನರ್ ಇರುವ ಫೋಟೋ ಆಗಿದೆ. ಇಲ್ಲಿ ಕೊಟ್ಟಿರುವ ಫೋಟೋದಲ್ಲಿ ಒಬ್ಬರು ಟ್ರೋಫಿ ಎತ್ತಿ ಹಿಡಿದಿದ್ದು, ಅದು ಬಿಗ್ ಬಾಸ್ ಟ್ರೋಫಿ ಆಗಿದೆ. ಹಾಗಾದರೆ, ಈಗ ನೀವು ಬಿಗ್ ಬಾಸ್ ವಿನ್ನರ್ ಹಳ್ಳಿಹೈದ ಹನುಮಂತ (Singer Hanumantha Lamani) ಎಂಬುದು ನಿಮ್ಮ ತಲೆಗೆ ಬಂದಿರುತ್ತದೆ. ಆದರೆ, ಇಲ್ಲಿ ಟ್ರೋಫಿ ಎತ್ತಿ ಹಿಡಿದ ವ್ಯಕ್ತಿ ಹನುಮಂತ ಅಲ್ಲ, ಆತನ ದೋಸ್ತ ಧನರಾಜ್ ಆಚಾರ್ (Dhanraj Achar).
ಹೌದು, ಈ ಫೋಟೋವನ್ನು ಶೇರ್ ಮಾಡಿಕೊಂಡಿರುವುದು ಬಿಗ್ ಬಾಸ್ ಸೀಸನ್ 11ರ ಸ್ಪರ್ಧಿ ಧನರಾಜ್ ಆಚಾರ್ ಮತ್ತು ಬಿಗ್ ಬಾಸ್ ಸೀಸನ್ 11ರ ಟ್ರೋಫಿ ವಿಜೇತ ಹನುಮಂತ ಲಮಾಣಿ. ಬಿಗ್ ಬಾಸ್ ಟ್ರೋಫಿ ಗೆದ್ದ ದೋಸ್ತನ ಮನೆಗೆ ಹೋದ ಧನರಾಜ್ ಆಚಾರ್ ಟ್ರೋಫಿ ಹಿಡಿದು ಫೋಟೋ ತೆಗೆಸಿಕೊಂಡು ಅದನ್ನು ಜನವರಿ ತಿಂಗಳು ಹಂಚಿಕೊಂಡಿದ್ದರು. ಇದೀಗ ಅದೇ ಫೋಟೋವನ್ನು ಘಿಬ್ಲಿ ಇಮೇಜ್ ಮರುಸೃಷ್ಟಿ ಮಾಡಿದ್ದಾರೆ. ಜೊತೆಗೆ ಬಿಗ್ ಬಾಸ್ ಮನೆಯಲ್ಲಿ ಕಳೆದ ಕೆಲವು ಘಟನೆಗಳ ಫೋಟೋಗಳನ್ನು ಇಲ್ಲಿ ಘಿಬ್ಲಿ ಇಮೇಜ್ ಆಗಿ ಮರುಸೃಷ್ಟಿಸಿ ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ದುಡ್ಡು ಕೊಡ್ತಾರೆ ಎಂತ ಪ್ರಮೋಷನ್ ಮಾಡೋಕೆ ಆಗಲ್ಲ, ಇದುವರೆಗೂ ಕೆಟ್ಟ ಪದ ಬಳಸಿಲ್ಲ: ಧನರಾಜ್
ಧನರಾಜ್ ಆಚಾರ್ ಗೆಳೆಯ ಹನುಮಂತನಿಗೆ ಸಿಕ್ಕಂತಹ ಬಿಗ್ ಬಾಸ್ ಟ್ರೋಫಿಯನ್ನು ಕೈಯಲ್ಲಿ ಹಿಡಿದು, ತಲೆಯ ಮೇಲೆ ಇಟ್ಟು ಸಂಭ್ರಮಿಸಿದ್ದರು. ಈ ಅಪೂರ್ವ ಕ್ಷಣದ ಫೋಟೊಗಳನ್ನು ನೋಡಿ ಅಭಿಮಾನಿಗಳು ಸಖತ್ ಖುಷಿ ಪಟ್ಟಿದ್ದು, ಇವರಿಬ್ಬರ ಸ್ನೇಹ ಚಿರವಾಗಿರಲಿ ಎಂದು ಹಾರೈಸಿದ್ದಾರೆ. ಹನುಮಂತನ ಜೊತೆಗೆ ನಿಂತು ಆತನಿಗೆ ಸಿಕ್ಕ ಕಪ್ಪನ್ನು ಕೈಯಲ್ಲಿ ಹಿಡಿದು ದೋಸ್ತಾ ನೀ ಮಸ್ತಾ. ಗೆಲುವು ನಿನ್ನದು.. ಖುಷಿ ನನ್ನದು. ಇದು ದೋಸ್ತಿ ಗೆಲುವು ದೋಸ್ತಾ. ಇರು ನೀ ಜೊತೆಗಿರು ಎಂದೆಂದಿಗೂ ಎಂದು ಹೇಳಿ ಹಾರೈಸುವ ಮೂಲಕ ದೋಸ್ತನ ಗೆಲುವನ್ನು ತನ್ನ ಗೆಲುವು ಎನ್ನುವಂತೆ ಧನರಾಜ್ ಆಚಾರ್ ಸಂಭ್ರಮಿಸಿದ್ದಾರೆ .
ಬಿಗ್ ಬಾಸ್ ಮನೆಯಿಂದ ಹೊರ ಬಂದ ಬಳಿಕವೂ ಈ ಜೋಡಿ ಜೊತೆಯಾಗಿರೋದನ್ನು ನೋಡಿ ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಧನು ಹನು ಇಬ್ಬರು ಬೆಸ್ಟ್ ಜೋಡಿ ಎಂದಿದ್ದಾರೆ. ಅಷ್ಟೇ ಅಲ್ಲ ನಿಮ್ಮಿಬ್ಬರ ಸ್ನೇಹ ಯಾವಾಗಲೂ ಹೀಗೆ ಇರಲಿ ಎಂದು ಹಾರೈಸಿದ್ದಾರೆ. ಮತ್ತೊಬ್ಬರು ಕಾಮೆಂಟ್ ಮಾಡಿ ಸಂತೋಷ ಮತ್ತು ದುಃಖ ಸಮಯದಲ್ಲಿ ಜೊತೆಯಲ್ಲಿ ಇರುವ ದೋಸ್ತ ನಮ್ಮ ಹನುಮಂತ ಮತ್ತು ಧನರಾಜು ಎಂದಿದ್ದಾರೆ. ಮತ್ತೊಬ್ಬರು ನಿಮ್ಮಿಬ್ಬರನ್ನು ನೋಡುತ್ತಿದ್ದರೆ ಆಪ್ತಮಿತ್ರದ ವಿಷ್ಣುವರ್ಧನ್ ಮತ್ತು ದ್ವಾರಕೀಶ್ ಜೋಡಿ ತರ ಇದ್ದೀರಿ ಎಂದಿದ್ದಾರೆ.
ಇದನ್ನೂ ಓದಿ: ಪುಟ್ಟ ಮಗಳ ಮುಂದೆ ಮೊಬೈಲ್ ನೋಡಿದ ಬಿಗ್ ಬಾಸ್ ಧನರಾಜ್ ಆಚಾರ್; ಸೌಟು ಹಿಡಿದು ಬಂದ ಹೆಂಡ್ತಿ!