100ಕ್ಕೆ 90 ಗಂಡಸರು ಕೆಟ್ಟದೃಷ್ಟಿಯಿಂದ ನೋಡ್ತಾರೆ: ಬಿಗ್​ಬಾಸ್​ ತನಿಷಾ ಕುಪ್ಪಂಡ ನೋವಿನ ನುಡಿ

Published : Sep 11, 2024, 06:09 PM IST
100ಕ್ಕೆ 90 ಗಂಡಸರು ಕೆಟ್ಟದೃಷ್ಟಿಯಿಂದ ನೋಡ್ತಾರೆ: ಬಿಗ್​ಬಾಸ್​ ತನಿಷಾ ಕುಪ್ಪಂಡ ನೋವಿನ ನುಡಿ

ಸಾರಾಂಶ

ಬಿಗ್​ಬಾಸ್​ ಖ್ಯಾತಿಯ ತನಿಷಾ ಕುಪ್ಪಂಡ ತಮ್ಮ ಜೀವನದಲ್ಲಿ ಕಂಡಿರುವ ಗಂಡಸರ ವಿಷಯವನ್ನು ಮಾತನಾಡುತ್ತಾ, ಹೀಗೆಲ್ಲಾ ಹೇಳಿದ್ದಾರೆ. ಅವರು ಹೇಳಿದ್ದೇನು ನೋಡಿ...  

'ಬಿಗ್ ಬಾಸ್' ಮನೆಯಲ್ಲಿ ಬೆಂಕಿ ಎಂದು ಕರೆಸಿಕೊಳ್ಳುತ್ತಿದ್ದ ನಟಿ ತನಿಷಾ ಕುಪ್ಪಂಡ ಈಗ ಸಿನಿಮಾದಲ್ಲಿಯೂ ಬಿಜಿ ಆಗಿದ್ದಾರೆ.   . ‘ಮಂಗಳಗೌರಿ ಮದುವೆ’, ‘ಇಂತಿ ನಿಮ್ಮ ಆಶಾ’ ಮುಂತಾದ ಸೀರಿಯಲ್‌ಗಳಲ್ಲಿ ನಟಿಸಿರುವ ತನಿಷಾ ಕುಪ್ಪಂಡ ಬಿಗ್​ಬಾಸ್​ನಿಂದ ಸಕತ್​  ಫೇಮಸ್​ ಆದವರು. ಆದರೆ ಇವರು ಬಹಳ ಸದ್ದು ಮಾಡಿದ್ದು  ‘ಪೆಂಟಗನ್’ ಚಿತ್ರದ ಮೂಲಕ. ಕಳೆದ ವರ್ಷ ಬಿಡುಗಡೆಯಾದ ಈ ಚಿತ್ರದಲ್ಲಿ ತನಿಷಾ ಬಹಳ ಸದ್ದು ಮಾಡಲು ಕಾರಣ, ಅವರು ಇದರಲ್ಲಿ  ಸಿಕ್ಕಾಪಟ್ಟೆ ಬೋಲ್ಡ್ ಆಗಿ ಕಾಣಿಸಿಕೊಂಡಿರುವ ಕಾರಣ. ಚಿತ್ರ ಬಿಡುಗಡೆಗೂ ಮುನ್ನ, ಬ್ಯಾಕ್‌ಲೆಸ್ ಆಗಿರುವ ತನಿಷಾ ಕುಪ್ಪಂಡ ಲಿಪ್ ಲಾಕ್ ಕೂಡ ಮಾಡಿರುವ ಹಾಡು ರಿಲೀಸ್​ ಆಗುತ್ತಿದ್ದಂತೆಯೇ ಹಲ್​ಚಲ್​ ಸೃಷ್ಟಿಸಿತ್ತು. ಅದಾದ ಬಳಿಕ ಈಗ ಪೆನ್​ಡ್ರೈವ್​ ಸಿನಿಮಾದಲ್ಲಿ ಪೊಲೀಸ್​ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 
 
ಇದೀಗ ಅವರು, ರಾಜೇಶ್​ ಗೌಡ ಅವರ ಷೋನಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿ ಇಂಡಸ್ಟ್ರಿಯಲ್ಲಿ ಭಾರಿ ಸದ್ದು ಮಾಡುತ್ತಿರುವ ಕಾಸ್ಟಿಂಗ್​ ಕೌಚ್​ ಕುರಿತು ಮಾತನಾಡುವ ಸಂದರ್ಭದಲ್ಲಿ ಗಂಡಸರ ಬಗ್ಗೆ ತಾವು ಕಂಡಿರುವ ಸತ್ಯದ ಬಗ್ಗೆ ಅವರು ಮಾತನಾಡಿದ್ದಾರೆ.  ನಾನು ನೂರು ಜನ ಗಂಡಸರನ್ನು ಮೀಟ್​ ಮಾಡಿದ್ರೆ, ಅದರಲ್ಲಿ 90-92 ಜನ ಡೈರೆಕ್ಟೋ ಇನ್​ಡೈರೆಕ್ಟೋ ಕೆಟ್ಟ ದೃಷ್ಟಿಯಲ್ಲಿಯೇ ಇರ್ತಾರೆ. ಇನ್ನು 8-10 ಜನ ಮಾತ್ರ ನಾರ್ಮಲ್​ ಆಗಿ ಕಾಣಿಸ್ತಾರೆ. ನನ್ನ ಫ್ರೆಂಡ್​ಷಿಪ್​ ಮಾಡಿಕೊಳ್ಳಲು ಬಂದವರಿಗೆ ನಾನು ಮೊದಲೇ ಇದನ್ನು ಹೇಳಿರ್ತೇನೆ. ಅವರು ನನ್ನ ಫ್ರೆಂಡ್​ಷಿಪ್​ ಮಾಡಿಕೊಳ್ಳಲು ಯಾಕೆ ಬಯಸ್ತಾರೆ ಎನ್ನೋದು ಮೊದಲು ನನಗೆ ಗೊತ್ತಾಗಬೇಕು. ಒಂದು ವೇಳೆ ಅವರ ಇಂಟೆನ್ಷನ್​ ಬೇರೆಯದ್ದೇ ಇದ್ದರೆ ಆರಂಭದಲ್ಲಿಯೇ ನಾನು ಅವರ ಫ್ರೆಂಡ್​ಷಿಪ್​ ಕಟ್​ ಮಾಡಲು ಇಲ್ಲವೇ ಇನ್ನೊಂದೆರಡು ಮೂರು ತಿಂಗಳು ಮುಂದುವರೆಸಲು ಆಗ್ತದೆ ಎಂದು ಎಂದು ತನಿಷಾ ಹೇಳಿದ್ದಾರೆ. 

ಪೂರ್ಣ ಬೆತ್ತಲಾಗೋಕೆ ರೆಡಿನಾ ಕೇಳಿದ... ಶಾಕಿಂಗ್​ ವಿಷ್ಯ ತಿಳಿಸಿದ ಬಿಗ್​ಬಾಸ್​ ತನಿಷಾ ಕುಪ್ಪಂಡ

ಇದೇ ವೇಳೆ ಅವರು ಕಾಸ್ಟಿಂಗ್​ ಕೌಚ್​ ಎನ್ನೋದು ಸಿನಿಮಾ  ಇಂಡಸ್ಟ್ರಿಯಲ್ಲಿ ಮಾತ್ರವೇ ಇರುತ್ತದೆ ಎಂದು ಹೇಳ್ತಾರೆ. ಆದರೆ ಅಸಲಿಗೆ ಅಲ್ಲಿ ಮಾತ್ರವಲ್ಲ, ಎಲ್ಲಾ ಕಡೆಗಳಲ್ಲಿಯೂ ಇದೆ. ಇದರ ಅನುಭವ ನನಗೆ ಆಗಿದೆ ಎಂದು ಹೇಳಿದ್ದಾರೆ. ಇದೇ ವೇಳೆ ಬ್ರೇಕಪ್​, ಲವ್​ ಬಗ್ಗೆಯೂ ಮಾತನಾಡಿರುವ ತನಿಷಾ, ಹಲವರು ಬ್ರೇಕಪ್​ ವಿಷಯ ಬಂದಾಗ ಹೆಣ್ಣುಮಕ್ಕಳು ಮಾತ್ರವೇ ಸಫರ್​ ಆಗೋದು ಅಂತಾರೆ. ಆದರೆ ನಿಜ ಜೀವನದಲ್ಲಿ ಹಾಗಲ್ಲ. ಗಂಡಸರೂ ಸಫರ್​ ಆಗಿರುತ್ತಾರೆ. ಆದರೆ ಹಲವು ಸಂದರ್ಭಗಳಲ್ಲಿ ಅವರು ಅದನ್ನು ಮೀರಿ ಮುಂದಕ್ಕೆ ಹೋಗುತ್ತಾರೆ ಅಷ್ಟೇ ಎಂದು ಹೇಳಿದ್ದಾರೆ.  


ಈ ಹಿಂದೆ ನಟಿ, ಪೆಂಟಗನ್​ ಚಿತ್ರದಲ್ಲಿ ಹಸಿಬಿಸಿ ದೃಶ್ಯದಲ್ಲಿ ಕಾಣಿಸಿಕೊಂಡಿರುವ ಬಗ್ಗೆ ಮಾತನಾಡಿದ್ದರು.  ಮೊದಲು ತಾವು ಈ ಚಿತ್ರಕ್ಕೆ ಒಪ್ಪಿಕೊಂಡದ್ದು ಏಕೆ ಎನ್ನುವುದನ್ನು ತಿಳಿಸಿದ್ದರು. ನಿರ್ದೇಶಕರು ಬಂದು ಈ ಚಿತ್ರದ ಬಗ್ಗೆ ವಿವರಿಸಿದರು. ಇದರಲ್ಲಿ ಇರುವ ಬೋಲ್ಡ್​, ಇಂಟಿಮೇಟ್​ ದೃಶ್ಯಗಳ ಕುರಿತು ಹೇಳಿದರು. ಲಿಪ್​ಲಾಕ್​ ಎಷ್ಟು ಹೊತ್ತು ಇರುತ್ತೆ, ಬೋಲ್ಡ್​ ಸೀನ್​ ಎಷ್ಟು ಹೊತ್ತು ಇರುತ್ತೆ ಎಂದು ಕೇಳಿದೆ. ಇದನ್ನು ಕೇಳಿ ನಿರ್ದೇಶಕರಿಗೆ ಖುಷಿಯಾಯಿತು. ಎಲ್ಲಾ ಸಂಪೂರ್ಣವಾಗಿ ವಿವರಿಸಿದ್ದರು. ಚಿತ್ರಕ್ಕೆ ಅಗತ್ಯ ಬಿದ್ದರೆ ಈ ದೃಶ್ಯಗಳನ್ನು ಮಾಡಲು ನಾನು ಸಿದ್ಧ ಎಂದೆ. ನಂತರ ಅವರು ಚಿತ್ರದ ಬಗ್ಗೆ ವಿವರಿಸಿದಾಗ ಓಕೆ ಎಂದು ಹೇಳಿದೆ. ಏನೇ ದೃಶ್ಯವಿದ್ದರೂ ನಾನು ಮಾಡಲು ರೆಡಿ. ಆದರೆ ಮೊದಲೇ ಹೇಳಬೇಕು ಎಂದೆ. ಆಮೇಲೆ ಅದನ್ನು ಮಾಡು, ಇದನ್ನು ಮಾಡು ಎಂದ್ರೆ ನಾನು ಮಾಡಲ್ಲ. ಮೊದಲೇ ಹೇಳಿದ್ರೆ ಎಷ್ಟು ಟೇಕ್​ ಇದ್ರೂ ಮಾಡುತ್ತೇನೆ ಎಂದೆ. ಅದನ್ನು ಕೇಳಿ ಅವರು ಒಪ್ಪಿದರು. ಅದರಂತೆಯೇ ನಡೆದುಕೊಂಡರು ಎಂದಿದ್ದರು. 

ಹಸಿಬಿಸಿ ದೃಶ್ಯದ ಬಳಿಕ 'ಪೆನ್​ಡ್ರೈವ್'​ನಲ್ಲಿ ಬಿಗ್​ಬಾಸ್​ ತನಿಷಾ! ಥೋ ಥೋ... ವಿಡಿಯೋ ವೈರಲ್​
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಇಂಥ ಸಣ್ಣಬುದ್ಧಿ ಸರಿನಾ? ಗಿಲ್ಲಿ ನಟ ಬೇಡಿದರೂ, ಗೋಗರೆದರೂ ಕೇಳಲಿಲ್ಲ: ರಘು ವಿರುದ್ಧ ರೊಚ್ಚಿಗೆದ್ದ ಜನತೆ
BBK 12: ಏನ್ರೀ ಇದು ತೆವಲು? ರಜತ್‌, ಅಶ್ವಿನಿ ಗೌಡ, ರಘು ಯಾಕೆ ಹೀಗೆಲ್ಲ ಮಾಡಿದ್ರು?