ಮಲ್ಟಿ ಟ್ಯಾಲೆಂಟೆಡ್ ಕಿರಿಕ್ ಕೀರ್ತಿ ಸದ್ಯ ಬ್ಯುಸಿ. ಯುಟ್ಯೂಬ್, ಸ್ಕ್ರಿಪ್ಟ್, ಆಂಕರಿಂಗ್ ಅಂತ ಒಂದಾದ್ಮೇಲೆ ಒಂದು ಕೆಲಸ ಮಾಡ್ತಿದ್ದಾರೆ. ತಮ್ಮ ಬಾಲ್ಯವನ್ನು ನೆನಪಿಸಿಕೊಂಡ ಕೀರ್ತಿ, ಅಮ್ಮನ ಮುಂದೆ ಎಸ್ ಎಸ್ ಎಲ್ ಸಿ ಮಾರ್ಕ್ಸ್ ಹೇಳಿದ್ದು ಹೇಗೆ ಎಂಬುದನ್ನು ಇಂಟರೆಸ್ಟಿಂಗ್ ಆಗಿ ವಿವರಿಸಿದ್ದಾರೆ.
ಬಿಗ್ ಬಾಸ್ ಮಾಜಿ ಸ್ಪರ್ಧಿ (Bigg Boss Former contestant) , ಆಂಕರ್ ಕಿರಿಕ್ ಕೀರ್ತಿ (anchor Kirik Keerthi) ಈಗ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದಾರೆ. ದಿನಕ್ಕೊಂದು ಅವರ ಪೋಸ್ಟ್, ನೆಟ್ಟಿಗರ ಗಮನ ಸೆಳೆಯುತ್ತಿರುತ್ತದೆ. ಆಂಕರ್ ನಿರಂಜನ್ ದೇಶ್ ಪಾಂಡೆ ಜೊತೆ ಯೂಟ್ಯೂಬ್ ವಿಡಿಯೋ (YouTube video) ಗಳಲ್ಲಿ ಮಿಂಚುತ್ತಿರುವ ಕಿರಿಕ್ ಕೀರ್ತಿ, ಈಗ ಯುಟ್ಯೂಬ್ ನ್ಯೂಸ್ ಚಾನೆಲ್ ನಲ್ಲಿ ತಮ್ಮ ಜೀವನದ ಕಥೆಗಳನ್ನು ಹಂಚಿಕೊಂಡಿದ್ದಾರೆ. ಅದ್ರಲ್ಲಿ ಕೀರ್ತಿ, ಎಸ್ ಎಸ್ ಎಲ್ ಸಿ ಪಾಸ್ ಆದ ಸುದ್ದಿಯನ್ನು ಅಮ್ಮನಿಗೆ ಹೇಗ್ ಹೇಳಿದ್ರು ಎಂಬುದನ್ನು ತಿಳಿಸಿದ್ದಾರೆ.
ಎಸ್ ಎಸ್ ಎಲ್ ಸಿ (SSLC) ಯಲ್ಲಿ, ಫಸ್ಟ್ ಅಟೆಂಪ್ಟ್ ಅಲ್ಲಿ ಪಾಸ್ ಆದ ಕೀರ್ತಿಗೆ ಇದನ್ನು ನಂಬೋದು ಕಷ್ಟವಾಗಿತ್ತಂತೆ. ಬೋರ್ಡ್ ನಲ್ಲಿ ಹಾಕಿದ್ದ ಪಾಸ್, ಫೇಲ್ ಲೀಸ್ಟನ್ನು ಕೆಳಗಿಂದ ಮೇಲೆ ನೋಡ್ಕೊಂಡ್ ಬಂದ ಕೀರ್ತಿ, ಪಾಸ್ ಲೀಸ್ಟ್ ನಲ್ಲಿದ್ದರು. ಎಲ್ಲ ಮಾರ್ಕ್ಸ್ ನೋಡಿ ದಂಗೋ ದಂಗು. ಅದ್ರಲ್ಲೂ ಮ್ಯಾಥ್ಸ್ ಗೆ 30 ಬಿದ್ದಿತ್ತು. ಆದ್ರೆ ಉಳಿದ ಎಲ್ಲ ಸಬ್ಜೆಕ್ಟ್ ಗೆ 40ಕ್ಕಿಂತ ಹೆಚ್ಚು ಮಾರ್ಕ್ಸ್ ತೆಗೆದ್ಕೊಂಡಿದ್ ಕಾರಣ, ಕೀರ್ತಿ ಎಸ್ ಎಸ್ ಎಲ್ ಸಿಯಲ್ಲಿ ಪಾಸ್ ಆಗಿದ್ರು. ಆದ್ರೆ ಪಾಸ್ ಆದ ವಿಷ್ಯವನ್ನು ಅಮ್ಮನ ಹತ್ರ ಹೇಳೋಕು ಭಯ. ಸೆಕೆಂಡ್ ಕ್ಲಾಸ್ ಬಂದಿದ್ದ ಕೀರ್ತಿ, ಸೆಪ್ಪೆ ಮುಖ ಮಾಡ್ಕೊಂಡು ಮನೆಗೆ ಬಂದು, ಅಮ್ಮನಿಗೆ ಫೇಲ್ ಅಂತ ಹೇಳಿದ್ರು. ಅಷ್ಟೆ, ಅಮ್ಮನ ಸಹಸ್ರನಾಮ ಶುರುವಾಗಿತ್ತು. ಕೀರ್ತಿ ಜೊತೆ ಸುತ್ತಾಡ್ತಿದ್ದ ಹುಡುಗ್ರ ಮಾರ್ಕ್ಸ್ ಎಲ್ಲ ಅಮ್ಮ ಕೇಳೋಕೆ ಶುರು ಮಾಡಿದ್ರು. ಅವ್ರೆಲ್ಲರ ಮಾರ್ಕ್ಸ್ ಕೇಳಿ, ಯಾಕೆ ನೀನು ಮಾತ್ರ ಫೇಲ್, ಜಸ್ಟ್ ಪಾಸ್ ಆಗಿದ್ರೂ ಖುಷಿಯಾಗ್ತಿದ್ದೆ ಎಂದ ಅಮ್ಮನ ಮಾತು ಕೇಳಿ, ಸೆಕೆಂಡ್ ಕ್ಲಾಸ್ ಅಂತ ಬೇಗ ಹೇಳಿದ್ದ ಕೀರ್ತಿ ಮಾತ್ ಕೇಳಿ, ಮನಸ್ಸಿಲ್ಲದ ಮನಸ್ಸಿನಲ್ಲೇ ಜಾಮೂನು ತಿನ್ನಿಸಿದ್ರಂತೆ ಅಮ್ಮ.
undefined
ನಟಿ ಅದಿತಿ ಪ್ರಭುದೇವ ಕೈಯಲ್ಲಿ ಅರಳಿದ ಗಣಪ: ವಿಡಿಯೋ ನೋಡಿ ಶ್ಲಾಘನೆಗಳ ಮಹಾಪೂರ
ಕೀರ್ತಿ, ನನ್ನ ಜೀವನದ ಕಥೆಯಲ್ಲಿ ಅನೇಕ ವಿಷ್ಯಗಳನ್ನು ಹಂಚ್ಕೊಂಡಿದ್ದಾರೆ. ಅವರು ಕಪ್ಪಾಗಿದ್ದು ಹೇಗೆ ಅನ್ನೋದ್ರಿಂದ ಹಿಡಿದು, ಕಾಲೇಜ್ ಗೆ ಹೋಗುವಾಗ ಬಸ್ ಕಂಡಕ್ಟರ್ ಕೆಲಸ ಮಾಡ್ತಿದ್ದ ವಿಷ್ಯವನ್ನು ಅವರು ಹಂಚಿಕೊಂಡಿದ್ದಾರೆ. ರವಿ ಬೆಳಗೆರೆ ಬಗ್ಗೆಯೂ ಕೀರ್ತಿ ಮಾತನಾಡಿದ್ದಾರೆ. ಪುಸ್ತಕ ಓದುವ ಚಟ ಹಿಡಿದಿದ್ದೇ ರವಿ ಬೆಳಗೆರೆ ಅವರಿಂದ ಎಂದಿದ್ದಾರೆ ಕೀರ್ತಿ. ರವಿ ಬೆಳಗೆರೆ ಅವರ ಹಿಮಾಲಯನ್ ಬ್ಲಂಡರ್, ಕೀರ್ತಿ ಮೊದಲು ಓದಿದ ಪುಸ್ತಕ. ಹತ್ತನೇ ತರಗತಿಯಲ್ಲಿ ಕೀರ್ತಿ ಈ ಪುಸ್ತಕ ಓದಿದ್ದರಂತೆ. ಬೆಳಗಿನ ಜಾವ 3 ಗಂಟೆಯವರೆಗೆ ಪುಸ್ತಕ ಓದಿದ್ದ ಕೀರ್ತಿ, ನಂತ್ರ ಸಿಕ್ಕಾಪಟ್ಟೆ ಅತ್ತಿದ್ದರಂತೆ. ಪತ್ರಿಕೋದ್ಯಮದ ಮೊದಲ ಗುರು ರವಿ ಬೆಳಗೆರೆ ಎಂದ ಕೀರ್ತಿ, ಹಿಮಾಲಯನ್ ಬ್ಲಂಡರ್, ನನ್ನ ಬದುಕು ಬದಲಿಸಿದೆ ಎಂದಿದ್ದಾರೆ. ಆ ಪುಸ್ತಕ ಓದುವ ಚಟ ಹತ್ತಿಸುತ್ತೆ ಎಂದ ಕೀರ್ತಿ, ಓದೋರಿಗೆ ನಾನು ಈ ಪುಸ್ತಕ ಗಿಫ್ಟ್ ಮಾಡ್ತೇನೆ ಎಂದಿದ್ದಾರೆ. ಸದ್ಯ ಹಾಯ್ ಬೆಂಗಳೂರಿನಲ್ಲಿ ಕೆಲಸ ಮಾಡ್ತಿರುವ ಕೀರ್ತಿಗೆ, ರವಿ ಬೆಳಗೆರೆ ಜೊತೆ ಕೆಲಸ ಮಾಡಲು ಅವಕಾಶ ಸಿಗ್ಲಿಲ್ಲ ಎನ್ನುವ ಬೇಸರವ್ಯಕ್ತಪಡಿಸಿದ್ದಾರೆ.
ಚಕ್ಕಂದ ವಿಡಿಯೋ ಹಾಕ್ತಾನಂತೆ ಬೋ***; ಹಣದ ಹಿಂದೆ ಬಿದ್ದ ವರುಣ್ ಆರಾಧ್ಯ ಹಿಗ್ಗಾಮುಗ್ಗಾ ಟ್ರೋಲ್!
ಸ್ಕ್ರಿಪ್ಟ್ ರೈಟಿಂಗ್, ಆಂಕರಿಂಗ್, ರಿಯಾಲಿಟಿ ಶೋ, ಯುಟ್ಯೂಬ್, ಸಿನಿಮಾ ಹೀಗೆ ನಾಲ್ಕೈದು ಕ್ಷೇತ್ರದಲ್ಲಿ ಕೆಲಸ ಮಾಡ್ತಿರುವ ಕಿರಿಕ್ ಕೀರ್ತಿ, ಹಿಂದಿನ ವರ್ಷ ಡಿವೋರ್ಸ್ ವಿಷ್ಯಕ್ಕೆ ಸುದ್ದಿಯಲ್ಲಿದ್ದರು. ಪ್ರೀತಿಸಿ ಮದುವೆಯಾಗಿದ್ದ ಅರ್ಪಿತಾರಿಗೆ ವಿಚ್ಛೇದನ ನೀಡಿದ್ದ ಕೀರ್ತಿ, ಇದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು, ಇನ್ಮುಂದೆ ಕರಿಮಣಿ ಮಾಲಿಕ ನಾನಲ್ಲ ಎಂದಿದ್ದರು.