ಗೋವಾ ಕಸಿನೋದಲ್ಲಿ ಒಂದುವರೆ ಲಕ್ಷ ಕಳೆದುಕೊಂಡ ಸೋನು ಶ್ರೀನಿವಾಸ್ ಗೌಡ; ಈ ಟ್ರಿಕ್‌ ಮಾಡಿದ್ರೆ ನಿಮ್ದು ಕೂಡ ಬೀದಿ ಪಾಡು

By Vaishnavi Chandrashekar  |  First Published Jan 8, 2025, 11:23 AM IST

ಮೋಜು ಮಸ್ತಿ ಮಾಡಲು ಹೋಗಿ ಸಂಕಷ್ಟಕ್ಕೆ ಸಿಲುಕಿಕೊಂಡ ಸೋನು ಶ್ರೀನಿವಾಸ್ ಗೌಡ. ದುಡಿಮೆ ಏನಿದೆ ಎಂದು ಲಕ್ಷ ಖರ್ಚು ಮಾಡುತ್ತಿದ್ದಾಳೆ ಎಂದ ನೆಟ್ಟಿಗರು.... 


ಬಿಗ್ ಬಾಸ್ ಸ್ಪರ್ಧಿ ಸೋನು ಶ್ರೀನಿವಾಸ್ ಗೌಡ ಮತ್ತೊಮ್ಮೆ ಸೋಲೋ ಟ್ರಿಪ್ ಹೊರಟಿದ್ದಾರೆ. ಯೂಟ್ಯೂಬ್ ವ್ಲಾಗ್ ಮತ್ತು ಇನ್‌ಸ್ಟಾಗ್ರಾಂ ಅಕೌಂಟ್‌ಗಳ ಮೂಲಕ ದುಡಿಯುತ್ತಿರುವ ಸೋನು ಶ್ರೀನಿವಾಸ್ ಗೌಡ ಮೋಸು ಮಸ್ತಿ ಮಾಡಲು ಗೋವಾ ಟ್ರಿಪ್ ಹೋಗಿದ್ದಾರೆ. ಟ್ರಿಪ್ ಏರುವುದರಿಂದ ಇಳಿದು ರೂಮ್ ಸೇರುವವರೆಗೂ ಏನು ಮಾಡುತ್ತೀನಿ, ಏನು ತಿನ್ನುತ್ತೀನಿ ಎಂದು ಪ್ರತಿಯೊಂದನ್ನು ವಿಡಿಯೋ ಮೂಲಕ ಸೋನು ಹಂಚಿಕೊಳ್ಳುತ್ತಾರೆ. ಆದರೆ ಈ ಸಲ ಗೋವಾಗೆ ಕಾಲಿಡುತ್ತಿದ್ದಂತೆ ಲಕ್ಷಗಟ್ಟಲೆ ಹಣ ಕಳೆದುಕೊಂಡ ಘಟನೆಯನ್ನು ವಿವರಿಸಿದ್ದಾರೆ. 

ಗೋವಾದ ಜನಪ್ರಿಯ ಕಸಿನೋಗೆ 50 ಸಾವಿರ ಇರುವ ಮೂಟು ಕಟ್ಟುಗಳನ್ನು ಸೋನು ತೆಗೆದುಕೊಂಡು ಹೋಗಿದ್ದಾರೆ. ಒಂದುವರೆ ಲಕ್ಷ ಇಟ್ಕೊಂಡು ಹೋಗುತ್ತಿದ್ದೀನಿ ಇದನ್ನು 5 ಲಕ್ಷ ಮಾಡಿಕೊಂಡು ಬರಲು ನಿಮ್ಮ ಆಶೀರ್ವಾದ ನನಗೆ ಬೇಕಿದೆ ಎಂದು ಸೋನು ವಿಡಿಯೋ ಆರಂಭಿಸಿದ್ದಾರೆ. ಸಾಮಾನ್ಯವಾಗಿ ಕಸಿನೋದಲ್ಲಿ ಆಟವಾಡುತ್ತಿರುವ ವಿಡಿಯೋ ಮಾಡಲು ಅವಕಾಶ ಇರುವುದಿಲ್ಲ. ಆಟ ಆಡುವ ಜಾಗ ಹೊರತು ಪಡಿಸಿ ಎಲ್ಲಿ ಬೇಕಿದ್ದರೂ ಫೋಟೋ ಮತ್ತು ವಿಡಿಯೋ ತೆಗೆದುಕೊಳ್ಳಬಹುದು. ಹಣ ಕಳೆದುಕೊಂಡ ಮೇಲೆ ಸೋನು ಬಾತ್‌ರೂಮ್‌ ಕನ್ನಡಿ ಮುಂದೆ ನಿಂತುಕೊಂಡು ಅಳು ತೋಡಿಕೊಂಡಿದ್ದಾರೆ. 

Tap to resize

Latest Videos

ಬೆಂಗಳೂರಿನಲ್ಲಿ ಎರಡು ಸೈಟ್ ಖರೀದಿಸಿದ ಸೋನು ಶ್ರೀನಿವಾಸ್ ಗೌಡ; ಈ ವರ್ಷ ಮನೆ ಕಟ್ಟಿಸೋದು ಕನ್ಫರ್ಮ್‌ ಅಂತೆ

'ರಾತ್ರಿ 11 ಗಂಟೆ ಆಗಿದೆ. ತೆಗೆದುಕೊಂಡು ಬಂದಿರುವ ಒಂದುವರೆ ಲಕ್ಷದಲ್ಲಿ ನಾನು 14 ಸಾವಿರ ಉಳಿಸಿಕೊಂಡಿದ್ದೀನಿ. ನಿಜವಾದ ಗೇಮ್‌ನಲ್ಲಿ ನಾವು ಗೆಲ್ಲುವುದಕ್ಕೆ ಆಗುತ್ತಿಲ್ಲ ಅಂದ್ರೆ ಪ್ರಮೋಷನ್‌ ಮಾಡುತ್ತಾರೆ ಅಲ್ವಾ ಆನ್‌ಲೈನ್‌ನಲ್ಲಿ ಅದರಲ್ಲಿ ಗೆಲ್ಲುವುದಕ್ಕೆ ಆಗುತ್ತಾ? ನಾನು ಕೂಡ ಪ್ರಮೋಷನ್ ಮಾಡಿದ್ದೀನಿ. ನಾನು ಕೂಡ ಪ್ರಮೋಷನ್ ಮಾಡುವುದು ಅಷ್ಟೆ ಸುಮ್ಮನೆ ದುಡ್ಡು ಹಾಕಬೇಡಿ ಹಣ ಕಳೆದುಕೊಳ್ಳಬೇಡಿ. ಈ ಕಸಿನೋದಲ್ಲಿ ನನಗೆ ಸಿಕ್ಕಿರುವುದು ಹುಬ್ಬಳಿ ಧಾರವಾಡದವರು. ಸಿಕ್ಕಿರುವ ಎಲ್ಲರೂ ಹಣ ಕಳೆದುಕೊಂಡಿದ್ದಾರೆ. ಯಾರಿಗೆ ಎಷ್ಟು ಬರುತ್ತೆ ಏನು ಕಳೆದುಕೊಳ್ಳುತ್ತಾರೆ ಅಂತ ಹೇಳಲು ಆಗಲ್ಲ ಹೀಗಾಗಿ ಬುದ್ಧಿ ಉಪಯೋಗಿಸಿ. ನಾನು ಆಟ ಆಡುವ ಬರದಲ್ಲಿ ಇನ್ನೂ ಊಟ ಮಾಡಿಲ್ಲ' ಎಂದು ಸೋನು ಮಾತನಾಡಿದ್ದಾರೆ.

ಈ ವರ್ಷ ನನ್ನ ಎರಡೂ ನಾಯಿಗಳಿಗೆ ಕ್ರಾಸಿಂಗ್ ಮಾಡಿಸುವುದೇ ನನ್ನ ದೊಡ್ಡ ಕನಸು: ಸೋನು ಶ್ರೀನಿವಾಸ್ ಗೌಡ

'ಈಗ ಸಮಯ ಸುಮಾರು ರಾತ್ರಿ 12.52 ರೂಮಿಗೆ ಬಂದಿದ್ದೀನಿ. ಇಷ್ಟು ದೊಡ್ಡ ಮಟ್ಟದಲ್ಲಿ ಹಣವನ್ನು ತೆಗೆದುಕೊಂಡು ಕಳೆದುಕೊಳ್ಳಬಾರದು.ಒಂದು ಸಲ ಬುದ್ಧಿ ಬಂದ ಮೇಲೆ ನಾನು ಕಲಿಯುವುದು. ದಯವಿಟ್ಟು ನನ್ನಂತೆ ಹಣ ಕಳೆದುಕೊಳ್ಳಬೇಡಿ. ರಿಯಲ್ ಗೇಮ್ ಆಗಲಿ ಆನ್‌ಲೈನ್ ಗೇಮ್ ಆಗಲಿ ಲಕ್ಕಿದ್ದರೆ ಮಾತ್ರ ಗೆಲ್ಲುವುದಕ್ಕೆ ಸಾಧ್ಯ' ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ. ಇಷ್ಟೊಂದು ಹಣ ಖರ್ಚು ಮಾಡಿರುವ ಸೋನು ಗೌಡ ದುಡಿಮೆ ಏನು ಎಂದು ಹಲವರು ಪ್ರಶ್ನೆ ಮಾಡಿದ್ದೀರಿ. ಯೂಟ್ಯೂಬ್, ಆಪ್ ಪ್ರಮೋಷನ್, ಬ್ರ್ಯಾಂಡ್ ಪ್ರಮೋಷನ್, ಸಿನಿಮಾ ಪ್ರಮೋಷನ್ ಮೂಲಕ ಸೋನು ಹಣ ಸಂಪಾದನೆ ಮಾಡುತ್ತಿದ್ದಾರೆ. ಅಲ್ಲದೆ ಹಣ ಸೇವ್ ಮಾಡಿ ಸೇವ್ ಮಾಡಿ ಬೆಂಗಳೂರಿನಲ್ಲಿ ಎರಡು ಸೈಟ್‌ಗಳನ್ನು ಖರೀದಿಸಿದ್ದು ಈ ವರ್ಷ ಮನೆ ಕಟ್ಟಿಸಬೇಕು ಅನ್ನೋ ಪ್ಲ್ಯಾನಿಂಗ್‌ನಲ್ಲಿ ಇದ್ದಾಳೆ. 

ತಿಂಗಳಿಗೆ ಒಂದೆರಡು ಸಲ ಕೋರ್ಟ್‌ಗೆ ಹೋಗ್ತೀನಿ ,ನಿಜ ಸಾಕಾಗಿದೆ: ಕೇಸ್‌ ಸತ್ಯ ಬಿಚ್ಚಿಟ್ಟ ಸೋನು ಶ್ರೀನಿವಾಸ್ ಗೌಡ

click me!