ಮಲ್ಲೇಶ್ವರಂನ ಪ್ರತಿಷ್ಠಿತ ದೇವಸ್ಥಾನದಲ್ಲಿ ಚಿನ್ನದ ಸರ ಕಳೆದುಕೊಂಡ ವರುಣ್ ಆರಾಧ್ಯ; ವಿಡಿಯೋ ವೈರಲ್

Published : Jan 08, 2025, 09:51 AM ISTUpdated : Jan 08, 2025, 10:35 AM IST
ಮಲ್ಲೇಶ್ವರಂನ ಪ್ರತಿಷ್ಠಿತ ದೇವಸ್ಥಾನದಲ್ಲಿ ಚಿನ್ನದ ಸರ ಕಳೆದುಕೊಂಡ ವರುಣ್ ಆರಾಧ್ಯ; ವಿಡಿಯೋ ವೈರಲ್

ಸಾರಾಂಶ

ಸಾಮಾಜಿಕ ಜಾಲತಾಣದ ತಾರೆ ವರುಣ್ ಆರಾಧ್ಯ, ಅಕ್ಕನ ಮಗಳ ಎರಡನೇ ಹುಟ್ಟುಹಬ್ಬದ ದೇವಾಲಯದ ಭೇಟಿಯ ವೇಳೆ ಚಿನ್ನದ ಸರ ಕಳೆದುಕೊಂಡು ಮತ್ತೆ ಪತ್ತೆ ಮಾಡಿದ ಘಟನೆಯನ್ನು ವಿಡಿಯೋದಲ್ಲಿ ಹಂಚಿಕೊಂಡಿದ್ದಾರೆ. ಚಿನ್ನದ ಸರ ಸಿಕ್ಕ ನಂತರ ಕುಟುಂಬದವರಿಗೆ ತಮಾಷೆ ಮಾಡಿದ್ದನ್ನೂ ತೋರಿಸಿದ್ದಾರೆ. ಮಕ್ಕಳಿಗೆ ಚಿನ್ನಾಭರಣ ಧರಿಸುವಾಗ ಎಚ್ಚರಿಕೆ ವಹಿಸುವಂತೆ ಸಲಹೆ ನೀಡಿದ್ದಾರೆ.

ಸೋಷಿಯಲ್ ಮೀಡಿಯಾ ಸ್ಟಾರ್, ಬೃಂದಾವನಾ ಸೀರಿಯಲ್ ನಟ ವರುಣ್ ಆರಾಧ್ಯ ಇನ್‌ಸ್ಟಾಗ್ರಾಂ ಮತ್ತು ಯೂಟ್ಯೂಬ್ ಚಾನೆಲ್ ಮೂಲಕ ಕನ್ನಡಿಗರಿಗೆ ಹತ್ತಿರವಾಗಿದ್ದಾರೆ. ವರುಣ್ ಅಪ್ಲೋಡ್ ಮಾಡುವ ವಿಡಿಯೋಗಳು ಲಕ್ಷಗಟ್ಟಲೆ ವೀಕ್ಷಣೆ ಪಡೆಯುತ್ತದೆ ಅಲ್ಲದೆ ಇದೊಂದು ಆಧಾಯ ಬರುವ ಕೆಲಸ ಕೂಡ ಹೌದು. ಪ್ರತಿದಿನ ವಿಡಿಯೋ ಕ್ರಿಯೇಟ್ ಮಾಡುವ ವರುಣ್ ತಮ್ಮ ತಾಯಿ, ಅಕ್ಕ ಚೈತ್ರಾ ಮತ್ತು ಭಾವ ಹಾಗೂ ಅವರ ಮಗಳ ಮತ್ತು ಸ್ನೇಹಿತರನ್ನು ತೋರಿಸುತ್ತಾರೆ.ಹಾಗೆಯೇ ಅಕ್ಕನ ಮಗಳು ಹುಟ್ಟುಹಬ್ಬದಂದು ವಿಡಿಯೋ ಮಾಡಲು ಹೋದಾಗ ಮಾಡಿಕೊಂಡ ಎಡವಟ್ಟು ವೈರಲ್ ಆಗುತ್ತಿದೆ. 

ಹೌದು! ಅಕ್ಕನ ಮಗಳ ಹೆಸರು ಕುಷಾನಿ. ಆಕೆಗೆ 2 ವರ್ಷ ತುಂಬಿದ ಕಾರಣ ಮಲ್ಲೇಶ್ವರಂನ ಶ್ರೀ ಕಾಡು ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಧನುರ್ಮಾಸ ಆಗಿದ್ದ ಕಾರಣ ನಂದಿ ತೀರ್ಥ ಮತ್ತು ಗಂಗಮ್ಮ ದೇವಸ್ಥಾನ 12 ಗಂಟೆಗೆ ಮುಚ್ಚಿದ್ದರು. ಹೀಗಾಗಿ ಮಲ್ಲಿಕಾರ್ಜುನನಿಗೆ ನಮಸ್ಕಾರ ಮಾಡಿ ಅಲ್ಲೇ ಮಾಡಿರುವ ಪಾರ್ಕ್‌ನಲ್ಲಿ ಕೆಲ ಕಾಲ ಸಮಯ ಕಳೆಯುತ್ತಾರೆ. ಆಗ ಅಕ್ಕನ ಮಗಳು ಕುಷಾನಿ ಅಲ್ಲಿ ಓಡಾಡಿಕೊಂಡು ಆಟವಾಡುತ್ತಿರುತ್ತಾರೆ. ಮಟ್ಟಿಲು ಹತ್ತಿಕೊಂಡು ಬಂದ ವರುಣ್ ಆರಾಧ್ಯಗೆ ಚಿನ್ನದ ಡಾಲರ್‌ ಸಿಗುತ್ತದೆ. ಇದೇನಪ್ಪ ಎಂದು ಅಕ್ಕನಿಗೆ ತೋರಿಸಿದಾಗ ಅದು ಅಕ್ಕ ಮಗಳ ಕತ್ತಲ್ಲಿ ಇದ್ದ ಚಿನ್ನದ ಡಾಲರ್ ಎಂದು ತಿಳಿಯುತ್ತದೆ. 

ಪ್ರತಿಯೊಬ್ಬರ ಜೀವನದಲ್ಲೂ ಹೀಗೆ ಆಗುತ್ತೆ; ವರುಣ್ ಆರಾಧ್ಯ- ವರ್ಷ ಕಾವೇರಿ ಬ್ರೇಕಪ್‌ ಉತ್ತರ ಕೊಟ್ಟ ತಾಯಿ!

ತಕ್ಷಣವೇ ಮಗುವಿನ ಕೊರಳಿನಲ್ಲಿ ನೋಡಿದಾಗ ಚಿನ್ನದ ಸರ ಕೂಡ ಕಾಣಿಸುವುದಿಲ್ಲ. ಸುಮಾರು 7-8 ಗ್ರಾಮ್ ಇರುವ ಚಿನ್ನದ ಸರವನ್ನು ಹುಡುಕಲು ಕುಟುಂಬಸ್ಥರು ಶುರು ಮಾಡುತ್ತಾರೆ. ಅಲ್ಲಿದ್ದ ಮಂಟಪದ ಬಳಿ ಚಿನ್ನದ ಸರ ಸಿಗುತ್ತದೆ. ಆದರೆ ಭಾವನ ಜೊತೆ ವರುಣ್ ತಮ್ಮ ತಾಯಿಗೆ ಪ್ರಾಂಕ್ ಮಾಡಲು ಶುರು ಮಾಡುತ್ತಾರೆ. ದೇವಸ್ಥಾನದ ಆಡಳಿತ ಮಂಡಳಿಯನ್ನು ವಿಚಾರಿಸಿ ಇಡೀ ದೇವಸ್ಥಾನ ಹುಡುಕಲು ಶುರು ಮಾಡುತ್ತಾರೆ. ಆದರೆ ಎಲ್ಲೂ ಸಿಗುವುದಿಲ್ಲ ಎಂದು ಕಣ್ಣೀರಿಡುತ್ತಾರೆ. ಅಷ್ಟರಲ್ಲಿ ಚಿನ್ನದ ಸರ ಎಲ್ಲಿತ್ತು? ಹೇಗೆ ಸಿಕ್ತು ಅನ್ನೋ ಸತ್ಯವನ್ನು ವರುಣ್ ವಿವರಿಸುತ್ತಾರೆ. ಇಲ್ಲಿ ಪ್ರಾಂಕ್ ಮಾಡಿರಬಹುದು ಆದರೆ ಸರ ಬಿದ್ದಿದ್ದು ಆಮೇಲೆ ಸಿಕ್ಕಿತ್ತು ಸತ್ಯ. ಹೀಗಾಗಿ ದಯವಿಟ್ಟು ತಮ್ಮ ಮಕ್ಕಳಿಗೆ ಚಿನ್ನದ ಸರ ಅಥವಾ ಚಿನ್ನದ ಉಂಗುರ ಧರಿಸಿದ್ದರೆ ಅದರ ಕಡೆ ಗಮನ ಕೊಡಿ ಇಲ್ಲವಾದರೆ ಈ ರೀತಿ ಕಳೆದುಕೊಳ್ಳುತ್ತೀರಿ ಎಂದು ವರುಣ್ ಒಂದು ಬುದ್ಧಿ ಪಾಠ ಹೇಳಿದ್ದಾರೆ.

24 ಗಂಟೆಗಳ ಕಾಲ ಕಾರಿನಲ್ಲಿ ಸ್ನೇಹಿತರ ಜೊತೆ ಲಾಕ್‌ ಆದ ವರುಣ್ ಆರಾಧ್ಯ; ಸುಸ್ಸು- ಊಟ-ನಿದ್ರೆ ಒಂದೇ ಜಾಗದಲ್ಲಿ!

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೈವಾಹಿಕ ಜೀವನಕ್ಕೆ ಬಿಗ್ ಬಾಸ್ ಮಾಜಿ ಸ್ಪರ್ಧಿ, ಹಿಂದೂ ಮುಸ್ಲಿಂ ಸಂಪ್ರದಾಯದಂತೆ ಮದುವೆ
ಕಾಲುಂಗುರ ಧರಿಸಿದ ನಟಿ ರಜಿನಿ ಪತಿ…. ಪ್ರಶ್ನಿಸಿದವರಿಗೆ ಏನಂದ್ರು ನೋಡಿ