ಬೆಂಗಳೂರಿನಲ್ಲಿ ಎರಡು ಸೈಟ್ ಖರೀದಿಸಿದ ಸೋನು ಶ್ರೀನಿವಾಸ್ ಗೌಡ; ಈ ವರ್ಷ ಮನೆ ಕಟ್ಟಿಸೋದು ಕನ್ಫರ್ಮ್‌ ಅಂತೆ

By Vaishnavi Chandrashekar  |  First Published Jan 3, 2025, 1:10 PM IST

ಹೊಸ ವರ್ಷದ ಪ್ರಯುಕ್ತ ಹೊಸ ಮನೆ ಕಟ್ಟಿಸುವ ಕನಸು ಕಂಡ ಸೋನು ಗೌಡ. ಯೂಟ್ಯೂಬ್ ದುಡಿಮೆಯಲ್ಲಿ ಸೈಟ್ ಖರೀದಿಸಬಹುದಾ?


ಸೋಷಿಯಲ್ ಮೀಡಿಯಾ ಸ್ಟಾರ್ ಹಾಗೂ ಬಿಗ್ ಬಾಸ್ ಸ್ಪರ್ಧಿ ಸೋನು ಶ್ರೀನಿವಾಸ್ ಗೌಡ ಹೊಸ ವರ್ಷದ ಹೊಸ ವಿಡಿಯೋವನ್ನು ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್ಲೋಡ್ ಮಾಡಿದ್ದಾರೆ. ನನ್ನ ಜೀವನದಲ್ಲಿ 2024 ಅತಿ ಕೆಟ್ಟ ವರ್ಷ ಆಗಿತ್ತು, ನಾನು ಕಂಡ ಕನಸು ನುಚ್ಚು ನೂರಾಗಿತ್ತು ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ. ವಿದೇಶ ಪ್ರಯಾಣ ಮಾಡಲು ಆಗಲಿಲ್ಲ ನನ್ನ ಕೋರ್ಟ್ ಕೇಸ್ ಇನ್ನೂ ಮುಗಿದಿಲ್ಲ ಹೀಗಾಗಿ 2025ರಲ್ಲಿ ಎಲ್ಲವೂ ಬೇಗ ಮುಗಿಯಲಿ ಎಂದು ಇಷ್ಟ ಪಡುತ್ತೀನಿ ಎಂದಿದ್ದಾರೆ ಸೋನು. ಇನ್ನು ಇನ್‌ಸ್ಟಾಗ್ರಾಂ ಮತ್ತು ಯೂಟ್ಯೂಬ್ ಮೂಲಕ ಸಣ ಸಂಪಾದನೆ ಮಾಡುತ್ತಿರುವ ಸೋನು ಹೊಸ ಸೈಟ್ ಖರೀದಿಸಿದ್ದಾರೆ. 

ಹೌದು! ಈ ಹೊಸ ವರ್ಷ 10 ಕನಸುಗಳನ್ನು ಹೊತ್ತಿರುವ ಸೋನು ಮನೆ ಕಟ್ಟಿಸುವುದು ಮೊದಲ ಕನಸು. 'ಇದುವರೆಗೂ ನಾನು ಈ ವಿಚಾರವನ್ನು ಎಲ್ಲಿಯೂ ಶೇರ್ ಮಾಡಿಲ್ಲ. ಇಷ್ಟು ದಿನಗಳಿಂದ ನಾನು ಕೂಡಿಟ್ಟಿರುವ ಹಣವನ್ನು ಸೇರಿಸಿ ಒಂದು ಸೈಟ್ ತೆಗೆದುಕೊಂಡಿದ್ದೀನಿ. ನನ್ನ ಮನೆಯಿಂದ ಹತ್ತಿರವಿರುವ ಗೌಡರಹಳ್ಳಿಯಲ್ಲಿ ಎರಡು ಸೈಟ್ ಖರೀದಿಸಿದ್ದೆ. ಒಂದು ಸೈಟ್‌ನಲ್ಲಿ ಮನೆ ಕಟ್ಟಬೇಕು ಅಂದುಕೊಂಡಿದ್ದೀನಿ ಮತ್ತೊಂದು ಸೈಟ್ ಹಾಗೆ ಉಳಿಸಿಕೊಳ್ಳಬೇಕು ಅಂದುಕೊಂಡಿದ್ದೀನಿ. ಮನೆ ಕಟ್ಟಲು ಲೋನ್ ತೆಗೆದುಕೊಂಡು ನನ್ನ ಕನಸಿನ ಮನೆ ಕಟ್ಟಬೇಕು ಅನ್ನೋ ಅಸೆ ಇದೆ' ಎಂದು ಸೋನು ಮಾತನಾಡಿದ್ದಾರೆ. 

Tap to resize

Latest Videos

ಈ ವರ್ಷ ನನ್ನ ಎರಡೂ ನಾಯಿಗಳಿಗೆ ಕ್ರಾಸಿಂಗ್ ಮಾಡಿಸುವುದೇ ನನ್ನ ದೊಡ್ಡ ಕನಸು: ಸೋನು ಶ್ರೀನಿವಾಸ್ ಗೌಡ

ಈ ಆಸೆಗಳ ಜೊತೆಯಲ್ಲಿ ಸೋನು ತಮ್ಮ ಎರಡು ಮುದ್ದಾದ ನಾಯಿಗಳಿಗೆ ಕ್ರಾಸಿಂಗ್ ಮಾಡಿಸಬೇಕು ಎಂದುಕೊಂಡಿದ್ದಾರೆ. ಜನರಿಗೆ ಆಶ್ಚರ್ಯ ಅನಿಸಬಹುದು ಇದೇನಪ್ಪ ಕ್ರಾಸಿಂಗ್ ಮಾಡಿಸುವುದೇ ದೊಡ್ಡದು ಅನ್ನೋ ರೀತಿಯಲ್ಲಿ ಮಾತನಾಡುತ್ತಿದ್ದಾಳೆ ಎಂದು ಆದರೆ ನನಗೆ ಇವರಿಬ್ಬರ ಮೇಲೆ ತುಂಬಾ ಪ್ರೀತಿ ಇದೆ. ಈ ನಾಯಿಗಳಿಂದ ನಿನ್ನ ಜೀವನ ಹಾಳಾಗುತ್ತದೆ ಎಂದು ನನ್ನ ಅಮ್ಮ ಸದಾ ಬೈಯುತ್ತಾರೆ. ಆದರೆ ನನಗೆ ಇವರು ಖುಷಿ ಕೊಡುತ್ತಾರೆ ನನಗೆ ನಾಯಿಗಳ ವಾಸನೆ ತುಂಬಾ ಇಷ್ಟ' ಎಂದು ಸೋನು ಹೇಳಿದ್ದಾಳೆ. 

ತಿಂಗಳಿಗೆ ಒಂದೆರಡು ಸಲ ಕೋರ್ಟ್‌ಗೆ ಹೋಗ್ತೀನಿ ,ನಿಜ ಸಾಕಾಗಿದೆ: ಕೇಸ್‌ ಸತ್ಯ ಬಿಚ್ಚಿಟ್ಟ ಸೋನು ಶ್ರೀನಿವಾಸ್ ಗೌಡ

ಕೋರ್ಟ್ ಕೇಸ್:

'ಕೋರ್ಟ್‌ನಲ್ಲಿ ಕೇಸ್ ನಡೆಯುತ್ತಿದೆ ಹೀಗಾಗಿ ಅದರ ಬಗ್ಗೆ ನಾನು ಹೆಚ್ಚಿಗೆ ಮಾತನಾಡುವಂತೆ. ಹೆಸರು ಹೇಳುವಂತಿಲ್ಲ. ಇಷ್ಟು ದಿನಗಳಿಂದ ನಾನು ಸುಮ್ಮನಿರುವುದು ಅದಕ್ಕೆ. ಕೋರ್ಟ್‌ನಲ್ಲಿ ಕೇಸ್ ಮುಗಿಯಲಿ ನಾನು ಕ್ಲಾರಿಟಿ ಕೊಡುತ್ತೀನಿ. ತಿಂಗಳಿಗೆ ಒಂದೆರಡು ಸಲ ಕೋರ್ಟ್‌ಗೆ ಹೋಗ್ತಿದ್ದೀನಿ ಬರ್ತಿದ್ದೀನಿ...ಪದೇ ಪದೇ ಹೋಗ್ತಾ ಇರ್ಬೇಕು ಬರ್ತಾ ಇರ್ಬೇಕು ಅಂತ ಮೈಂಡ್ ಅಪ್ಸೆಟ್ ಆಗಿದೆ. ಆದಷ್ಟು ಬೇಗ ಈ ಕೇಸ್ ಮುಗಿಯಬೇಕು ಅನಿಸುತ್ತಿದೆ. ಕೇಸ್ ನಡೆಯುತ್ತಿರುವುದರಿಂದ ನಾನು ವಿದೇಶಕ್ಕೆ ಹೋಗಲು ಆಗುತ್ತಿಲ್ಲ' ಎಂದಿದ್ದಾರೆ ಸೋನು.

ಪುನೀತ್ ಪರಮಾತ್ಮ ಸಿನಿಮಾ ಶೈಲಿಯಲ್ಲಿ 15 ಕಂಬಗಳ ಮನೆ ಕಟ್ಟಿಸಿದ ಸೋನು ಗೌಡ; ಗೃಹಪ್ರವೇಶದ ಫೋಟೋ ವೈರಲ್

click me!