ಸಾಮಾಜಿಕ ಜಾಲತಾಣದಲ್ಲಿ ಮತ್ತಷ್ಟು ಟ್ರೆಂಡ್ ಆಯ್ತು ಸೋನು ಗೌಡ ಬಿಕಿನಿ ಲುಕ್....
ಟಿಕ್ ಟಾಕ್ ಸ್ಟಾರ್, ಇನ್‌ಸ್ಟಾಗ್ರಾಂ ರೀಲ್ಸ್ ಕ್ವೀನ್ ಹಾಗೂ ಬಿಗ್ ಬಾಸ್ ಓಟಿಟಿ ಸ್ಪರ್ಧಿ ಸೋನು ಶ್ರೀನಿವಾಸ್ ಗೌಡ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟಿವ್ ಆಗಿದ್ದು ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಕ್ರಿಯೇಟ್ ಮಾಡಿ ಟ್ರೋಲ್ ಆಗುತ್ತಾರೆ. ಈಗ ಮೋಜು ಮಸ್ತಿ ಮಾಡಲು ಮಾಲ್ಡೀವ್ಸ್ ಕಡೆ ಪ್ರಯಾಣ ಮಾಡಿದ್ದಾರೆ. ಸೋನು ಬಿಕಿನಿ ವಿಡಿಯೋ ವೈರಲ್ ಆಗುತ್ತಿದೆ.
ಹೌದು! ಸೋನು ಗೌಡ 1 ಮಿಲಿಯನ್ ಫಾಲೋವರ್ಸ್ ಪಡೆದಿರುವುದಕ್ಕೆ ಮಾಲ್ಡೀವ್ಸ್‌ನಲ್ಲಿ ಬಿಕಿನಿ ಧರಿಸಿ ಸಮುದ್ರದ ಕಡೆ ವಾಕಿಂಗ್ ಮಾಡುತ್ತಿರುವ ವಿಡಿಯೋ ಅಪ್ಲೋಡ್ ಮಾಡಿದ್ದಾರೆ. ರೆಡ್ ಆಂಡ್ ಬ್ಲಾಕ್ ಟು ಪೀಸ್ ಧರಿಸಿರುವ ಸೋನು ಗೌಡ ಕ್ಯಾಟ್‌ವಾಕ್ ಮಾಡಿಕೊಂಡು ಕ್ಯಾಮೆರಾ ಮುಂದೆ ಪೋಸ್ ಕೊಟ್ಟಿದ್ದಾರೆ. ವಿಡಿಯೋಗೆ ಯಾರೂ ಕಾಮೆಂಟ್ ಮಾಡಬಾರದು ಎಂದು ಕಾಮೆಂಟ್ ಸೆಕ್ಷನ್ ಆಫ್ ಮಾಡಿಬಿಟ್ಟಿದ್ದಾರೆ. ಆಂಕರ್ ಸಬ್ರಿನ್ ಈ ವಿಡಿಯೋ ಸೆರೆ ಹಿಡಿದಿದ್ದಾರೆ.
ಅಬ್ಬಬ್ಬಾ! ಮಾಲ್‌ನಲ್ಲಿ ಬರ್ತಡೇ ಶಾಪಿಂಗ್ ಮಾಡಿದ ಸೋನು ಗೌಡ; ಖರ್ಚು ಎಷ್ಟಾಗಿತ್ತು ನೋಡಿ!
ಮಾಲ್ಡೀವ್ಸ್‌ಗೆ ಕಾಲಿಟ್ಟಾಗಿನಿಂದ ಸೋನು ಸಖತ್ ಹಾಟ್ ಔಟ್‌ಫಿಟ್ ಧರಿಸುತ್ತಿದ್ದಾರೆ. ಅತಿ ಹೆಚ್ಚಾಗಿ ಬಿಕಿನಿ ಧರಿಸಿರುವುದು ನೆಟ್ಟಿಗರ ಗಮನ ಸೆಳೆದಿದೆ. ಎಣ್ಣೆ ಕುಡಿದು ಜಾಲಿ ಮಾಡುತ್ತಿದ್ದಾರೆ. ಟ್ರೋಲ್ ಮಾಡ್ಬೇಡಿ ಎಂದು ಮನವಿ ಮಾಡಿಕೊಂಡು ಈ ರೀತಿ ವರ್ತಿಸುತ್ತಿರುವುದು ಸರಿ ಅಲ್ಲ ಎಂದು ನೆಟ್ಟಿಗರು ಕಿವಿ ಮಾತು ಹೇಳುತ್ತಿದ್ದಾರೆ.
ಟ್ರೋಲ್‌ನಿಂದ ತಾಯಿ ಆರೋಗ್ಯ ಕೆಟ್ಟಿದೆ?
'ನನ್ನ ಯುಟ್ಯೂಬ್ ಇನ್‌ಸ್ಟಾಗ್ರಾಂನಲ್ಲಿ ತೀರಾ ಕೆಟ್ಟ ಕಾಮೆಂಟ್‌ಗಳು ಬರುತ್ತಿದೆ. ನನ್ನ ಮನಸ್ಸಿಗೆ ತುಂಬಾ ನೋವಾಗುತ್ತಿದೆ ನಾನು ಯಾರೊಟ್ಟಿಗೂ ಶೇರ್ ಮಾಡಿಕೊಳ್ಳುವುದಿಲ್ಲ. ಒಂದು ಲಿಮಿಟ್ ವರೆಗೂ ಓಕೆ ಅದನ್ನೂ ಮೀರಿ ಮಾಡಿದರೆ ಕಷ್ಟವಾಗುತ್ತದೆ. ಒಂದು ವಾರದ ಹಿಂದೆ ನನ್ನ ತಾಯಿ ಯುಟ್ಯೂಬ್ ಚಾನೆಲ್ ಹೆಚ್ಚಿಗೆ ನೋಡುತ್ತಾರೆ ಆ ನನ್ನ ಬಗ್ಗೆ ಒಂದೆರಡು ಟ್ರೋಲ್ ವಿಡಿಯೋ ನೋಡುತ್ತಿದ್ದರು ಕೆಟ್ಟ ಕಾಮೆಂಟ್ ಮತ್ತು ಕೆಟ್ಟ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದರು. ಮಾತಿಗೆ ಮುಂಚೆ ಬೀಪ್ ಪದಗಳನ್ನು ಬಳಸಿದ್ದಾರೆ. ಆ ವಿಡಿಯೋ ನಾನು ಕೇಳಿಸಿಕೊಂಡರೆ ಬೇಸರ ಆಗುತ್ತದೆ ಅಂತ ಸೌಂಡ್ ಕಡಿಮೆ ಮಾಡಿಕೊಂಡು ನೋಡುತ್ತಾ ಅಳುತ್ತಿದ್ದರು. ನನಗೆ ಕೇಳಿಸುತ್ತಿದ್ದರೂ ಸುಮ್ಮನಿದೆ. ನನ್ನಿಂದ ನನ್ನ ಕುಟುಂಬ ನೋವು ಪಡುತ್ತಿದೆ ದಯವಿಟ್ಟು ಹೀಗೆ ಮಾಡಬೇಡಿ. ನಾನು ಯಾರಿಗೂ ಗೊಂದರೆ ಕೊಟ್ಟಿಲ್ಲ ನಾನು 20 ವರ್ಷದ ಹುಡುಗಿ ಇದ್ದಾಗ ಮಾಡಿದ ತಪ್ಪಿಗೆ ಈಗಲೂ ಶಿಕ್ಷೆಯಾಗಿ ಕೊಡುತ್ತಿದ್ದೀರಾ? 4 ವರ್ಷ ಕಳೆದರೂ ನಾನು ಬೇಸರದಲ್ಲಿರುವೆ' ಎಂದು ಸೋನು ಗೌಡ ವಿಡಿಯೋದಲ್ಲಿ ಮಾತನಾಡಿದ್ದಾರೆ.
ಯಾಕೆ ಇಷ್ಟು ಚೆಂದ ನೀನು...ದೃಷ್ಟಿ ಬೊಟ್ಟು ಇಡಲೇನು?; ಸೋನು ಗೌಡ ಮೇಲೆ ನೆಟ್ಟಿಗರಿಗೆ ಫುಲ್ ಲವ್!
'ನನ್ನ ಬಗ್ಗೆ ಅತಿ ಹೆಚ್ಚು ನೆಗೆಟಿವ್ ಕಾಮೆಂಟ್ ಮತ್ತು ಟ್ರೋಲ್ ಮಾಡುತ್ತಿರುವುದು ಹೆಣ್ಣು ಮಕ್ಕಳು. ಯಾರಿಗಾದರೂ ಗೊಂದರೆ ಕೊಟ್ಟರೆ ಕಳ್ಳತನ ಮಾಡಿದರೆ ಅಥವಾ ಹೊಡೆದರೆ ತಪ್ಪು ಈ ರೀತಿ ಮಾತನಾಡಿ ಆದರೆ ನನ್ನ ವೈಯಕ್ತಿ ಜೀವನದಲ್ಲಿ ಆದ ತಪ್ಪನ್ನು ಯಾಕೆ ನೀವು ಪಬ್ಲಿಕ್ ಮಾಡುತ್ತಿರುವು? ಟ್ರೋಲ್ ಮಾಡಬೇಡಿ ಎನ್ನುತ್ತಿಲ್ಲ ಆದರೆ ಫ್ಯಾಮಿಲಿವರೆಗೂ ಬೇಡ. ನನ್ನ ಟ್ರೋಲ್ ವಿಡಿಯೋ ಅವಮಾನಗಳನ್ನು ನೋಡಿ ನನ್ನ ತಾಯಿ ಆರೋಗ್ಯ ಕೆಟ್ಟಿದೆ. ಈಗಲೂ ಟ್ರೋಲ್‌ಗಳನ್ನು ನೋಡಿ ನನ್ನ ಕುಟುಂಬಸ್ಥರು ನನ್ನನ್ನು ಮಾತನಾಡಿಸುವುದಿಲ್ಲ ಕೆಲವು ಮಾತ್ರ ನಮ್ಮ ಜೊತೆ ಚೆನ್ನಾಗಿರುವುದು. ನಾನು ತಪ್ಪು ಮಾಡಿರುವುದಕ್ಕೆ ಟ್ರೋಲ್ ಮಾಡಿ ಏನ್ ಏನೋ ಮಾಡಿ ಎಡಿಟ್ ಮಾಡಬೇಡಿ' ಎಂದು ಸೋನು ಗೌಡ ಹೇಳಿದ್ದಾರೆ.