ಬಿಗ್‌ಬಾಸ್‌ ಸೀಸನ್‌ 10ಕ್ಕೆ ಇವರೆಲ್ಲ ಸ್ಪರ್ಧಿಗಳಂತೆ, ಪ್ರೋಮೋದಲ್ಲಿ ಕಾಣದ ಕಿಚ್ಚ, ಸುದೀಪ್ ಶೋ ನಡೆಸಲ್ವಾ?

Published : Sep 03, 2023, 01:32 PM IST
ಬಿಗ್‌ಬಾಸ್‌ ಸೀಸನ್‌ 10ಕ್ಕೆ ಇವರೆಲ್ಲ ಸ್ಪರ್ಧಿಗಳಂತೆ,  ಪ್ರೋಮೋದಲ್ಲಿ ಕಾಣದ ಕಿಚ್ಚ, ಸುದೀಪ್ ಶೋ ನಡೆಸಲ್ವಾ?

ಸಾರಾಂಶ

ಜನಪ್ರಿಯ ರಿಯಾಲಿಟಿ ಶೋ  ಬಿಗ್‌ಬಾಸ್‌ ಕನ್ನಡ 10 ನೇ ಆವೃತ್ತಿ ಫ್ರೋಮೋ ರಿಲೀಸ್ ಆಗಿದೆ. ಇದರ ಜೊತೆಗೆ ಫ್ರೋಮೋದಲ್ಲಿ ಈ ಬಾರಿ ಸುದೀಪ್ ಕಾಣಿಸಿಕೊಳ್ಳದ ಕಾರಣ ಶೋ ನಲ್ಲಿ ಸುದೀಪ್ ಇದ್ದಾರಾ? ಇಲ್ವಾ ಎಂಬ ಬಗ್ಗೆ ಚರ್ಚೆ ಆರಂಭವಾಗಿದೆ.

ಕಿರುತೆರೆ ಕ್ಷೇತ್ರದಲ್ಲಿ ಜನಪ್ರಿಯ ರಿಯಾಲಿಟಿ ಶೋ ಎನಿಸಿಕೊಂಡಿರುವ ಬಿಗ್‌ಬಾಸ್‌ ಹೊಸ ಆವೃತ್ತಿಗೆ ಕ್ಷಣಗಣನೆ ಆರಂಭವಾಗಿದೆ.  ಕನ್ನಡದಲ್ಲಿ 10ನೇ ಆವೃತ್ತಿ ನಡೆಯಲಿದ್ದು, ಕಲರ್ಸ್ ಕನ್ನಡ ವಾಹಿನಿ ಸೆ.2ರಂದು ಕಿಚ್ಚನ ಹುಟ್ಟುಹಬ್ಬದ ದಿನವೇ ಪ್ರೋಮೋ ರಿಲೀಸ್ ಮಾಡಿದೆ. ಈ ಮೂಲಕ ಕಿಚ್ಚನ ಹುಟ್ಟುಹಬ್ಬಕ್ಕೆ ಸಪ್ರೈಸ್‌ ನೀಡಿದೆ. 

ನಮಸ್ತೆ ಕರ್ನಾಟಕ, ಹೇಗಿದ್ದೀರಾ? ನನ್ನ ಮಿಸ್ ಮಾಡಿಕೊಂಡ್ರಾ? ಇಟ್ಟ ನೋಟ ಗಟ್ಟಿಯಾಗಿದೆ. ಆಟ ಮತ್ತೆ ಶುರುವಾಗುತ್ತಿದೆ. ಆದ್ರೆ ಈ ಬಾರಿ ಸಂಥಿಂಗ್ ಸ್ಪೆಷಲ್.. ಎಂದು ಪ್ರೋಮೋದಲ್ಲಿ ಬಿಗ್‌ ವಾಯ್ಸ್ ಕೇಳಿಸುತ್ತದೆ.  ಈ ಹಿಂಟ್‌ ಎಲ್ಲರ ತಲೆಗೆ ಹುಳ ಬಿಟ್ಟಂತಾಗಿದೆ. ಸಿಸಿಟಿವಿಯಲ್ಲಿ ಸಿಟಿ ಜೀವನವನ್ನು ತೋರಿಸಲಾಗಿದೆ. 

'ಬಿಗ್ ಬಾಸ್ ಕನ್ನಡ 10'ರ ಮೊಟ್ಟ ಮೊದಲ ಪ್ರೋಮೋ ಔಟ್: ಈ ಬಾರಿಯ ಸಂಥಿಂಗ್ ಸ್ಪೆಷಲ್ ಏನು

ಈ ವಾಯ್ಸ್‌ನಲ್ಲಿ ಈ ಬಾರಿ ಬದಲಾವಣೆ ಇದೆ ಎಂದು ಹಲವು ಮಂದಿ ಕಮೆಂಟ್ ಮಾಡಿದ್ದಾರೆ. ಬಹುಶಃ ಬಿಗ್‌ ಬಾಸ್ ಗೇಮ್ ಒಳಗಡೆ ಅಲ್ಲ ಹೊರಗಡೆ ಅಂತ ಅನ್ನಿಸುತ್ತಿದೆ. ಬರೀ ಸಿಟಿ ರೆಕಾರ್ಡ್ ಮಾಡಿದ್ದಾರೆ ಎಂದು ಮತ್ತೆ ಕೆಲವರು ಕಂಮೆಂಟ್ ಮಾಡಿದ್ದಾರೆ.

ಇನ್ನೂ ಕೆಲವರು ನಿರೂಪಕರು ಚೇಂಜ್ ಆಗ್ತಿದ್ದಾರಾ! ಕಿಚ್ಚ ಸುದೀಪ್‌ರನ್ನು ನೋಡಬೇಕಿದೆ ಅವರನ್ನು ಬದಲಾಯಿಸಬೇಡಿ. ಯಶ್ ಮತ್ತು ಕಿಚ್ಚ ಅವರನ್ನು ಒಂದೇ ವೇದಿಕೆಯಲ್ಲಿ ನೋಡಬೇಕು ಎಂದು ಕಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ಬಿಗ್‌ ಬಾಸ್‌ ನೋಡಲು ಕಾಯುತ್ತಿದ್ದೇವೆ. ನನ್ನ ಫೇವರೆಟ್‌ ಶೋ ಈಸ್‌ ಬ್ಯಾಕ್ ವಿಥ್ ಬ್ಯಾಂಗ್‌ ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಕಾಮನ್‌ ಜನರಿಗೆ ಹೆಚ್ಚು ಅವಕಾಶ ನೀಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಈ ವರೆಗೆ ಒಂಬತ್ತು ಸೀಸನ್​ಗಳು ಪ್ರಸಾರವಾಗಿವೆ. ಬಿಗ್​ಬಾಸ್ ಪ್ರಸಾರವಾದ ಪ್ರತಿಬಾರಿ ಪರ-ವಿರೋಧ ಚರ್ಚೆಗಳು ಇರುತ್ತವೆಯಾದರೂ ಜನರು ನೋಡುವುದಂತೂ ಬಿಟ್ಟಿಲ್ಲ. ಬಿಗ್​ಬಾಸ್ ಸೀಸನ್ 9ರಲ್ಲಿ ನಟ, ರೇಡಿಯೋ ಜಾಕಿ ರೂಪೇಶ್ ಶೆಟ್ಟಿ ವಿಜೇತರಾಗಿದ್ದರು, ಚೆನ್ನಾಗಿ ಆಡಿದ್ದ ರಾಕೇಶ್ ಅಡಿಗ ರನ್ನರ್ ಅಪ್ ಆಗಿದ್ದರು. ಕಳೆದ ಬಾರಿ ಬಿಗ್​ಬಾಸ್ ಒಟಿಟಿ ಮೊದಲ ಸೀಸನ್ ಸಹ ಇತ್ತು.

ಈ ಬಾರಿ ಓಟಿಟಿ ಸೀಸನ್ ಬಗ್ಗೆ ಯಾವುದೇ ಅಪ್ಡೇಟ್‌ ಕೊಟ್ಟಿಲ್ಲ. ಜೊತೆಗೆ ಹಲವು ವರ್ಷಗಳ ಕಾಲ ಬಿಗ್​ಬಾಸ್ ಆಯೋಜನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಪರಮೇಶ್ವರ್ ಗುಂಡಕಲ್ ಈ ಬಾರಿ ಬಿಗ್​ಬಾಸ್ ರಿಯಾಲಿಟಿ ಶೋನ ಭಾಗವಾಗಿರುವುದಿಲ್ಲ.

ಮಲೈಕಾ ಜತೆ ಬ್ರೇಕಪ್, ನಟ ಅರ್ಜುನ್‌ ಕಪೂರ್‌ ಜತೆ ಕುಶಾ ಕಪಿಲಾ ಡೇಟಿಂಗ್, ಯಾರೀಕೆ 

ಈ ಹಿಂದೆ  ಸೆ.30ಕ್ಕೆ ಬಿಗ್‌ಬಾಸ್‌ ಆರಂಭವಾಗಲಿದೆ ಎಂದು ಸುದ್ದಿಯಾಗಿತ್ತು. ಆದರೆ ಅದಕ್ಕೂ ಮುನ್ನ ಶೋ ಆರಂಭವಾಗುವ ಲಕ್ಷಣಗಳು ಕಾಣುತ್ತಿದೆ. ಕಲರ್ಸ್ ಕನ್ನಡದಲ್ಲಿ ಸದ್ಯ ಅನುಬಂಧ ಅವಾರ್ಡ್ ಗೆ ತಯಾರಿ ನಡೆಯುತ್ತಿದೆ. ಸೆಪ್ಟೆಂಬರ್ ಮೊದಲ ವಾರ  ಅನುಬಂಧ ಅವಾರ್ಡ್ ಶೂಟಿಂಗ್ ನಡೆಯಲಿದ್ದು, ಸೆಪ್ಟೆಂಬರ್ ಮೂರನೇ ವಾರದಲ್ಲಿ ಶೋ ಟೆಲಿಕಾಸ್ಟ್ ಮಾಡಲು ಕಲರ್ಸ್ ಕನ್ನಡ ಯೋಚಿಸಿದೆ. ಇದಾದ ಬಳಿಕ ಬಿಗ್‌ ಬಾಸ್ ಸೆಪ್ಟೆಂಬರ್ ಅಂತ್ಯಕ್ಕೆ ಆರಂಭವಾಗಲಿದೆ ಎನ್ನಲಾಗಿದೆ. 

ಎಂದಿನಂತೆ ಬಿಡದಿ ಬಳಿ ಇರುವ ಇನ್ನೋವೇಟಿವ್ ಫಿಲಂ ಸಿಟಿಯಲ್ಲಿ (Innovative Film City) ಶೋಗೆ ದೊಡ್ಡ ಸೆಟ್‌ ಹಾಕಲಾಗಿದೆ. ಇನ್ನು ಬಿಗ್‌ಬಾಸ್‌ ಕನ್ನಡ ಸೀಸನ್ 10 ಗೆ ಈ ಬಾರಿ ಕಿರುತೆರೆ ನಟಿ ನಮ್ರತಾ ಗೌಡ,  ಹುಚ್ಚ ಸಿನೆಮಾದ ನಟಿ ರೇಖಾ, ನಟಿ ಆಶಾ ಭಟ್, ರೀಲ್ಸ್ ನಲ್ಲಿ ಫೇಮಸ್‌ ಆಗಿರುವ ಭೂಮಿಕಾ ಬಸವರಾಜ್, ಶನಿ ಸೀರಿಯಲ್‌ ಮುಖಾಂತರ ಫೇಮಸ್ ಆಗಿರುವ ಸುನೀಲ್, ಅಗ್ನಿಸಾಕ್ಷಿ ನಟ ರಾಜೇಶ್ ಧ್ರುವ, ಸೋಷಿಯಲ್‌ ಮಿಡಿಯಾದಲ್ಲಿ ಫೇಮಸ್‌ ಆಗಿರುವ ವರ್ಷ ಕಾವೇರಿ, ಇನ್ನು ಗಿಚ್ಚಿಗಿಲಿಗಿಲಿಯಿಂದ ಯಾವುದಾದರೂ ಒಬ್ಬ ನಟ ಬರಬಹುದು ಎಂದು ಹೇಳಲಾಗಿದೆ. ಈ ಸಾಲಿನಲ್ಲಿ ಚಂದ್ರಫ್ರಭ, ಪ್ರಶಾಂತ್, ದಿವ್ಯಾ ವಸಂತ, ಜಾಹ್ನವಿ ಅವರಲ್ಲಿ ಯಾರಾದರೂ ಒಬ್ಬರಿಗೆ ಅವಕಾಶ ಸಿಗಲಿದೆ ಎಂದು ಹೇಳಲಾಗುತ್ತಿದೆ. ಏನೇ ಆದರೂ ಆಡಿಶನ್ ನಡೆದು ಶೋ ಆರಂಭವಾದ ಬಳಿಕ ದೊಡ್ಮನೆಗೆ ಯಾರೆಲ್ಲ ಎಂಟ್ರಿ ಕೊಡುತ್ತಾರೆ ಎಂಬ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಎಲ್ಲಾ ಸೀರಿಯಲ್​ ಜ್ಯೋತಿಷಿಗಳೇಕೇ ಮಹಾ ವಂಚಕರು? ಕರ್ಣ- ನಿಧಿ ಮದ್ವೆ ಮುಹೂರ್ತಕ್ಕೆ ಜಾಲತಾಣದಲ್ಲಿ ಭಾರಿ ಆಕ್ರೋಶ!
ಸಂಭ್ರಮದಿಂದ ಕ್ರಿಸ್ಮಸ್ ಆಚರಿಸುತ್ತಿದ್ದಾರೆ Niveditha Gowda… ಶೋಕಿ ಎಂದ ಜನ