
ಕನ್ನಡ ಕಿರುತೆರೆಯ ಸುಪ್ರಸಿದ್ಧ ವ್ಯಕ್ತಿ, ಬಿಗ್ ಬಾಸ್ ಕಿಂಗ್ ಶಿಶಿರ್ ಶಾಸ್ತ್ರಿ ಈಗ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಂದರ್ಶನ, ಕೈ ತುಂಬಾ ಆಫರ್‌ಗಳು ಹಾಗೂ ವಿಶೇಷ ಅತಿಥಿಯಾಗಿ ಆಹ್ವಾನ ...ಒಟ್ಟಾರೆ ಫುಲ್ ಬ್ಯುಸಿಯಾಗಿದ್ದಾರೆ. ಆದರೆ ಇದೇ ಶಿಶಿರ್ ಟಿಆರ್‌ಪಿ ಇಲ್ಲದ ಸಮಯದಲ್ಲಿ ಸೀರಿಯಲ್ ಹೇಗಿತ್ತು? ಈಗ ಹೇಗಿದೆ? ಟೆಕ್ನಾಲಜಿ ಬೆಳೆದು ಯಾವ ರೀತಿ ಸೀರಿಯಲ್ ಕಲಾವಿದರಿಗೆ ಸಹಾಯ ಮಾಡುತ್ತಿದೆ ಎಂದು ಹಂಚಿಕೊಂಡಿದ್ದಾರೆ
'ನಾನು ಸಿಕ್ಕಾಪಟ್ಟೆ ಲಕ್ಕಿ ವ್ಯಕ್ತಿ ಅಂದುಕೊಳ್ಳುತ್ತೀನಿ ಏಕೆಂದರೆ ನಾನು ಬಂದಾಗ ಎರಡೂ ಫೇಸ್ ನೋಡಲು ಅವಕಾಶ ಸಿಕ್ಕಿತ್ತು. ನಾನು ಸೀರಿಯಲ್ ಲೋಕಕ್ಕೆ ಕಾಲಿಟ್ಟಾಗ ಟಿಆರ್‌ಪಿ ಕಾಂಪಿಟೇಷನ್ ಅನ್ನೋದು ಇರುತ್ತಿರಲಿಲ್ಲ. ಕಂಟೆಂಟ್ ಇದ್ರೆ ಸೀರೆ ಗೆಲ್ಲುತ್ತದೆ, ಮನೆ ಮಗಳಿಗೆ ಸೀರಿಯಲ್ ಕಥೆ ಇಷ್ಟ ಆದ್ರೆ ಸೀರಿಯಲ್ ಗೆಲ್ಲುತ್ತದೆ ಅಂತ ಇತ್ತು. ಈಗ ಸೀರಿಯಲ್ ನೋಡುವವರ ಸಂಖ್ಯೆ ಹೆಚ್ಚಾಗಿ ಅಲ್ಲದೆ ಪ್ರತಿ ವಯಸ್ಸಿನವರಿಗೂ ಕಥೆ ಇಷ್ಟ ಆಗಬೇಕು. ಸೋಷಿಯಲ್ ಮೀಡಿಯಾ ಈಗ ನಮ್ಮ ಲೈಫ್‌ಗೆ ಬಂದಿರುವ ಕಾರಣ ಪ್ರತಿಯೊಂದಕ್ಕೂ ಬೂತ್ ಕನ್ನಡಿ ಹಾಕಿ ನೋಡುತ್ತಿರುತ್ತಾರೆ ನಮ್ಮ ಜನ. ಈಗ ಸೀರಿಯಲ್‌ಗಿಂತ ನಾನು ಆಗ ಸಖತ್ ಎಂಜಾಯ್ ಮಾಡುತ್ತಿದ್ದೆ' ಎಂದು ಖಾಸಗಿ ಸಂದರ್ಶನದಲ್ಲಿ ಶಿಶಿರ್ ಮಾತನಾಡಿದ್ದಾರೆ.
ನೀವೆಲ್ಲಾ ರೀಲ್ ನೋಡಿದೀರಾ? ಈಗ ಚಿಪ್‌ಗಳಲ್ಲಿ ಶೂಟ್ ಮಾಡುತ್ತಾರೆ. ಆಗ ರೀಲ್ ಅಥವಾ ಕ್ಯಾಸೆಟ್ ರೀತಿಯಲ್ಲಿ ಶೂಟಿಂಗ್ ಮಾಡುವುದು ನೋಡಿದ್ದೀನಿ. ಕ್ಯಾಮೆರಾ ಸೈಜ್ ಕೂಡ ಸಣ್ಣದಾಗಿಬಿಟ್ಟಿದೆ. ಆಗ ಕಾಸ್ಟ್ಯೂಮ್ ಬಗ್ಗೆ ಚರ್ಚ ಮಾಡಲು ನಮ್ಮ ಬಳಿ ವಾಟ್ಸಪ್ ಇರುತ್ತಿರಲಿಲ್ಲ ಅದಕ್ಕೆ ಬುಕ್‌ನಲ್ಲಿ ಬರೆಸಿಕೊಳ್ಳುತ್ತಿದ್ವಿ. ಆಗ ಜೀವನ ಸಖತ್ ಮಜಾ ಇತ್ತು. ಕಮಿಟ್ಮೆಂಟ್ ಇಲ್ಲ ಅಂದ್ರೆ ಬದುಕಲು ಸಾಧ್ಯವೇ ಇಲ್ಲ. ನೀನ್ನನ್ನು ಇಷ್ಟೊತ್ತು ಸೆಟ್‌ಗೆ ಬರಲು ಹೇಳುತ್ತಾರೆ ಅಂದಾಗ ಬರಬೇಕು, ನಿನ್ನನ್ನು ಇಷ್ಟು ಹೊತ್ತು ಕೆಲಸ ಮಾಡಿಸಿಕೊಳ್ಳುತ್ತಾರೆ ಅಂದ್ರೆ ನೀನು ಕೆಲಸ ಮಾಡಲೇ ಬೇಕು, ನಿನಗೆ ಈ ಸೀನ್ ಮಾಡಲು ಹೇಳುತ್ತಾರೆ ಅಂದ್ರೆ ಅಷ್ಟೇ ಶ್ರದ್ಧೆಯಿಂದ ಸೀನ್ ಮಾಡಬೇಕು... ಈ ಎಲ್ಲನೂ ನನ್ನ ವ್ಯಕ್ತಿತ್ವದ ಮೇಲೆ ಪರಿಣಾಮ ಬೀರಲು ಹೋಯ್ತು. ಅಲ್ಲಿಂದ ಬದಲಾಯಿ ಹೋಗುತ್ತಿದ್ದ ಶಿಶಿರ್‌ನ ನೀವು ಬಿಗ್ ಬಾಸ್ ಮನೆಯಲ್ಲಿ ನೋಡಿದ್ದೀರಿ. ಜೀವನದಲ್ಲಿ ಇಷ್ಟು ಕಲಿಸಿಕೊಟ್ಟಿದ್ದು ಕಿರುತೆರೆ' ಎಂದು ಶಿಶಿರ್ ಹೇಳಿದ್ದಾರೆ.
ನಟಿಯನ್ನು ಮಂಚಕ್ಕೆ ಕರೆದ ನಿರ್ದೇಶಕ; ಭಯದಿಂದ ನಿದ್ರೆ ಮಾತ್ರೆ ಸೇವಿಸಿದ ಸ್ಟಾರ್ ನಟಿ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.