ಅಪ್ಪ ಕೊಟ್ಟ 100 ರೂ. ಖರ್ಚು ಮಾಡಿದ್ದಕ್ಕೆ ಪ್ರಶ್ನೆ ಮಾಡಿದ್ರು ಅಂತ ತಿಂಗಳಿಗೆ 12 ಸಾವಿರ ದುಡಿಯಲು ಶುರು ಮಾಡ್ದೆ: ಮೋಕ್ಷಿತಾ

Published : Mar 08, 2025, 08:24 AM ISTUpdated : Mar 08, 2025, 08:48 AM IST
ಅಪ್ಪ ಕೊಟ್ಟ 100 ರೂ. ಖರ್ಚು ಮಾಡಿದ್ದಕ್ಕೆ ಪ್ರಶ್ನೆ ಮಾಡಿದ್ರು ಅಂತ ತಿಂಗಳಿಗೆ 12 ಸಾವಿರ ದುಡಿಯಲು ಶುರು ಮಾಡ್ದೆ: ಮೋಕ್ಷಿತಾ

ಸಾರಾಂಶ

ನಟಿ ಮೋಕ್ಷಿತಾ ಪೈ, ತಂದೆ 100 ರೂಪಾಯಿ ಬಗ್ಗೆ ಪ್ರಶ್ನಿಸಿದ್ದಕ್ಕೆ ಸ್ವಾವಲಂಬಿಯಾದರು. ಕಾಲೇಜು ದಿನಗಳಲ್ಲಿ ಟ್ಯೂಷನ್ ಮಾಡಿ ತಿಂಗಳಿಗೆ 12 ಸಾವಿರ ಸಂಪಾದಿಸುತ್ತಿದ್ದರು. ಆ ಹಣದಿಂದ ಖರ್ಚುಗಳನ್ನು ನಿರ್ವಹಿಸುತ್ತಿದ್ದರು. ಯಾರ ಮೇಲೂ ಅವಲಂಬಿತರಾಗಲು ಇಷ್ಟವಿಲ್ಲದ ಮೋಕ್ಷಿತಾ, ತಮ್ಮ ದುಡಿಮೆಯಿಂದ ತಂದೆಯ ಪ್ರಶ್ನೆಗಳನ್ನು ತಪ್ಪಿಸಿಕೊಂಡರು. ತಮ್ಮನ ಜವಾಬ್ದಾರಿಯಿಂದಾಗಿ ಬಾಲ್ಯದಲ್ಲಿ ಆಟವಾಡಿದ್ದು ಕಡಿಮೆ ಎಂದರು.

ಪಾರು ಧಾರಾವಾಹಿ ಮೂಲಕ ಕನ್ನಡ ಕಿರುತೆರೆ ಜನಪ್ರಿಯ ನಟಿ ಹಾಗೂ ಬಿಗ್ ಬಾಸ್ ಸ್ಪರ್ಧಿ ಮೋಕ್ಷಿತಾ ಪೈ ಸಖತ್ ಇಂಡಿಪೆಂಡೆಂಟ್ ಹುಡುಗಿ. ಒಮ್ಮೆ ಅಪ್ಪನನ್ನು 100 ರೂಪಾಯಿ ಕೇಳಿದ್ದಕ್ಕೆ ಪ್ರಶ್ನೆ ಮಾಡಿದರು ಅಂತ ಗರಂ ಆಗಿ ಜೀವನದಲ್ಲಿ ಚಾಲೆಂಜ್ ಸ್ವೀಕರಿಸುತ್ತಾರೆ. ಕಾಲೇಜ್ ಅದ್ಮೇಲೆ ದುಡಿಯಬಹುದು, ಮನೆಯಲ್ಲಿ ಇದ್ದರು ಕೊಂಡು ಹೇಗೆ ದುಡಿಯವುದು? ಯಾವ ರೀತಿ ಸಂಪಾದನೆ ಮಾಡಿ ಹಣ ಉಳಿಸಬಹುದು ಎಂದು ಹಂಚಿಕೊಂಡಿದ್ದಾರೆ. 

'ನಾನು ಆಗಷ್ಟೇ ಫಸ್ಟ್‌ ಪಿಯುಸಿಗೆ ಕಾಲಿಟ್ಟಿದ್ದೆ ಆಗ ಪಾಕೆಟ್‌ ಮನಿ ಅಂತ ಅಪ್ಪ 100 ರೂಪಾಯಿ ಕೊಡುತ್ತಿದ್ದರು. ಆ ಹಣ ಒಂದು ವಾರಕ್ಕೆ ಖಾಲಿ ಆಗಿತ್ತು ಏಕೆಂದರೆ ಆಗಷ್ಟೇ ಕಾಲೇಜ್‌ ನೋಡಿದ್ದು ಫ್ರೆಂಡ್ಸ್ ಹೋದಾಗ ಖಾಲಿ ಆಯ್ತು. ಹಣ ಖಾಲಿ ಆದ್ಮೇಲೆ ಒಂದು ವಾರ ಬಿಟ್ಟು ಹಣ ಬೇಕು ಅಂತ ಅಪ್ಪನ ಕೇಳಿದೆ. ಅವತ್ತು ಕೊಟ್ಟಿದ್ದೀನಿ ಎಲ್ಲಿ ಹೋಯ್ತು ಅಂತ ಕೇಳಿದ್ರು....ಅಯ್ಯೋ ಕೊಟ್ಟಿದ್ದು 100 ರೂಪಾಯಿ ಮತ್ತೆ ಹಣ ಕೇಳಿದ್ರೆ ಈ ರೀತಿ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ ಯಾಕೆ ಅಂತ ಫೀಲ್ ಆಯ್ತು ನಂಗೆ. ಅಲ್ಲಿವರೆಗೂ ಹಣ ಕೇಳಿದ ವ್ಯಕ್ತಿನೇ ಅಲ್ಲ ನಾನು. ಅದಾದ ಮೇಲೆ ಇಬ್ಬರು ಮಕ್ಕಳಿಗೆ ಟ್ಯೂಷನ್ ಮಾಡಲು ಶುರು ಮಾಡಿದೆ. ನಮ್ಮ ಅತ್ತೆ ಮಕ್ಕಳು ನನ್ನ ಮೊದಲ ಸ್ಟುಡೆಂಟ್‌ಗಳು. ಅವರಿಬ್ಬರು ಆರಂಭದಲ್ಲಿ ನನಗೆ 800 ರೂಪಾಯಿ ಕೊಟ್ಟರು. ಅದಾದ ಮೇಲೆ ನನಗೆ ಹಣ ಬೇಕು ಈ ರೀತಿ ಖರೀದಿ ಮಾಡಬೇಕು ನನಗೆ ಕೊಡಿಸಿ ಅಂತ ಕೇಳಿದ್ದೇ ಇಲ್ಲ.' ಎಂದು ಖಾಸಗಿ ಟಿವಿ ಸಂದರ್ಶನದಲ್ಲಿ ಮೋಕ್ಷಿತಾ ಪೈ ಮಾತನಾಡಿದ್ದಾರೆ.

ನಟಿಯನ್ನು ಮಂಚಕ್ಕೆ ಕರೆದ ನಿರ್ದೇಶಕ; ಭಯದಿಂದ ನಿದ್ರೆ ಮಾತ್ರೆ ಸೇವಿಸಿದ ಸ್ಟಾರ್ ನಟಿ!

'ಡಿಗ್ರಿ ಫೈನಲ್ ಇಯರ್‌ಗೆ ಕಾಲಿಡುವ ಸಮಯದಲ್ಲಿ ಕೇವಲ ಟ್ಯೂಷನ್ ಮಾಡಿ 12 ಸಾವಿರ ತಿಂಗಳಿಗೆ ದುಡಿಯುತ್ತಿದ್ದೆ. ಆ ಸಮಯದಲ್ಲಿ ಆ ಹಣ ಕಡಿಮೆ ಅಲ್ಲ. ಬೆಳಗ್ಗೆ ಕಾಲೇಜ್‌ ಮುಗಿಸಿಕೊಂಡು ಮನೆಗೆ ಬಂದ ಮೇಲೆ ಪಾಠ ಮಾಡುತ್ತಿದ್ದೆ. ಈಗಲೂ ಆ ಮಕ್ಕಳು ನನ್ನೊಟ್ಟಿಗೆ ಸಂಪರ್ಕದಲ್ಲಿ ಇದ್ದಾರೆ. ಇಬ್ರು ಈಗ ಇಂಜಿನಿಯರಿಂಗ್ ಒಬ್ರು ಸಿಎ ಮಾಡುತ್ತಿದ್ದಾರೆ...ವರ್ಷ ವರ್ಷ ನನ್ನ ಹುಟ್ಟುಹಬ್ಬಕೆ ಕೇಕ್‌ ಕಟ್ ಮಾಡಿಸುತ್ತಾರೆ. ನಿಜ ಖುಷಿ ಆಗುತ್ತದೆ. ಮಕ್ಕಳಿಗೆ ನನ್ನ ನೋಡಿದರೆ ಎಷ್ಟು ಭಯ ಆಗುತ್ತೆ ಅಷ್ಟೇ ಖುಷಿ ಕೂಡ ಆಯ್ತು. ನನಗೆ ಯಾವತ್ತೂ ಯಾರ ಮೇಲೆ ಡಿಪೆಂಡ್ ಆಗುವುದಕ್ಕೆ ಇಷ್ಟವಿಲ್ಲ. 100 ರೂಪಾಯಿ ಖರ್ಚು ಮಾಡಿದಾಗ ಅಪ್ಪ ಕೇಳಿದ್ರು ಆದರೆ ನಾನು 800 ರೂಪಾಯಿ ಬಗ್ಗೆ ಅಪ್ಪ ಪ್ರಶ್ನೆನೂ ಮಾಡಲಿಲ್ಲ ಕಾರಣ ನಾನು ದುಡಿದಿದ್ದು. ಇವತ್ತಿನವರೆಗೂ ನನ್ನ ಪೇಮೆಂಟ್ ಎಷ್ಟು ಎಂದು ಪ್ರಶ್ನೆ ಮಾಡಿಲ್ಲ. ಚಿಕ್ಕವಯಸ್ಸಿನಲ್ಲಿ ನಾನು ಹೊರಗಡೆ ಆಟವಾಡಿದ್ದು ಕಡಿಮೆ ಏಕೆಂದರೆ ಜವಾಬ್ದಾರಿಗಳು ಜಾಸ್ತಿ ಆಯ್ತು ಕಾರಣ ನನ್ನ ತಮ್ಮ' ಎಂದು ಮೋಕ್ಷಿತಾ ಪೈ ಹೇಳಿದ್ದಾರೆ. 

ಈಗ ಸಿನಿಮಾದಿಂದ ದೂರ ಉಳಿದಿರುವ ರಾಧಿಕಾ ಪಂಡಿತ್ ಹಿಂದೆ ಎಷ್ಟು ಹಿಟ್ಸ್‌ ಕೊಟ್ಟಿದ್ರು ಗೊತ್ತಾ?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

2 ಸತ್ಯ ಬಯಲು ಮಾಡಿದ 'ಲಕ್ಷ್ಮೀ ನಿವಾಸ' ನಿರ್ದೇಶಕರು, ವೀಕ್ಷಕರು ಫುಲ್ ಹ್ಯಾಪಿ
BBK 12: ಟಾಸ್ಕ್ ಆಡದೇ ಈ ವಾರದ ‘ಕ್ಯಾಪ್ಟನ್’ ಆದ ಸ್ಪಂದನಾ.. ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್!