ರಜತ್ ಇರೋದೇ ವೈಲ್ಡ್‌ ಆದರೆ ಬಿಗ್ ಬಾಸ್ ಮನೆಯಲ್ಲಿ ಸ್ವಲ್ಪ ಕಮ್ಮಿ ಆಡ್ತಿದ್ದಾನೆ: ಪತ್ನಿ ಅಕ್ಷತಾ ಹೇಳಿಕೆ ವೈರಲ್

Published : Dec 20, 2024, 12:22 PM IST
ರಜತ್ ಇರೋದೇ ವೈಲ್ಡ್‌ ಆದರೆ ಬಿಗ್ ಬಾಸ್ ಮನೆಯಲ್ಲಿ ಸ್ವಲ್ಪ ಕಮ್ಮಿ ಆಡ್ತಿದ್ದಾನೆ: ಪತ್ನಿ ಅಕ್ಷತಾ ಹೇಳಿಕೆ ವೈರಲ್

ಸಾರಾಂಶ

ರಜತ್ ಕಶನ್ ಬಿಗ್ ಬಾಸ್ 11ರಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಮನರಂಜನೆ ನೀಡುತ್ತಿದ್ದಾರೆ. ಪತ್ನಿ ಅಕ್ಷಿತಾ, ರಜತ್ ಮನೆಯಲ್ಲಿ ತಮ್ಮ ನಿಜವಾದ ವ್ಯಕ್ತಿತ್ವಕ್ಕಿಂತ ಸ್ವಲ್ಪ ಕಡಿಮೆ ತೋರಿಸುತ್ತಿದ್ದಾರೆ ಎಂದಿದ್ದಾರೆ. ಬಿಗ್ ಬಾಸ್‌ಗೆ ಹೋಗಲು ರಜತ್ ಆರು ವರ್ಷಗಳಿಂದ ಪ್ರಯತ್ನಿಸುತ್ತಿದ್ದರು. ವೈಲ್ಡ್ ಕಾರ್ಡ್ ಎಂಟ್ರಿ ಬಗ್ಗೆ ಆರಂಭದಲ್ಲಿ ಮೀನಮೇಷವಿತ್ತು. ಆದರೆ ಸುದೀಪ್ ಇರುವುದರಿಂದ ರಜತ್ ಒಪ್ಪಿಕೊಂಡರು.

ಬಿಗ್ ಬಾಸ್ ಕನ್ನಡ ಸೀಸನ್ 11ರ ಎರಡನೇ ವೈಲ್ಡ್‌ ಕಾರ್ಡ್ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟ ರಜತ್ ಕಶನ್ ಸಖತ್ ಹೆಸರು ಮಾಡುತ್ತಿದ್ದಾರೆ. ಕಿರಿಕ್ ಮಾಡುವ ಸಮಯಲ್ಲಿ ಕಿರಿಕ್ ಮಾಡುವುದು, ತಮಾಷೆ ಮಾಡುವ ಸಮಯದಲ್ಲಿ ತಮಾಷೆ ಮಾಡುವುದು, ಮಾತನಾಡುವ ಸಮಯದಲ್ಲಿ ಮಾತನಾಡುವುದು....ಹೀಗೆ ವೀಕ್ಷಕರಿಗೆ ಸಖತ್ ಮನೋರಂಜನೆ ನೀಡುತ್ತಿದ್ದಾರೆ. ರಜತ್ ಎಂಟ್ರಿ ಬಗ್ಗೆ ವ್ಯಕ್ತಿತ್ವದ ಬಗ್ಗೆ ಪತ್ನಿ ಅಕ್ಷಿತಾ ಮಾತನಾಡಿದ್ದಾರೆ. 

'ರಚನ್ ವ್ಯಕ್ತಿತ್ವನೇ ವೈಲ್ಡ್‌. ಬಿಗ್ ಬಾಸ್ ಮನೆಯಲ್ಲಿ ಅಷ್ಟೂ ವೈಲ್ಡ್‌ ಆಗಿ ಆಟವಾಡುತ್ತಿಲ್ಲ. ಇರೋದಕ್ಕೂ ಆಡುತ್ತಿರುವುದಕ್ಕೂ ಸ್ವಲ್ಪ ಕಮ್ಮಿನೇ ಆಡ್ತಿದ್ದಾರೆ.  ರಜತ್ ವೈಲ್ಡ್‌ ಕಾರ್ಡ್‌ನಲ್ಲಿ ಹೋಗಿರುವುದಕ್ಕೆ ಯಾವುದೇ ಬೇಜಾರು ಇಲ್ಲ ಆದರೆ ವೈಲ್ಡ್‌ಕ ಕಾರ್ಡ್‌ ಹೆಸರಿಗೆ ತಕ್ಕ ಹಾಗೆ ಹೋಗಿದ್ದಾನೆ. ಹಿಂದೆ ನಡೆದ ರಿಯಾಲಿಟಿ ಶೋನಲ್ಲಿ ನಾನು ಮತ್ತು ರಜತ್ ಒಟ್ಟಿಗೆ ಇರುತ್ತಿದ್ವಿ ಏನೇ ಕೋಪ ಮಾಡಿಕೊಂಡರೂ ಸಮಾಧಾನ ಮಾಡೋಕೆ ನಾನು ಇರುತ್ತಿದ್ದೆ...ಇದೇ ಮೊದಲು ಒಬ್ಬರೇ ಹೋಗಿರುವುದು. ರಜತ್ ಅವರಿಗೆ ಅವರೇ ಕೋಪ ಕಡಿಮೆ ಮಾಡಿಕೊಂಡಿದ್ದಾನೆ ಏಕೆಂದರೆ ಸುದೀಪ್ ಸರ್, ಬಿಗ್ ಬಾಸ್ ರಿಯಾಲಿಟಿ ಶೋ ಮತ್ತು ಅಲ್ಲಿಗೆ ಕಳುಹಿಸಿರುವವರ ಮೇಲೆ ಜಾಸ್ತಿ ಗೌರವ ಇದೆ. ಯಾವುದು ಸರಿ ಅನ್ಸಲ್ಲ ಅದರ ಬಗ್ಗೆ ಧ್ವತಿ ಎತ್ತುತ್ತಾರೆ...ಟ್ರಿಗರ್ ಮಾಡುವುದು ಟಾಂಟ್ ಮಾಡುವುದು ಇಷ್ಟನೇ ಆಗಲ್ಲ ಎಂದು ಖಾಸಗಿ ಟಿವಿ ಸಂದರ್ಶನಲ್ಲಿ ಅಕ್ಷಿತಾ ಮಾತನಾಡಿದ್ದಾರೆ. 

ಅದೇ ಆಕ್ಷನ್ ಮಹಿಳಾ ಪ್ರಧಾನ ಪಾತ್ರಗಳು ಸಾಕಾಗಿದೆ, ನಿರ್ದೇಶಕರು ಇದಕ್ಕೆ ಬ್ರೇಕ್ ಹಾಕಬೇಕು: ಮಾಲಾಶ್ರೀ

'ಸುಮಾರು 6 ವರ್ಷಗಳಿಂದ ಬಿಗ್ ಬಾಸ್ ರಿಯಾಲಿಟಿ ಶೋಗೆ ಹೋಗಬೇಕು ಅಂತ ಸಖತ್ ಪ್ರಯತ್ನಗಳನ್ನು ಮಾಡಿದ್ದೀವಿ. ಯಾವ ಯಾವ ರೀತಿ ಪ್ರಯತ್ನಗಳು ಮಾಡಿದ್ದೀವಿ ಯಾರ ಕೈಯಲ್ಲಿ ಹೇಳಿಸಿದ್ದೀವಿ ಅಂತ ವಿವರಿಸಲು ಆಗಲ್ಲ ಅಷ್ಟು ಮಾಡಿದ್ದೀವಿ..ಯಾವ ಲೆವೆಲ್‌ಗೆ ಹೋಗಬೇಕು ಆ ಲೆವೆಲ್‌ಗೂ ಹೋಗಿ ಟ್ರೈ ಮಾಡಿದ್ದೀವಿ. ರಾಜಾ ರಾಣಿ ರಿಯಾಲಿಟಿ ಶೋ ಆಯ್ಕೆ ಮಾಡಿಕೊಳ್ಳಲು ಕಲರ್ಸ್‌ ಕಾರಣ ಏಕೆಂದರೆ ಕಲರ್ಸ್ ಚಾನೆಲ್‌ಗೆ ಎಂಟ್ರಿ ಕೊಟ್ಟರೆ ಬಿಗ್ ಬಾಸ್‌ ಲಿಂಕ್ ಸಿಗಬಹುದು ಎಂದು. ಈ ಸೀಸನ್‌ನಲ್ಲಿ ಆಫರ್‌ ಬಂದಿಲ್ಲ ಅಂದಾಗ ತುಂಬಾ ಬೇಸರ ಮಾಡಿಕೊಂಡಿದ್ದರೂ...ಮೀಡಿಯಾನೂ ಬೇಡ ಯಾವ ಕೆಲಸನೂ ಬೇಡ ನಮ್ಮ ಬ್ಯುಸಿನೆಸ್‌ ಮಾಡೋಣ ಅಂದುಕೊಂಡಿದ್ದರು ಆದರೆ ವೈಲ್ಡ್ ಕಾರ್ಡ್ ಎಂಟ್ರಿ ಸಿಕ್ಕಿದ್ದು ನಮಗೆ ತುಂಬಾ ಖುಷಿ ಆಯ್ತು. ವೈಲ್ಡ್ ಕಾರ್ಡ್ ಎಂಟ್ರಿ ಸಿಕ್ಕಿದ್ದು ರಜತ್‌ಗೆ ಇಷ್ಟನೇ ಇರಲಿಲ್ಲ ...ವೈಲ್ಡ್ ಕಾರ್ಡ್‌ ಅಂದ್ರೆ ನೆಗೆಟಿವ್ ಅಭಿಪ್ರಾಯಗಳು ಜಾಸ್ತಿ ಆಗುತ್ತದೆ. ವೈಲ್ಡ್ ಕಾರ್ಡ್‌ ಸ್ಪರ್ಧಿಗಳು ಗೆಲ್ಲುವುದಿಲ್ಲ ಸುಮ್ಮನೆ ಹೆಸರು ಮಾಡಿಕೊಂಡು ಬರುತ್ತಾರೆ ಎಂದು ಆದರೆ ರಜತ್ ಒಪ್ಪಿಕೊಂಡಿದ್ದೇ ಸುದೀಪ್ ಸರ್ ಇರ್ತಾರೆ ಅಂತ ಎಂದು ಅಕ್ಷಿತಾ ಹೇಳಿದ್ದಾರೆ. 

ಈ ವಿಚಾರಕ್ಕೆ ನನ್ನ ಪತ್ನಿ ಕುಗ್ಗಿದ್ದಾಳೆ ಎಂದು ನಾನು ಬರಬೇಕಿತ್ತು; ಹೊರ ಬರಲು ಕ್ಲಾರಿಫಿಕೇಷನ್‌ ಕೊಟ್ಟ ಗೋಲ್ಡ್‌ ಸುರೇಶ್

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್​ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?
Naa Ninna Bidalaare: ಗಂಡ ಬೇರೊಬ್ಬಳನ್ನು ಅಪ್ಪಿಕೊಂಡ್ರೆ ಖುಷಿ ಪಡುವ ಜಗತ್ತಿನ ಏಕೈಕ ಹೆಂಡ್ತಿ ಈಕೆ!