ಜನ ಮೆಚ್ಚಿದ ಸಂಸಾರ ಅವಾರ್ಡ್‌ಗೆ ನಿವೇದಿತಾ ಗೌಡ ಎಂಟ್ರಿ! ವಿಡಿಯೋ ನೋಡಿ ಬಿಸಿಬಿಸಿ ಚರ್ಚೆ ಶುರು

By Suchethana D  |  First Published Aug 21, 2024, 1:41 PM IST

ಕಲರ್ಸ್ ಕನ್ನಡ ವಾಹಿನಿಯ ಜನ ಮೆಚ್ಚಿದ ಸಂಸಾರ ಅವಾರ್ಡ್‌ಗೆ ಬಿಗ್‌ಬಾಸ್ ಖ್ಯಾತಿಯ ನಿವೇದಿತಾ ಗೌಡ ಎಂಟ್ರಿಯಾಗಿದೆ. ಭಾಗ್ಯಲಕ್ಷ್ಮಿ ಟೀಮ್‌ ಜೊತೆಗಿನ ಮಾತುಕತೆಗೆ ಭಾರಿ ಚರ್ಚೆ ಶುರುವಾಗಿದೆ. 
 


ಇದ್ದರೆ ಕುಸುಮಳಂಥ ಅತ್ತೆ ಇರಬೇಕು. ಮಗನನ್ನು ಬಿಟ್ಟು ಸೊಸೆಯನ್ನೇ ಪ್ರೀತಿಸೋ ಅತ್ತೆ ಇವಳು. ಇಂಥ ಅತ್ತೆ ಸಿಗೋದೇ ಅಪರೂಪ, ಆದ್ದರಿಂದ ಕುಸುಮಾ ಅತ್ತೆ ಎಲ್ಲರಿಗೂ ಮಾದರಿ. ಇನ್ನು ಇದ್ದರೆ ಭಾಗ್ಯಳಂಥ ಹೆಣ್ಣು ಇರಬೇಕು. ಏನೂ ಕಲಿಯದಿದ್ದರೂ ಇಬ್ಬರು ದೊಡ್ಡ ಮಕ್ಕಳನ್ನು ಇಟ್ಟುಕೊಂಡು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಳು. ಸ್ವಯಂ ಬಲದ ಮೇಲೆ ಲಕ್ಷ ರೂಪಾಯಿ ಸಂಪಾದನೆ ಮಾಡ್ತಿದ್ದಾಳೆ. ಗಂಡನ ಹಿಂಸೆ ತಡೆದುಕೊಂಡು ಮಕ್ಕಳಿಗಾಗಿ ಬದುಕು ಸವೆಸುತ್ತಿದ್ದಾಳೆ. ಎಷ್ಟೋ ಹೆಣ್ಣುಗಳಿಗೆ ಈಕೆ ಮಾದರಿಯಾಗಿದ್ದಾಳೆ. ಆದ್ದರಿಂದ ಭಾಗ್ಯ ಎಲ್ಲರಿಗೂ ಆದರ್ಶ. ಆದರೆ... ಯಾರಿಗೂ ತಾಂಡವ್‌ನಂಥ ಗಂಡ, ಮಗ ಮಾತ್ರ ಸಿಗಬಾರದು! ಇಬ್ಬರು ಬೆಳೆದ ಮಕ್ಕಳು, ಮುದ್ದಾದ ಪತ್ನಿ ಇದ್ದರೂ ಇನ್ನೊಂದು ಸಂಬಂಧ ಇಟ್ಟುಕೊಂಡಿದ್ದಾನೆ. ಹೆಜ್ಜೆ ಹೆಜ್ಜೆಗೂ ಪತ್ನಿಯನ್ನು ಅವಮಾನಿಸುತ್ತಿದ್ದಾನೆ. ತಾಂಡವ್‌ ಎಂಬ ಹೆಸರು ಕೇಳಿದರೇನೇ ಮೈಯೆಲ್ಲಾ ಉರಿದುಕೊಳ್ಳುವ ಕ್ಯಾರೆಕ್ಟರ್‌ನವ ಈತ...

ಹೌದು. ಇದು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಭಾಗ್ಯಲಕ್ಷ್ಮಿ ಸೀರಿಯಲ್‌ ಕಥೆ. ಇದೀಗ ಈ ಕಥೆ ಕುತೂಹಲದ ಘಟ್ಟ ತಲುಪಿರುವ ನಡುವೆಯೇ, ಈ ಸೀರಿಯಲ್‌ ಅನುಬಂಧ ಬೆಸ್ಟ್‌ ಸಂಸಾರ ಅವಾರ್ಡ್‌‌ಗೆ ನಾಮಿನೇಟ್‌ ಆಗಿದೆ. ಆದರೆ ಕುತೂಹಲ ತಿರುವಿನಲ್ಲಿ ಇದಕ್ಕೊಂದು ಟ್ವಿಸ್ಟ್‌ ಬಂದಿದ್ದು, ಸದ್ಯ ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆಯಲ್ಲಿರುವ ನಟಿ, ಬಿಗ್‌ಬಾಸ್‌ ಖ್ಯಾತಿಯ ನಿವೇದಿತಾ ಗೌಡ ಎಂಟ್ರಿಯಾಗಿದೆ! 

Tap to resize

Latest Videos

ನಿವೇದಿತಾ ಸೆಕ್ಸಿ ವಿಡಿಯೋ: ನೀನೇ ಕಣಮ್ಮಾ ಕನ್ನಡದ ಮುಂದಿನ ತೃಪ್ತಿ ಡಿಮ್ರಿ ಎನ್ನೋದಾ ಟ್ರೋಲಿಗರು?

ಭಾಗ್ಯಲಕ್ಷ್ಮಿ ಸೀರಿಯಲ್‌ ಮೇಕಿಂಗ್‌ ವಿಡಿಯೋದ ಜೊತೆಗೇನೇ ನಿವೇದಿತಾ ಗೌಡ ಭಾಗ್ಯಲಕ್ಷ್ಮಿಗೆ ಎಂಟ್ರಿ ಕೊಟ್ಟಿದ್ದಾರೆ. ಇಡೀ ಭಾಗ್ಯಲಕ್ಷ್ಮಿ ಟೀಂ ಎದುರು ಕುಳಿತಿರೋ ನಿವೇದಿತಾ, ಟೀಂಗೆ ಸ್ವೀಟ್‌ ಹಂಚುವ ಮೂಲಕ ಎಲ್ಲರ ಇಂಟ್ರೊಡಕ್ಷನ್‌ ಮಾಡಿಕೊಟ್ಟಿದ್ದಾಳೆ. ಇದ್ದರೆ ಕುಸುಮಾಳಂಥ ಅತ್ತೆ, ಭಾಗ್ಯಳಂಥ ಸೊಸೆ ಇರಬೇಕು. ತಾಂಡವ್‌ನಂಥ ಗಂಡ ಮಾತ್ರ ಇರಬಾರದು ಎಂದು ಡೈಲಾಗ್‌ ಹೇಳಿದ್ದಾರೆ. ಇದರ ಪ್ರೊಮೋ ಬಿಡುಗಡೆಯಾಗುತ್ತಿದ್ದಂತೆಯೇ ಸೋಷಿಯಲ್‌ ಮೀಡಿಯಾದಲ್ಲಿ ಟೀಕೆಗಳ ಸುರಿಮಳೆಯೇ ಆಗುತ್ತಿದೆ. ಇದ್ದರೆ ನಿನ್ನಂಥ ಹೆಂಡ್ತಿ ಮಾತ್ರ ಯಾರಿಗೂ ಬೇಡ ಎನ್ನುತ್ತಿದ್ದಾರೆ ನೆಟ್ಟಿಗರು!

ಭಾಗ್ಯಲಕ್ಷ್ಮಿ ಟೀಂಗೆ ನಿವೇದಿತಾ ಗೌಡ ಬಿಟ್ಟರೆ ಬೇರೆ ಯಾರೂ ಸಿಕ್ಕಿಲ್ವಾ ಎಂದು ಒಂದೇ ಸಮನೆ ಕಮೆಂಟ್‌ಗಳ ಸುರಿಮಳೆಯಾಗುತ್ತಿದೆ. ತಾಂಡವ್‌ನಂಥ ಗಂಡ ಇದ್ದರೆ ನಿನಗೆ ಚೆನ್ನಾಗಿರೋದು, ಚಂದನ್‌ ಶೆಟ್ಟಿ ಅಂಥ ಒಳ್ಳೆಯ ಗಂಡ ಸಿಕ್ಕಿದ್ದೇ ಕಷ್ಟವಾಯಿತು ಎಂದು ಮತ್ತೆ ಕೆಲವರು ನಟಿಯರ ವಿರುದ್ಧ ಗರಂ ಆಗುತ್ತಿದ್ದಾರೆ. ಅಷ್ಟಕ್ಕೂ ಇದು ಜನ ಮೆಚ್ಚಿದ ಸಂಸಾರ ಅವಾರ್ಡ್‌. ಇದಕ್ಕೆ ಈಕೆಯ ಎಂಟ್ರಿ ಯಾಕೆ ಬೇಕಿತ್ತು ಎನ್ನುವುದು ನೆಟ್ಟಿಗರ ಪ್ರಶ್ನೆ. ಇನ್ನು ಸೀರಿಯಲ್‌ನಲ್ಲಿಯೂ ಟ್ವಿಸ್ಟ್‌ ಬಂದಿದ್ದು, ಶ್ರೇಷ್ಠಾಳ ಬಂಡವಾಳ ಬಯಲಾಗುವ ಕಾಲ ಬಂದಿದೆ. ಭಾಗ್ಯ ಶ್ರೇಷ್ಠಾಳ ವಿರುದ್ಧ ತಿರುಗಿ ಬಿದ್ದಿದ್ದು, ಎಲ್ಲರ ಎದುರೇ ಅವಳ ಮರ್ಯಾದೆ ತೆಗೆದಿದ್ದಾಳೆ. ಆದರೆ ಶ್ರೇಷ್ಠಾ ಮದ್ವೆಯಾಗ್ತಿರೋದು ತನ್ನ ಗಂಡನನ್ನೇ ಎನ್ನುವ ಸತ್ಯ ಮಾತ್ರ ತಿಳಿಯಬೇಕಿದೆ. 

ಕಚ್ಚಿ ಕಚ್ಚಿ ತಿನ್ನೋದೆಂದ್ರೆ ಇಷ್ಟ ಅಂತ ನಿವೇದಿತಾ ರಾಗಿಮುದ್ದೆ ಹೀಗೆ ತಿನ್ನೋದಾ? 'ಸೀತೆ'ಯೂ ಸಾಥ್‌!

 

click me!