ಲಕ್ಷ್ಮೀ ನಿವಾಸ ಧಾರಾವಾಹಿಯ ವೀಣಾ ಪಾತ್ರ ಎಲ್ಲರ ಮನಗೆದ್ದಿದೆ. ಧಾರಾವಾಹಿಯಲ್ಲಿ ಸೊಸೆಯಾಗಿ ನಟಿಸುತ್ತಿರುವ ಲಕ್ಷ್ಮೀ ಹೆಗಡೆ ನಿಜ ಜೀವನದಲ್ಲೂ ಅಷ್ಟೇ ಮೆಚ್ಚುಗೆ ಪಡೆದಿದ್ದಾರೆ. ಗಾಯಕಿಯಾಗಬೇಕೆಂದು ಬಂದ ಲಕ್ಷ್ಮೀ ಈಗ ಬಹು ಬೇಡಿಕೆಯ ನಟಿಯಾಗಿದ್ದಾರೆ.
ಜೀ ಕನ್ನಡದ ಲಕ್ಷ್ಮೀ ನಿವಾಸ ಸೀರಿಯಲ್‌ನಲ್ಲಿ ಸದ್ಯಕ್ಕೆ ಒಬ್ಬರ ಲೈಫೂ ಸರಿಯಿಲ್ಲ. ಕೆಲಸ ಕಳೆದುಕೊಂಡ ಶ್ರೀನಿವಾಸ್ ಆಟೋ ಓಡಿಸುತ್ತಿದ್ದಾನೆ. ಇನ್ನೊಂದು ಕಡೆ ಭಾವನಾಗೆ ತಾಳಿ ಕಟ್ಟಿದವರು ಯಾರು ಅಂತ ಗೊತ್ತಿಲ್ಲ, ಸಿದ್ದೇಗೌಡ್ರಿಗೆ ಪೂರ್ವಿಯನ್ನು ಮದುವೆ ಆಗೋಕೆ ಇಷ್ಟವೇ ಇಲ್ಲ. ಹರೀಶ್‌ನಿಗೆ ಕೆಲಸವೇ ಇಲ್ಲ. ಸಿಂಚನಾ ಮನಸ್ಸಿಗೆ ಬಂದಹಾಗೆ ಇರುತ್ತಾಳೆ. ಆ ಕಡೆ ವಿಶ್ವನಿಗೆ ಜಾಹ್ನವಿಯನ್ನು ಮರೆಯೋಕೆ ಆಗ್ತಿಲ್ಲ. ಇನ್ನು ಜಯಂತ್ ಹುಚ್ಚಾಟ ಹೆಚ್ಚಾಗುತ್ತಲೇ ಇದೆ. ಈ ನಡುವೆ ಶ್ರೀನಿವಾಸ್ ಮನೆಯಲ್ಲಿ ಮಗ ಸಂತೋಷ್ ವರ್ತನೆ ದಿನೇ ದಿನೇ ಬೇರೆ ರೂಪ ಪಡ್ಕೊಳ್ತಿದೆ. ಹೆತ್ತ ತಂದೆಯನ್ನೇ ಮೂದಲಿಸಿ ಅವರ ಮೇಲೇ ಎಗರಾಡುವ ಈತನ ರಾಕ್ಷಸ ವರ್ತನೆಗೆ ಜನ ಬಾಯಿಗೆ ಬಂದ ಹಾಗೆ ಬಯ್ತಿದ್ದಾರೆ. 'ಗಂಡು ಮಕ್ಕಳು ಹೀಗೇನೆ ಬಿಡಿ, ಮದುವೆ ಆಗಿ ಮಕ್ಕಳಾದ ಮೇಲೆ ಅವರು ಗಂಡು ಮಕ್ಕಳಲ್ಲ ಶತ್ರುಗಳ ತರ ವರ್ತಿಸುತ್ತಾರೆ. ಅಪ್ಪ ಅಮ್ಮನನ್ನು ಮಾತು ಮಾತಿಗೂ ಬಯ್ಯುವುದು, ಗದರುವುದು ಮಾಡುತ್ತಾರೆ, ಅವರಿಗೆ ಅಪ್ಪ ಅಮ್ಮ ಹೊರೆ ಅನಿಸುತ್ತಾರೆ. ಪಾಲಕರು ಸತ್ತರೆ ಸಾಕು ಅಂತಿರ್ತಾರೆ. ಆಸ್ತಿ ಪಾಸ್ತಿ ಎಲ್ಲ ಕೊಟ್ಟಮೇಲೆ ಅಪ್ಪ ಅಮ್ಮ ಹತ್ರ ಹಣ ಇಲ್ಲದೆ ಮಕ್ಕಳಿಗೆ ಡಿಪೆಂಡ್ ಆದ್ರೂ ಅಂದರೆ ಮುಗಿಯಿತು, ನರಕ ನರಕ ತೋರಿಸುತ್ತಾರೆ. ಮಕ್ಕಳು ಜನ್ಮಾಂತರ ಶತ್ರುಗಳು ಅದಕ್ಕೆ ಮದುವೆ ಆಗದೆ ನೆಮ್ಮದಿಯಾಗಿದ್ದು ಬಿಡಬೇಕು, ಈ ಹಾಳು ಸಂಸಾರ ತಾಪತ್ರಯ ಮುಳ್ಳಿನ ದಾರಿ ತರ..' ಅನ್ನೋ ಮಾತು ವೀಕ್ಷಕರಿಂದ ಬರ್ತಿದೆ.
ಆದರೆ ಇದಕ್ಕೆ ಸರೀ ಉಲ್ಟಾ ಪ್ರತಿಕ್ರಿಯೆ ಸಂತೋಷ್ ಪತ್ನಿ ವೀಣಾ ಮೇಲಿದೆ. ಈ ಪಾತ್ರ ವೀಣಾ ಅತ್ತಿಗೆ ಅಂತಲೇ ಫೇಮಸ್ಸು. ಈಕೆ ಆ ಮನೆಯ ತಮ್ಮ ತಂಗೀರ ಬಾಯಲ್ಲಿ ಮಾತ್ರ ಅಲ್ಲ ವೀಕ್ಷಕರ ಬಾಯಲ್ಲೂ ವೀಣಾ ಅತ್ತಿಗೆ ಅಂತಲೇ ಫೇಮಸ್. 'ಎಲ್ಲರಿಗೂ ಇಂತಹ ಸೊಸೆ ಸಿಗಬೇಕು. ಮನೆ ನಂದನವನ ಆಗುತ್ತೆ', 'ಎಲ್ಲಾ ಮನೆಯಲ್ಲಿ ಇಂತ ಸೊಸೆ ಇರಬೇಕು ಬಟ್ ಇಂತಹ ಮಗ ಹುಟ್ಟಲೇಬಾರದು. ಇವನು ಮಗ ಅಲ್ಲ, ಆದರೆ ಸೊಸೆ ಅಪ್ಪಟ ಅಪರಂಜಿ' ಎಂದೆಲ್ಲ ವೀಣಾ ಪಾತ್ರವನ್ನು ಹೊಗಳಿ ವೀಕ್ಷಕರು ಕಾಮೆಂಟ್ ಮಾಡ್ತಿದ್ದಾರೆ.
ಸೀತಾರಾಮ: ಸಿಹಿಗೆ ಮೇಘಶ್ಯಾಮ್ ಯಾರು? ನಿಜ ತಂದೆಯ ಎಂಟ್ರಿಯೇ?
ಅಷ್ಟಕ್ಕೂ ಈ ಲಕ್ಞ್ಮೀ ನಿವಾಸ ಸೀರಿಯಲ್‌ನ ವೀಣಾ ಪಾತ್ರಧಾರಿ ಲಕ್ಷ್ಮೀ ಹೆಗಡೆ ಮೂಲತಃ ಶಿರಸಿಯವರು. ಹಲವು ವರ್ಷಗಳಿಂದ ಇವರು ಬಣ್ಣದ ಲೋಕದಲ್ಲಿ ಸಕ್ರಿಯರಾಗಿದ್ದಾರೆ. ಸದ್ಯ ಅವರಿಗೆ ಲಕ್ಷ್ಮೀ ನಿವಾಸ ಧಾರಾವಾಹಿ ಬ್ರೇಕ್ ನೀಡಿದ್ದು, ವೀಣಾ ಪಾತ್ರ ಎಲ್ಲರ ಮನಸ್ಸಿನಾಳಕ್ಕೆ ಇಳಿದಿದೆ. ಡಿಗ್ರಿ ಓದಿರುವ ಲಕ್ಷ್ಮೀ ಅವರು ಶಿರಸಿಯಿಂದ ಬೆಂಗಳೂರಿಗೆ ಬಂದ ಕಾರಣವೇ ಬೇರೆ. ಆದರೆ ಆದದ್ದೇ ಬೇರೆ. ಆದರೆ ಆಗೋದೆಲ್ಲ ಒಳ್ಳೇದಕ್ಕೇ ಅಂತಾರಲ್ಲ, ಆ ಗಾದೆ ಈ ಲಕ್ಷ್ಮೀ ಹೆಗಡೆ ವಿಚಾರದಲ್ಲಿ ನಿಜ ಆಗಿದೆ. ಅವರು ತಾನಂದುಕೊಂಡದ್ದಕ್ಕಿಂತಲೂ ಕಿರುತೆರೆಯಲ್ಲಿ ಸಖತ್ ಫೇಮಸ್ ಆಗಿದ್ದಾರೆ.
ಇನ್ನು ವಿಷಯಕ್ಕೆ ಬರಾಣ. ಡಿಗ್ರಿ ಓದಿರುವ ಲಕ್ಷ್ಮೀ ಗಾಯಕಿ ಆಗಬೇಕು ಕನಸನ್ನು ಹೊತ್ತುಕೊಂಡು ಶಿರಸಿಯಿಂದ ಬೆಂಗಳೂರಿಗೆ ಬರ್ತಾರೆ. ಅದು ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರು ನಡೆಸಿಕೊಡುತ್ತಿದ್ದ ಎದೆ ತುಂಬಿ ಹಾಡುವೆನು ಕಾರ್ಯಕ್ರಮಕ್ಕೆ. ಅಲ್ಲೇ ಲಕ್ಷ್ಮೀ ಮೊದಲ ಬಾರಿಗೆ ಕ್ಯಾಮರವನ್ನು ಎದುರಿಸ್ತಾರೆ. ಆದರೆ ಗಾಯಕಿಯಾಗಿ ರಿಯಾಲಿಟಿ ಶೋಗೆ ಆಯ್ಕೆ ಆಗಲ್ಲ. ಆದರೆ ಅವರ ಸ್ನಿಗ್ಧ ಚೆಲುವು, ಹಾವ ಭಾವ ನೋಡಿದ ಸೀರಿಯಲ್ ಟೀಮ್ ಒಂದು ಅವರನ್ನು ಹೊಸ ಧಾರಾವಾಹಿಗೆ ಆಯ್ಕೆ ಮಾಡುತ್ತೆ.
ಆದರೆ ಬ್ಯಾಡ್ ಲಕ್, ಆ ಸೀರಿಯಲ್ ಪ್ರಸಾರ ಕಾಣಲೇ ಇಲ್ಲ. ಮುಂದೆ ಯಜ್ಞಕುಂಡ ಧಾರಾವಾಹಿ ಮೂಲಕ ಕಿರುತೆರೆಯಲ್ಲಿ ಕಾಣಿಸಿಕೊಂಡರು. ಇದಾದ ಬಳಿಕ ಬ್ಯಾಕ್ ಟು ಬ್ಯಾಕ್ ಸೀರಿಯಲ್ ಗಳಲ್ಲಿ ನಟಿ ಲಕ್ಷ್ಮೀ ಅವರು ನಟಿಸಿದ್ದಾರೆ. ನಟಿಯಾಗಿದ್ದೇ ತಡ ಹಾಡುವುದನ್ನು ಲಕ್ಷ್ಮೀ ಅವರು ಮರೆತೇ ಬಿಟ್ಟರಂತೆ. ನಿತ್ಯ ಶೂಟಿಂಗ್ ನಲ್ಲಿ ಬ್ಯುಸಿಯಾಗಿ ಬಿಡ್ತಾರೆ.
ಈ ನಡುವೆ ಇವರಿಗೆ ವಿವಾಹವೂ ಆಗುತ್ತೆ. ಪತಿ, ಮನೆಯವರೆಲ್ಲ ಇವರ ನಟನೆಯನ್ನು ಬಹಳ ಇಷ್ಟಪಡ್ತಾರೆ. ಪ್ರೋತ್ಸಾಹವನ್ನೂ ಕೊಡ್ತಾರೆ. ಸಿಕ್ರೆ ಇಂಥಾ ಸೊಸೆ ಸಿಗಬೇಕು ಅಂತ ಎಲ್ಲರೂ ತನ್ನ ಸೊಸೆಯನ್ನು ಎಲ್ಲರೂ ಹೊಗಳೋದು ಅತ್ತೆ ಬಹಳ ಖುಷಿಯಂತೆ. ಮನೆ ಮಂದಿ ಎಲ್ಲ ಇವರ ನಟನೆಗೆ ಬೆನ್ನುಲುಬಾಗಿ ನಿಂತಿರೋದಕ್ಕೆ ಇವರಿಗೂ ಖುಷಿ.