BBK9; ರೂಪೇಶ್ ನನ್ನ ಬೆಡ್ ಮೇಲೆ ಡೆಕೋರೇಶನ್ ಮಾಡಿದ್ದ, ಬರ್ತಡೇ ಸರ್ಪ್ರೈಸ್ ರಿವೀಲ್ ಮಾಡಿದ ಸಾನ್ಯಾ

By Shruiti G Krishna  |  First Published Sep 24, 2022, 1:08 PM IST

ಸಾನ್ಯಾ ಮತ್ತು ರುಪೇಶ್ ಅವರನ್ನು ಕಿಚ್ಚ ಸುದೀಪ್, ಸಾನ್ಯ ಶೆಟ್ಟಿ, ರೂಪೇಶ್ ಐಯ್ಯರ್ ಸ್ವಾಗತ ಮಾಡಿದರು. ಬಳಿಕ ಕಿಚ್ಚ, 'ಸಾನ್ಯ ಐಯ್ಯರ್ ಎಂದಾಗ ಏನು ಅನಿಸುತ್ತೆ' ಎಂದು ಕೇಳಿದರು. ಇದಕ್ಕೆ 'ಸಾನ್ಯ ಇಷ್ಟು ದಿನ ಇಷ್ಟ ಆಗಿತ್ತು, ಈಗ ಸಾನ್ಯಾ ಶೆಟ್ಟಿ ತುಂಬಾ ಇಷ್ಟ ಆಗ್ತಾ ಇದೆ' ಎಂದು ಹೇಳಿದರು. 


ಬಿಗ್ ಬಾಸ್ ಕನ್ನಡ ಒಟಿಟಿ ಶೋ ಮುಗಿದ ಬೆನ್ನಲ್ಲೇ ಟಿವಿ ಬಿಗ್ ಬಾಸ್ ಪ್ರಾರಂಭವಾಗುತ್ತಿದೆ. ಟಿವಿ ಬಿಗ್ ಬಾಸ್‌ಗೆ ಕ್ಷಣಗಣನೆ ಪ್ರಾರಂಭವಾಗಿದೆ. ಇಂದು ಸಂಜೆ (ಸೆಪ್ಟಂಬರ್ 24) ಟಿವಿ ಬಿಗ್ ಬಾಸ್ ಗ್ರ್ಯಾಂಡ್ ಓಪನಿಂಗ್ ಇದೆ. ಬಿಗ್ ಬಾಸ್ ಬರ್ತಿದೆ ಎನ್ನುತ್ತಿದ್ದಂತೆ ಯಾರೆಲ್ಲ ಬರ್ತಾರೆ, ಯಾವೆಲ್ಲ ಸೆಲೆಬ್ರಿಟಿಗಳು ಇರಲಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿರುತ್ತದೆ. ಹಾಗೆಯೆ ಈ ಬಾರಿ ಬಿಗ್ ಬಾಸ್ ನಲ್ಲಿಯೂ ಯಾರೆಲ್ಲ ಇರಲಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಿದೆ. ಆದರೆ ಈ ಬಾರಿ ಬಿಗ್ ಬಾಸ್ 9 ಜೂನಿಯರ್ಸ್ ವರ್ಸಸ್ ಸೀನಿಯರ್ ಎನ್ನುವ ಕಾನೆಪ್ಟ್‌ನಲ್ಲಿ ಪ್ರೇಕ್ಷಕರ ಮುಂದೆ ಬರ್ತಿದೆ. ಜೊತೆಗೆ ಒಟಿಟಿಯಲ್ಲಿ ಭಾಗಿಯಾಗಿದ್ದ ಸ್ಪರ್ಧಿಗಳಲ್ಲಿ 4 ಜನ ಟಿವಿ ಬಿಗ್ ಬಾಸ್ ‌ಗೆ ಎಂಟ್ರಿ ಕೊಡುತ್ತಿದ್ದಾರೆ.  

ಈಗಾಗಲೇ ಬಿಗ್ ಬಾಸ್ ಒಟಿಟಿ ಯಿಂದ ಟಿವಿ ಬಿಗ್ ಬಾಸ್ ‌ಗೆ ರೂಪೇಶ್, ರಾಕೇಶ್ ಅಡಿಗ, ಆರ್ಯವರ್ಧನ್ ಗುರೂಜಿ ಮತ್ತು ಸಾನ್ಯ ಅಯ್ಯರ್ ಎಂಟ್ರಿ ಕೊಟ್ಟಿದ್ದಾರೆ. ಈ ಬಾರಿಯ ಬಿಗ್ ಬಾಸ್ ವಿಶೇಷವಾಗಿ ಅಭಿಮಾನಿಗಳ ಮುಂದೆ ಬರ್ತಿದೆ. ಈಗಾಗಲೇ ಗ್ರ್ಯಾಂಡ್ ಏಪನಿಂಗ್‌ನ ಪ್ರೋಮೋ ರಿಲೀಸ್ ಮಾಡಲಾಗಿದೆ. ಇದರಲ್ಲಿ ಒಟಿಟಿಯಲ್ಲಿ ಭಾಗಿಯಾಗಿದ್ದ ಸಾನ್ಯಾ ಅಯ್ಯರ್ ಮತ್ತು ರೂಪೇಶ್ ಶೆಟ್ಟಿ ಪ್ರೋಮೋ ನೋಡುಗರ ಗಮನ ಸೆಳೆಯುತ್ತಿದೆ. ಸಾನ್ಯಾ ಮತ್ತು ರೂಪೇಶ್ ಇಬ್ಬರು ಬಿಗ್ ಬಾಸ್ ಒಟಿಟಿಯಲ್ಲಿ ತುಂಬಾ ಆಪ್ತರಾಗಿದ್ದರು. ಬಿಗ್ ಬಾಸ್ ಬಳಿಕವೂ ಅದೇ ಸ್ನೇಹ ಮುಂದುವರೆದಿದೆ. ಬಿಗ್ ಬಾಸ್ ವೇದಿಕೆಯಲ್ಲೂ ಇಬ್ಬರ ಕ್ಲೋಸ್‌ನೆಸ್ ಕಾಣುತ್ತಿದೆ. ಸುದೀಪ್ ಮುಂದೆ ಹಾಜರಾದ ಸಾನ್ಯಾ ಮತ್ತು ರೂಪೇಶ್ ಒಂದಿಷ್ಟು ಇಂಟ್ರಸ್ಟಿಂಗ್ ವಿಚಾರ ರಿವೀಲ್ ಮಾಡಿದ್ದಾರೆ. 

Tap to resize

Latest Videos

ವೇದಿಕೆ ಮೇಲೆ ಬಂದ ಸಾನ್ಯಾ ಮತ್ತು ರೂಪೇಶ್ ಅವರನ್ನು ಕಿಚ್ಚ ಸುದೀಪ್, ಸಾನ್ಯ ಶೆಟ್ಟಿ, ರೂಪೇಶ್ ಅಯ್ಯರ್ ಸ್ವಾಗತ ಮಾಡಿದರು. ಬಳಿಕ ಕಿಚ್ಚ, 'ಸಾನ್ಯ ಅಯ್ಯರ್ ಎಂದಾಗ ಏನು ಅನಿಸುತ್ತೆ' ಎಂದು ಕೇಳಿದರು. ಇದಕ್ಕೆ 'ಸಾನ್ಯ ಇಷ್ಟು ದಿನ ಇಷ್ಟ ಆಗಿತ್ತು, ಈಗ ಸಾನ್ಯಾ ಶೆಟ್ಟಿ ತುಂಬಾ ಇಷ್ಟ ಆಗ್ತಾ ಇದೆ' ಎಂದು ಹೇಳಿದರು. ಇದಕ್ಕೆ ಸಾನ್ಯಾ ತಾಯಿ 'ಏಯ್...'ಎಂದು ಜೋರು ಮಾಡಿದರು. ಅದಿಕ್ಕೆ ಸುದೀಪ್ ನಿಮಗೆ ಈ ಶೆಟ್ಟಿ(ರೂಪೇಶ್) ಇಷ್ಟವಾಗುತ್ತಿಲ್ಲವಾ ಅಥವಾ ಶೆಟ್ಟಿನೇ ಬೇಡ ಅಂತ ಹೇಳುತ್ತಿದ್ದಾರಾ ಎಂದು ಕೇಳಿದರು. ಇದಕ್ಕೆ ಸಾನ್ಯಾ ತಾಯಿ ಜೋರಾಗಿ ನಕ್ಕಿದರು. 

Bigg Boss Kannada 9; ಮನೆಯ ಫೋಟೋ ರಿವೀಲ್, ಏನೂ ಬದಲಾಗಿಲ್ಲ ಎಂದ ವೀಕ್ಷಕರು

ಬಳಿಕ ಸಾನ್ಯಾ ಸುದೀಪ್ ಮುಂದೆ ತನ್ನ ಹುಟ್ಟುಹಬ್ಬಕ್ಕೆ ರೂಪೇಶ್ ನೀಡಿದ ಸರ್ಪ್ರೈಸ್ ಬಗ್ಗೆ ರಿವೀಲ್ ಮಾಡಿದರು. 'ನನ್ನ ಹುಟ್ಟುಹಬ್ಬ ಬಂದಿತ್ತು, ಅದಕ್ಕೆ ರೂಪೇಶ್ ನನ್ನ ಬೆಡ್ ಮೇಲೆ ಎಲ್ಲಾ ಹ್ಯಾಪಿ ಬರ್ತಡೇ ಸಾನ್ಯ ಎಂದು ಡೆಕೋರೇಷನ್ ಮಾಡಿದ್ದರು' ಎಂದು ಸಂತೋಷದಿಂದ ಹೇಳಿದರು. ಇದಕ್ಕೆ ಸುದೀಪ್ ಕೇಕ್ ಮೇಲೆ ತಾನೆ ಡೆಕೋರೇಶನ್ ಮಾಡಬೇಕು ಎಂದು ಸಾನ್ಯಾ ತಾಯಿ ಬಳಿ ಕೇಳಿದರು. ಇದಕ್ಕೆ ಸಾನ್ಯಾ ತಾಯಿ ಹೌದು ಎಂದರು. ಬಳಿಕ ಸುದೀಪ್ ನನ್ನ ರೂಮನ್ನು ಡೆಕೋರೇಟ್ ಮಾಡಿಕೊಡಿ ಎಂದು ರೂಪೇಶ್ ಕಾಲೆಳೆದರು. ಈ ಪ್ರೋಮೋ ಈಗ ವೈರಲ್ ಆಗಿದೆ. ಅನೇಕರು ನಾನಾರೀತಿ ಕಾಮೆಂಟ್ ಮಾಡುತ್ತಿದ್ದಾರೆ. 

ಕೆಲವರು ಬಿಗ್ ಬಾಸ್ ಇತ್ತೀಚಿಗೆ ಮ್ಯಾರೇಜ್ ಹೌಸ್ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು ಕೆಲವರು ಸಾನ್ಯಾ ಮತ್ತು ರೂಪೇಶ್ ಜೋಡಿಗೆ ಮೆಚ್ಚುಗೆ ವ್ಯಕ್ತಪಡಿಸಿ ಇವರಿಗಾಗಿ ಬಿಗ್ ಬಾಸ್ ನೋಡುತ್ತೀವಿ ಎಂದು ಹೇಳುತ್ತಿದ್ದಾರೆ. ಇಬ್ಬರ ಸ್ನೇಹ ಬಿಗ್ ಬಾಸ್ 9ನಲ್ಲೂ ಹೀಗೆ ಮುಂದುವರೆಯುತ್ತಾ ಅಥವಾ ದೂರ ದಾರ ಆಗ್ತಾರಾ ಎಂದು ಕಾದುನೋಡಬೇಕಿದೆ. &

Bigg Boss Kannada 9; ಕೋಟಿ ಕೊಟ್ರು ಹೋಗಲ್ಲ ಎಂದ ಬ್ರಹ್ಮಾಂಡ ಗುರೂಜಿ, ಬಿಗ್ ಮನೆಗೆ ಹೋಗೊರ್ಯಾರು?

ಬಿಗ್ ಬಾಸ್ ಮನೆಗೆ ಹೋಗುವ ಸಂಭಾವ್ಯ ಪಟ್ಟಿ ಈಗಾಗಲೇ ವೈರಲ್ ಆಗಿದೆ. ಸೀನಿಯರ್ಸ್ ಜೊತೆ ಜೂನಿಯರ್ಸ್ ಕೂಡ ಇರುವುದರಿಂದ ಈ ಬಾರಿ ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಾಗಿದೆ. ಸದ್ಯ ಹರಿದಾಡುತ್ತಿರುವ ಹೆಸರುಗಳಲ್ಲಿ ಅನುಪಮಾ ಗೌಡ, ದೀಪಿಕಾ ದಾಸ್, ದಿವ್ಯಾ ಉರುಡುಗ, ಅರುಣ್ ಸಾಗರ್, ಪ್ರಶಾಂತ್ ಸಂಭರ್ಗಿ, ನಟಿ ಕಾವ್ಯಶ್ರಿ, ನಟಿ ಮಯೂರಿ, ಸೋಶಿಯಲ್ ಮೀಡಿಯಾ ಸ್ಟಾರ್ ನವಾಜ್, ನಟಿ ನೇಹಾ ಗೌಡ, ಅಮೂಲ್ಯಾ ಗೌಡ, ದರ್ಶ್ ಚಂದ್ರಪ್ಪ, ನಟಿ ರಮೋಲಾ, ಬೈಕ್ ರೇಸರ್ ಐಶ್ವರ್ಯಾ, ಬೈಕ್ ರೇಸರ್ ಸಂದೇಶ್ ಪ್ರಸನ್ನ ಜೊತೆಗೆ ಒಟಿಟಿ ಸ್ಪರ್ಧಿಗಳು. ಇವರಲ್ಲಿ ನಿಜಕ್ಕೂ ಬಿಗ್ ಮನೆ ಎಂಟ್ರಿ ಕೊಡುವ ಸ್ಪರ್ಧಿಗಳ್ಯಾರು ಎನ್ನುವ ಕುತೂಹಲಕ್ಕೆ ಇಂದು ಸಂಜೆ ತೆರೆಬೀಳುವ ಸಾಧ್ಯತೆ ಇದೆ.  

click me!