ಮುಗ್ದೇ ಹೋಯ್ತು ನನ್ನರಸಿ ರಾಧೆ ಸೀರಿಯಲ್, ಆದ್ರೆ ಈ ಕ್ಯೂಟ್ ಎಂಡ್‌ನ ಮಿಸ್ ಮಾಡ್ಕೊಳ್ಳೋ ಹಾಗಿಲ್ಲ!

Published : Sep 24, 2022, 11:57 AM IST
ಮುಗ್ದೇ ಹೋಯ್ತು ನನ್ನರಸಿ ರಾಧೆ ಸೀರಿಯಲ್, ಆದ್ರೆ ಈ ಕ್ಯೂಟ್ ಎಂಡ್‌ನ ಮಿಸ್ ಮಾಡ್ಕೊಳ್ಳೋ ಹಾಗಿಲ್ಲ!

ಸಾರಾಂಶ

Nannarasi Radhe Kannada Serial News: ಕಲರ್ಸ್ ಕನ್ನಡದಲ್ಲಿ 'ನನ್ನರಸಿ ರಾಧೆ' ಸೀರಿಯಲ್ ಮುಕ್ತಾಯವಾಗುತ್ತೆ ಅನ್ನೋ ಮಾತು ಬಹಳ ದಿನಗಳಿಂದ ಕೇಳಿ ಬರುತ್ತಿತ್ತು. ಇದೀಗ ಆ ಮಾತು ನಿಜ ಆಗಿದೆ. ಅತ್ತ ಬಿಗ್‌ಬಾಸ್ ಮೀಸೆ ತಿರುವುತ್ತಾ ಎಂಟ್ರಿ ಕೊಡ್ತಿದ್ದ ಹಾಗೆ ಇತ್ತ ನನ್ನರಸಿ ರಾಧೆ ಕ್ಯೂಟ್ ಸೀನ್‌ನೊಂದಿಗೆ ವೀಕ್ಷಕರಿಗೆ ಗುಡ್‌ ಬೈ ಹೇಳಿದೆ. ಏನದು ಕ್ಯೂಟ್ ಸೀನ್?

ಕಲರ್ಸ್ ಕನ್ನಡದಲ್ಲಿ ಬಿಗ್‌ಬಾಸ್ ಸೀಸನ್‌ 9 ಶುರುವಾಗುತ್ತಿದೆ. ಅತ್ತ ನನ್ನರಸಿ ರಾಧೆ ಸೀರಿಯಲ್ ಶುಭಂ ಅನ್ನುತ್ತಾ ಮುಕ್ತಾಯ ಕಂಡಿದೆ. ಮೊದಲಿಗೆ ಹಾವು ಮುಂಗುಸಿ ಥರ ಇದ್ದವರು ಅಗಸ್ತ್ಯಾ ಮತ್ತು ಇಂಚರಾ. ಅಗಸ್ತ್ಯಾ ಬಾಸ್ ಆಗಿದ್ದ ಕಂಪನಿಲಿ ಇಂಚರಾ ಉದ್ಯೋಗಿ. ಕಾಲೇಜಲ್ಲಿ ಫೇಲ್ ಆದ ಹುಡುಗಿ ಆದರೂ ಅವಳಲ್ಲಿದ್ದ ಜಾಣ್ಮೆಯನ್ನು ಕಂಡು ಅಗಸ್ತ್ಯನ ಅಪ್ಪ ಸಂತೋಷ್ ರಾಥೋಡ್ ಅವಳನ್ನು ತಮ್ಮ ಕಂಪನಿಗೆ ಸೇರಿಸಿರ್ತಾರೆ. ಶುರುವಿನಲ್ಲಿ ಶತ್ರುಗಳ ಥರ ಹೊಡೆದಾಡಿಕೊಳ್ತಿದ್ದ ಅಗಸ್ತ್ಯ ಇಂಚರಾ ಒಂದು ಹಂತದಲ್ಲಿ ಮದುವೆ ಆಗ್ತಾರೆ. ಆಮೇಲೂ ಅವರ ನಡುವಿನ ಗುದ್ದಾಟ ನಡೆಯುತ್ತಾ ಇರುತ್ತೆ. ಇತ್ತ ಅಮ್ಮನ ಹುಡುಕಾಟದಲ್ಲಿರೋ ಅಗಸ್ತ್ಯನಿಗೆ ಇಂಚರಾ ಸಹಾಯ ಮಾಡ್ತಾಳೆ. ನಿಧಾನಕ್ಕೆ ಈ ಜೋಡಿ ಬಿಗುಮಾನ ಮರೆತು ಹತ್ತಿರವಾಗುತ್ತಾ ಹೋಗಿತ್ತಾರೆ. ಅಗಸ್ತ್ಯನ ತಾಯಿಯನ್ನು ಕೂಡಿ ಹಾಕಿದ್ದ ಇಂದ್ರಾಣಿಯ ದುಷ್ಕೃತ್ಯಗಳೂ ರಿವೀಲ್ ಆಗುತ್ತವೆ. ನಡುವೆ ಅಶ್ವಿನಿ ಅನ್ನೋ ತಂಗಿ ಬರ್ತಾಳೆ. ನೆಗೆಟಿವ್ ಶೇಡ್‌ನ ಈ ಪಾತ್ರ ಕ್ರಮೇಣ ಸತ್ಯ ಅರಿತುಕೊಂಡು ಪಾಸಿಟಿವ್ ಶೇಡ್ ಪಡೆಯುತ್ತೆ. ಅಗಸ್ತ್ಯನ ಅಪ್ಪ ಅಮ್ಮ ಒಂದಾಗ್ತಾರೆ. ಕೊನೆಯಲ್ಲಿ ಒಂದು ಲವ್ಲೀ ಸ್ಟೋರಿ ಲೈನ್‌ನೊಂದಿಗೆ ಈ ಸೀರಿಯಲ್ ಈಗ ಎಂಡ್ ಆಗಿದೆ.

ಸಾಮಾನ್ಯ ಬಿಗ್‌ಬಾಸ್ ಬರುತ್ತೆ ಅಂದ್ರೆ ಸೀರಿಯಲ್‌ಗಳ ಟೈಮಿಂಗ್ಸ್ ಬದಲಾಗೋದು, ಮುಕ್ತಾಯವಾಗೋದು ಕಾಮನ್. ಆದರೆ ಈ ಬಾರಿ ಬಿಗ್‌ಬಾಸ್ ಬರ್ತಿದ್ದ ಹಾಗೇ 'ನನ್ನರಸಿ ರಾಧೆ' ಸೀರಿಯಲ್ ಮುಕ್ತಾಯವಾಗಿದೆ. ಅಭಿನವ್ ವಿಶ್ವನಾಥನ್, ಕೌಸ್ತುಭ ಮಣಿ, ಹೇಮಾ ಬೆಳ್ಳೂರು, ಸಿಹಿ ಕಹಿ ಚಂದ್ರು, ಸಾರಿಕಾ ರಾಜ್ ಅರಸ್, ತೇಜಸ್ವಿನಿ ಪ್ರಕಾಶ್, ಅಮೂಲ್ಯಾ ಗೌಡ, ವಿಹಾರಿಕಾ ನಟನೆಯ 'ನನ್ನರಸಿ ರಾಧೆ' ಧಾರಾವಾಹಿ ಮುಕ್ತಾಯವಾಗುತ್ತಿದೆ. ಇದರ ಕೊನೆಯ ಟ್ವಿಸ್ಟ್ ಜನರಿಗೆ ಸಖತ್ ಇಷ್ಟವಾಗಿದೆ. ಒಂದು ಕಡೆ ಇಂಚರಾ ತಾಯಿಯಾಗುವ ಸಂಭ್ರಮ ರಾಥೋಡ್ ಫ್ಯಾಮಿಲಿಯನ್ನು ಸಂತೋಷದ ಕಡಲಲ್ಲಿ ತೇಲಿಸಿದೆ. ಜೊತೆಗೆ ಇಷ್ಟುದಿನ ಇಂದ್ರಾಣಿ ಮೋಸ, ಮೀನಾಕ್ಷಿಯ ಸಣ್ಣತನವನ್ನು ಇಂಚರಾ ಕುಟುಂಬ ಎದುರಿಸಿತ್ತು. ಇದಕ್ಕೆಲ್ಲ ಒಂದು ಕೊನೆ ಸಿಕ್ಕಿದೆ. ಇಂಚರಾ-ಅಗಸ್ತ್ಯ ಭೇಟಿಯಾಗಿದ್ದು ಹೇಗೆ? ಅವರಿಬ್ಬರ ನಡುವೆ ಹೇಗೆ ಸ್ನೇಹ ಬೆಳೆಯಿತು? ಇವರಿಬ್ಬರು ಮದುವೆಯಾಗಿದ್ದು ಹೇಗೆ? ಮದುವೆ ನಂತರ ಏನೆಲ್ಲ ಕಷ್ಟ ಅನುಭವಿಸಬೇಕಾಯ್ತು? ಇವೆಲ್ಲವುಗಳನ್ನು ನೆನಪಿಸಿಕೊಂಡು ಸಿಹಿ ಸುದ್ದಿಯನ್ನು ಈ ಸೀರಿಯಲ್ ನೀಡಿದೆ.

ಇದನ್ನೂ ಓದಿ: ಆ್ಯಂಕರ್ ಸುಷ್ಮಾ ರಾವ್ ಸೀರಿಯಲ್‌ಗೆ ರೀ ಎಂಟ್ರಿ! ಶೀಘ್ರದಲ್ಲಿ ಭಾಗ್ಯಲಕ್ಷ್ಮಿ ಆರಂಭ

ಮತ್ತೊಂದು ಕಡೆ ಇಂಚರಾ ಮದುವೆ ದಿನ ಅಗಸ್ತ್ಯ ಹೀರೋ ತರ ಹಾರಿ ಬಂದು ತಾಳಿ ಕಟ್ಟಿದ್ದು ಮಾತ್ರ ಈ ಧಾರಾವಾಹಿಯ ಹೈಲೈಟ್(Highlight). ಇಂಚರಾ ಮಾತ್ರ ಯಾಕೆ ನನಗೆ ತಾಳಿ ಕಟ್ಟಿದೆ ಅಂತ ಎಷ್ಟೇ ಸಲ ಕೇಳಿದರೂ ಅಗಸ್ತ್ಯ ಮಾತ್ರ ಉತ್ತರ ಕೊಡಲಿಲ್ಲ. ಇಂಚರಾಗೆ ಪ್ರೀತಿ ಮಾಡ್ತೀನಿ ಅಂತ ಹೇಳಿ ಸಂಸಾರ ಶುರು ಮಾಡಿದರೂ ಕೂಡ ಅಗಸ್ತ್ಯ ಬಗ್ಗೆ ಏನೂ ಹೇಳಲ್ಲ. ತಾಳಿ ಕಟ್ಟಿ ಇದೀಗ ಈ ಜೋಡಿ ತಂದೆ ತಾಯಿ ಆಗ್ತಿರುವ ಹೊತ್ತಲ್ಲೂ ಇದೇ ಪ್ರಶ್ನೆ(Question) ಎದುರಾಗಿದೆ. ಸೀಮಂತದಲ್ಲಿ ಮತ್ತೆ ಇಂಚರಾ ಅಗಸ್ತ್ಯನ ಬಳಿ ಕೇಳಿದ್ದಾಳೆ, 'ನಂಗ್ಯಾಕೆ ತಾಳಿ ಕಟ್ಟಿದೆ?' ಅಂತ. ಅಗಸ್ತ್ಯ ಇಲ್ಲೂ ಎಂದಿನ ಹಾಗೆ ಸುಮ್ಮನಾಗಿದ್ದಾನೆ. ಈ ಕ್ಯೂಟ್(Cute) ಸನ್ನಿವೇಶವನ್ನು ಜನ ಸಖತ್ ಎನ್‌ಜಾಯ್(Enjoy) ಮಾಡಿದ್ದಾರೆ.

 

ಈ ನಡುವೆ ಬಿಗ್‌ಬಾಸ್ ಸೀಸನ್ 9 (Bigboss season 9) ಇಂದು ಸಂಜೆ 6 ಗಂಟೆಗೆ ಅದ್ದೂರಿಯಾಗಿ ಆರಂಭವಾಗಲಿದೆ. ನಟ ಕಿಚ್ಚ ಸುದೀಪ್(Sudeep) ಅವರು 18 ಸ್ಪರ್ಧಿಗಳನ್ನು ಬಿಗ್ ಬಾಸ್ ಮನೆಯೊಳಗಡೆ ಕಳಿಸಿಕೊಡಲಿದ್ದಾರೆ. ಒಂದೆಡೆ ನನ್ನರಸಿ ರಾಧೆಯನ್ನು ಜನ ಮಿಸ್ ಮಾಡಿಕೊಂಡರೂ ಬಿಗ್‌ಬಾಸ್ ಅನ್ನೂ ಕುತೂಹಲದಿಂದ ಎದುರು ನೋಡ್ತಿದ್ದಾರೆ.

ಇದನ್ನೂ ಓದಿ: ವೀಕ್ಷಕರ ಮನ ಗೆದ್ದ 'ಹೊಂಗನಸು' ನಾಯಕಿ ರಕ್ಷಾ ಗೌಡ! ಈ ಸೀರಿಯಲ್ ಸಖತ್ ಪಾಪ್ಯುಲರ್

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಪದೇ ಪದೇ ಕಿಚ್ಚ ಸುದೀಪ್‌ ಹೇಳ್ತಿರುವಂತೆ ರಜತ್‌ ವೈರಲ್ ವಿಡಿಯೋ ಅಸಲಿ ವಿಷಯ ಏನು? ಅಂಥದ್ದೇನಿದೆ?
ಏನೂ ಮಾಡದೆ ಸ್ಪಂದನಾ ಸೋಮಣ್ಣ Bigg Boss ಮನೇಲಿ ಇರೋದು ಹೇಗೆ? ಕಿಚ್ಚ ಸುದೀಪ್‌ ಬಿಚ್ಚಿಟ್ಟ ಸತ್ಯ ಏನು?