Latest Videos

BBK9; ಸುದೀಪ್ ಇಲ್ಲದ ಎಲಿಮಿನೇಷನ್ ಪ್ರಕ್ರಿಯೆ ಹೇಗಿದೆ, ಮನೆಯಿಂದ ಹೊರ ಹೋಗುವ ಸ್ಪರ್ಧಿ ಯಾರು?

By Shruthi KrishnaFirst Published Oct 23, 2022, 10:00 AM IST
Highlights

ನಾಲ್ಕನೇ ವಾರದ ಎಲಿಮಿನೇಷನ್ ಪ್ರಕ್ರಿಯೆ ಈಗ ಪ್ರೇಕ್ಷಕರ ಕುತೂಹಲಕ್ಕೆ ಕಾರಣವಾಗಿದೆ. ಇದಕ್ಕೆ ಕಾರಣ ಕಿಚ್ಚ ಸುದೀಪ್ ಗೈರು. ಕಿಚ್ಚ ಸುದೀಪ್ ಇಲ್ಲದೇ ಈ ವಾರ ಒಬ್ಬರು ಸ್ಪರ್ಧಿ ಮನೆಯಿಂದ ಹೊರಹೋಗುತ್ತಿದ್ದಾರೆ. 

ಬಿಗ್ ಬಾಸ್ ಕನ್ನಡ ಸೀಸನ್ 9 ಯಶಸ್ವಿಯಾಗಿ ನಡೆಯುತ್ತಿದೆ. ನಾಲ್ಕನೇ ವಾರದ ಎಲಿಮಿನೇಷನ್ ಪ್ರಕ್ರಿಯೆ ಈಗ ಪ್ರೇಕ್ಷಕರ ಕುತೂಹಲಕ್ಕೆ ಕಾರಣವಾಗಿದೆ. ಇದಕ್ಕೆ ಕಾರಣ ಕಿಚ್ಚ ಸುದೀಪ್ ಗೈರು. ಹೌದು ಬಿಗ್ ಬಾಸ್ ವೀಕೆಂಡ್ ಎಪಿಸೋಡ್‌ಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಗೈರಾಗಿದ್ದಾರೆ. ಹಾಗಾಗಿ ಈ ಬಾರಿಯ ಎಪಿಸೋಡ್ ಯಾರು ನಡೆಸಿಕೊಡಲಿದ್ದಾರೆ, ಹೇಗಿರಲಿದೆ ವೀಕೆಂಡ್ ಸಂಚಿಕೆ ಎಂದು ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದರು. ಆದರೀಗ ವೀಕೆಂಡ್ ಕಾರ್ಯಕ್ರಮದ ಕುತೂಹಲಕ್ಕೆ ಬ್ರೇಕ್ ಹಾಕಿದೆ ಸದ್ಯ ಬಿಗ್ ಬಾಸ್ ರಿಲೀಸ್ ಮಾಡಿರುವ ಪ್ರೋಮೋ. ಭಾನುವಾರದ ಸಂಚಿಕೆಯ ಪ್ರೋಮೋ  ಬಿಡುಗಡೆಯಾಗಿದೆ. ಈ ಪ್ರೋಮೋದಲ್ಲಿ ನಾಲ್ಕನೇ ವಾರದ ಎಲಿಮಿನೇಷನ್‌ಗೆ ಬಿಗ್ ಬಾಸ್ ವಿಶೇಷವಾದ ಟಾಸ್ಕ್ ನೀಡಿದೆ. 

ಬಿಗ್ ಬಾಸ್ ಕನ್ನಡ 9 ನಾಲ್ಕು ವಾರಗಳು ಯಶಸ್ವಿಯಾಗಿ ನಡೆದುಕೊಂಡು ಬಂದಿದೆ. ಈಗಾಗಲೇ ಮೂರು ಮಂದಿ ಬಿಗ್ ಮನೆಯಿಂದ ಎಲಿಮಿನೇಟ್ ಆಗಿ ಹೊರಹೋಗಿದ್ದಾರೆ. ನಾಲ್ಕನೇ ವಾರ ಯಾರು ಎಲಿಮಿನೇಟ್ ಆಗಲಿದ್ದಾರೆ ಎನ್ನುವ ಕುತೂಹಲ ಪ್ರೇಕ್ಷಕರಲ್ಲಿದೆ. ಸುದೀಪ್ ಇಲ್ಲದೆ ಈ ವಾರ ಸ್ಪರ್ಧಿಯೊಬ್ಬರು ಮನೆಯಿಂದ ಹೊರಹೋಗುತ್ತಿದ್ದಾರೆ. ಎಲಿಮಿನೇಷನ್ ಟಾಸ್ಕ್ ನಲ್ಲಿ ಸ್ಪರ್ದಿಗಳು ಫುಲ್ ಟೆನ್ಶನ್ ಆಗಿದ್ದಾರೆ. ಹಲವು ಸುತ್ತಿಗಳಲ್ಲಿ ಎಲಿಮಿನೇಷನ್ ಪ್ರಕ್ರಿಯೆ ಇರಲಿದೆ ಎಂದು ಬಿಗ್ ಬಾಸ್ ಹೇಳಿದೆ. ಅದರಂತೆ ಸ್ಪರ್ಧಿಗಳಿಗೆ ವಿವಧ ಟಾಸ್ಕ್ ಸಹ ನೀಡಲಾಗಿದೆ. ಸ್ಪರ್ಧಿಗಳು ಭಯದಲ್ಲೇ ಟಾಸ್ಕ್ ಆಡುತ್ತಿದ್ದಾರೆ. ಅಷ್ಟರಲ್ಲೆ ಎರಡು ಬೈಕ್ ಕೂಡ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದೆ. ಯಾರಿದು, ಏನಿದು ಎಂದು ಸ್ಪರ್ಧಿಗಳು ಗಂಗಾಲಾಗಿದ್ದಾರೆ. 

ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿರುವ ಬೈಕ್‌ನಲ್ಲೇ ಎಲಿಮಿನೇಟ್ ಆಧ ಸ್ಪರ್ಧಿ ಹೊರಹೋಗುತ್ತಾರಾ? ಅಥವಾ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಮತ್ಯಾರಾದರೂ ಬಿಗ್ ಮನೆಗೆ ಕಾಲಿಟ್ಟಿದ್ದಾರಾ ಎನ್ನುವ ಕುತೂಹಲ ಹೆಚ್ಚಾಗಿದೆ. ಆದರೆ ಈ ಎಲ್ಲಾ ಕಾತರತೆಗೆ ಇಂದು ರಾತ್ರಿಯ ಸಂಚಿಕೆಯಲ್ಲಿ ಬ್ರೇಕ್ ಬೀಳಲಿದೆ. ಅಲ್ಲಿ ವರೆಗೂ ಕಾಯಲೇಬೇಕಾಗಿದೆ. 

Bigg Boss: ಸಲ್ಲುಗೆ ಡೆಂಗ್ಯೂ, ವಿದೇಶದಲ್ಲಿ ಸುದೀಪ್‌: ವಾರಾಂತ್ಯಕ್ಕೆ ಇಬ್ರೂ ಗೈರು?

ಸುದೀಪ್ ಗೈರಾಗಲು ಕಾರಣವೇನು?

ಅಂದಹಾಗೆ ಸುದೀಪ್ ವಿದೇಶದಲ್ಲಿದ್ದಾರೆ. ಅಕ್ಟೋಬರ್ 18ರಂದು ಸುದೀಪ್ ಮತ್ತು ಪ್ರಿಯಾ ಸುದೀಪ್ ಅವರ ವಿವಾಹ ವಾರ್ಷಿಕೋತ್ಸವ. ಹಾಗಾಗಿ ಈ ಸ್ಟಾರ್ ಜೋಡಿ ವಿದೇಶಕ್ಕೆ ಹಾರಿದೆ. ಅಲ್ಲಿಯೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ. ಇನ್ನು ಭಾರತಕ್ಕೆ ಪಾವಾಸ್ ಆಗಿಲ್ಲ ಎನ್ನುವ ಮಾತು ಕೇಳಿ ಬರುತ್ತಿದೆ. ಅಂದಹಾಗೆ ಸುದೀಪ್ ವಿದೇಶದಿಂದ ವಾಪಾಸ್ ಆಗಿ 'ಗಂಧದ ಗುಡಿ' ಕಾರ್ಯಮದಲ್ಲಿ ಭಾಗಿಯಾಗಲಿದ್ದಾರೆ ಅಂತ ಅಭಿಮಾನಿಗಳು ಭಾವಿಸಿದ್ದರು. ಆದರೆ ಕಿಚ್ಚ ಗಂಧದ ಗುಡಿ ಕಾರ್ಯಕ್ರಮಕ್ಕೂ ಗೈರಾಗಿದ್ದರು. ಇನ್ನು ವಿದೇಶದಲ್ಲಿರುವ ಕಿಚ್ಚ ಸದ್ಯದಲ್ಲೇ ಭಾರತಕ್ಕೆ  ವಾಪಾಸ್ ಆಗುತ್ತಿದ್ದಾರೆ.

ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ಸ್ಪರ್ಧಿಗಳು 

ಬಿಗ್‌ಬಾಸ್ 9 ಸೆಪ್ಟೆಂಬರ್ 24ರಿಂದ ಆರಂಭವಾಗಿದೆ. ಈ ಬಾರಿಯ ಬಿಗ್ ಬಾಸ್‌ನಲ್ಲಿ ಅರುಣ್ ಸಾಗರ್, ಅಶ್ವಿನ ನಕ್ಷತ್ರದ ಮೂಲಕ ಮನೆ ಮಾತಾಗಿದ್ದ ನಟಿ ಮಯೂರಿ, ದೀಪಿಕಾ ದಾಸ್, ನವಾಜ್,  ದಿವ್ಯಾ ಉರುಡುಗ, ದರ್ಶ್ ಚಂದ್ರಪ್ಪ, ಪ್ರಶಾಂತ್ ಸಂಬರಗಿ, ಅಮೂಲ್ಯ ಗೌಡ, ಸನ್ಯಾ ಅಯ್ಯರ್, ರೂಪೇಶ್ ಶೆಟ್ಟಿ, ವಿನೋದ್ ಗೊಬ್ರಗಾಲ (ಕಾಮಿಡಿ ಕಿಲಾಡಿಗಳು), ಲಕ್ಷ್ಮಿ ಬಾರಮ್ಮ ಸೀರಿಯಲ್ ಖ್ಯಾತಿಯ ನೇಹಾ ಗೌಡ,  ನಾನು ಅಂದ್ರೆ ನಂಬರ್, ನಂಬರ್ ಅಂದ್ರೆ ನಾನು ಎನ್ನುವ ಆರ್ಯವರ್ಧನ್ ಗುರೂಜಿ, ರಾಕೇಶ್ ಅಡಿಗ, ಐಶ್ವರ್ಯಾ(ಬೈಕ್ ರೈಡರ್), ರೂಪೇಶ್ ರಾಜಣ್ಣ, ಮಂಗಳ ಗೌರಿಯ ಕಾವ್ಯಶ್ರೀ, ನಿರೂಪಕಿ ಅನುಪಮಾ ಗೌಡ ಸ್ಪರ್ಧಿಗಳಾಗಿ ಭಾಗಿಯಾಗಿದ್ದರು.

'ಬಿಗ್ ಬಾಸ್' ವೀಕೆಂಡ್‌ಗೆ ಸುದೀಪ್ ಗೈರು; ಯಾರು ನಡಿಸಿಕೊಡ್ತಾರೆ ಎಪಿಸೋಡ್?

ಮನೆಯಿಂದ ಹೊರಹೋಗಿರುವ ಸ್ಪರ್ಧಿಗಳು

ಬಿಗ್ ಬಾಸ್ ಸೀಸನ್ 9ರ ಮೊದಲ ವಾರ ಐಶ್ವರ್ಯಾ ಪಿಸೆ ಮನೆಯಿಂದ ಹೊರಹೋಗಿದ್ದರು. 2ನೇ ವಾರ ನವಾಜ್ ಎಲಿಮಿನೇಟ್ ಆಗಿದ್ದಾರೆ. 3ನೇ ವಾರ ದರ್ಶ ಚಂದ್ರಪ್ಪ ಮನೆಯಿಂದ ಹೊರ ಹೋಗಿದ್ದಾರೆ. ಸದ್ಯ ಬಿಗ್ ಬಾಸ್ ಮನೆಯಲ್ಲಿ 15 ಮಂದಿ ಇದ್ದಾರೆ. 4ನೇ ವಾರ ಯಾರು ಹೊರ ಹೋಗುತ್ತಾರೆ ಎಂದು ಕಾದು ನೋಡಬೇಕಿದೆ.

click me!