Bigg Boss: ಸಲ್ಲುಗೆ ಡೆಂಗ್ಯೂ, ವಿದೇಶದಲ್ಲಿ ಸುದೀಪ್‌: ವಾರಾಂತ್ಯಕ್ಕೆ ಇಬ್ರೂ ಗೈರು?

Published : Oct 22, 2022, 05:00 PM ISTUpdated : Oct 22, 2022, 05:01 PM IST
Bigg Boss: ಸಲ್ಲುಗೆ ಡೆಂಗ್ಯೂ, ವಿದೇಶದಲ್ಲಿ ಸುದೀಪ್‌: ವಾರಾಂತ್ಯಕ್ಕೆ ಇಬ್ರೂ ಗೈರು?

ಸಾರಾಂಶ

Big Boss 16: ನಟ ಸಲ್ಮಾನ್ ಖಾನ್ ಡೆಂಗ್ಯೂ ಇರುವುದು ಪತ್ತೆಯಾಗಿದ್ದು, ಕಳೆದ ನಾಲ್ಕೈದು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದಾರೆ 

ಮುಂಬೈ (ಅ. 22): ನಟ ಸಲ್ಮಾನ್ ಖಾನ್‌ಗೆ (Salman Khan) ಡೆಂಗ್ಯೂ ಇರುವುದು ಪತ್ತೆಯಾಗಿದ್ದು, ಕಳೆದ ನಾಲ್ಕೈದು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಸಲ್ಲು ಸದ್ಯ ವಿಶ್ರಾಂತಿ ಪಡೆಯುತ್ತಿದ್ದು ಯಾವುದೇ ದೈಹಿಕ ಶ್ರಮವನ್ನು ಮಾಡದಂತೆ ವೈದ್ಯರು ಸಲಹೆ ನೀಡಿದ್ದಾರೆ. ಹೀಗಾಗಿ ಸಲ್ಮಾನ್ ಖಾನ್ ಈ ವಾರಾಂತ್ಯದಲ್ಲಿ ಬಿಗ್ ಬಾಸ್ (Bigg Boss) ಕಾರ್ಯಕ್ರಮಕ್ಕೆ ಗೈರಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅಕ್ಟೋಬರ್‌ 25ರಿಂದ ಸಲ್ಮಾನ್‌ ಶೂಟಿಂಗ್‌ಗೆ ಮತ್ತೆ ವಾಪಸ್ಸಾಗಲಿದ್ದಾರೆ ಎಂದು ವರದಿಗಳು ತಿಳಿಸಿವೆ. ಇನ್ನು ಇತ್ತ ಕನ್ನಡ ಬಿಗ್‌ ಬಾಸ್‌ ಸೀಸನ್ 9ರಲ್ಲಿ ಕಿಚ್ಚ ಸುದೀಪ್ (Kiccha Sudeep) ವಾರದ ಕತೆ ನಡೆಸಿಕೊಡುತ್ತಿಲ್ಲ.

ಈ ವಾರ ಬಾಗ್ ಬಾಸ್ ವೀಕೆಂಡ್‌ಗೆ ಸುದೀಪ್ ಗೈರಾಗುತ್ತಿದ್ದಾರಂತೆ. ಈ ಸುದ್ದಿ ಕಿರುತೆರೆ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಅಕ್ಟೋಬರ್ 18ರಂದು ಸುದೀಪ್ ಮತ್ತು ಪ್ರಿಯಾ ಸುದೀಪ್ ವಿವಾಹ ವಾರ್ಷಿಕೋತ್ಸವ. ಹಾಗಾಗಿ ಈ ಸ್ಟಾರ್ ಜೋಡಿ ವಿದೇಶಕ್ಕೆ ಹಾರಿದೆ. ಅಲ್ಲಿಯೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ. ಹೀಗಾಗಿ ಬಿಗ್ ಬಾಸ್‌ನ ವಾರಾಂತ್ಯದ ಕಾರ್ಯಕ್ರಮಕ್ಕೆ ಕಿಚ್ಚ ಗೈರಾಗಲಿದ್ದಾರೆ. 

ಸಲ್ಲು ಬದಲಾಗಿ ಕರಣ್ ಜೋಹರ್?:  ಇನ್ನು ಸಲ್ಲು ಬದಲಾಗಿ ಕರಣ್ ಜೋಹರ್  ವಾರಾಂತ್ಯದ ವಿಶೇಷ ಕಾರ್ಯಕ್ರಮದಲ್ಲಿ ಹೋಸ್ಟಾಗಿ ಬರಬಹುದು ಎಂದು ಮೂಲಗಳು ತಿಳಿಸಿವೆ. ಬಿಗ್ ಬಾಸ್  ವಿಶೇಷ ಸಂಚಿಕೆಯನ್ನು ಸಲ್ಮಾನ್‌ ಚಿತ್ರೀಕರಿಸಲು ಸಾಧ್ಯವಾಗದ ಕಾರಣ ಕರಣ್ ಚಿತ್ರೀಕರಣ ಮಾಡಿದ್ದಾರೆ. ಹೀಗಾಗಿ ಬಿಗ್ ಬಾಸ್16 ರ ವಿಶೇಷ ಸಂಚಿಕೆಯಲ್ಲಿ ಪ್ರೇಕ್ಷಕರು ಕರಣ್ ಜೋಹರ್‌ನನ್ನು ವೀಕ್ಷಿಸಲಿದ್ದಾರೆ. ಈ ಸೀಸನ್‌ನಲ್ಲಿ ಟೀನಾ ದತ್ತಾ, ಸುಂಬುಲ್ ತೌಕೀರ್, ಶಾಲಿನ್ ಭಾನೋಟ್, ಅರ್ಚನಾ ಗೌತಮ್, ಶಿವ್ ಠಾಕರೆ, ಗೌತಮ್ ಸಿಂಗ್ ವಿಗ್, ಸಾಜಿದ್ ಖಾನ್, ಅಬ್ದು ರೋಜಿಕ್ ಸೇರಿದಂತೆ ಹಲವು ಇತರ ಸೆಲೆಬ್ರಿಟಿಗಳು ಬಿಗ್‌ ಬಾಸ್‌ ಮನೆ ಪ್ರವೇಶಿಸಿದ್ದಾರೆ.

ಬಿಗ್ ಬಾಸ್ ಅಭಿಮಾನಿಗಳಿಗೆ ಬ್ಯಾಡ್ ನ್ಯೂಸ್: ಈ ವಾರ ಇರಲ್ವಾ ವಾರದ ಕಥೆ ಕಿಚ್ಚನ ಜೊತೆ?

ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಶೂಟಿಂಗ್‌: ಸಲ್ಮಾನ್ ಖಾನ್ ಕಳೆದ ಎರಡು ವಾರಗಳಲ್ಲಿ ತಮ್ಮ ಮುಂಬರುವ ಚಿತ್ರ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಚಿತ್ರೀಕರಣದಲ್ಲಿ ತೊಡಗಿದ್ದರು. ಚಿತ್ರತಂಡವು ಪ್ರಸ್ತುತ ಚಿತ್ರದ ಇತರ ನಟರೊಂದಿಗೆ ಚಿತ್ರೀಕರಣ ನಡೆಸುತ್ತಿದ್ದು ಸಲ್ಮಾನ್ ಖಾನ್ ಚೇತರಿಸಿಕೊಂಡ ನಂತರ ಅವರೊಂದಿಗೆ ಸೇರಿಕೊಳ್ಳುವ ನಿರೀಕ್ಷೆಯಿದೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಏನ್ರೀ ಇದು ತೆವಲು? ರಜತ್‌, ಅಶ್ವಿನಿ ಗೌಡ, ರಘು ಯಾಕೆ ಹೀಗೆಲ್ಲ ಮಾಡಿದ್ರು?
Aadi Lakshmi Purana Serial: ವಿರುದ್ಧ ದಿಕ್ಕಿನಲ್ಲಿ ಸಾಗುವ, ಒಬ್ಬರನ್ನೊಬ್ಬರು ಕಂಡರೆ ಆಗದವ್ರು ಮದುವೆಯಾಗುವ ಕಥೆ