Kannadathi: ರತ್ನಮಾಲಾ ಕಂಪನಿಯ ಹೊಸ ಎಂಡಿ ಹರ್ಷ ಕುಮಾರ್! ಅದರೆ ಇದೆಷ್ಟು ದಿನ?

Published : Oct 22, 2022, 12:16 PM IST
Kannadathi: ರತ್ನಮಾಲಾ ಕಂಪನಿಯ ಹೊಸ ಎಂಡಿ ಹರ್ಷ ಕುಮಾರ್! ಅದರೆ ಇದೆಷ್ಟು ದಿನ?

ಸಾರಾಂಶ

ಕನ್ನಡತಿಯಲ್ಲಿ ಹರ್ಷ ಎಂಡಿ ಸೀಟಿಗೇರಿದ್ದಾನೆ. ಹರ್ಷನನ್ನು ಜೈಲಿಗಟ್ಟಿದ ಸಾನಿಯಾಳ ಎಂಡಿ ಪಟ್ಟ ಹೋಗಿದೆ. ರತ್ನಮಾಲಾ ಅವರಿಗೆ ಮೈ ಹುಷಾರಿಲ್ಲದ ಕಾರಣ ಅವರ ಮಗನಾದ ತಾನು ಈ ಸೀಟಿಗೆ ಬಂದಿರುವುದಾಗಿ ಹರ್ಷ ಹೇಳಿದ್ದಾನೆ. ಆದರೆ ಆತನಿಗೆ ವಾಸ್ತವ ಗೊತ್ತಿಲ್ಲ. ಗೊತ್ತಾದ್ರೆ ಮುಂಗೋಪಿ ಹರ್ಷ ಸುಮ್ಮನಿರ್ತಾನಾ?

ಕಾದು ಎಂಕನ್ನಡತಿ ಕಲರ್ಸ್ ಕನ್ನಡದಲ್ಲಿ ಸೋಮವಾರದಿಂದ ಶುಕ್ರವಾರ ರಾತ್ರಿ ಏಳೂವರೆಗೆ ಪ್ರಸಾರವಾಗುವ ಸೀರಿಯಲ್‌. ಇದರಲ್ಲಿ ಹರ್ಷ ಮತ್ತು ಭುವಿ ನಾಯಕ ನಾಯಕಿ. ಒಂದಿಷ್ಟು ವರ್ಷಗಳ ಪ್ರೇಮದ ನಂತರ ಅವರಿಬ್ಬರಿಗೂ ಮದುವೆ ಆಗಿದೆ. ಇದೀಗ ಮಾಲಾಗ್ರೂಪ್‌ ಆಫ್‌ ಕಂಪನಿಯ ಒಡೆತನಕ್ಕಾಗಿ ಅವರವರೊಳಗೆ ಹೊಡೆದಾಟ ನಡೆಯುತ್ತಿದೆ. ಅಮ್ಮಮ್ಮನ ಜೊತೆ ಜಗಳ ಡಿ ಪೋಸ್ಟ್‌ನಲ್ಲಿ ಮೆರೆಯುತ್ತಿದ್ದ ಸಾನಿಯಾ ಅಧಿಕಾರ ಈಗ ಕೈತಪ್ಪಿ ಹೋಗಿ ಬಿಟ್ಟಿದೆ. ಹರ್ಷ ಮತ್ತು ಸಾನಿಯಾ ನಡುವಿನ ಜಿದ್ದು ಮುಂದುವರಿದಿದೆ. ಆ ಜಿದ್ದಿನಲ್ಲೇ ಒಬ್ಬರ ಮೇಲೆ ಕೊಲೆ ಕೇಸ್ ಹಾಕೋದು, ಇನ್ನೊಬ್ಬರಿಗೆ ಗನ್‌ ಹಿಡಿಯೋದು ಎಲ್ಲ ನಡೀತಿದೆ. ಹರ್ಷ ಮತ್ತು ಸಾನ್ಯಾ ನಡುವಿನ ದ್ವೇಷ ಮೇರೆ ಮೀರಿದೆ. ಇದರ ನಡುವೆ ಬಹಳ ದಿನಗಳಿಂದ ಪ್ರವಾಸದ ನೆವದಲ್ಲಿ ಸಂಚಿಕೆಗಳಲ್ಲಿ ಕಾಣಿಸಿಕೊಳ್ಳದೇ ಇದ್ದ ವರೂಧಿನಿ ಮತ್ತೆ ಎಂಟ್ರಿ ಕೊಟ್ಟಿದ್ದಾಳೆ. ಹಿಂದಿನಂತೇ ಅವಳ ಹರ್ಷ-ಭುವಿ ಡಿವೋರ್ಸ್ ಕೊಡಿಸೋ ಪ್ಲಾನ್ ಮುಂದುವರಿದಿದೆ. ಈ ಎಲ್ಲ ಬೆಳವಣಿಗೆಗಳ ನಡುವೆ ಅಮ್ಮಮ್ಮನ ಪ್ಲಾನ್ ಬೇರೆಯೇ ಇದೆ. ಅದು ತಿಳಿದರೆ ಹರ್ಷ, ಸಾನ್ಯಾ ಸುಮ್ಮನಿರ್ತಾರ? ಇದು ಯಾವ ಲೆವೆಲ್‌ಗೆ ಮುಂದುವರಿಯಬಹುದು ಅನ್ನೋ ಪ್ರಶ್ನೆ ಸದ್ಯ ವೀಕ್ಷಕರ ಮನಸ್ಸಿನಲ್ಲಿದೆ.

ಕೆಲವು ದಿನಗಳಿಂದ ಹಿಂದೆ ಸಾನ್ಯಾಳಿಂದ ಭುವಿಯನ್ನು ಕೆಲಸದಿಂದ ತೆಗೆಸಿದ ಅವಳ ಹುನ್ನಾರ ಬಯಲು ಮಾಡಬೇಕೆಂದು ಹರ್ಷ ಅವಳ ಹಣೆಗೆ ಗನ್‌ ಇಟ್ಟು ಪ್ರಶ್ನೆ ಮಾಡಿದ್ದ. ಅವರಿಂದ ಒಂದು ಬುಲೆಟ್ ಗೋಡೆಗೂ ಹಾರಿತ್ತು. ಈ ಘಟನೆಯಿಂದ ಸಾನ್ಯಾ ಮಾಡಿರುವ ಹುನ್ನಾರ, ಅವಳ ಮೋಸ, ವಂಚನೆಗಳು ಅವಳ ಬಾಯಿಯಿಂದಲೇ ಹೊರಗೇನೋ ಬಂತು. ಆದರೆ ಹರ್ಷನ ಬಗ್ಗೆ ಅಮ್ಮಮ್ಮನ ಮನಸ್ಸು ಮತ್ತಷ್ಟು ಮುದುಡಿತು. ಅವಳು ತನ್ನ ಕಾಯಿಲೆಯಿಂದ ಉಂಟಾದ ಭ್ರಮೆಯಲ್ಲಿ ಸಾನ್ಯಾಳನ್ನೇ ಭುವಿ ಅಂದುಕೊಂಡು ಅವಳ ಬಳಿ ತನ್ನೆಲ್ಲ ಅಧಿಕಾರವನ್ನು ನೀನೇ ಮುಂದುವರಿಸಿಕೊಂಡು ಹೋಗಬೇಕೆಂದು ಹೇಳಿದ್ದಳು, ಜೊತೆಗೆ ಹರ್ಷನ ಅಹಂಕಾರ, ಸಿಟ್ಟಿನ ಬಗ್ಗೆಯೂ ಅಸಮಾಧಾನ ಹೊರ ಹಾಕಿದ್ದಳು. ಇದು ಸಾನ್ಯಾಳಿಗೆ ಭಾರೀ ಖುಷಿ ಕೊಟ್ಟಿತ್ತು. ತಾನೇ ಮಾಲಾ ಕೆಫೆಯ ಪರ್ಮನೆಂಟ್ ಒಡತಿ ಅನ್ನೋ ಖುಷಿಯಲ್ಲಿ ಕೈ ಮೇಲೆ ಎಂಡಿ ಅಂತ ಹಚ್ಚೆ ಬೇರೆ ಹಾಕಿಸಿಕೊಂಡಿದ್ದಳು. ಆದರೆ ಅವಳ ಖುಷಿ ಜಾಸ್ತಿ ಹೊತ್ತು ಉಳಿದಿಲ್ಲ.

Jothe jotheyali: ನೀವ್ಯಾರು ನಂಗೆ? ನಮ್ಮಿಬ್ಬರ ಸಂಬಂಧ ಏನು? ಅನುಗೆ ಆರ್ಯನ ನೇರ ಪ್ರಶ್ನೆ!

ಅರೆಸ್ಟ್ ಆದ ಕೆಲವೇ ಹೊತ್ತಿಗೆ ಹರ್ಷ ರಿಲೀಸ್ ಆಗಿದ್ದ. ದೂರನ್ನು ಸಾನಿಯಾಳೇ ಸುಟ್ಟು ಹಾಕಿದ್ದರಿಂದ ಹರ್ಷನನ್ನು ಬಿಡುಗಡೆ ಮಾಡಲಾಯಿತು. ಈಗ ಹರ್ಷನ ಸರದಿ. ಸಾನಿಯಾಳನ್ನು ಕೆಲಸದಿಂದ ತೆಗೆಯಲೇಬೇಕು ಎಂದು ಹರ್ಷ ಪ್ಲ್ಯಾನ್ ರೂಪಿಸಿದ್ದ. ಈ ಮೂಲಕ ಆಕೆಯ ವಿರುದ್ಧ ಸೇಡು ತೀರಿಸಿಕೊಳ್ಳಬೇಕು ಎನ್ನುವ ಹಠಕ್ಕೆ ಬಿದ್ದಿದ್ದ. ಈಗ ಹರ್ಷ ಸಾನ್ಯಾ ವಿರುದ್ಧ ಸೇಡು ತೀರಿಸಿಕೊಳ್ಳೋಕೆ ಮಾಸ್ಟರ್ ಪ್ಲ್ಯಾನ್ ಮಾಡಿದ್ದಾನೆ. ಪ್ರಸಿದ್ಧ ವಕೀಲರನ್ನು ಕರೆಸಿ, ಕಂಪೆನಿಯ ನಿಯಮಗಳ ಪ್ರಕಾರವೇ ಸಾನಿಯಾಳನ್ನು ತೆಗೆಸಿ, ತಾನೇ ಎಂಡಿ ಆಗಿದ್ದಾನೆ.

ರತ್ನಮಾಲಾಗೆ ಆರೋಗ್ಯ(Health) ಸರಿ ಇಲ್ಲ ಎಂಬ ಕಾರಣ ನೀಡಿ ತಾನೇ ಎಲ್ಲಾ ಜವಾಬ್ದಾರಿ(Responsibilities)ಗಳನ್ನು ತಾನೇ ವಹಿಸಿಕೊಂಡಿದ್ದಾನೆ. ‘ರತ್ನಮಾಲಾಗೆ ಅನಾರೋಗ್ಯ ಕಾಡಿದೆ. ಇಂತಹ ಸಂದರ್ಭದಲ್ಲಿ ಅವರು ಯಾರ ಹೆಸರಿಗೆ ವಿಲ್ ಬರೆದಿಡುತ್ತಾರೋ ಅವಳು ಈ ಜವಾಬ್ದಾರಿ ವಹಿಸಿಕೊಳ್ಳಬೇಕು. ಒಂದೊಮ್ಮೆ ಅವರು ವಿಲ್ ಬರೆದಿಲ್ಲ ಎಂದಾದರೆ ಅವರ ಮಗನಿಗೆ ಈ ಅಧಿಕಾರ ಸೇರಬೇಕು’ ಎಂದು ವಕೀಲರು ಹೇಳಿದ್ದಾರೆ. ಹೀಗಾಗಿ ತಾನೇ ಎಂಡಿ ಪಟ್ಟಕ್ಕೇರಿದ್ದಾನೆ.

ರಾಮಾಚಾರಿ: ಸಿದ್ಧಿಮಂಗಲ ದಟ್ಟ ಕಾಡಲ್ಲಿ ಚಾರು, ಮಾನ್ಯತಾ ರಾಮಾಚಾರಿ ಕಾಲು ಹಿಡಿಯೋದೊಂದು ಬಾಕಿ!

ಆದರೆ ನಿಜದಲ್ಲಿ ಹರ್ಷನ ಮುಂಗೋಪ(Anger), ಅಹಂಕಾರದ ಅರಿವಿದ್ದ ರತ್ನಮಾಲಾ ತನ್ನ ಆಸ್ತಿಯನ್ನು ಭುವಿ ಹೆಸರಿಗೆ ಬರೆದಿದ್ದಾಳೆ. ಮಾಲಾ ಸಂಸ್ಥೆಗೆ ಒಡತಿಯಾಗಿ ಭುವಿಯನ್ನು ನೇಮಕ ಮಾಡಲು ರತ್ನಮಾಲಾ ನಿರ್ಧರಿಸಿದ್ದಾಳೆ. ಇದು ಹರ್ಷನಿಗೆ ಗೊತ್ತಿಲ್ಲ. ಒಂದೊಮ್ಮೆ ಗೊತ್ತಾದರೆ ಆತ ಹೇಗೆ ಪ್ರತಿಕ್ರಿಯೆ(Response) ನೀಡಬಹುದು ಅನ್ನುವುದನ್ನು ಈಗಲೇ ಊಹಿಸಬಹುದು. ಇತ್ತ ಹರ್ಷ ಭುವಿ ವಿಚ್ಛೇದನ(Divorce)ಕ್ಕೆ ಪ್ಲಾನ್ ಮಾಡುತ್ತಿರುವ ವರೂ ಪ್ಲಾನ್ ಸಕ್ಸಸ್(Sucsess) ಆದರೂ ಆಗಬಹುದೇನೋ.. ಗೊತ್ತಿಲ್ಲ, ಇದಕ್ಕೆ ಮುಂದಿನ ಸಂಚಿಕೆಯಲ್ಲಿ ಉತ್ತರ ಸಿಗಲಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಇಂಥ ಸಣ್ಣಬುದ್ಧಿ ಸರಿನಾ? ಗಿಲ್ಲಿ ನಟ ಬೇಡಿದರೂ, ಗೋಗರೆದರೂ ಕೇಳಲಿಲ್ಲ: ರಘು ವಿರುದ್ಧ ರೊಚ್ಚಿಗೆದ್ದ ಜನತೆ
BBK 12: ಏನ್ರೀ ಇದು ತೆವಲು? ರಜತ್‌, ಅಶ್ವಿನಿ ಗೌಡ, ರಘು ಯಾಕೆ ಹೀಗೆಲ್ಲ ಮಾಡಿದ್ರು?