
ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ( BBK 12 grand finale ) ಯಾರು ಗೆಲ್ಲಲಿದ್ದಾರೆ? ಯಾರಿಗೆ ಯಾವ ಸ್ಥಾನ ಸಿಕ್ಕಿದೆ ಎಂಬ ಪ್ರಶ್ನೆ ಇರುತ್ತದೆ. ಈಗಾಗಲೇ ಬಿಗ್ ಬಾಸ್ ಶೂಟಿಂಗ್ ಮುಗಿದಿದೆ, ಇದಾದ ಬಳಿಕ ಎಡಿಟಿಂಗ್ ಕೂಡ ಆಗಬೇಕಿದೆ. ಹೀಗಿರುವಾಗ ಯಾರಿಗೆ ಕಿರೀಟ ಸಿಕ್ಕಿದೆ?
ಟಾಪ್ 6 ಸ್ಥಾನದಲ್ಲಿ ರಘು, ಅಶ್ವಿನಿ ಗೌಡ, ಕಾವ್ಯ ಶೈವ, ಗಿಲ್ಲಿ ನಟ, ಧನುಷ್ ಗೌಡ, ರಕ್ಷಿತಾ ಶೆಟ್ಟಿ ಇದ್ದಾರೆ. ಇವರಲ್ಲಿ ಯಾರು ವಿನ್ನರ್? ಯಾರು ರನ್ನರ್? ಯಾರಿಗೆ ಮೂರನೇ ಸ್ಥಾನ ಎನ್ನೋದು ರಿವೀಲ್ ಆಗಬೇಕಿದೆ.
ರಘು ಅವರು ಫಸ್ಟ್ ಎಲಿಮಿನೇಟ್ ಆಗಲಿದ್ದಾರೆ ಎನ್ನಲಾಗಿದೆ. ರಘು ಅವರು ಬಿಗ್ ಬಾಸ್ ಮನೆಯಲ್ಲಿ ಎಲ್ಲರ ಜೊತೆ ಚೆನ್ನಾಗಿದ್ದರು, ಸಭ್ಯತೆಯಿಂದ ವರ್ತಿಸಿದ್ದರು. ಎಲ್ಲರಿಗೂ ಅಡುಗೆ ಮಾಡಿಕೊಂಡು, ಟಾಸ್ಕ್‌ಗಳನ್ನು ಕೂಡ ಚೆನ್ನಾಗಿ ಆಡಿದ್ದರು, ಬೇರೆಯವರು ತಪ್ಪು ಮಾಡಿದಾಗ ತಪ್ಪು ಎಂದು ಕೂಡ ಹೇಳಿದ್ದರು. ಅಷ್ಟೇ ಅಲ್ಲದೆ ಧ್ವನಿ ಎತ್ತುವ ಸಮಯ ಬಂದಾಗ ಧ್ವನಿ ಎತ್ತಿದ್ದರು.
ಧನುಷ್ ಗೌಡ ಅವರು ಟಾಸ್ಕ್ ಮಾಸ್ಟರ್ ಎಂದೇ ಹೆಸರು ಪಡೆದಿದ್ದರು. ಆರಂಭದಿಂದ ಇಲ್ಲಿಯವರೆಗೆ ಹೋಲಿಕೆ ಮಾಡಿದರೆ ಈಗಲೇ ಧನುಷ್ ಹೆಚ್ಚಾಗಿ ಕಾಣಿಸಿದ್ದು. ಅಷ್ಟೇ ಅಲ್ಲದೆ ಯಾರ ಜೊತೆಯೂ ಇಲ್ಲ ಸಲ್ಲದ ಮಾತುಗಳನ್ನು ಆಡಿಲ್ಲ, ಕಡಿಮೆ ಮಾತನಾಡಿದರೂ ಕೂಡ ಅರ್ಥಗರ್ಭಿತವಾಗಿ ಮಾತನಾಡುತ್ತಿದ್ದರು. ಇವರು ಐದನೇ ಸ್ಥಾನ ಪಡೆದಿದ್ದಾರೆ ಎನ್ನಲಾಗಿದೆ. ಬಿಗ್ ಬಾಸ್ ಇಂದಿನ ಸಂಚಿಕೆಯಲ್ಲಿ ಅಧಿಕೃತ ಹೇಳಿಕೆ ಸಿಗುವುದು.
ಮನೆಯವರು ಬಂದು, ಹೊರಗಡೆ ವಿಷಯವನ್ನು ಹೇಳಿದಾಗಲೇ ಕಾವ್ಯ ಶೈವ ಅವರು ಔಟ್ ಆಗಬೇಕಿತ್ತು, ಇನ್ನೂ ಯಾಕೆ ಇದ್ದಾರೆ ಎಂದು ಕಿಚ್ಚ ಸುದೀಪ್ ಅವರು ವೇದಿಕೆಯಲ್ಲಿ ಹೇಳಿಕೊಂಡು ಆಶ್ಚರ್ಯಪಟ್ಟಿದ್ದಿದೆ. ಗಿಲ್ಲಿ ಅವರಿಂದ ಕಾವ್ಯ ಕಾಣಿಸಿಕೊಂಡಿದ್ದಾರೆ ಎಂಬ ಮಾತು ಜಾಸ್ತಿ ಬಂದಿತ್ತು. ಆದರೆ ಅವರು ನಾಲ್ಕನೇ ಸ್ಥಾನ ಪಡೆದಿದ್ದಾರೆ ಎನ್ನಲಾಗಿದೆ.
ಬಿಗ್ ಬಾಸ್ ಮನೆಯಲ್ಲಿ ಜಗಳ, ಟಾಸ್ಕ್ ಎಲ್ಲದರಲ್ಲಿಯೂ ಸೈ ಎನಿಸಿಕೊಂಡಿದ್ದ ಅಶ್ವಿನಿ ಗೌಡ ಆರಂಭದಲ್ಲಿ ಅವರ ಆಟ, ನಡೆ, ನುಡಿ ಎಲ್ಲವೂ ನಕಾರಾತ್ಮಕ ಪ್ರತಿಕ್ರಿಯೆ ಪಡೆದಿತ್ತು. ಇವರು ಮಹಿಳಾಮಣಿಯಾಗಿ ಸಖತ್ ಆಗಿ ಆಟ ಆಡಿದರು, ಆಮೇಲೆ ಅವರ ವರ್ತನೆ ಬೇರೆಯದೇ ಆಯಿತು. ಇವರು ಮೂರನೇ ಸ್ಥಾನ ಪಡೆಯಲಿದ್ದಾರೆ ಎನ್ನಲಾಗಿದೆ.
ಬಹುತೇಕರು ಹೇಳುವಂತೆ, ಬಹುತೇಕರ ಇಚ್ಛೆಯಂತೆ ಗಿಲ್ಲಿ ನಟ ಅವರೇ ವಿನ್ನರ್ ಎನ್ನಲಾಗಿದೆ. ಅಂದಹಾಗೆ ರಕ್ಷಿತಾ ಶೆಟ್ಟಿ ಅವರು ರನ್ನರ್ ಅಂತೆ. ಗೆದ್ದವರಿಗೆ 50 ಲಕ್ಷ ರೂಪಾಯಿ ಕ್ಯಾಶ್, ಒಂದು ಕಾರ್ ಸೇರಿದಂತೆ ಇನ್ನಿತರ ಪ್ರೈಜ್ ಕೂಡ ಸಿಗುವುದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.