ಅಶ್ವಿನಿ ಗೌಡ, ಧ್ರುವಂತ್‌ಗೆ ಕಿಚ್ಚನ ಚಪ್ಪಾಳೆ; ಗಿಲ್ಲಿ ನಟ, ರಕ್ಷಿತಾ ಶೆಟ್ಟಿ ಬಳಿ ಕೊಡಿಸಿದ್ಯಾಕೆ? ಕಾಕತಾಳಿಯವೋ?

Published : Jan 11, 2026, 10:12 AM IST
BBK 12 Kicchana Chappale

ಸಾರಾಂಶ

Bigg Boss Gilli Nata: ಬಿಗ್‌ ಬಾಸ್‌ ಕನ್ನಡ 12 ಶೋನಲ್ಲಿ ಕೊನೆಯ ಕಿಚ್ಚನ ಪಂಚಾಯಿತಿಯಲ್ಲಿ ಅಶ್ವಿನಿ ಗೌಡ, ಧ್ರುವಂತ್‌ಗೆ ಕಿಚ್ಚನ ಚಪ್ಪಾಳೆ ಸಿಕ್ಕಿದೆ. ಸೋಶಿಯಲ್‌ ಮೀಡಿಯಾದಲ್ಲಿ ಈ ಬಗ್ಗೆ ಭಾರೀ ಚರ್ಚೆ ಆಗ್ತಿದೆ. ಹೀಗಿರುವಾಗ ಗಿಲ್ಲಿ ನಟ, ರಕ್ಷಿತಾ ಅವರೇ ಆ ಕಿಚ್ಚನ ಚಪ್ಪಾಳೆ ಒಪನ್‌ ಮಾಡಿದ್ದು ಯಾಕೆ? 

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ( BBK 12 ) ಕಿಚ್ಚ ಸುದೀಪ್‌ ಅವರು ಅಶ್ವಿನಿ ಗೌಡ, ಧ್ರುವಂತ್‌ ಅವರಿಗೆ ಕಿಚ್ಚನ ಚಪ್ಪಾಳೆಯನ್ನು ನೀಡಿದ್ದಾರೆ. ಇವರಿಬ್ಬರಿಗೂ ಚಪ್ಪಾಳೆ ತಟ್ಟಿದ್ದಕ್ಕೆ ಅನೇಕರು ಬೇಸರವನ್ನು ಹೊರಹಾಕಿದ್ದಾರೆ. ಈ ಮಧ್ಯೆ ಗಿಲ್ಲಿ ನಟ, ರಕ್ಷಿತಾ ಅವರೇ ಹೇಗೆ ಕಿಚ್ಚನ ಚಪ್ಪಾಳೆ ಬಾಕ್ಸ್‌ ಅನ್‌ಬಾಕ್ಸ್‌ ಮಾಡಿಸಿದರು ಎಂಬ ಪ್ರಶ್ನೆ ಅನೇಕರಿಗೆ ಕಾಡಿದೆ. ಕಿಚ್ಚ ಸುದೀಪ್‌ ಅವರು ಹೇಳಿದಂತೆ ಧನುಷ್‌ ಗೌಡ ಅವರು ಸ್ಟೋರ್‌ ರೂಮ್‌ನಿಂದ ಕಿಚ್ಚನ ಚಪ್ಪಾಳೆ ಬಾಕ್ಸ್‌ ತಂದಿದ್ದಾರೆ.

ಕಿಚ್ಚ ಸುದೀಪ್‌ ಯಾಕೆ ಧ್ರುವಂತ್‌ಗೆ ಚಪ್ಪಾಳೆ ಕೊಟ್ಟರು?

ಕಿಚ್ಚ ಸುದೀಪ್‌ ಅವರು, “ಯಾರು ವಾರದಲ್ಲಿ ಚೆನ್ನಾಗಿ ಆಡ ಆಡಿದ್ದಾರೋ ಅವರಿಗೆ ನಾನು ಕಿಚ್ಚನ ಚಪ್ಪಾಳೆಯನ್ನು ಕೊಟ್ಟಿದ್ದೇನೆ. ಈ ಬಾರಿ ನಾನು ಇಡೀ ಸೀಸನ್‌ಗೆ ವಿಶೇಷವಾಗಿ ಚಪ್ಪಾಳೆಯನ್ನು ಕೊಡುತ್ತಿದ್ದೇನೆ. ಸಹಜವಾಗಿ ಆ ವಾರ ಓಕೆ, ಆದರೆ ಇಡೀ ಸೀಸನ್‌ ನೋಡಿದಾಗ ಈ ವ್ಯಕ್ತಿ ಆಡಿದ ರೀತಿ, ಮಾತನಾಡಿರುವುದು, ಮನರಂಜನೆ ನೀಡುವುದನ್ನು ನೋಡಿದರೆ ಅತಿ ಹೆಚ್ಚು ಕೊಡುಗೆಯಾಗಿದೆ, ಆಟ ಅರ್ಥವನ್ನು ಮಾಡಿಕೊಂಡಿರೋದು ಲೇಟ್‌ ಆಯ್ತು, ಗೇಮ್‌ ಅರ್ಥ ಮಾಡಿಕೊಳ್ಳಲು ಒದ್ದಾಡಿದರು, ಗೇಮ್‌ ಆಡಲು ಒದ್ದಾಡಿದರು, ಅವರನ್ನು ಅವರು ಅರ್ಥ ಮಾಡಿಕೊಳ್ಳಲು, ಬೇರೆಯವರನ್ನು ಅರ್ಥ ಮಾಡಿಕೊಳ್ಳಲು ಒದ್ದಾಡಿದರು. ಈ ಜರ್ನಿಯಲ್ಲಿ ನೀಡಿದ ಕೊಡುಗೆ ದೊಡ್ಡದು ಎಂದು ಹೇಳಿದ್ದಾರೆ. ಇದು ಧ್ರುವಂತ್‌ಗೆ ಸೇರುವುದು ಎಂದು ಸ್ಪರ್ಧಿಗಳಿಗೆ ಗೊತ್ತೇ ಇರೋದಿಲ್ಲ. ಯಾರಾದರೂ ಬಂದು ಕಿಚ್ಚನ ಚಪ್ಪಾಳೆ ಬಾಕ್ಸ್‌ ಒಪನ್‌ ಮಾಡಿ ಎಂದು ಹೇಳುತ್ತಾರೆ. ಆಗ ರಕ್ಷಿತಾ ಅವರು ನಾನು ಒಪನ್‌ ಮಾಡ್ತೀನಿ ಎನ್ನುತ್ತಾರೆ. ರಕ್ಷಿತಾ ಅವರು ಒಪನ್‌ ಮಾಡ್ತಾರೆ.

“ಮುಂದಿನ ವಾರ ಎಲ್ಲರೂ ಬರುತ್ತೀರಿ, ಒಂದು ಸಲ ಜರ್ನಿ ವಿಟಿ ಹಾಕಿದರೆ ನಿಜಕ್ಕೂ ವಿಶೇಷವಾಗಿರುತ್ತದೆ, ಮನರಂಜನೆ ನೀಡುತ್ತದೆ. ಇಡೀ ಸೀಸನ್‌ಗೆ ನಾನು ನೀಡುವ ಕಿಚ್ಚನ ಚಪ್ಪಾಳೆ ಧ್ರುವಂತ್‌ಗೆ ಹೋಗುತ್ತದೆ” ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.

“ನೀವು ಸರಿ, ತಪ್ಪು ಎನ್ನೋದಲ್ಲ, ತಪ್ಪು ಮಾಡಿದ್ದೀರಿ, ಸರಿ ಮಾಡಿದ್ದೀರಿ, ಗೆದ್ದಿದ್ದೀರಿ, ಬಿದ್ದಿದ್ದೀರಿ, ಜಗಳವನ್ನು ಆಡಿದ್ದೀರಿ, ನಿಮಗೆ ಗೊತ್ತಿಲ್ಲದೆ ಜನರನ್ನು ಮನರಂಜಿಸಿದ್ದೀರಿ. ಮೊದಲ ಬಾರಿಗೆ ನಾನು ಚಪ್ಪಾಳೆಯನ್ನು ಕೊಡುತ್ತಿದ್ದೇನೆ” ಎಂದು ಕಿಚ್ಚ ಸುದೀಪ್‌ ಹೇಳಿದ್ದಾರೆ.

ಅಶ್ವಿನಿ ಗೌಡಗೆ ಚಪ್ಪಾಳೆ ಯಾಕೆ?

ಮತ್ತೊಮ್ಮೆ ಸ್ಟೋರ್‌ ರೂಮ್‌ನಲ್ಲಿ ಕಿಚ್ಚನ ಚಪ್ಪಾಳೆ ಬಾಕ್ಸ್‌ ಬಂದಿತ್ತು. ಈ ಸೀಸನ್‌ನ ಕಿಚ್ಚನ ಚಪ್ಪಾಳೆ ಬಾಕ್ಸ್‌ನ್ನು ಯಾರು ಒಪನ್‌ ಮಾಡ್ತೀರಿ ಎಂದು ಪ್ರಶ್ನೆ ಮಾಡಿದ್ದಾರೆ. ಆಗ ಗಿಲ್ಲಿ ನಟ, ಧ್ರುವಂತ್‌ ಅವರು ಕೈ ಎತ್ತಿದ್ದಾರೆ, ಆಗ ಸುದೀಪ್‌ ಅವರು ಗಿಲ್ಲಿಗೆ ಒಪನ್‌ ಮಾಡಿ ಅಂತಾರೆ. ಆಗಲೂ ಕೂಡ ಅಶ್ವಿನಿ ಗೌಡ ಅವರಿಗೆ ಚಪ್ಪಾಳೆ ಸಿಗುತ್ತದೆ ಎಂದು ಯಾರೂ ಕೂಡ ಭಾವಿಸಿರಲಿಲ್ಲ.

ಕಿಚ್ಚ ಸುದೀಪ್‌ ಅವರು, “ಪ್ರತಿಯೊಬ್ಬರು ಆಟವನ್ನು ನೋಡಿ ಎಲ್ಲರೂ ಮೆಚ್ಚಿದ್ದಾರೆ, ಒಪ್ಪಿದ್ದಾರೆ. ಇಡೀ ಮನೆ ಮೊದಲನೇ ಬಾರಿಗೆ ಒಮ್ಮತದಿಂದ ನಿರ್ಧಾರಕ್ಕೆ ಬಂದು ನಿಮ್ಮ ಆಟವನ್ನು ಮೆಚ್ಚುತ್ತದೆ. ಎಷ್ಟೋ ಜನರ ಜೊತೆ ನಿಮ್ಮ ಜೊಎ ಜಗಳ ಆಗಿದೆ, ಭಿನ್ನಾಭಿಪ್ರಾಯ ಬಂದಿದೆ. ಎಷ್ಟೋ ವಾರಗಳಿಂದ ನಾನು ಕಿಚ್ಚನ ಚಪ್ಪಾಳೆ ಕೊಡೋಕೆ ಇಷ್ಟಪಟ್ಟಿರಲಿಲ್ಲ. ಎಷ್ಟೋ ಬಾಕ್ಸ್‌ ಮಾಡಿಸಿಟ್ಟರೂ ಕೂಡ ನನಗೆ, ಕೊಡೋಕೆ ಇಷ್ಟ ಇರಲಿಲ್ಲ” ಎಂದು ಹೇಳಿದ್ದಾರೆ. “ಎಷ್ಟೇ ತೊಂದರೆ ಬಂದರೂ ನಿಮ್ಮ ಶಕ್ತಿಯನ್ನು ಹಾಕಿ ಆಡಿದ್ರಿ. ಇದೇ ಬಿಗ್‌ ಬಾಸ್.‌ ಯಾವ ರೀತಿಯಲ್ಲಿ ಗೇಮ್‌ ಎಂಡ್‌ ಮಾಡಿದ ಎನ್ನೋದು ಮುಖ್ಯ. ಮಾತು ಸಹಜ, ಗೇಮ್‌ ಅರ್ಥ ಆಗದೆ ಇರೋದು ಸಹಜ, ತಪ್ಪು ಎಂದು ಗೊತ್ತಾದಮೇಲೆ ತಿದ್ದಿಕೊಳ್ಳೋದು, ಇಗೋ ಇಲ್ಲದೆ ಎಲ್ಲದನ್ನು ಸ್ವೀಕರಿಸೋದು ಮುಖ್ಯ” ಎಂದು ಹೇಳಿದ್ದಾರೆ.

ಗಿಲ್ಲಿ ನಟ, ರಕ್ಷಿತಾ ಶೆಟ್ಟಿ ಅವರಿಗೆ ಕಿಚ್ಚನ ಚಪ್ಪಾಳೆ ಸಿಕ್ಕಿದೆ. ಗಿಲ್ಲಿ ನಟ ಅವರು ಜಗಳ ಆದಾಗೆಲ್ಲ ಧ್ರುವಂತ್‌, ಅಶ್ವಿನಿಗೆ ನನಗೆ ಕಿಚ್ಚನ ಚಪ್ಪಾಳೆ ಸಿಕ್ಕಿದೆ ಎನ್ನುತ್ತಿದ್ದರು. ಈಗ ಗಿಲ್ಲಿ ನಟ, ರಕ್ಷಿತಾರಿಂದಲೇ ಅವರ ಕಿಚ್ಚನ ಚಪ್ಪಾಳೆ ಕೊಡಿಸಿರೋದು ವಿಪರ್ಯಾಸ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಮನೆಮಂದಿಗೆ ಚೆಲ್ಲಾಟ, ಗಿಲ್ಲಿ ನಟನಿಗೆ ಪ್ರಾಣಸಂಕಟ; ಈ ಎಪಿಸೋಡ್‌ ನನ್ನ ಮರೆತುಬಿಡಿ, ಪ್ಲೀಸ್..!
‘ಕರ್ಣ’ ಧಾರಾವಾಹಿಯಿಂದ Namratha Gowdaಗೆ ಮೋಸ ಆಯ್ತ? ವೀಕ್ಷಕರು ಹೇಳ್ತಿರೋದೇನು?