Amruthadhaare Serial: ಇದು ಕನಸಲ್ಲ, ಗೌತಮ್‌-ಭೂಮಿ ಒಂದಾದ್ರು, ಇಡೀ ಫ್ಯಾಮಿಲಿ ಒಂದಾಯ್ತು! ಇಷ್ಟು ಬೇಗ ಕ್ಲೈಮ್ಯಾಕ್ಸ್?

Published : Jan 11, 2026, 07:58 AM IST
Amruthadhaare Serial

ಸಾರಾಂಶ

Amruthadhaare Kannada Serial Episode: ಇದು ಕನಸಲ್ಲ, ಹೌದು, ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್‌ ಹಾಗೂ ಭೂಮಿಕಾ ಕೊನೆಗೂ ಒಂದಾಗಿದ್ದಾರೆ. ಸದಾಶಿವ ಕೂಡ ಎಂಟ್ರಿ ಕೊಟ್ಟಿದ್ದು, ಇಡೀ ಫ್ಯಾಮಿಲಿ ಒಂದಾಗಿದೆ. ಈ ಪ್ರೇಮೋತ್ಸವದಲ್ಲಿ ಮತ್ತೆ ಏನಾದರೂ ಟ್ವಿಸ್ಟ್‌ ಇರಬಹುದಾ? 

ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್‌ ಹಾಗೂ ಭೂಮಿಕಾ ದೂರ ಆಗಿ ಆರು ವರ್ಷಗಳೇ ಆಗಿವೆ. ಈಗ ಒಂದೇ ವಠಾರದಲ್ಲಿದ್ದರೂ ಕೂಡ, ಬೇರೆ ಬೇರೆ ಮನೆಯಲ್ಲಿ ಬದುಕುತ್ತಿದ್ದಾರೆ. ಹೀಗಿರುವಾಗ ಹೊಸ ಟ್ವಿಸ್ಟ್‌ ಎದುರಾಗಿದೆ. ವೀಕ್ಷಕರು ಬಯಸುತ್ತಿದ್ದ ಕ್ಷಣ ಬಂದಿದೆ.

ಆಕಾಶ್-ಸದಾಶಿವನ ಭೇಟಿ

ಈ ಹಿಂದೆಯೇ ಭೂಮಿ ತಂದೆ ಸದಾಶಿವ ಹಾಗೂ ಭೂಮಿ ಮಗ ಆಕಾಶ್‌ ಪರಿಚಯ ಆಗಿತ್ತು. ಆಕಾಶ್‌ ಕಂಡರೆ ಸದಾಶಿವಗೆ ತುಂಬ ಇಷ್ಟ, ಆದರೆ ಅವನೇ ನನ್ನ ಮೊಮ್ಮಗ ಎನ್ನೋದು ಗೊತ್ತಿರಲಿಲ್ಲ. ಇವರಿಬ್ಬರು ಒಟ್ಟಿಗೆ ಪಾರ್ಕ್‌ನಲ್ಲಿ ಆಟ ಆಡೋದನ್ನು ಭೂಮಿ ಮರೆಯಲ್ಲಿ ನಿಂತು ನೋಡಿ ಖುಷಿಪಟ್ಟಿದ್ದಳು. ಆ ತಾತ ನನ್ನ ರಿಯಲ್ ತಾತ ಎನ್ನೋದು ಕೂಡ‌ ಆಕಾಶ್‌ಗೆ ಗೊತ್ತಿರಲಿಲ್ಲ.

ಕನಸು ಕಾಣುತ್ತಿದ್ದ ಸದಾಶಿವ ಕುಟುಂಬ

ಸದಾಶಿವ-ಆಕಾಶ ಭೇಟಿಯಾಗಿರೋದು ಗೌತಮ್‌, ಭಾಗ್ಯಗೆ ಗೊತ್ತಿತ್ತು. ಆಕಾಶ್‌ ಕಂಡರೆ ಸದಾಶಿವನಿಗೆ ತುಂಬ ಇಷ್ಟ, ಸದಾಶಿವ ಮನೆಯಲ್ಲಿ ಆಕಾಶ್‌ ಫೋಟೋ ಕೂಡ ಇತ್ತು. ಯಾರೇ ಕಂಡರೂ ಕೂಡ ಸದಾಶಿವ ದಂಪತಿ ಮಾತ್ರ ಆಕಾಶ್‌ನನ್ನು ಹೊಗಳುತ್ತಿದ್ದರು, ನಮ್ಮ ಮೊಮ್ಮಗ ಕೂಡ ಹೀಗೆ ಇರಬಹುದು, ಇಷ್ಟು ದೊಡ್ಡವನಾಗಿ ಇರಬಹುದು ಎಂದು ಕನಸು ಕಾಣುತ್ತಿದ್ದರು.

ಗಂಡನ ಜೊತೆ ಬದುಕಲು ಭೂಮಿ ರೆಡಿ

ಅಂದಹಾಗೆ ಮತ್ತೆ ಆಕಾಶ್‌, ಸದಾಶಿವನ ಭೇಟಿ ಆಗಿದೆ. ಸದಾಶಿವನನ್ನು ಆಕಾಶ್‌ ವಠಾರಕ್ಕೆ ಕರೆದುಕೊಂಡು ಬಂದಿದ್ದಾನೆ. ಅಲ್ಲಿ ಭೂಮಿಕಾ-ಸದಾಶಿವನ ಮುಖಾಮುಖಿಯಾಗಿದೆ. ಆರು ವರ್ಷಗಳ ಬಳಿಕ ಅಪ್ಪ-ಮಗಳು ಒಂದಾಗಿದ್ದಾರೆ, ಮಾತನಾಡಿಕೊಂಡಿದ್ದಾರೆ. ಗೌತಮ್‌ನಿಂದ ದೂರ ಇದ್ದಿದ್ದಕ್ಕೆ ಸದಾಶಿವ ಮಗಳಿಗೆ ಬುದ್ಧಿ ಹೇಳಿದ್ದಾನೆ. ಅಲ್ಲಿಗೆ ಭೂಮಿ ಕೂಡ ಗಂಡನ ಜೊತೆ ಬದುಕುವ ಯೋಚನೆ ಮಾಡಿದ್ದಾಳೆ.

ಮಗಳಿಗೆ ಬುದ್ಧಿ ಹೇಳಿದ ಸದಾಶಿವ

ಮಗಳೇ, ತನ್ನ ಸರ್ವಸ್ವವನ್ನೂ ತ್ಯಾಗ ಮಾಡಿ, ನಿನಗೋಸ್ಕರ ಕಾಯುತ್ತಿದ್ದಾರೆ, ಇನ್ನು ಹಠ ಮಾಡಬೇಡ, ಒಪ್ಪಿಕೊಂಡು ಬಿಡು ಎಂದು ಸದಾಶಿವ ಹೇಳಿದ್ದಾನೆ. ಆಮೇಲೆ ಭೂಮಿ ಕೂಡ ಒಪ್ಪಿಕೊಂಡಿದ್ದಾಳೆ.

ಒಂದಾದ ಪ್ರೇಮಿಗಳು

ಏಕಾಂತ ಜಾಗದಲ್ಲಿ ಭೂಮಿ, ಗೌತಮ್‌ ಭೇಟಿ ಆಗುತ್ತಾರೆ. ಆಗ ಭೂಮಿ, “ಇನ್ನು ಸಾಕು ಗೌತಮ್‌ ಅವರೇ, ಇನ್ನು ದೂರ ಇರೋದು ಬೇಡ, ಕೊನೆ ಉಸಿರು ಇರೋವರೆಗೂ ಒಟ್ಟಿಗೆ ಬಾಳೋಣ” ಎಂದು ಹೇಳುತ್ತಾಳೆ. ಆಗ ಗೌತಮ್‌, “ನನ್ನ ಮನಸ್ಸು ನೀವು ನನ್ನನ್ನು ಎಷ್ಟು ಪ್ರೀತಿ ಮಾಡ್ತೀರಾ ಅಂತ ಹೇಳುತ್ತಲಿತ್ತು, ಒಂದಲ್ಲ ಒಂದು ದಿನ ನೀವು ನನ್ನ ಒಪ್ಪಿಕೊಳ್ತೀರಾ ಅಂತ ಗೊತ್ತಿತ್ತು” ಎಂದು ಹೇಳಿದ್ದಾನೆ. ಅಲ್ಲಿಗೆ ಗಂಡ-ಹೆಂಡತಿ ಒಂದಾಗಿದ್ದಾರೆ. ಇದು ಕನಸಲ್ಲ, ಇದೇ ಸತ್ಯ.

ಗೌತಮ್‌ ಹಾಗೂ ಭೂಮಿಕಾ ಒಂದಾಗಿದ್ದು ನೋಡಿ ವೀಕ್ಷಕರು ಫುಲ್‌ ಖುಷಿಯಾಗಿದ್ದಾರೆ. ಈ ದಿನಕ್ಕೋಸ್ಕರ ಬಹುತೇಕರು ಕಾಯುತ್ತಿದ್ದರು. ಮುಂದಿನ ದಿನಗಳಲ್ಲಿ ಕಥೆ ಹೇಗೆ ಸಾಗಲಿದೆ ಎಂದು ಕಾದು ನೋಡಬೇಕಿದೆ.

ಪಾತ್ರಧಾರಿಗಳು

ಗೌತಮ್-‌ ರಾಜೇಶ್‌ ನಟರಂಗ

ಭೂಮಿಕಾ- ಛಾಯಾ ಸಿಂಗ್‌

ಸದಾಶಿವ-ಸಿಹಿ ಕಹಿ ಚಂದ್ರು

ಆಕಾಶ್-ದುಷ್ಯಂತ್‌ ಚಕ್ರವರ್ತಿ

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಮದ್ವೆ ಬಳಿಕ ಕೇಳ್ತಿದ್ದ ಆ ಪ್ರಶ್ನೆಗೆ ನಟಿ ವೈಷ್ಣವಿ ಗೌಡ 7 ತಿಂಗಳಿಗೆ ಕೊಟ್ಟರು ಉತ್ತರ! ಫ್ಯಾನ್ಸ್​ ಫುಲ್​ ಖುಷ್​
BBK 12: ಕೆಲ ವಿಷಯಕ್ಕೆ ಕಿಚ್ಚನ ಚಪ್ಪಾಳೆಗೆ ಧ್ರುವಂತ್‌ ಯೋಗ್ಯ; ಇನ್ನೂ ಕೆಲವಕ್ಕೆ ಅಲ್ಲ: ಕಂಪೆನಿ HR