
ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಗಿಲ್ಲಿ ನಟ ಹಾಗೂ ಕಾವ್ಯ ಶೈವ ನಡುವೆ ಮನಸ್ತಾಪ ಬಂದಿತ್ತು. ಕಾವ್ಯ ಅವರಿಗೆ ಗಿಲ್ಲಿ ಟಾಂಟ್ ಕೊಡುತ್ತಲೇ ಇದ್ದರು. ಅದಾದ ಮೇಲೆ ಗಿಲ್ಲಿ ಅವರೇ ಕಾವ್ಯ ಅವರನ್ನು ಸಮಾಧಾನ ಮಾಡಲು ಪ್ರಯತ್ನಿಸಿದ್ದರು, ಮಾತನಾಡಿಸುತ್ತಲೇ ಇದ್ದರು. ಇನ್ನು ಆಟ ಆಡಿದ ಬಳಿಕ ಅವರ ಅನಾರೋಗ್ಯ ಹೆಚ್ಚಾಗಿದೆ.
ಬಿಗ್ ಬಾಸ್ ಶೋನಲ್ಲಿ ಕಾವ್ಯ ಶೈವ ಅವರು ಟವರ್ ಟಾಸ್ಕ್ ಆಡಿದ್ದರು. ಕಾವ್ಯ ಅವರೇ ಗಿಲ್ಲಿ ಬಳಿ ಬಂದು, ನನಗೆ ಸಪೋರ್ಟ್ ಮಾಡ್ತೀಯಾ ಎಂದು ಪ್ರಶ್ನೆ ಮಾಡಿದ್ದರು. ಅದಿಕ್ಕೆ ಗಿಲ್ಲಿ ಕೂಡ ಒಪ್ಪಿದ್ದರು. ಉಳಿದ ಟೈಮ್‌ನಲ್ಲಿ ಗಿಲ್ಲಿ ಜೊತೆ ಮಾತನಾಡದ ಕಾವ್ಯಾ, ಆಟದ ವಿಚಾರಕ್ಕೆ ಗಿಲ್ಲಿ ಜೊತೆ ಮಾತನಾಡಲು ಬಂದಿದ್ದರು.
ಕಾವ್ಯ ಅವರು ಕೋಲುಗಳನ್ನು ಬಳಸಿ, ಟವರ್ ಹತ್ತಬೇಕು, ಆ ಕೋಲುಗಳು ಸ್ವಿಮ್ಮಿಂಗ್ ಪೂಲ್‌ನಲ್ಲಿ ಬಿದ್ದಿವೆ, ಅದನ್ನು ಗಿಲ್ಲಿ ಎತ್ತಿಕೊಂಡು ಬರಬೇಕಿತ್ತು. ಅನಾರೋಗ್ಯವಿದ್ದರೂ ಕೂಡ ಗಿಲ್ಲಿ ನಟ ಅವರು ಕಾವ್ಯಗೋಸ್ಕರ ಆಟ ಆಡಿದ್ದರು.
ಕಾವ್ಯ ಶೈವ ಅವರು ಆಟದ ಬಳಿಕ ಗಿಲ್ಲಿಗೆ ಥ್ಯಾಂಕ್ಸ್ ಹೇಳಿದ್ದಾರೆ. ಆಗ ಗಿಲ್ಲಿ Uneasy Feel ಮಾಡ್ತಿರೋದು ಕಾವ್ಯಾಗೆ ಗೊತ್ತಾಗಿದೆ. ಏನಾಯ್ತು ಎಂದು ಕೇಳಿದಾಗ ಗಿಲ್ಲಿ ಅವರು ವಾಂತಿ ಬರೋ ಹಾಗೆ ಆಗಿದೆ ಎಂದಿದ್ದಾರೆ. ಆಮೇಲೆ ರಕ್ಷಿತಾ ಅವರು ಲಿಂಬು ಜ್ಯೂಸ್ ಕೊಟ್ಟಿದ್ದಾರೆ.
24/7 ಲೈವ್ ನೋಡಿದ ವೀಕ್ಷಕರು, ಗಿಲ್ಲಿ ನಟ ಅವರಿಗೆ ಜ್ವರ ಇತ್ತು, ಆದರೂ ಆಟ ಆಡಿದರು ಎಂಬ ಪೋಸ್ಟ್ ಹಂಚಿಕೊಳ್ಳುತ್ತಿದ್ದಾರೆ. ಅನಾರೋಗ್ಯವಿದ್ದರೂ ಕೂಡ ಗಿಲ್ಲಿ ಸಪೋರ್ಟ್ ಮಾಡೋದು ಬಿಡಲಿಲ್ಲ ಎಂದು ಹೇಳುತ್ತಿದ್ದಾರೆ.
ಯಾರ ದೃಷ್ಟಿ ಬಿತ್ತೋ ಏನೋ! ಗಿಲ್ಲಿ ನಟ ಅವರಿಗೆ ಅನಾರೋಗ್ಯ ಕಾಡಿದೆ. ಬಿಗ್ ಬಾಸ್ ಟೀಂನಲ್ಲಿ ಮೆಡಿಕಲ್ ವ್ಯವಸ್ಥೆ ಚೆನ್ನಾಗಿದ್ದು, ಗಿಲ್ಲಿ ಅವರಿಗೆ ಚಿಕಿತ್ಸೆ ನೋಡುತ್ತಾರೆ. ಜನವರಿ 17, 18ರಂದು ಫಿನಾಲೆ ನಡೆಯಲಿದೆ, ಅಷ್ಟೊತ್ತಿಗೆ ಗಿಲ್ಲಿ ರೆಡಿ ಆಗುತ್ತಾರೆ.
ಯಾರು ಫಿನಾಲೆಗೆ ಹೋಗಲಿದ್ದಾರೆ ಎಂದು ಕಾದು ನೋಡಬೇಕಿದೆ. ಅಂದಹಾಗೆ ಟಾಪ್ 6 ಕಂಟೆಂಡರ್ ಎಂದು ಟಾಸ್ಕ್ ಕೂಡ ನಡೆಯುತ್ತಿದೆ. ರಘು, ಅಶ್ವಿನಿ ಗೌಡ, ರಕ್ಷಿತಾ ಶೆಟ್ಟಿ, ಕಾವ್ಯ ಶೈವ, ರಾಶಿಕಾ ಶೆಟ್ಟಿ, ಧ್ರುವಂತ್, ಧನುಷ್ ಗೌಡ, ಗಿಲ್ಲಿ ನಟ ಅವರು ಸದ್ಯ ಆಟದ ರೇಸ್‌ನಲ್ಲಿದ್ದು ಯಾರು ಈ ವಾರ ಹೊರಬರ್ತಾರೆ ಎಂದು ಕಾದು ನೋಡಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.