ಅಶ್ವಿನಿ, ರಘು, ಕಾವ್ಯಾ ಮಿಡ್‌ವೀಕ್‌ ಎಲಿಮಿನೇಷನ್‌ನಲ್ಲಿ ಹೋದವರ್ಯಾರು? ನಿಜಕ್ಕೂ ಎಲಿಮಿನೇಷನ್‌ ಆಗಿದ್ಯಾ?

Published : Jan 08, 2026, 06:45 PM IST
Bigg Boss Kannada Season 12 Mid Week Eliminiation

ಸಾರಾಂಶ

ಬಿಗ್‌ಬಾಸ್‌ ಕನ್ನಡ 12ನೇ ಆವೃತ್ತಿ ಮುಕ್ತಾಯದ ಹಂತದಲ್ಲಿದ್ದು, ಈ ಸೀಸನ್‌ನಲ್ಲಿ ಮೊದಲ ಬಾರಿಗೆ ಮಿಡ್‌ವೀಕ್‌ ಎಲಿಮಿನೇಷನ್‌ ನಡೆದಿದೆ ಎಂಬ ಸುದ್ದಿ ಹರಿದಾಡುತ್ತಿದೆ. ರಘು, ಅಶ್ವಿನಿ ಅಥವಾ ಕಾವ್ಯಾ ಹೊರಬಿದ್ದಿದ್ದಾರೆ ಎಂದು ಚರ್ಚೆಯಾಗುತ್ತಿದೆಯಾದರೂ, ಇದು ಕೇವಲ ವದಂತಿ ಎನ್ನುವ ಮಾತುಗಳೂ ಕೇಳಿಬರುತ್ತಿವೆ.

ನ್ನಡ ಆವೃತ್ತಿಯ ಬಿಗ್‌ಬಾಸ್‌ ಸೀಸನ್‌ ಮುಗಿಯುವ ಹಂತ ಬಂದಿದೆ. ಇನ್ನೇನು ಎರಡು ವಾರಗಳಲ್ಲಿ 12ನೇ ಆವೃತ್ತಿಯ ಬಿಗ್‌ಬಾಸ್‌ ಮುಗಿಯಲಿದೆ. ಆದರೆ, ಇಷ್ಟು ವರ್ಷಗಳ ಕಾಲ ನಡೆದ ಬಿಗ್‌ಬಾಸ್‌ನಲ್ಲಿ ಇದ್ದ ಪ್ರಮುಖ ಎಲಿಮಿನೇಷನ್‌ ಪ್ಯಾಟರ್ನ್‌ ಈ ಆವೃತ್ತಿಯಲ್ಲಿ ಇಲ್ಲಿಯವರೆಗೂ ದಾಖಲಾಗಿಲ್ಲ. ವಿಕೆಂಡ್‌ ಎಲಿಮಿನೇಷನ್‌, ಡಬಲ್‌ ಎಲಿಮಿನೇಷನ್‌ ಹಾಗೂ ಮಿಡ್‌ವೀಕ್‌ ಎಲಿಮಿನೇಷನ್‌ ಅನ್ನು ಸಾಮಾನ್ಯವಾಗಿ ಎಲ್ಲಾ ಆವೃತ್ತಿಯ ಬಿಗ್‌ಬಾಸ್‌ನಲ್ಲಿ ಮಾಡಲಾಗಿದೆ. ಆದರೆ, ಈ ಬಾರಿಯ ಬಿಗ್‌ಬಾಸ್‌ ಮುಗಿಯುವ ಹಂತ ಬಂದರೂ ಮಿಡ್‌ವೀಕ್‌ ಎಲಿಮಿನೇಷನ್‌ ಮಾತ್ರ ಈವರೆಗೂ ಆಗಿಲ್ಲ.

ಬಿಗ್‌ಬಾಸ್ ಮೂಲಗಳ ಪ್ರಕಾರ ಬಿಗ್‌ಬಾಸ್‌ ಆವೃತ್ತಿಯ ಮಿಡ್‌ವೀಕ್‌ ಎಲಿಮಿನೇಷನ್‌ ಅಂದರೆ ವಾರದ ಮಧ್ಯದಲ್ಲಿ ಬಿಗ್‌ಬಾಸ್‌ನಿಂದ ಏಕಾಏಕಿಯಾಗಿ ಹೊರಬೀಳುವ ಪ್ರಕ್ರಿಯೆ ಈ ವಾರದಲ್ಲಿ ನಡೆದಿದೆ.

ಸೋಶಿಯಲ್‌ ಮೀಡಿಯಾದಲ್ಲಿ ಚರ್ಚೆ ಆಗುತ್ತಿರುವ ಪ್ರಕಾರ ಮಿಡ್‌ವೀಕ್‌ ಎಲಿಮಿನೇಷನ್‌ನಲ್ಲಿ ಮ್ಯೂಟಂಟ್‌ ರಘು ಮನೆಯಿಂದ ಹೊರಬಿದ್ದಿದ್ದಾರೆ ಎನ್ನಲಾಗಿದೆ. ಆದರೆ, ಈ ವಿಚಾರ ಎಷ್ಟು ನಿಜ, ಸುಳ್ಳು ಅನ್ನೋದು ಗೊತ್ತಿಲ್ಲ. ರಕ್ಷಿತಾ ಹಾಗೂ ರಾಶಿಕಾಗಿಂತಲೂ ರಘು ಕಡಿಮೆ ವೋಟ್‌ಗಳನ್ನು ಪಡೆದುಕೊಂಡಿರುವುದು ಇದಕ್ಕೆ ಕಾರಣ ಎನ್ನಲಾಗುತ್ತಿದೆ.

ಇನ್ನೂ ಕೆಲವು ವಾದಗಳ ಪ್ರಕಾರ ಅಶ್ವಿನಿ ಗೌಡ ಮಿಡ್‌ವೀಕ್‌ ಎಲಿಮಿನೇಷನ್‌ನಲ್ಲಿ ಮನೆಯಿಂದ ಹೊರಬಿದ್ದಿದ್ದಾರೆ. ಇದು ಬಿಗ್‌ಬಾಸ್‌ ಮನೆಯೊಳಗಿನವರಿಗೆ ಮಾತ್ರವಲ್ಲ ಬಿಗ್‌ಬಾಸ್‌ ಅಭಿಮಾನಿಗಳಿಗೂ ಅಚ್ಚರಿ ತಂದಿದೆ. ಅಶ್ವಿನಿ ಫೈನಲಿಸ್ಟ್‌ ಆಗುವ ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದಾರ. ಹಾಗಿದ್ದರೂ ಅವರು ಮಿಡ್‌ವೀಕ್‌ನಲ್ಲಿ ಎಲಿಮಿನೇಟ್‌ ಆಗಿ ಹೊರಬಿದ್ದಲ್ಲಿ ಅದು ಶಾಕಿಂಗ್‌ ನ್ಯೂಸ್‌ ಆಗಲಿದೆ.

ಸೂಚನೆ ಕೊಟ್ಟಿದ್ದ ಗಿಲ್ಲಿ ನಟ

ಇನ್ನು ಕೆಲವು ವಾದಗಳ ಪ್ರಕಾರ ಕಾವ್ಯಾ ಶೈವ ಬಿಗ್‌ಬಾಸ್‌ ಮನೆಯಿಂದ ಹೊರಬಿದ್ದಿದ್ದಾರೆ. ಗಿಲ್ಲಿ ಕೂಡ ಈ ಬಗ್ಗೆ ಕಾವ್ಯಾಗೆ ಮನೆಯಲ್ಲಿ ಹಿಂಟ್‌ ಕೂಡ ನೀಡಿದ್ದ. 'ಟೈಮ್‌ ಬಂದಿದೆಯಲ್ಲ, ನನಗ್ಯಾಕೋ ನನಗೆ ಮಿಡ್‌ವೀಕ್‌ನಲ್ಲೇ ಟೈಮ್‌ ಬಂದ ಹಾಗೆ ಅನಿಸಿದೆ' ಎಂದು ಗಿಲ್ಲಿ ಸ್ವತಃ ಕಾವ್ಯಾ ಎದುರಲ್ಲೇ ಹೇಳಿದ್ದಾರೆ. ಗಿಲ್ಲಿ ಈ ವಾರದಲ್ಲಿ ಏನು ಬೇಕಾದರೂ ಆಗಬಹುದು ಎಂದು ಹೇಳಿದ್ದರಿಂದ ಕಾವ್ಯಾಳ ಆಟ ಬಿಗ್‌ಬಾಸ್‌ ಮನೆಯಲ್ಲಿ ಮುಗಿಯುವ ಲಕ್ಷಣ ಕಂಡಿದೆ.

ರೂಮರ್‌ ಆಗಿರುವ ಸಾಧ್ಯತೆಯೂ ಇದೆ

ಇನ್ನು ಬಿಗ್‌ಬಾಸ್‌ ಶೋ ಎಲ್ಲೂ ಕೂಡ ಮಿಡ್‌ವೀಕ್‌ ಎಲಿಮಿನೇಷನ್‌ನ ಸೂಚನೆಯನ್ನು ನೀಡಿಲ್ಲ. ಇದೆಲ್ಲ ಗಾಸಿಪ್‌ಗಳು ಸುಳ್ಳಾಗುವ ಸಾಧ್ಯತೆಯೇ ಹೆಚ್ಚಿದೆ ಎಂದೂ ಮಾತುಕತೆ ನಡೆಯುತ್ತಿದೆ. 'ವೋಟಿಂಗ್‌ ಲೈನ್‌ ಕ್ಲೋಸ್‌ ಆಗದೇ ಮಿಡ್‌ವೀಕ್‌ ಎಲಿಮಿನೇಷನ್‌ ಆಗೋಕೆ ಹೇಗೆ ಸಾಧ್ಯ? ಕೇವಲ ನಿರೂಪಕ ಹಾಗೂ ಬಿಗ್‌ಬಾಸ್‌ ಕಾರ್ಯಕ್ರಮ ಆಯೋಜಕರ ಮನಸ್ಸಿಗೆ ಬಂದಂತೆ ಶೋ ನಡೆಯೋದಿಲ್ಲ. ಹಾಗೇನಾದರೂ ಮಿಡ್‌ವೀಕ್‌ ಎಲಿಮಿನೇಷನ್‌ ಇದ್ದರೆ, ಮೊದಲೇ ಸೂಚನೆ ಸಿಗಲಿದೆ. ಇದೆಲ್ಲವೂ ಫೇಕ್‌ನ್ಯೂಸ್‌' ಎಂದು ಬಿಬಿ ಅಭಿಮಾನಿಯೊಬ್ಬರು ಕಾಮೆಂಟ್‌ ಮಾಡಿದ್ದಾರೆ.

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12 ಫಿನಾಲೆ ಮೊದಲ ಟಿಕೆಟ್‌ ಪಡೆದವರಾರು? ಟವರ್‌ನಿಂದ ಬಿದ್ದ ಸ್ಪರ್ಧಿ, ಬೆಚ್ಚಿಬಿದ್ದ ಗಿಲ್ಲಿ ನಟ
BBK 12: ಗಿಲ್ಲಿ ನಟ ನುಡಿದ ಭವಿಷ್ಯ ನಿಜವಾಯ್ತಾ? ಮಿಡ್‌ ವೀಕ್‌ ಎಲಿಮಿನೇಶನ್‌ನಲ್ಲಿ ಹೊರಬಂದವರಾರು?