'ಜೀವನಾನ ಎಂಜಾಯ್‌ ಮಾಡೋದು ಅವನಿಂದ ಕಲಿತಿದ್ದೇನೆ..' ಬಿಗ್‌ಬಾಸ್‌ ಮನೆಯಲ್ಲೇ ಗಿಲ್ಲಿಗೆ ರಘು ಬಹುಪರಾಕ್‌!

Published : Jan 08, 2026, 10:53 PM IST
Gilli Nata And Raghu

ಸಾರಾಂಶ

ಆರಂಭದಲ್ಲಿ ಗಿಲ್ಲಿಯನ್ನು ಕಂಡರೆ ಆಗುವುದಿಲ್ಲ ಎನ್ನುತ್ತಿದ್ದ ರಘು, ಇದೀಗ ಅವರ ನಿಜವಾದ ಗುಣವನ್ನು ಅರಿತುಕೊಂಡಿದ್ದಾರೆ. ಬಿಗ್‌ಬಾಸ್ ಮನೆಯಲ್ಲಿ ಗಿಲ್ಲಿ ಒಬ್ಬ ಒಳ್ಳೆಯ ಮನುಷ್ಯ, ಅವನ ಯೋಚನಾ ರೀತಿ ತನಗೆ ಇಷ್ಟವಾಗಿದೆ ಎಂದು ರಘು ಎಲ್ಲರ ಮುಂದೆ ಒಪ್ಪಿಕೊಂಡಿದ್ದಾರೆ. 

Mutant Raghu Praises Gilli Nata: ಕೊನೆಗೂ ಬಿಗ್‌ಬಾಸ್‌ ಮನೆಯಲ್ಲಿ ಗಿಲ್ಲಿ ನಟನನ್ನು ಮ್ಯೂಟಂಟ್‌ ರಘು ಚೆನ್ನಾಗಿ ಅರ್ಥಮಾಡಿಕೊಂಡಂತೆ ಕಂಡಿದೆ. ರಘು ಬಿಗ್‌ಬಾಸ್‌ ಮನೆಗೆ ಎಂಟ್ರಿ ಕೊಟ್ಟ ಆರಂಭಿಕ ಕೆಲ ವಾರಗಳಲ್ಲಿ ಗಿಲ್ಲಿ ಪರಿಪರಿಯಾಗಿ ರಘುವನ್ನು ಕಾಡಿಸಿದ್ದರು. ಎಲ್ಲಿಯವರೆಗೂ ಎಂದರೆ, ಗಿಲ್ಲಿ-ರಘು ಸ್ನೇಹ ಸೋಶಿಯಲ್‌ ಮೀಡಿಯಾದಲ್ಲೂ ವೈರಲ್‌ ಆಗೋ ಮಟ್ಟಕ್ಕೆ ಬೆಳೆದುನಿಂತಿತು. ಇದನ್ನು ಸುದೀಪ್‌ ಸಹ ವೀಕೆಂಡ್‌ನಲ್ಲಿ ಮನೆಮಂದಿಗೆ ತಿಳಿಸಿದ್ದರು. ಆರೆ, ಇವರ ಸ್ನೇಹಕ್ಕೆ ಅದ್ಯಾವ ಕಣ್ಣು ಬಿತ್ತೋ ಗೊತ್ತಿಲ್ಲ. ನಂತರದ ಕೆಲ ವಾರಗಳಲ್ಲಿ ರಘು, ಗಿಲ್ಲಿಗೆ ಮಾತಿನಲ್ಲೇ ಚುಚ್ಚಲಾರಂಭಿಸಿದರು.

ಗಿಲ್ಲಿ ಕಂಡರೆ ನನಗೆ ಆಗೋದಿಲ್ಲ ಎಂದು ವರ್ತಿಸಲು ಆರಂಭಿಸಿದರು. ಗಿಲ್ಲಿ ತಮ್ಮ ತಮಾಷೆಯ ಮೂಲಕ ಎಲ್ಲರನ್ನೂ ಕೀಳಾಗಿ ಕಾಣುತ್ತಾನೆ ಅನ್ನೋ ಅರ್ಥದಲ್ಲಿ ಮಾತನಾಡಿದ್ದರು. ಆದರೆ, ಗಿಲ್ಲಿ ಬಗ್ಗೆ ರಘುಗೆ ಈಗ ಸಂಪೂರ್ಣ ಅರ್ಥವಾಗಿದೆ. ಇದರ ಬಗ್ಗೆ ಸ್ವತಃ ಅವರೇ ಬಿಗ್‌ಬಾಸ್‌ ಮನೆಯಲ್ಲಿ ಗಿಲ್ಲಿ ಹಾಗೂ ರಕ್ಷಿತಾ ಮುಂದೆಯೇ ಮಾತನಾಡಿದ್ದಾರೆ.

ಗಿಲ್ಲಿ ಯಾರ ಮೇಲೆಯೂ ಕೂಗಾಡೋದಿಲ್ಲ. ತನಗೆ ಅನಿಸಿದ್ದರು ನಗುತ್ತಲೇ, ಬೇರೆಯವರಿಗೆ ನಗಿಸುತ್ತಲೇ ಆತ ತಿಳಿಸುತ್ತಾನೆ. ನನಗಂತೂ ಗಿಲ್ಲಿ ಇಷ್ಟವಾಗಿದ್ದಾನೆ. ಆತ ಒಬ್ಬ ಒಳ್ಳೆಯ ಮನುಷ್ಯ. ಅವನು ಯೋಚನೆ ಮಾಡೋ ರೀತಿ ನನಗೆ ಇಷ್ಟ. ತುಂಬಾ ಸರಿಯಾಗಿ ಮಾತನಾಡುತ್ತಾನೆ. ಅಲ್ಲೊಂದು, ಇಲ್ಲೊಂದು ಅಂತಾ ಆತ ಮಾತನಾಡೋದೇ ಇಲ್ಲ. ಅದು ಅತನ ಉತ್ತಮ ಪಾಲಿಸಿ. ಅವರ ಮುಂದೆಯೂ ಹಾಗೆ ಇರ್ತಾನೆ, ನಮ್ಮ ಮುಂದೆಯೂ ಹಾಗೆ ಇರ್ತಾನೆ. ಅದಲ್ಲದೆ,ಆತ ಲೈಫ್‌ನ ಆರಾಮಾವಾಗಿ ಎಂಜಾಯ್‌ ಮಾಡ್ತಾನೆ. ಅದು ನನಗೆ ಇಷ್ಟವಾಯಿತು. ಟೆನ್ಶನ್‌ ತಗೊಳ್ಳೋದಿಲ್ಲ. ತಲೆ ಕೆಡಿಸಿಕೊಳ್ಳೋದಿಲ್ಲ.ಗಿಲ್ಲಿಯಿಂದ ನಾನು ಇದೊಂದನ್ನ ಕಲಿತಿದ್ದೇನೆ' ಎಂದು ರಘು ಹೇಳಿದ್ದಾರೆ.

 

ಗಿಲ್ಲಿ ಒಳ್ಳೆ ಮನುಷ್ಯ ಎಂದು ಕಾವ್ಯಾ ಎದುರಲ್ಲೇ ಹೇಳಿದ ರಘು!

ಇದಕ್ಕೂ ಮುನ್ನ ನಡೆದ ಮಾತುಕತೆಯೊಂದರಲ್ಲಿ ಗಿಲ್ಲಿ, ಕಾವ್ಯಾ, ಧನುಷ್‌ ಇರುವ ವೇಳೆ ರಘು, ನಾನು ಗಿಲ್ಲಿ ಬಗ್ಗೆ ಏನು ಅನಿಸುತ್ತೋ ಎಲ್ಲವನ್ನೂ ಇಲ್ಲಿ ವದರಿದ್ದೀನಿ. ಇವಾಗ ನನಗೆ ಗೊತ್ತಾಗಿಬಿಟ್ಟಿದೆ. ಆತ ಒಳ್ಳೆಯ ಮನುಷ್ಯ ಅಂತಾ ಎಂದು ಹೇಳಿದ್ದಾರೆ. ಇದನ್ನು ಕೇಳುವ ಗಿಲ್ಲಿ, 'ಇದನ್ನು ಇನ್ನೊಂದ್‌ ಸಲ ಹೇಳಣ್ಣ..' ಎಂದು ಕಾವ್ಯಾಗೆ ಕಿಚಾಯಿಸುವಂತೆ ಹೇಳುತ್ತಾರೆ. ಅದಕ್ಕೆ ರಘು, 'ಒಳ್ಳೆ ಮನುಷ್ಯ, ಒಳ್ಳೆ ಮನಸ್ಸು..' ಎನ್ನುತ್ತಾರೆ. ಆಗ ಗಿಲ್ಲಿ ಮತ್ತೊಮ್ಮೆ ಹೇಳಣ್ಣ ಎಂದು ರಿಕ್ವೆಸ್ಟ್‌ ಮಾಡುತ್ತಾರೆ. 'ಅವನಿಗೆ ಏನು ಬೇಕೋ ಅದನ್ನು ಮಾಡ್ತಾ ಇದ್ದಾನೆ..' ಎಂದು ರಘು ಹೇಳುತ್ತಾರೆ. ಇಷ್ಟೆಲ್ಲಾ ಆಗುವಾಗ ಕಾವ್ಯಾ ಒಳಗೊಳಗೆ ನಗುತ್ತಿರುವುದು ಕ್ಯಾಮೆರಾದಲ್ಲಿ ದಾಖಲಾಗಿದೆ.

ಈ ಹಂತದಲ್ಲಿ ಗಿಲ್ಲಿ, 'ಏನ್‌ ಮಾಡೋದ್‌ ಅಣ್ಣಾ ನಿನನಗೆ ಗೊತ್ತಾಗುತ್ತೆ. ನಿನ್ನೊಬ್ಬನಿಗೆ ಅಷ್ಟೇ ಇದು ಗೊತ್ತಿರೋದು..' ಎಂದು ರಘುವನ್ನು ಉದ್ದೇಶಿಸಿ ಕಾವ್ಯಾಗೆ ಕಿಚಾಯಿಸಿದ್ದಾರೆ.

ಒಟ್ಟಾರೆಯಾಗಿ ಬಿಗ್‌ಬಾಸ್‌ ಮನೆಯಲ್ಲಿ ಗಿಲ್ಲಿಗೆ ಇಷ್ಟವಾದ ರಘುಗೆ ಗಿಲ್ಲಿಯ ಬೆಲೆ ಏನು ಅನ್ನೋದು ಗೊತ್ತಾಗಿದೆ. ಗಿಲ್ಲಿಯೂ ಕೂಡ ರಘು ತಮಗೆ ಎಷ್ಟೇ ಬೈದರೂ, ವೀಕೆಂಡ್‌ ವೇದಿಕೆಯಲ್ಲೇ ತಾವೆಂದರೂ ರಘು ಅವರನ್ನ ಬಿಟ್ಟುಕೊಡೋದೇ ಇಲ್ಲ ಎಂದು ಹೇಳಿದ್ದರು. ಆ ವಿಡಿಯೋ ಕೂಡ ಸಖತ್‌ ವೈರಲ್‌ ಆಗಿತ್ತು.

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Amruthadhaare: ಹುಡುಗಿ ಅಂಕಲ್​ನ, ಯುವಕ ಆಂಟಿಯನ್ನು ಲವ್​ ಮಾಡೋದು ಟ್ರೆಂಡಂತೆ ನೋಡ್ರಪ್ಪಾ!
Karna Serial: ವಿಲನ್​ಗಳು ತೋಡಿದ ಗುಂಡಿಗೆ ಬಿದ್ದ ಗರ್ಭಿಣಿ ನಿತ್ಯಾ: ಮುಂದಾದದ್ದು ಭಾರಿ ದುರಂತ!