
ಬಿಗ್ ಬಾಸ್ ಮನೆ ಆಟ ಶುರುವಾಗಿ ನಾಲ್ಕು ದಿನಕ್ಕೆ ಜಗಳ ತಾರಕಕ್ಕೇರಿದೆ. ಆರಂಭದ ದಿನ ಅಶ್ವಿನಿ ಗೌಡ ಹಾಗೂ ಗಿಲ್ಲಿ ನಟ ನಡುವೆ ಜಗಳ ಶುರುವಾಗಿತ್ತು. ಅದಾದ ಬಳಿಕ ಗಿಲ್ಲಿ ನಟ ಅಶ್ವಿನಿ ಕಾಲಿಗೆ ಬೀಳ್ತೀನಿ ಅಂತ ಹೇಳಿದ್ದರು. ಈಗ ಅವರು ಅಶ್ವಿನಿ ಪಿತ್ತವನ್ನು ನೆತ್ತಿಗೇರಿಸುವಂತೆ ಮಾಡುತ್ತಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 12 ಶೋ ಶುರುವಾಗುವಾಗ ಒಂಟಿ ಹಾಗೂ ಜಂಟಿಗಳು ಎಂದು ವಿಭಾಗ ಮಾಡಲಾಗಿದೆ, ವೀಕ್ಷಕರ ಮತಗಳ ಮೇಲೆ ಈ ರೀತಿ ವಿಂಗಡಣೆ ಮಾಡಲಾಗಿದೆ. ಅಶ್ವಿನಿ ಗೌಡ ಒಂಟಿಯಾಗಿದ್ದು, ಗಿಲ್ಲಿ ನಟ, ಕಾವ್ಯ ಶೈವ ಜಂಟಿಯಾಗಿದ್ದರು. ಅಶ್ವಿನಿ ಗೌಡ ಹೇಳಿದಂತೆ ಗಿಲ್ಲಿ ನಟ, ಕಾವ್ಯ ಶೈವ ಕೇಳಬೇಕಿತ್ತು.
ಏನಾದರೂ ಹೇಳಿದರೆ ಗಿಲ್ಲಿ ನಟ ಪರ್ಸನಲ್ ಆಗಿ ತಗೋತಾರೆ, ಹಾಗಾಗಿ ನಾಮಿನೇಟ್ ಮಾಡ್ತಿದ್ದೀನಿ ಅಂತ ಅಶ್ವಿನಿ ಗೌಡ ಹೇಳಿದ್ದರು. ಇದೇ ವಿಚಾರವಾಗಿ ಗಿಲ್ಲಿ, ಅಶ್ವಿನಿ, ಕಾವ್ಯ ಮಧ್ಯೆ ಜಗಳ ನಡೆದಿತ್ತು. “ನಿಮ್ಮ ಮೇಲೆ ಗೌರವ ಇದ್ದಿದ್ದಕಕೆ ಮೇಡಂ ಅಂತ ಕರೆಯುತ್ತಿದ್ದೇನೆ, ಇಲ್ಲ ಅಂದರೆ ಹೋಗೆ ಬಾರೆ ಅಂತ ಕರೆಯುತ್ತಿದ್ದೆ” ಎಂದು ಗಿಲ್ಲಿ ಹೇಳಿದ್ದರು. ಇದು ಅಶ್ವಿನಿಗೆ ಕೋಪ ತರಿಸಿತ್ತು. ಕೊನೆಗೆ ಗಿಲ್ಲಿ, “ಕಾಲಿಗೆ ಬೀಳ್ತೀನಿ, ಈ ವಿಷಯ ಬಿಟ್ಟು ಬಿಡಿ” ಎಂದು ಹೇಳಿದ್ದರು. ಅಲ್ಲಿಗೆ ಈ ಮಾತಿನ ಯುದ್ಧ ನಿಂತಿತ್ತುಇ.
ಗಿಲ್ಲಿ ನಟ: ನನ್ನ ನೀನು ಗೆಲ್ಲಲಾರೆ ಎಂದು ಹಾಡು ಹಾಡಿದ್ದಾರೆ.
ಅಶ್ವಿನಿ ಗೌಡ: ರಾಜಮಾತೆ ಬಂದಾಗ ಎದ್ದು ನಿಲ್ಲಬೇಕು ಅಂತ ಗೊತ್ತಾಗಿಲ್ವಾ? ಟಿಶ್ಯು ಪೇಪರ್ ಹಾಳುಮಾಡಬಾರದು, ಮನೆಯ ಯಾವ ವಸ್ತು ಹಾಳಾಗಬಾರದು.
ಅಶ್ವಿನಿ ಗೌಡಗೆ ಉರಿಸಬೇಕು ಎಂದು ಗಿಲ್ಲಿ ನಟ ಕೈಯಲ್ಲಿ ಟಿಶ್ಯೂ ಪೇಪರ್ ಹಿಡಿದು ಡಸ್ಟ್‌ಬಿನ್‌ಗೆ ಹಾಕಿದ್ದಾರೆ, ಮ್ಯಾಟ್ ನೆಲಕ್ಕೆ ಹಾಕಿ ಒಗೆದಿದ್ದಾರೆ, ಒಟ್ಟಿನಲ್ಲಿ ಅಶ್ವಿನಿ ಕೋಪಕ್ಕೆ ಗಿಲ್ಲಿ ತುಪ್ಪ ಸುರಿದಿದ್ದಾರೆ. ಇದು ಎಲ್ಲರಿಗೂ ಗೊತ್ತಾಗಿದೆ. ಇಷ್ಟುದಿನ ಸುಮ್ಮನೆ ಇದ್ದ ಗಿಲ್ಲಿ ನಟ ಈಗ ಆಟ ಶುರು ಮಾಡಿದ್ದಾರೆ. ಈ ಪ್ರೋಮೋ ಅನೇಕರಿಗೆ ಇಷ್ಟ ಆಗಿದೆ. ಗಿಲ್ಲಿ ನಟ ರೋಸ್ಟಿಂಗ್ ಮಾಡ್ತಿರೋದು ಅನೇಕರ ಮೆಚ್ಚುಗೆಗೆ ಪಾತ್ರವಾಗಿದೆ. ರಾಜಮಾತೆ ಅಶ್ವಿನಿ ಗೌಡ ಆಟ ಅತಿಯಾಯ್ತು ಎಂದು ಕೆಲವರು ಹೇಳಿದ್ದಾರೆ.
ಅಶ್ವಿನಿ ಗೌಡ ಎಷ್ಟು ಕೆಲಸ ಕೊಡ್ತಾರೋ ಅಷ್ಟು ಗಿಲ್ಲಿ ಉರಿಸುತ್ತಿದ್ದಾರೆ. ಅಶ್ವಿನಿ ಹೇಳಿದ್ದಕ್ಕೆ ಗಿಲ್ಲಿ ಉಲ್ಟಾ ಮಾಡುತ್ತಿದ್ದಾರೆ. ಅಶ್ವಿನಿ ಅವರ ‘ರಾಜಾಹುಲಿ’ ಸಿನಿಮಾದಲ್ಲಿ ಯಶ್ ಅವರು “ನನ್ನ ಅತ್ತೆ ಮಗಳಿಗೆ ಯಾವಾಗಲೂ ಕಣ್ಣು ಹೊಡೆಯುತ್ತೀನಿ, ನಮ್ಮನ್ಯಾರು ಕೇಳೋರು?” ಎಂದು ಡೈಲಾಗ್ ಹೊಡೆದಿದ್ದರು. ಯಶ್ ಅವರು ಅಶ್ವಿನಿಗೆ ಈ ಮಾತು ಹೇಳುತ್ತಾರೆ. ಅದನ್ನೇ ಈಗ ಗಿಲ್ಲಿ ರಿಪೀಟ್ ಹೊಡೆದಿದ್ದಾರೆ. ಗಿಲ್ಲಿ ಆಟಕ್ಕೆ ಅಶ್ವಿನಿ ಸುಸ್ತಾಗಿದ್ದಾರೆ, ಅವರ ಕೋಪ ತಾರಕಕ್ಕೇರಿದೆ.
ಸ್ಪಂದನಾ ಸೋಮಣ್ಣ, ಧನುಷ್ ಗೌಡ, ಕರಿಬಸಪ್ಪ, ಅಶ್ವಿನಿ ಗೌಡ, ಅಶ್ವಿನಿ, ಡಾಗ್ ಸತೀಶ್, ಧ್ರುವಂತ್, ಕಾವ್ಯ ಶೈವ, ಆರ್‌ಜೆ ಅಮಿತ್, ಮಲ್ಲಮ್ಮ, ಕಾಕ್ರೋಚ್ ಸುಧಿ, ರಾಶಿಕಾ ಶೆಟ್ಟಿ, ಚಂದ್ರಪ್ರಭ, ಜಾಹ್ನವಿ, ಗಿಲ್ಲಿ ನಟ, ಮಂಜುಭಾಷಿಣಿ, ರಕ್ಷಿತಾ ಶೆಟ್ಟಿ, ಅಭಿಷೇಕ್ ಶ್ರೀಕಾಂತ್, ಕರಿಬಸಪ್ಪ, ಮಾಳು ನಿಪನಾಳ ಅವರು ಕೂಡ ಸ್ಪರ್ಧಿಗಳಾಗಿ ಭಾಗವಹಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.