ಅಕ್ಟೋಬರ್‌ನಲ್ಲೇ ಕನ್ನಡ ಬಿಗ್‌ಬಾಸ್‌ ಸೀಸನ್ 11 ಆರಂಭ, ಇಲ್ಲಿದೆ ಸಂಭಾವ್ಯ ಅಭ್ಯರ್ಥಿಗಳ ಹೆಸರು!

By Gowthami K  |  First Published Jul 27, 2024, 5:51 PM IST

ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್‌  ನ 11 ಆವೃತ್ತಿ ಇದೇ ಅಕ್ಟೋಬರ್‌ ನಿಂದ ಆರಂಭವಾಗಲಿದೆ ಎನ್ನಲಾಗಿದೆ. ಕೆಲ ಸ್ಪರ್ಧಿಗಳ ಹೆಸರು ಕೂಡ ವೈರಲ್ ಆಗಿದೆ.


ಕನ್ನಡದ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಒಂದಾಗಿರುವ ಬಿಗ್‌ಬಾಸ್‌  ನ 11 ಆವೃತ್ತಿ ಇದೇ ಅಕ್ಟೋಬರ್‌ ನಿಂದ ಆರಂಭವಾಗಲಿದೆ ಎನ್ನಲಾಗಿದೆ. ಈಗಾಗಲೇ ಇದಕ್ಕೆ ಭರ್ಜರಿ ತಯಾರಿ ನಡೆಯುತ್ತಿದೆ. ಹಳೆ ಮನೆಗೆ ಹೊಸ ರೂಪ ಕೊಡುವ ತಯಾರಿ ಭರ್ಜರಿಯಾಗಿಯೇ ಆರಂಭವಾಗಿದೆ ಎನ್ನಲಾಗಿದೆ. ಈ ಬಾರಿಯ ಬಿಬಿಕೆ 11ನೇ ಆವೃತ್ತಿಗೆ ಸ್ಪರ್ಧಿಗಳು ಯಾರಾಗುತ್ತಾರೆ ಎಂಬ ಕುತೂಹಲವೂ ಹೆಚ್ಚಿದೆ. ಹಲವರ ಹೆಸರು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ.

ಕೆಲವೊಂದು ಹೆಸರುಗಳು ಕೂಡ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಕಳೆದ ಸೀಸನ್‌ 10ರಲ್ಲಿ  ನಟ 'ಲವ್ ಗುರು'  ಖ್ಯಾತಿಯ ತರುಣ್ ಚಂದ್ರ, ಕಾಮಿಡಿ ನಟ ಚಂದ್ರಪ್ರಭ, ಸಿಂಗರ್ ಆಶಾ ಭಟ್‌, ಹುಚ್ಚ ಸಿನೆಮಾದ ನಟಿ ರೇಖಾ, ರೀಲ್ಸ್ ನಲ್ಲಿ ಫೇಮಸ್‌ ಆಗಿರುವ ಭೂಮಿಕಾ ಬಸವರಾಜ್ ಬರುತ್ತಾರೆ ಎನ್ನಲಾಗಿತ್ತು. ಆದರೆ ಅವರು ಬಂದಿರಲಿಲ್ಲ ಈ ಬಾರಿ ಕೂಡ ಅವರ ಹೆಸರು ಕೇಳಿಬರುತ್ತಿದೆ. ಜೊತೆಗೆ ಎಸ್ ನಾರಾಯಣ ಅವರ ಪುತ್ರ ಪಂಕಜ್ ನಾರಾಯಣ್, ಅಂತರಪಟ ಸೀರಿಯಲ್ ಹಿರೋಯಿನ್ ತನ್ವಿಯಾ ಬಾಲರಾಜ್ , ಕೆಂಡಸಂಪಿಗೆ ಸೀರಿಯಲ್‌ ನಿಂದ ನಟ ಆಕಾಶ್, ಶನಿ ಸೀರಿಯಲ್ ನಲ್ಲಿ ಫೇಮಸ್ ಆಗಿದ್ದ ನಟ ಸುನೀಲ್ ಬರಬಹುದು ಎಂದು ಜನ ಊಹಿಸಿದ್ದಾರೆ.

ಪ್ರಾಣಿ ಪ್ರಿಯರಿಗೆ ಬಿಬಿಎಂಪಿಯಿಂದ ಹೊಸ ನಿಯಮ ಜಾರಿ, ನಾಯಿಗಳಿಗೆ ಬಿಸ್ಕತ್‌ ಹಾಕುವಂತಿಲ್ಲ

Tap to resize

Latest Videos

ಇದರ ಜೊತೆಗೆ ತುಕಾಲಿ ಸಂತು ಪತ್ನಿ ಮಾನಸ, ಗಿಚ್ಚಿಗಿಲಿಗಿಲಿಯ  ಪೇಮಸ್‌ ನಟ ರಾಗಿಣಿ ಅಲಿಯಾಸ್ ರಾಘವೇಂದ್ರ. ರೀಲ್ಸ್ ರೇಷ್ಮಾ, ಬೃಂದಾವನ ಸೀರಿಯಲ್‌ ನಲ್ಲಿ ನಟಿಸಿದ್ದ ವರುಣ್ ಆರಾಧ್ಯ ಸೇರಿದಂತೆ ಹಲವರಿಗೆ ಕರೆ ಹೋಗಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಎಂದಿನಂತೆ ಅಕ್ಟೋಬರ್ ನಲ್ಲಿ ಬಿಬಿಕೆ 11 ಆರಂಭಿಸಲು ಸಕಲ ಸಿದ್ಧತೆ ನಡೆದಿದೆಯಂತೆ.

ಯಾಕೆಂದರೆ ಸೆಪ್ಟೆಂಬರ್ ನಲ್ಲಿ ಅನುಬಂಧ ಅವಾರ್ಡ್ ಕಾರ್ಯಕ್ರಮ ನಡೆಯಲಿದೆ. ಈ ಬಾರಿ 11ನೇ ವರ್ಷದ ಅನುಬಂಧ ಅವಾರ್ಡ್ ಕಾರ್ಯಕ್ರಮ ನಡೆಯುತ್ತಿದೆ. ಇದು ಮುಗಿದ ನಂತರ ಅಕ್ಟೋಬರ್‌ ನಲ್ಲಿ ಬಿಗ್ ಬಾಸ್ ಸೀಸನ್ 11 ಬರೋದು ಪಕ್ಕಾ ಎನ್ನಲಾಗಿದೆ. 

ಇದಲ್ಲದೆ ಸೋಷಿಯಲ್ ಮೀಡಿಯಾ ಸ್ಟಾರ್ಸ್, ಟ್ರೋಲ್‌ಗಳಿಗೆ ತುತ್ತಾಗಿರುವ ವಿವಾದಾತ್ಮಕ ವ್ಯಕ್ತಿಗಳು, ಸಿನಿಮಾ, ಕಿರುತೆರೆ ಜತೆಗೆ ಕಾಮನ್‌ ಮ್ಯಾನ್‌ ಕೂಡ ಈ ಬಾರಿಯ ಬಿಬಿಕೆಯಲ್ಲಿ ಮಾಮೂಲಿಯಂತೆ ಇರಬಹುದು.

ಶೀಘ್ರದಲ್ಲೇ ಬಿಗ್‌ಬಾಸ್‌ ಕನ್ನಡ ಸೀಸನ್‌ 11 ಆರಂಭ, ಕಲರ್ಸ್‌ನ ಈ 3 ಸೀರಿಯಲ್ ಮತ್ತು ಶೋಗಳು ಮುಕ್ತಾಯ!

ಇನ್ನು ಇದಕ್ಕಾಗಿ  ಧಾರವಾಹಿಗಳಾದ ಕರಿಮಣಿ, ಅಂತರಪಟ ಮತ್ತು ಕೆಂಡಸಂಪಿಗೆಯನ್ನು ಕೂಡ ಮುಗಿಸಲು ತಯಾರಿ ನಡೆದಿದೆ ಎಂದು ಗಾಸಿಪ್ ಇದೆ. ವಾರಾಂತ್ಯ ಕಾರ್ಯಕ್ರಮಗಳಾದ ಗಿಚ್ಚಿಗಿಲಿ ಗಿಲಿ ಸೀಸನ್ 3 ಮತ್ತು ರಾಜಾ ರಾಣಿ ಮುಗಿಯಲಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಈಗಾಗಲೇ ಸುದ್ದಿ ಇದೆ.

ಇನ್ನು ಬಿಬಿಕೆ ಸೀಸನ್‌ 10ರವರೆಗೆ ಕಿಚ್ಚ ಸುದೀಪ್‌ ನಿರೂಪಣೆ ನಡೆಸಿಕೊಟ್ಟಿದ್ದರು. ಮಾತ್ರವಲ್ಲ 10 ಸೀಸನ್‌ ನಡೆಸಿ ಕೊಡಲು ಮಾಡಿರುವ ಒಪ್ಪಂದ ಕೂಡ ಕಳೆದ ಸೀಸನ್ ಗೆ ಮುಗಿದಿದೆ. ಹೀಗಾಗಿ ಈ ಬಾರಿ ಸೀಸನ್‌ 11ರಲ್ಲಿ ಹೊಸದಾಗಿ ಒಪ್ಪಂದ ಮಾಡಿಕೊಂಡಿರುವ ಕಿಚ್ಚ ಅದಕ್ಕಾಗಿ ಡೇಟ್ಸ್ ಹೊಂದಿಸಿಕೊಂಡಿದ್ದಾರಂತೆ.

ಕಳೆದ ಬಿಗ್‌ಬಾಸ್‌ ಸೀಸನ್‌ 10 ಅತ್ಯಂತ ಹೆಚ್ಚು ಟಿಆರ್‌ಪಿ ತಂದುಕೊಟ್ಟು ಕಲರ್ಸ್ ಕನ್ನಡ ಮತ್ತು ಬಿಗ್‌ಬಾಸ್‌ ನಡೆಸುವ ಪ್ರೊಡಕ್ಷನ್ ಹೌಸ್‌ಗೆ ಭಾರೀ ಲಾಭ ತಂದುಕೊಟ್ಟಿತ್ತು. ಕಾರ್ತಿಕ್ ಮಹೇಶ್ ವಿನ್ನರ್ ಮತ್ತು ಡ್ರೋಣ್ ಪ್ರತಾಪ್ ರನ್ನರ್ ಅಪ್‌ ಆಗಿದ್ದರು. ಆದರೆ ನಟಿ ಸಂಗೀತಾ ಶೃಂಗೇರಿ 10 ನೇ ಸೀಸನ್‌ ನಲ್ಲಿ ಹೆಚ್ಚು ಪ್ರಸಿದ್ಧಿ ಪಡೆದಿದ್ದರು. ಮೂರನೇ ಸ್ಥಾನ ಅವರ ಪಾಲಾಗಿತ್ತು.

click me!