
ಈ ಬಾರಿಯ ಬಿಗ್ ಬಾಸ್ ಸೀಸನ್ 11 (Bigg Boss season 11) ಇನ್ನೇನು ಕೆಲವೇ ದಿನಗಳಲ್ಲಿ ಶುರುವಾಗಲಿದೆ. ಈ ಸೀಸನ್‌ನಲ್ಲಿ ಭಾಗವಹಿಸುವ ಸ್ಪರ್ಧಿಗಳು ಯಾರು ಎಂಬುದು ಸದ್ಯಕ್ಕೆ ಕುತೂಹಲದ ಪ್ರಶ್ನೆಯೇ ಆಗಿದೆ. ಆದರೂ ಕೂಡ ಸೋಷಿಯಲ್ ಮೀಡಿಯಾಗಳಲ್ಲಿ ಈ ಬಗ್ಗೆ ಬಿಸಿಬಿಸಿ ಚರ್ಚೆ ಶುರುವಾಗಿದೆ. ಅಧಿಕೃತ ಎನ್ನಲಾಗದಿದ್ದರೂ ಕೆಲವು ಸ್ಪರ್ಧಿಗಳ ಹೆಸರುಗಳು ಓಡಾಡತೊಡಗಿವೆ. ಇದು ಎಲ್ಲಾ ಸೀಸನ್‌ಗಳಲ್ಲಿ ಯೂ ಆಗಿದೆ. ಆದರೆ, ಹೀಗೆ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡಿದ್ದ ಅನೇಕ ಹೆಸರುಗಳು ಬಳಿಕ ಬಿಗ್ ಬಾಸ್ ಶೋದಲ್ಲಿ ನಿಜವಾಗಿಯೂ ಇದ್ದವು.
ಹೀಗಾಗಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಹೆಸರುಗಳು ಫೇಕ್ ಎಂದು ಸಾರಾಸಗಟಾಗಿ ತಿರಸ್ಕರಿಸುವ ಹಾಗಿಲ್ಲ. ಜೊತೆಗೆ, ಅವುಗಳಲ್ಲಿ ಎಲ್ಲವೂ ಅಲ್ಲದಿದ್ದರೂ ಕೆಲವಂತೂ ಇರುವ ಸಾಧ್ಯತೆ ಹೇರಳವಾಗಿದೆ. ಜೊತೆಗೆ, ಈ ಬಾರಿಯೂ ಕೂಡ ಕಿಚ್ಚ ಸುದೀಪ್ (Kichcha Sudeep) ಅವರೇ ನಿರೂಪಕರಾಗಿದ್ದು, ಹೈದರಾಬಾದ್ ರಾಮೋಜಿರಾವ್ ಫಿಲಂ ಸಿಟಿಯಲ್ಲಿ ಬಿಗ್ ಬಾಸ್ ಸೀಸನ್ 11ರ ಪ್ರೊಮೋ ಶೂಟಿಂಗ್ ನಡೆದಿರುವ ಫೋಟೋ ವೈರಲ್ ಆದ ಬಳಿಕ ಸ್ಪಷ್ಟನೆ ಸಿಕ್ಕಿದೆ.
ಸ್ವಲ್ಪ ತಲೆ ಎತ್ತಿದ್ರೆ ಸಾಕು, ನಮ್ಮಮ್ಮ ಮತ್ತೆ ತಲೆ ಎತ್ತೋಕೇ ಬಿಡ್ತಿರ್ಲಿಲ್ಲ; ಪ್ರಶ್ನೆಗೆ ಸುಧಾರಾಣಿ ಉತ್ತರ!
ಅದೇನೇ ಇದ್ದರೂ ಟಿವಿ ವೀಕ್ಷಕರಿಗೆ, ಬಿಗ್ ಬಾಸ್ ಪ್ರಿಯರಿಗೆ ಮುಖ್ಯವಾಗಿ ಬೇಕಾಗಿರುವುದು ಯಾರು ಕಂಟೆಸ್ಟಂಟ್ಸ್, ಯಾರು ನಿರೂಪಕರು ಎಂಬ ಸಂಗತಿ. ಅದನ್ನೇ ತಿಳಯಲು ಬಯಸುತ್ತಾರೆ, ಅವಕಾಶ ಸಿಕ್ಕಲ್ಲೆಲ್ಲಾ ಅದನ್ನೇ ಹುಡುಕುತ್ತಾರೆ. ಆದರೆ, ಕಲರ್ಸ್ ಕನ್ನಡದ ಮೂಲಕ ಅಧಿಕೃತವಾಗಿ ಅದು ಬರಬೇಕಷ್ಟೇ. ಅಲ್ಲಿಯವರೆಗೂ ಈ ಊಹಾಪೋಹ ನಡೆದೇ ಇರುತ್ತದೆ. ಆದರೆ, ಈ ಗೆಸ್ ಲಿಸ್ಟ್ ನಲ್ಲಿ ಕೆಲವು ಹೆಸರುಗಳು ಅಧಿಕೃತವಾಗಿ ಬಿಗ್ ಬಾಸ್ ಶೋಗೆ ಕಾಲಿಡುವುದಂತೂ ನಿಶ್ಚಿತ. ಹಾಗಿದ್ದರೆ ಅವರು ಯಾರು?
ಮೋಕ್ಷಿತಾ ಪೈ, ಭವ್ಯಾ ಗೌಡ, ರೀಲ್ಸ್ ರೇಷ್ಮಾ, ಸುನಿಲ್ ರಾವ್, ರಾಘವೇಂದ್ರ, ಮಾನಸಾ, ತ್ರಿವಿಕ್ರಮ, ವರುಣ್ ಆರಾಧ್ಯ, ಭೂಮಿಕಾ ಬಸವರಾಜ್, ವರ್ಷಾ ಕಾವೇರಿ, ರೇಖಾ ದಾಸ್ ಹೀಗೆ ಹಲವು ಹೆಸರುಗಳು ಹರಿದಾಡುತ್ತಿವೆ. ಸುವರ್ಣ ನ್ಯೂಸ್ ಅಜಿತ್ ಹನುಮಕ್ಕನವರ್ ಅವರ ಹೆಸರು ಕೂಡ ಓಡಾಡುತ್ತಿದೆ. ಆದರೆ ಸದ್ಯಕ್ಕೆ ಯಾವುದೇ ಹೆಸರು ಅಂತಿಮವಾಗಿಲ್ಲ. ಇನ್ನೇನು ಕೆಲವೇ ದಿನಗಳು ಇವೆ, ಯಾರು ಅನ್ನೋದು ಗೊತ್ತಾಗುತ್ತೆ ಬಿಡಿ!
ಡಾ ರಾಜ್ 'ಗಂಧದಗುಡಿ'ಗೆ ಬೆಂಗಳೂರಲ್ಲಿ ಪವನ್ ಕಲ್ಯಾಣ್ ಬಹುಪರಾಕ್, ಟಾಲಿವುಡ್‌ನಲ್ಲಿ ಸ್ಟಾರ್ ವಾರ್!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.