ನನ್ನ ಕ್ಯಾರೆಕ್ಟರ್ ಬಗ್ಗೆ ಕೆಟ್ಟದಾಗಿ ಮಾತನಾಡಿದ್ರೆ ನಾನು ಮೆಟ್ಟಲ್ಲಿ ಹೊಡಿತೀನಿ: ಚೈತ್ರಾ ಕುಂದಾಪುರ

By Shriram Bhat  |  First Published Nov 1, 2024, 4:08 PM IST

ಚೈತ್ರಾ ಕುಂದಾಪುರ, ಆ ಒಂದು ಮಾತು ಹೇಳಿ ಗುಡುಗಿದ್ದಾರೆ.. ಜೊತೆಗೆ, 'ನಾನು ಇಲ್ಲಿ ಬಂದಿರೋದು ಶೋ ನಿಯಮದ ಪ್ರಕಾರ ಆಟ ಆಡೋಕೆ, ಅದನ್ನು ಮಾಡ್ತೀನಿ. ಅದಕ್ಕೆಲ್ಲಾ ಬಣ್ಣ ಕಟ್ಟಿ ಯಾರೂ ಆಡ್ಕೋಬೇಕಾಗಿಲ್ಲ'...


ಬಿಗ್ ಬಾಸ್ ಕನ್ನಡ ಸೀಸನ್ 11 ನಡೆಯುತ್ತಿದ್ದು, ಈಗಾಗಲೇ ಅದು ಮಧ್ಯ ಭಾಗದ ಕಡೆ ಹೋಗುತ್ತಿರುವುದು ಗೊತ್ತೇ ಇದೆ. ಅಲ್ಲಿ, ದೊಡ್ಮನೆಯಲ್ಲಿ ಇರುವ ಸ್ಪರ್ಧಿಗಳ ಪೈಕಿ ಚೈತ್ರಾ ಕುಂದಾಪುರ ಕೂಡ ಒಬ್ಬರು. ಅವರು ಸ್ಟೇಜ್ ಪ್ರದರ್ಶನ ನೀಡುವ ವಾಗ್ಮಿ ಎಂಬುದು ಬಹುತೇಕ ಎಲ್ಲರಿಗೂ ಗೊತ್ತು. ತಮ್ಮ ವೃತ್ತಿಗೆ ತಕ್ಕಂತೆ, ಬಿಗ್ ಬಾಸ್ ಮನೆಯಲ್ಲಿ ಕೂಡ ಸ್ವಲ್ಪ ಹೆಚ್ಚೇ ಮಾತನಾಡುವ ಚೈತ್ರಾ ಕುಂದಾಪುರ, ಆ ಒಂದು ಮಾತು ಹೇಳಿ ಗುಡುಗಿದ್ದಾರೆ. ಹಾಗಿದ್ದರೆ, ಚೈತ್ರಾ ಕುಂದಾಪು ಹೇಳೀರೋದು ಏನು? ನೋಡಿ, ಇಲ್ಲಿದೆ..  

ನಾನು ಬಿಗ್ ಬಾಸ್ ಮನೆಗೆ ಬರುವಾಗಲೇ ಮದುವೆ ಫಿಕ್ಸ್ ಮಾಡಿಕೊಂಡು ಬಂದಿದ್ದೇನೆ. ಈ ಮನೆಯಲ್ಲಿ ಇರುವ ಅವರಿವರೊಡನೆ ದಯವಿಟ್ಟು ನಂಗೆ ಯಾರೂ ಸಂಬಂಧ ಕಟ್ಟಬೇಡಿ. ಯಾರಾದ್ರೂ ನನ್ನ ಕ್ಯಾರೆಕ್ಟರ್ ಬಗ್ಗೆ ಕೆಟ್ಟದಾಗಿ ಮಾತನಾಡಿದ್ರೆ ನಾನು ಮೆಟ್ಟಲ್ಲಿ ಹೊಡಿತೀನಿ. ನಾನು ಈ ಮನೆಯಿಂದ ಹೊರಹೋದರೂ ನನಗೇನೂ ಚಿಂತೆಯಿಲ್ಲ. ನಾನು ಇಲ್ಲಿ ಬಂದಿರೋದು ಶೋ ನಿಯಮದ ಪ್ರಕಾರ ಆಟ ಆಡೋಕೆ, ಅದನ್ನು ಮಾಡ್ತೀನಿ. ಅದಕ್ಕೆಲ್ಲಾ ಬಣ್ಣ ಕಟ್ಟಿ ಯಾರೂ ಆಡ್ಕೋಬೇಕಾಗಿಲ್ಲ' ಎಂದಿದ್ದಾರೆ ಬಿಗ್ ಬಾಸ್ ಸೀಸನ್ 11ರ ಸ್ಪರ್ಧಿ ಚೈತ್ರಾ ಕುಂದಾಪುರ. 

Tap to resize

Latest Videos

undefined

ಆರ್ಮುಗಂ ರವಿಶಂಕರ್ ಏನಂದ್ರು? ಸುವರ್ಣ ನ್ಯೂಸ್‌ನಲ್ಲಿ ಬಂದ ಕನ್ನಡದ ರವಿ!

ಚೈತ್ರಾ ಕುಂದಾಪುರ ಬಿಗ್ ಬಾಸ್ ಮನೆಗೆ ಬರೋದಕ್ಕೂ ಮೊದಲೇ ಅವರೊಬ್ಬ ಮಾತುಗಾರ್ತಿ ಎಂಬುದು ಹಲವರಿಗೆ ಗೊತ್ತು. ಕೆಲವೊಮ್ಮೆ ವಾದ ಇನ್ನೂ ಕೆಲವೊಮ್ಮೆ ವಿವಾದ ಮಾಡಿಕೊಂಡು ಸಾಕಷ್ಟು ಪ್ರಸಿದ್ಧಿ ಪಡೆದಿರುವ ಚೈತ್ರಾ ಕುಂದಾಪುರ, ಈ ಕಾರಣಕ್ಕೇ ಬಿಗ್ ಬಾಸ್‌ಗೆ ಪ್ರವೇಶ ಪಡೆದಿದ್ದಾರೆ. ಅಲ್ಲಿ ಕೂಡ ಎಲ್ಲರ ಜೊತೆ ಮಾತಿನ ಮೂಲಕವೇ ಪ್ರೀತಿ ಹಾಗೂ ದ್ವೇಷ ಎರಡನ್ನೂ ಪಡೆದಿದ್ದಾರೆ. ಸದ್ಯ ಯಾರಿಗೂ ಬೇಡದ ಸ್ಪರ್ಧಿ ಎಂಬ ಹಣೆಪಟ್ಟಿ ಕೂಡ ಹೊತ್ತುಕೊಂಡಿದ್ದಾರೆ ಚೈತ್ರಾ ಕುಂದಾಪುರ. 

ಬಿಗ್ ಬಾಸ್ ಮನೆಯಲ್ಲಿ ಸದ್ಯ ಚೈತ್ರಾ ಕುಂದಾಪುರ ಪರಿಸ್ಥಿತಿ ಹೇಗಿದೆ ಎಂದರೆ, ಅವರನ್ನು ಕಂಡರೆ ಯಾರಿಗೂ ಆಗಿಬರುತ್ತಿಲ್ಲ. ಎಲ್ಲರೂ ಅವರನ್ನು ಹೊರಗೆ ಇಟ್ಟಿದ್ದಾರೆ. ಆದರೆ, ಇದರಿಂದ ವಿಚಲಿತರಾಗಿದ್ದರೂ 'ಡೋಂಟ್ ಕೇರ್‌' ಎಂಬಂತೆ ತೋರಿಸಿಕೊಂಡು ಅನಿವಾರ್ಯವಾಗಿ ಬಿಗ್ ಮನೆಯ ಆಟ ಮುಂದುವರಿಸಿದ್ದಾರೆ ಚೈತ್ರಾ. ಕ್ಯಾಪ್ಟನ್‌ ಆಗಿರುವ ಹನುಮಂತ ಹೇಗೂ ಮಾತನಾಡುತ್ತಾರೆ, ಸಾಕು ಎಂಬಂತೆ ಸಾಕಷ್ಟು ಎದೆಗಾರಿಕೆ ತೋರಿಸುತ್ತ ತಮ್ಮ ಎಂದಿನ ಆಟವೋ ನಾಟಕವೋ ಎಂಬಂಥ ಕೆಲಸ ಮುಂದುವರಿಸಿದ್ದಾರೆ ಚೈತ್ರಾ ಕುಂದಾಪುರ!

ಕೊಲ್ಕತ್ತಾದಲ್ಲಿ ಕಣ್ಣೀರು ಹಾಕಿದ ಸುಧಾರಾಣಿ; ಅಂಥ ಪರಿಸ್ಥಿತಿ ಅಲ್ಲೇನು ಆಯ್ತು ನೋಡಿ!

 

 

click me!