ಚಿನ್ನುಮರಿಯ ಜಯಂತ್​ ಅಂದ್ರೆ ಸುಮ್ನೆನಾ? ಮೊಲಕ್ಕೂ ಕೊಟ್ಟೇ ಬಿಟ್ಟ 'ಕುಕ್ಕರ್​ ಭಾಗ್ಯ'!

By Suchethana D  |  First Published Nov 1, 2024, 2:03 PM IST

ವೀಕ್ಷಕರ ಊಹೆ ನಿಜವಾಗಿದೆ. ಮೊಲದ ಮೇಲೆ ಜಾಹ್ನವಿ ಅತಿಯಾದ ಪ್ರೀತಿ ತೋರಿಸಿರುವ ಕಾರಣಕ್ಕೆ ಜಯಂತ್​ ಮೊಲವನ್ನೂ ಸಾಯಿಸಿಬಿಟ್ಟಿದ್ದಾನೆ! 
 


ಜಯಂತ್​ ಎನ್ನುವ ಹೆಸ್ರು ಕೇಳಿದ್ರೇನೇ ಸೀರಿಯಲ್​ ಪ್ರೇಮಿ ಮಹಿಳೆಯರಿಗೆ ಭಯ ಹುಟ್ಟೋಕೆ ಶುರುವಾಗುತ್ತೆ. ತಮ್ಮನ್ನು ಹುಚ್ಚನಂತೆ ಪ್ರೀತಿಸೋ ಗಂಡ ಬೇಕು ಎಂದು ಬಯಸುವ ಹೆಣ್ಣುಮಕ್ಕಳು ಈ ಜಯಂತ್​ನನ್ನು ಒಮ್ಮೆ ನೋಡಿಬಿಟ್ಟರೆ ಲೈಫ್​ನಲ್ಲಿ ಮದ್ವೆನೇ ಬೇಡಪ್ಪಾ ಎನ್ನುತ್ತಾರೆ. ಅಂಥ ಕ್ಯಾರೆಕ್ಟರ್​ ಈತನದ್ದು. ಗೊತ್ತಾಗಿರ್ಬೇಕಲ್ಲಾ ಯಾವ ಸೀರಿಯಲ್​ ಅಂತ! ಜೀ ಕನ್ನಡದ ಲಕ್ಷ್ಮೀ ನಿವಾಸ ಸೀರಿಯಲ್​.  ಈ ಸೀರಿಯಲ್​ ನಾಯಕ ಜಯಂತ್​ ಸೈಕೋಪಾತ್​ ಎನ್ನುವುದು ಈ ಸೀರಿಯಲ್​ ವೀಕ್ಷಕರಿಗೆ ಗೊತ್ತು. ಈತನಿಗೆ ಪತ್ನಿಯ ಮೇಲೆ ಅದೆಷ್ಟು ಪ್ರೀತಿ ಎಂದರೆ ಅದೇ ಮುಳ್ಳಾಗುತ್ತಿದೆ. ಏಕೆಂದರೆ, ಈತನಿಗೆ ಪತ್ನಿಯ ಮೇಲೆ ಇರುವುದು ಕೇವಲ ಪ್ರೀತಿ ಅಲ್ಲ, ಇದು Obsessive Love Disorder. ಇದೇ ಕಾರಣಕ್ಕೆ ಪ್ರತಿ ಕ್ಷಣವೂ ಆತನಿಗೆ ಪತ್ನಿಯ ಮೇಲೆ ಸಂಶಯ. ಹಾಗೆಂದು ಸಂಶಯದ ಪಿಶಾಚಿ ಎಂದಲ್ಲ. ಕೆಲವು ಗಂಡಸರಿಗೆ ಮತ್ತು ಹೆಂಗಸರಿಗೆ ಕೂಡ ಸಂಶಯ ಎನ್ನುವುದು ಇರುತ್ತದೆ. ಪತಿ ಅಥವಾ ಪತ್ನಿ ಯಾರ ಜೊತೆಯಾದ್ರೂ ನಗುತ್ತಾ ಮಾತನಾಡಿದ್ರೆ ಅದನ್ನು ಇನ್ನೊಬ್ಬರು ಸಹಿಸುವುದಿಲ್ಲ. ಆದರೆ ಇಲ್ಲಿ ಜಯಂತ್​ ಕ್ಯಾರೆಕ್ಟರ್​ ಹಾಗಲ್ಲ. ಈತನಿಗೆ ಇರುವುದು ಪ್ರೇಮದ ಗೀಳು. ಪತ್ನಿಗೆ ಏನು ಬೇಕೋ ಎಲ್ಲವನ್ನೂ ಮಾಡುತ್ತಾನೆ. ಆದರೆ ಆಕೆ ಮಾತ್ರ ತನ್ನವಳಾಗಿಯೇ ಇರಬೇಕು ಎನ್ನುವ ಸ್ಥಿತಿ. ಅಂದ್ರೆ ಗಂಡಸರಷ್ಟೇ ಅಲ್ಲ, ಪತ್ನಿ ಯಾರ ಬಳಿಯೂ ಚೆನ್ನಾಗಿ ಮಾತನಾಡಬಾರದು. ಅದು ಮನುಷ್ಯರಷ್ಟೇ ಅಲ್ಲ, ಪ್ರಾಣಿ-ಪಕ್ಷಿಗಳ ಮೇಲೂ ಆಕೆ ಅತಿಯಾದ ಪ್ರೀತಿ ತೋರಬಾರದು! ಆಕೆ ಏನಿದ್ದರೂ ತನ್ನವಳಷ್ಟೇ. 


ಇದೇ ಕಾರಣಕ್ಕೆ, ಮನೆಯ ಒಳಗೆ, ಹೊರಗೆ ಎಲ್ಲಾ ಕಡೆಯೂ ಸಿಸಿಟಿವಿ ಹಾಕಿಸಿದ್ದಾನೆ.  ತನ್ನ ಪತ್ನಿ ತನಗೆ ಮಾತ್ರ ಸೇರಿದ್ದು. ಯಾರ ಬಳಿಯೂ ಆಕೆ ಮಾತನಾಡಬಾರದು ಎಂದು. ಅಷ್ಟೇ ಏಕೆ, ತನ್ನ ಅಕ್ಕ, ತಮ್ಮ, ಅಣ್ಣ, ಅಪ್ಪ- ಅಮ್ಮ ಯಾರ ಜೊತೆಯೂ ಅವಳು ಮಾತನಾಡಬಾರದು. ಏಕೆಂದರೆ ಪತ್ನಿ ಏನಿದ್ದರೂ  ನನಗೊಬ್ಬಳಿಗೇ ಸೀಮಿತ ಎನ್ನುವುದು ಆತನ ಮನಸ್ಥಿತಿ.  ಜಾಹ್ನವಿ ಮೇಲಿನ ಪತಿ ಜಯಂತನ ಅತಿಯಾದ ಪ್ರೀತಿ, ಕಾಳಜಿ ವೀಕ್ಷಕರಿಗೆ ಅಸಹನೀಯ ಎನಿಸುತ್ತಿದೆ. ಅದ್ಯಾವ ಮಟ್ಟಿಗೆ ಎಂದರೆ, ಈ ಮಟ್ಟಿಗಿನ ಪ್ರೀತಿ ಉರುಳಾಗುವ ಸಂಭವವೇ ಹೆಚ್ಚು ಎನ್ನುವಷ್ಟರ ಮಟ್ಟಿಗೆ.   ಈ ನಡುವೆ ಜಾಹ್ನವಿ ಮಾತ್ರ ಪತಿ ಜಯಂತನ ಪ್ರೀತಿಗೆ ಕರಗಿದ್ದಾಳೆ ನಿಜ. ಆದರೆ, ಅವನ ಈ ಸ್ವಭಾವಕ್ಕೆ ಚಿಂತಿಸುತ್ತಿದ್ದಾಳೆ. ಆದರೂ ಪತಿಯ ಸ್ವಭಾವ ಅವಳಿಗೆ ತಿಳಿಯುತ್ತಲೇ ಇಲ್ಲ.

Tap to resize

Latest Videos

undefined

ಹುಚ್ಚನಂತೆ ಪ್ರೀತಿಸೋ ಗಂಡ ಸಿಗ್ಲಪ್ಪಾ ಅಂತೀರಾ? ದೇವ್ರು ವರ ಕೊಡೋ ಮೊದ್ಲು ಈ ಮಾನಸಿಕ ಸಮಸ್ಯೆ ಅರಿಯಿರಿ!

 ಇದೀಗ ಪತ್ನಿ ಒಂಟಿಯಾಗಿ ಮನೆಯಲ್ಲಿ ಇದ್ದರೆ ತನ್ನ ಸಂಬಂಧಿಕರ ಜೊತೆ ಫೋನ್​ನಲ್ಲಿ ಮಾತನಾಡುತ್ತಾ ಇರುತ್ತಾಳೆ ಎನ್ನುವ ಕಾರಣಕ್ಕೆ ಮುದ್ದಾದ ಮೊಲ ಒಂದನ್ನು ತರಿಸಿಕೊಟ್ಟಿದ್ದ. ಇನ್ನು ಈ ಪೆದ್ದು ಚಿನ್ನುಮರಿ ಕೇಳಬೇಕೆ? ಅವಳು ಆ ಮುದ್ದಾದ ಮೊದಲ ಜೊತೆ ದಿನಪೂರ್ತಿ ಕಳೆಯ ತೊಡಗಿದಳು. ಗಂಡ ಬಂದರೂ ಅವನ ಮೇಲೆ ಗಮನ ಇಲ್ಲ. ಅವಳ ಗಮನ ಎಲ್ಲಾ ಮೊಲದ ಮೇಲೆ ಇದನ್ನು, ಚಿನ್ನುಮರಿಯ ಈ ಜಯಂತ್​ ಸಹಿಸಿಕೊಳ್ತಾನಾ? ಈ ಚಿನ್ನುಮರಿಗೆ ಹೊರಗಡೆ ಬಂದಾಗ ಮೊಲ ಕಾಣಿಸ್ಲೇ ಇಲ್ಲ. ಎಲ್ಲಿ ಹೋಯ್ತು ನನ್ನ ಮೊಲ ಎಂದು ಕೇಳಿದಾಗ, ಜಯಂತ್​ ಕುಕ್ಕರ್​ ಬಳಿ ನೋಡ್ತಾನೆ. ಅಲ್ಲಿ ಕುಕ್ಕರ್​ ಸೀಟಿಯಾಗುತ್ತಿದೆ. ಅಲ್ಲಿಗೆ ಕುಕ್ಕರ್​ ಒಳಗೆ ಮೊಲ ಬೇಯುತ್ತಿದೆ ಎನ್ನುವುದನ್ನು ತೋರಿಸಲಾಗಿದೆ.

ಅಷ್ಟಕ್ಕೂ ಮೊಲವನ್ನು ಮನೆಗೆ ತಂದಾಗಲೇ ನೆಟ್ಟಿಗರು ಈ ಬಗ್ಗೆ ಅಂದಾಜು ಮಾಡಿದ್ದರು. ಏಕೆಂದರೆ, ಜಯಂತ್​ನ ಹುಚ್ಚು  ಮನುಷ್ಯರ ಮೇಲಷ್ಟೇ ಅಲ್ಲ, ಕ್ರಿಮಿ ಕೀಟಗಳಿಗೂ ವಿಸ್ತರಿಸಿರೋ ಬಗ್ಗೆ ಈ ಚಿನ್ನುಮರಿಗೆ ಗೊತ್ತಿಲ್ಲದಿದ್ರೂ ವೀಕ್ಷಕರಿಗೆ ಗೊತ್ತಲ್ಲ! ಒಮ್ಮೆ ಜಿರಳೆ ಒಂದು ಜಾಹ್ನವಿಯ ಮೈಮೇಲೆ ಹರಿದಾಡಿತು ಎನ್ನುವ ಕಾರಣಕ್ಕೆ ಅದನ್ನು ಎತ್ತಿ ನನ್ನ ಹೆಂಡತಿ ಮೈಯನ್ನೇ ಮುಟ್ಟುತ್ತಿಯಾ ನೀನು, ತಡಿ ನಿನಗೆ ಪನಿಷ್​ಮೆಂಟ್​ ಕೊಡುತ್ತೇನೆ ಎಂದು ಅದನ್ನು ಬಿಸಿಯಾಗಿರೋ ಹಾಲಿಗೆ ಹಾಕಿ ಸಾಯಿಸಿದ್ದಾನೆ. ನಂತರ ಅದನ್ನೇ ಕುಡಿದಿದ್ದ. ಅಷ್ಟಕ್ಕೂ ಇದನ್ನು ಸೀರಿಯಲ್​ ಸಂತೆ ವೇದಿಕೆ ಮೇಲೆ ಜಯಂತ್​ ತಮಾಷೆಗೆ ಮಾಡಿ ತೋರಿಸಿದ್ದರೂ ಸೀರಿಯಲ್​ನಲ್ಲಿ ಅವನ ಪಾತ್ರ ಅದೇ ಅಲ್ವಾ? ಒಟ್ಟಿನಲ್ಲಿ ಜಾಹ್ನವಿಗೆ ತನ್ನ ಗಂಡನ ವರ್ತನೆ ಗೊತ್ತಾಗತ್ತಾ? ಅವಳು ಮುಂದೇನು ಮಾಡ್ತಾಳೆ ಎನ್ನುವುದೇ ಸದ್ಯಕ್ಕಿರುವ ಕುತೂಹಲ. ಇನ್ನು ಯಾರ್ಯಾರು ಪ್ರಾಣ ಕಳೆದುಕೊಳ್ಳಬೇಕೋ ಎನ್ನುವ ಆತಂಕದಲ್ಲಿದ್ದಾರೆ ಸೀರಿಯಲ್ ಪ್ರೇಮಿಗಳು!

ದೀಪಾವಳಿ ಧಮಕಾ! ಸೀರೆ ಕಳಚಿ ಮಿನಿ ಡ್ರೆಸ್​ನಲ್ಲಿ ಭಾಗ್ಯ... ತಾಂಡವ್​ ಮಾಸ್ಟರ್​ಪ್ಲ್ಯಾನ್ ವರ್ಕ್​ ಆಗತ್ತಾ?

click me!