ಬಿಗ್ ಬಾಸ್ ಮನೆಯಲ್ಲಿ ತುಕಾಲಿ ಸಂತು ಜೋಕ್; ಕಿಚ್ಚ ಸುದೀಪ್ ಜತೆ ನಕ್ಕು ಸುಸ್ತಾದ ಮನೆಯ ಸದಸ್ಯರು!

Published : Dec 03, 2023, 02:58 PM ISTUpdated : Dec 03, 2023, 06:37 PM IST
ಬಿಗ್ ಬಾಸ್ ಮನೆಯಲ್ಲಿ ತುಕಾಲಿ ಸಂತು ಜೋಕ್; ಕಿಚ್ಚ ಸುದೀಪ್ ಜತೆ ನಕ್ಕು ಸುಸ್ತಾದ ಮನೆಯ ಸದಸ್ಯರು!

ಸಾರಾಂಶ

ತುಕಾಲಿ ಸಂತೋಷ್ ಅವರು ವರ್ತೂರು ಸಂತೋಷ್ ಬಗ್ಗೆ ಹೇಳಿದ್ದಾರೆ. ತನಿಷಾ ಅವರನ್ನು ಫ್ರೆಂಡ್ ಎಂದು ಹೇಳಿ ವರ್ತೂರು ಸಂತೋಷ್ ತಮ್ಮ ಮೇಲಿನ ಭವಿಷ್ಯಕ್ಕೆ ಪೂರ್ಣ ವಿರಾಮ ಇಟ್ಟಿದ್ದಾರೆ. ಬಳಿಕ ನಮ್ರತಾ ಬಗ್ಗೆ ಸುತ್ತ ಬಳಸಿ ಸಣ್ಣದೊಂದು ಕಾಮೆಂಟ್ ಬಂದಿದೆ. ಎಲ್ಲಕ್ಕಿಂತ ಹೆಚ್ಚು ಸುದೀಪ್ ಸೇರಿದಂತೆ ಎಲ್ಲರನ್ನೂ ನಗಿಸಿದ ಸಂಗತಿ ಎಂದರೆ, ತುಕಾಲಿ ಸಂತು ಪ್ರತಾಪ್ ಬಗ್ಗೆ ಹೇಳಿರುವ ಜೋಕ್! 

ಬಿಗ್ ಬಾಸ್ ಕನ್ನಡ ಸೀಸನ್ 10ರ ಮನೆಯಲ್ಲಿ ನಿನ್ನೆ ವೀಕೆಂಡ್‌ನಲ್ಲಿ 'ಸೂಪರ್ ಸಂಡೇ ವಿತ್ ಕಿಚ್ಚ ಸುದೀಪ' ಸಂಚಿಕೆ ಪ್ರಸಾರವಾಯಿತು. ಇದರಲ್ಲಿ ತುಕಾಲಿ ಸಂತೋಷ್ ಅವರು ಬ್ರಹ್ಮಾಂಡ ಗುರೂಜಿ ಸ್ಟೈಲ್‌ನಲ್ಲಿ ಕೆಲವರ ಭವಿಷ್ಯ ಹೇಳಿದರು. ಕಿಚ್ಚ ಸುದೀಪ್ ಅವರೇ ಸ್ವತಃ ತುಕಾಲಿ ಸಂತೋಷ್ ಅವರಿಗೆ ಭವಿಷ್ಯ ಹೇಳಿ ಎಂದು ಆಹ್ವಾನಿಸಿದ್ದಾರೆ. ಅದಕ್ಕೆ ಸಂತೋಷದಿಂದಲೇ ಒಪ್ಪಿ ಭವಿಷ್ಯ ಹೇಳಿರುವ ತುಕಾಲಿ ಸಂತು 'ಪ್ರತಾಪ್ ಆರಕ್ಕೆ ಏರಲ್ಲ ಮೂರಕ್ಕೆ ಇಳಿಯಲ್ಲ' ಎಂದಿದ್ದಾರೆ. ತುಕಾಲಿ ಸಂತೋಷ್ ಮಾತಿಗೆ ಸುದೀಪ್ ಬಿದ್ದು ಬಿದ್ದು ನಕ್ಕಿದ್ದಾರೆ. 

ಬಳಿಕ, ತುಕಾಲಿ ಸಂತೋಷ್ ಅವರು ವರ್ತೂರು ಸಂತೋಷ್ ಬಗ್ಗೆ ಹೇಳಿದ್ದಾರೆ. ತನಿಷಾ ಅವರನ್ನು ಫ್ರೆಂಡ್ ಎಂದು ಹೇಳಿ ವರ್ತೂರು ಸಂತೋಷ್ ತಮ್ಮ ಮೇಲಿನ ಭವಿಷ್ಯಕ್ಕೆ ಪೂರ್ಣ ವಿರಾಮ ಇಟ್ಟಿದ್ದಾರೆ. ಬಳಿಕ ನಮ್ರತಾ ಬಗ್ಗೆ ಸುತ್ತ ಬಳಸಿ ಸಣ್ಣದೊಂದು ಕಾಮೆಂಟ್ ಬಂದಿದೆ. ಎಲ್ಲಕ್ಕಿಂತ ಹೆಚ್ಚು ಸುದೀಪ್ ಸೇರಿದಂತೆ ಎಲ್ಲರನ್ನೂ ನಗಿಸಿದ ಸಂಗತಿ ಎಂದರೆ, ತುಕಾಲಿ ಸಂತು ಪ್ರತಾಪ್ ಬಗ್ಗೆ ಹೇಳಿರುವ ಜೋಕ್! ಅದನ್ನು ಕೇಳಿ ಕಾರ್ತಿಕ್ ಅವರಂತೂ ಚಪ್ಪಾಳೆ ತಟ್ಟಿ ಬಹಳ ಜೋರಾಗಿ ನಕ್ಕಿದ್ದಾರೆ. ಸುದೀಪ್ ಸೇರದಂತೆ ಎಲ್ಲರೂ ಗಹಗಹಿಸಿ ನಕ್ಕಿದ್ದಾರೆ. ಸ್ವತಃ ಡ್ರೋನ್ ಪ್ರತಾಪ್ ಕೂಡ ನಕ್ಕಿದ್ದಾರೆ.

ಗಂಡು ಮಕ್ಕಳಿಗೆ ಅಪ್ಪ ಏನು ಕಲಿಸಬೇಕೆಂದು ಹೇಳಿಕೊಟ್ಟ ನಟಿ ಸಾಯಿ ಪಲ್ಲವಿ! 

ಹಾಗಿದ್ದರೆ ತುಕಾಲಿ ಸಂತೋಷ್ ಅವರು ಪ್ರತಾಪ್ ಬಗ್ಗೆ ಹೇಳಿದ ಜೋಕ್ ಏನು ಗೊತ್ತೇ? 'ಚಿಕ್ಕ ಮಕ್ಕಳ ತರ ಇರ್ಬೇಡ್ವೋ, ಎಲ್ರೂ ಹಾಲು ಕುಡಿಸಿ ಹೋಗ್ತಾರೆ ಅಂತ ಹೇಳ್ತಾನೇ ಇರ್ತೀನಿ' ಎಂದಿದ್ದಾರೆ ತುಕಾಲಿ ಸಂತು. ಅವರ ಜೋಕ್ ಕೇಳಿ ಎಲ್ಲರೂ ಒಮ್ಮೆಗೇ ನಕ್ಕು ಇಡೀ ಬಿಗ್ ಬಾಸ್ ಮನೆಯನ್ನು ಒಂದು ಕ್ಷಣ ನಗೆಗೂಡನ್ನಾಗಿ ಮಾಡಲಾಗಿದೆ. ಒಟ್ಟಿನಲ್ಲಿ, ಬಿಗ್ ಬಾಸ್ ಮನೆಯಲ್ಲಿ ಈ ಸೂಪರ್ ಸಂಡೇ ಯಾರು ಎಲಿಮಿನೇಟ್ ಆಗುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ನಾನು ಗಂಡಸರ ಜತೆ ಕಾಲ ಕಳೆಯುವುದಿಲ್ಲ; ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್

ಬಿಗ್ ಬಾಸ್‌ ಮನೆಯಲ್ಲಿ ಏನೇನು ನಡೆಯುತ್ತಿದೆ ಎಂಬುದನ್ನು ತಿಳಿಯಲು 'JioCinema'ದಲ್ಲಿ ಪ್ರಕಟವಾಗುತ್ತಿರುವ ಬಿಗ್‌ಬಾಸ್ ಕನ್ನಡ ನೇರಪ್ರಸಾರವನ್ನು ವೀಕ್ಷಿಸಬಹುದು. ಬಿಗ್‌ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು JioCinemaದಲ್ಲಿ ಉಚಿತವಾಗಿ ನೋಡಬಹುದು. ಪ್ರತಿದಿನದ ಎಪಿಸೋಡ್‌ಗಳನ್ನು Colors Kannada ದಲ್ಲಿ ರಾತ್ರಿ 9.30ಕ್ಕೆ, ಶನಿವಾರ-ಭಾನುವಾರ ರಾತ್ರಿ 9.00 ಕ್ಕೆ  ವೀಕ್ಷಿಸಬಹುದು. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಪದೇ ಪದೇ ಕಿಚ್ಚ ಸುದೀಪ್‌ ಹೇಳ್ತಿರುವಂತೆ ರಜತ್‌ ವೈರಲ್ ವಿಡಿಯೋ ಅಸಲಿ ವಿಷಯ ಏನು? ಅಂಥದ್ದೇನಿದೆ?
ಏನೂ ಮಾಡದೆ ಸ್ಪಂದನಾ ಸೋಮಣ್ಣ Bigg Boss ಮನೇಲಿ ಇರೋದು ಹೇಗೆ? ಕಿಚ್ಚ ಸುದೀಪ್‌ ಬಿಚ್ಚಿಟ್ಟ ಸತ್ಯ ಏನು?