ಮಗು ಥರ ಇರ್ಬೆಡ್ವೋ... ಎಲ್ಲರೂ ಹಾಲು ಕುಡಿಸಿ ಹೋಗ್ತಾರೆ ಅಂತ ಡ್ರೋನ್​ಗೆ ಹೇಳ್ತಾನೇ ಇದ್ದೇನೆ...

Published : Dec 03, 2023, 01:09 PM IST
ಮಗು ಥರ ಇರ್ಬೆಡ್ವೋ... ಎಲ್ಲರೂ ಹಾಲು ಕುಡಿಸಿ ಹೋಗ್ತಾರೆ ಅಂತ ಡ್ರೋನ್​ಗೆ ಹೇಳ್ತಾನೇ ಇದ್ದೇನೆ...

ಸಾರಾಂಶ

ಉಳಿದ ಸ್ಪರ್ಧಿಗಳ ಭವಿಷ್ಯ ಹೇಳಿ ಎಂದು ತುಕಾಲಿ ಸಂತೋಷ್​ ಅವರಿಗೆ ಕಿಚ್ಚ ಸುದೀಪ್​ ಹೇಳಿದಾಗ, ಡ್ರೋನ್​ ಪ್ರತಾಪ್​ ಬಗ್ಗೆ ಅವರು ಹೇಳಿದ್ದೇನು?  

ಬಿಗ್ ಬಾಸ್‌ ಕನ್ನಡ 10 ರಿಯಾಲಿಟಿ ಷೋ  ಆರಂಭವಾಗಿ ಎಂಟು ವಾರ ಕಳೆದಿದ್ದು, ಮನೆಯಲ್ಲಿ ದಿನೇ ದಿನೇ ಸ್ಪರ್ಧೆ ಟಫ್​ ಆಗುತ್ತಾ ಸಾಗಿದೆ. ಇದಾಗಲೇ ಹಲವಾರು ಟಾಸ್ಕ್​ಗಳನ್ನು ಸ್ಪರ್ಧಿಗಳು ನಡೆಸಿಕೊಟ್ಟಿದ್ದಾರೆ. ವಿನಯ್​, ತನಿಷಾ, ತುಕಾಲಿ ಸಂತೋಷ್​, ವರ್ತೂರು ಸಂತೋಷ್​, ಡ್ರೋನ್​ ಪ್ರತಾಪ್, ಕಾರ್ತಿಕ್​ ಸೇರಿದಂತೆ ಇತರ ಸ್ಪರ್ಧಿಗಳ​ ನಡುವೆ ಸ್ಪರ್ಧೆ ಹೆಚ್ಚಾಗಿದ್ದು, ಬಿಗ್​ಬಾಸ್​ ಮನೆಯ ಹೊರಗೂ ಇವರ ಫ್ಯಾನ್ಸ್​ ತಮ್ಮ ತಮ್ಮ ನೆಚ್ಚಿನ ಸ್ಪರ್ಧಿಗಳ ಗೆಲುವಿಗೆ ಸರ್ಕಸ್​  ಮಾಡುತ್ತಿದ್ದಾರೆ. ಇದರ ನಡುವೆ ವಾರಾಂತ್ಯದಲ್ಲಿ ಕಾಣಿಸಿಕೊಳ್ಳುವ ಕಿಚ್ಚ ಸುದೀಪ್​ ಅವರು ಹಾಸ್ಯದ ಮಾತಿನಿಂದ ಬಿಗ್​ಬಾಸ್​ ಸ್ಪರ್ಧಿಗಳಿಗೆ ನಗುವಿನ ಟಾನಿಕ್​ ನೀಡುತ್ತಿದ್ದಾರೆ.

ಇದೀಗ ತುಕಾಲಿ ಸಂತೋಷ್​ ಅವರನ್ನು ಉದ್ದೇಶಿಸಿ ಸುದೀಪ್​ ಅವರು, ತುಕಾಲಿಯವರೇ ಒಬ್ಬೊಬ್ಬರ ಭವಿಷ್ಯ ಹೇಳಿ ಎಂದಿದ್ದಾರೆ. ಪ್ರತಾಪ್​ ಹೆಸರನ್ನು ಸುದೀಪ್​ ಅವರು ಹೇಳಿದಾಗ, ತುಕಾಲಿ ಸಂತೋಷ್​ ಅವರು, ಪ್ರತಾಪ್​ ಆರಕ್ಕೆ ಏರ್ತಿಲ್ಲ, ಮೂರಕ್ಕೆ ಇಳಿತೀಲ್ಲ. ಅವನಿಗೆ ನಾನು ಯಾವಾಗ್ಲೂ ಹೇಳ್ತಾನೇ ಇರ್ತೇನೆ.  ಮಗು ಥರ ಇರ್ಬೆಡ್ವೋ... ಎಲ್ಲರೂ ಹಾಲು ಕುಡಿಸಿ ಹೋಗ್ತಾರೆ ಎಂದು ಎಂದು ತಮಾಷೆ ಮಾಡಿದಾಗ ಎಲ್ಲರೂ ನಕ್ಕಿದ್ದಾರೆ. ಇದೇ ವೇಳೆ ತನಿಷಾ ಕಾಲಿಗೆ ಏಟು ಮಾಡಿಕೊಂಡು ಚಿಕಿತ್ಸೆಗೆಂದು ಬಿಗ್​ಬಾಸ್​ನಿಂದ ಎರಡು ದಿನ ಹೊರಕ್ಕೆ ಹೋಗಿದ್ದ ವೇಳೆ ಆಕೆಯನ್ನು ತುಂಬಾ ಮಿಸ್​ ಮಾಡಿಕೊಂಡಿದ್ದ ವರ್ತೂರ್​ ಸಂತೋಷ್​ ಅವರನ್ನು ಕಿಚ್ಚ ಸುದೀಪ್​ ಹಾಗೂ ತುಕಾಲಿ ಸಂತೋಷ್​ ತಮಾಷೆ ಮಾಡಿದ್ದಾರೆ. ಇದರ ಪ್ರೊಮೋ ಅನ್ನು ಕಲರ್ಸ್ ಕನ್ನಡ ಚಾನೆಲ್​ ಸೋಷಿಯಲ್​  ಮೀಡಿಯಾದಲ್ಲಿ ಬಿಡುಗಡೆ ಮಾಡಿದೆ. 

ಬೆಂಕಿ ಇಲ್ಲದಿದ್ರೂ ಅದರ ನೆನಪಲ್ಲೇ ಬೆಂದಿದ್ದು ಯಾರು? ವರ್ತೂರು ಕಾಲೆಳೆದ ಕಿಚ್ಚ ಸುದೀಪ್​!

 ಇನ್ನು ಡ್ರೋನ್​ ಪ್ರತಾಪ್​ ಕುರಿತು ಹೇಳುವುದಾದರೆ,  ಡ್ರೋನ್​ ಮಾಡುವುದಾಗಿ ಹೇಳಿ ಹಲವರನ್ನು ನಂಬಿಸಿ ಮೋಸ ಮಾಡಿರೋ ಆರೋಪ ಹೊತ್ತು ಬಿಗ್​ಬಾಸ್​ ಹೊರಗಡೆ ಇದಾಗಲೇ ಸಾಕಷ್ಟು ಹೆಸರು ಕೆಡಿಸಿಕೊಂಡಿರೋ ಡ್ರೋನ್​ ಪ್ರತಾಪ್​, ಬಿಗ್​ಬಾಸ್​ ಮನೆಯಲ್ಲಿ ಸಕತ್​ ಒಳ್ಳೆಯ ಮನುಷ್ಯನಾಗಿರಲು ಟ್ರೈ ಮಾಡುತ್ತಿರುವುದು ಮೊದಲಿನಿಂದಲೂ ಕಂಡುಬರುತ್ತಿದೆ. ತಾವಾಯಿತು ತಮ್ಮ ಕೆಲಸವಾಯಿತು ಎಂದುಕೊಂಡು ಯಾರ ತಂಟೆಗೂ ಹೆಚ್ಚು ಹೋಗದೇ, ಸನ್ನಡತೆಯನ್ನು ತೋರಲು ಟ್ರೈ ಮಾಡುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಇದೇ ಕಾರಣಕ್ಕೆ ಇವರಿಗೆ ಇದಾಗಲೇ ಅನೇಕ ಮಂದಿ ಡ್ರೋನ್​ ಪ್ರತಾಪ್​ ಫ್ಯಾನ್ಸ್​ ಪೇಜ್​ ಮೂಲಕ ಅಭಿಮಾನಿಗಳು ಸಪೋರ್ಟ್​ ಮಾಡುತ್ತಿದ್ದಾರೆ. ಇವರೇ ಗೆಲ್ಲಬೇಕು ಎನ್ನುತ್ತಿದ್ದಾರೆ.   

ಕೆಲ ದಿನಗಳ ಹಿಂದಷ್ಟೇ  ಡ್ರೋನ್​ ತಮ್ಮ ಮುಂದಿನ ಪ್ಲ್ಯಾನ್​ ಕುರಿತು ತಿಳಿಸಿದ್ದರು. ಬಿಗ್​ಬಾಸ್ ಮನೆಯಿಂದ ಹೊರಕ್ಕೆ ಹೋದ ಮೇಲೆ, ಮೊದಲಿಗೆ  ಅಮ್ಮನಿಗೆ ಎರಡು ಚಿನ್ನದ ಬಳೆ ಕೊಡಿಸುವೆ. ತಂಗಿಯೂ ಮದುವೆ ವಯಸ್ಸಿಗೆ ಬಂದಿದ್ದಾಳೆ. ಆಕೆಗೂ ಒಳ್ಳೆಯ ಗಂಡು ನೋಡಿ ಮದುವೆ ಮಾಡುತ್ತೇನೆ ಎಂದು ಈ ಹಿಂದಿನ ಎಪಿಸೋಡ್​ನಲ್ಲಿ ಡ್ರೋನ್​  ಪ್ರತಾಪ್ ಹೇಳಿದ್ದರು​. ನಂತರ ಅಪ್ಪನ ಕುರಿತು ಮಾತನಾಡಿದ ಅವರು,  ನಾನು ಒಮ್ಮೆ ಅಪ್ಪನನ್ನು ಮುಟ್ಟಿ ಮಾತನಾಡಿಸಬೇಕು. ಜತೆಗೆ ಅಪ್ಪನ ತೋಟದಲ್ಲಿ ನಾನೇ ಮಾಡಿದ ಡ್ರೋನ್‌ ಇದೆ, ಅದನ್ನೇ ಬಳಕೆ ಮಾಡ್ತಿನಿ. ನನ್ನ ಕಡೆಯಿಂದ ಏನಾದರೂ ಮಷಿನ್‌ ಮಾಡಿ ಕೊಡುವ ಪ್ಲ್ಯಾನ್‌ ಇದೆ. ಅವರ ಕೈಗೆ ಡ್ರೋನ್‌ ಕೊಟ್ಟು ಹಾರಿಸ್ತಿನಿ. ಅದು ಹೇಗೆ ವರ್ಕ್‌ ಆಗುತ್ತೆ ಎಂದು ಅವರಿಂದಲೇ ತೋರಿಸ್ತಿನಿ ಎಂದಿದ್ದರು.  

ಅಮೃತಧಾರೆ ಗೌತಮ್‌ ರಿಯಲ್‌ ಅತ್ತೆ ಭಾವಿ ಅಳಿಯನ ಬಗ್ಗೆ ಕಂಡಿದ್ದ ಕನಸೇನು? ಆಗಿದ್ದೇನು?
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಏನೂ ಮಾಡದೆ ಸ್ಪಂದನಾ ಸೋಮಣ್ಣ Bigg Boss ಮನೇಲಿ ಇರೋದು ಹೇಗೆ? ಕಿಚ್ಚ ಸುದೀಪ್‌ ಬಿಚ್ಚಿಟ್ಟ ಸತ್ಯ ಏನು?
Bigg Boss: ದುಷ್ಮನ್‌ಗೂ ಯಾರೂ ಹೀಗೆ ಮಾಡಲ್ಲ- ಕೊನೆಗೂ ರಿವೀಲ್‌ ಆಯ್ತು ರಘು ದ್ವೇಷದ ಕಾರಣ