ತನಿಷಾ ಅವರು ಕಾಲಿಗೆ ಏಟು ಮಾಡಿಕೊಂಡು ಚಿಕಿತ್ಸೆಗೆಂದು ಬಿಗ್ಬಾಸ್ ಮನೆಯಿಂದ ಹೋದಾಗ ಅವರನ್ನು ತುಂಬಾ ಮಿಸ್ ಮಾಡಿಕೊಂಡಿದ್ದ ವರ್ತೂರು ಸಂತೋಷ್ ಅವರ ಕಾಲೆಳೆದಿದ್ದಾರೆ ಕಿಚ್ಚ ಸುದೀಪ್!
ಬಿಗ್ ಬಾಸ್ ಕನ್ನಡ ಸೀಸನ್ 10 ಆರಂಭವಾಗಿ ಎಂಟು ವಾರಗಳು ಉರುಳಿವೆ. ಬಿಗ್ಬಾಸ್ ಮನೆಯಲ್ಲಿ ಇದೀಗ ಆಟದ ಭರಾಟೆ ಜೋರಾಗಿಯೇ ನಡೆದಿದೆ. ಆಟ ಎಂದ ಮೇಲೆ ತಾವು ಗೆಲ್ಲಬೇಕು ಎನ್ನುವುದು ಎಲ್ಲ ಸ್ಪರ್ಧಿಗಳ ಬಯಕೆ ಸಹಜವೇ. ಆದರೆ ಆಟದ ಹೆಸರಿನಲ್ಲಿ ಇದಾಗಲೇ ಬಿಗ್ಬಾಸ್ ಮನೆಯೊಳಕ್ಕೆ ಈ ಹಿಂದೆಯೂ ದೊಡ್ಡ ದೊಡ್ಡ ಜಗಳಗಳೇ ನಡೆದು ಹೋಗುವೆ. ಬಿಗ್ಬಾಸ್ ಮನೆ ಎಂದರೆ ಅದರಲ್ಲಿ ಕಾದಾಟ, ಹೊಡೆದಾಟ, ಬಡಿದಾಟದ ತಾಣವೇ ಎನ್ನುವುದರಲ್ಲಿ ಎರಡು ಮಾತಿಲ್ಲ. ಇಲ್ಲಿ ಏನು ಬೇಕಾದರೂ ನಡೆಯುತ್ತದೆ. ಇದೇ ಕಾರಣಕ್ಕೆ ಟಿಆರ್ಪಿ ಕೂಡ ಹೆಚ್ಚಾಗುತ್ತದೆ. ಅದೇ ರೀತಿ ಕನ್ನಡದ ಬಿಗ್ಬಾಸ್ನಲ್ಲಿ ಕೂಡ ಹೊಡಿಬಡಿ ಮಿತಿ ಮೀರುತ್ತಲೇ ಸಾಗಿದೆ. ಇದಾಗಲೇ ಇಬ್ಬರ ವೈಲ್ಡ್ ಕಾರ್ಡ್ ಎಂಟ್ರಿ ಆಗಿದೆ. ಒಬ್ಬರು ಫ್ಯಾಷನ್ ಮಾಡೆಲ್ ಪವಿ ಪೂವಪ್ಪ ಮತ್ತೊಬ್ಬರು ಕ್ರಿಕೆಟರ್, ಫ್ಯಾಷನ್ ಮಾಡೆಲ್ ಅವಿನಾಶ್ ಶೆಟ್ಟಿ. ಇದರ ಬೆನ್ನಲ್ಲೇ ಬಿಗ್ಬಾಸ್ ಸ್ಪರ್ಧಿಗಳಿಗೆ ಆಟದ ಟಾಸ್ಕ್ ಒಂದರ ಮೇಲೊಂದರಂತೆ ನೀಡಲಾಗುತ್ತಿದ್ದು, ಇದು ಹೊಡೆದಾಟ, ಬಡಿದಾಟಕ್ಕೂ ಕಾರಣವಾಗ್ತಿದೆ. ಇದೀಗ ಕಾಲ್ತುಳಿತವೂ ಆಗಿದ್ದು, ಒಬ್ಬರ ಮೇಲೊಬ್ಬರು ಸ್ಪರ್ಧಿಗಳು ಬಿದ್ದು ಒದ್ದಾಡಿದ್ದಾರೆ.
ಈ ಸಂದರ್ಭದಲ್ಲಿ ಹನಿ ಹನಿ ಕಹಾನಿ ಟಾಸ್ಕ್ ಮಾಡುವ ಸಮಯದಲ್ಲಿ ತನಿಷಾ ಅವರಿಗೆ ಕಾಲಿಗೆ ಏಟು ಬಿದ್ದು ಚಿಕಿತ್ಸೆಗಾಗಿ ಕರೆದುಕೊಂಡು ಹೋಗಲಾಗಿತ್ತು. ಎರಡು ದಿನಗಳ ಬಳಿಕ ಮೊನ್ನೆ ಶುಕ್ರವಾರ ತನಿಷಾ ವಾಪಸಾಗಿದ್ದಾರೆ. ಆದರೆ ಇದಾಗಲೇ ತನಿಷಾ - ವರ್ತೂರು ಸಂತೋಷ್ ಮಧ್ಯೆ ಅನುಬಂಧ ಬೆಳೆಯುತ್ತಿದ್ದು, ತನಿಷಾ ಇಲ್ಲದೆಯೇ ವರ್ತೂರು ಚಡಪಡಿಸಿದ್ದನ್ನು ನೋಡಬಹುದಾಗಿತ್ತು. ತನಿಷಾ ವಾಪಸದಾಗ ಮೇಲೆ ಫುಲ್ ಸಂತೋಷಗೊಂಡಿರುವ ವರ್ತೂರು ಸಂತೋಷ್, ನೀನಿಲ್ಲದೆ ಮನೆ ಖಾಲಿ ಖಾಲಿ ಅನಿಸುತ್ತಿತ್ತು. ದೇವರ ಹತ್ತಿರ ದಿನವೂ ಕುಳಿತು ನೀನು ಬೇಗ ಹುಷಾರಾಗಲಿ ಎಂದು ಕೇಳಿಕೊಳ್ಳುತ್ತಿದ್ದೆ ಎಂದಿದ್ದರು.
ಕಾಲಿಗೆ ಹಗ್ಗ ಕಟ್ಟಿಕೊಂಡು ಆಡುವ ಭರದಲ್ಲಿ ಕಾಲ್ತುಳಿತ, ಒಬ್ಬರ ಮೇಲೊಬ್ಬರು ಬಿದ್ದು ಒದ್ದಾಡಿದ ಸ್ಪರ್ಧಿಗಳು!
ಇದೀಗ ಇದನ್ನೇ ತಮಾಷೆಯ ರೂಪದಲ್ಲಿ, ಕಿಚ್ಚ ಸುದೀಪ್ ಕೇಳಿದ್ದಾರೆ. ತುಕಾಲಿಯವರೇ ನೀವು ಒಬ್ಬೊಬ್ಬರ ಭವಿಷ್ಯ ಹೇಳಿ ಎಂದಾಗ ತನಿಷಾ ಅವರ ಹೆಸರನ್ನು ಸುದೀಪ್ ತೆಗೆದುಕೊಂಡಿದ್ದಾರೆ. ಆಗ ತುಕಾಲಿ ಸಂತೋಷ್, ಈ ಕಡೆ ದೃಷ್ಟಿ ಬೀರುತ್ತೇನೆ ಎಂದು ವರ್ತೂರು ಸಂತೋಷ್ ಕಡೆ ತಿರುಗಿದರು. ನಂತರ ತನಿಷಾಗೆ ಕೇಳುವ ಮೊದಲು ಇವರಿಗೆ ಕೇಳಬೇಕು. ಅವರು ಓಕೆನಾ ಎಂದು ವರ್ತೂರು ಕಾಲೆಳೆದಾಗ, ವರ್ತೂರು, ಇಲ್ಲಾ ಎಂದರು. ಆಗ ಉಳಿದ ಸ್ಪರ್ಧಿಗಳು ಗೊಳ್ಳೆಂದು ನಕ್ಕರು. ಇಷ್ಟಾಗುತ್ತಿದ್ದಂತೆಯೇ, ಕಿಚ್ಚ ಸುದೀಪ್, ಮನೆಯಲ್ಲಿ ಬೆಂಕಿ ಇಲ್ಲದಾಗ ವರ್ತೂರು ಅವರು, ಬೆಂಕಿಯ ನೆನಪಲ್ಲೇ ಬೇಯುತ್ತಿದ್ದರು ಎಂದರು. ಅಷ್ಟಕ್ಕೂ ವರ್ತೂರು ಪ್ರಕಾಶ್ ತನಿಷಾ ಅವರನ್ನು ಬೆಂಕಿ ಎಂದೇ ಕರೆಯುವುದು ಬಿಗ್ಬಾಸ್ ಪ್ರೇಮಿಗಳಿಗೆ ತಿಳಿದದ್ದೇ. ಇದಕ್ಕೆ ಕಾಲೆಳೆದಾಗ ವರ್ತೂರು, ಹಾಗೇನಿಲ್ಲ. ಅವಳು ನನ್ನಿಂದಲೇ ಬಿದ್ದಿದ್ದಳಲ್ಲ. ಅದಕ್ಕೇ ಏನಾಯ್ತೋ ಅಂತ ಅಷ್ಟೇ ಎಂದರು. ಅದಕ್ಕೆ ಸುದೀಪ್ ಹಾಗಿದ್ರೆ ಇದು ಸಿಂಪಥಿ, ಬೇರೇನೂ ಅಲ್ಲ ಎಂದರು. ಅದಕ್ಕೆ ವರ್ತೂರು ಫ್ರೆಂಡ್ಷಿಪ್ ಅಣ್ಣ ಎಂದಾಗ ಮತ್ತೆ ಎಲ್ಲರೂ ನಕ್ಕರು.
ಒಬ್ಬರ ಕಾಲಿಗೆ ಇನ್ನೊಬ್ಬರು ಹಗ್ಗವನ್ನು ಕಟ್ಟಿಕೊಂಡು ಆಡುವ ಆಟದಲ್ಲಿ ಮೊನ್ನೆಯಷ್ಟೇ ಎರಡು ತಂಡಗಳ ನಡುವೆ ಭಾರಿ ಜಗಳವಾಗಿತ್ತು. ಎರಡು ತಂಡಗಳನ್ನುಮಾಡಲಾಗಿದ್ದು, ಅವರು ಕುಂಟುತ್ತಾ ಹೋಗಬೇಕು. ಅಲ್ಲಿದ್ದ ಚೆಂಡುಗಳನ್ನು ಎತ್ತಿ ತಮ್ಮ ತಂಡಕ್ಕೆ ಮೀಸಲು ಇರಿಸಿದ ಡಬ್ಬದಲ್ಲಿ ಹಾಕಬೇಕು. ಈ ಸಂದರ್ಭದಲ್ಲಿ ಪ್ರತಾಪ್ ಸೇರಿದಂತೆ ಸ್ಪರ್ಧಿಗಳೆಲ್ಲಾ ಒಬ್ಬರ ಮೇಲೊಬ್ಬರಂತೆ ಬಿದ್ದು ಒದ್ದಾಡಿದ್ದರು. ವಿನಯ್ ಉಗ್ರರೂಪ ತಾಳಿ ಹೀಗೆ ಏಟು ಮಾಡಿಕೊಂಡು ಆಡುವ ಅವಶ್ಯಕತೆ ಇಲ್ಲ ಎಂದಿದ್ದರು. ಆಗ ನಮ್ರತೆ ಕಣ್ಣಲ್ಲಿ ಜೋರಾಗಿ ಕಣ್ಣೀರು ಸುರಿದಿದೆ. ನಮಗೂ ಏಟಾಗಿದೆ, ನಮ್ಮ ಮೇಲೂ ಬಿದ್ದಿದ್ದಾರೆ. ನಮಗೂ ಏಟಾಗಿದೆ ಎಂದಿದ್ದಾರೆ. ಒಟ್ಟಿನಲ್ಲಿ ಎರಡೂ ತಂಡಗಳ ನಡುವೆ ಮಾತಿನ ಚಕಮಕಿ ನಡೆದಿತ್ತು. ಇದಾದ ಬಳಿಕ ಮತ್ತೊಂದು ಟಾಸ್ಕ್ನಲ್ಲಿ ತನಿಷಾ ಅವರ ಕಾಲಿಗೆ ಏಟಾಗಿತ್ತು.
ಉರ್ಫಿ ಫ್ಯಾನ್ಸ್ಗೆ ಭಾರಿ ಶಾಕ್! ಇನ್ಸ್ಟಾಗ್ರಾಮ್ ಸಸ್ಪೆಂಡ್: ಇನ್ನೆಲ್ಲಿ ನೋಡೋದು ಕೇಳ್ತಿದ್ದಾರೆ ಅಭಿಮಾನಿಗಳು!