BB ಓಟಿಟಿ: Character assassination ಮಾಡಿದ ಉದಯ್‌ ವಿರುದ್ಧ ತಿರುಗಿ ಬಿದ್ದ ಸಾನ್ಯ- ನಂದು-ರೂಪೇಶ್

By Vaishnavi Chandrashekar  |  First Published Aug 27, 2022, 12:45 PM IST

ಬಿಗ್ ಬಾಸ್ ಮನೆಯಲ್ಲಿ ಏನಾಗುತ್ತಿದೆ? ಸೈಲೆಂಟ್ ಆಗಿದ್ದ ಉದಯ್ ಗೇಮ್ ಪ್ಲ್ಯಾನ್ ಬದಲಾಯಿಸಿದ್ದಾರಾ? ದೊಡ್ಡ ಜಗಳ ನಡೆಯುತ್ತಿದ್ದರೂ ಸೋಮಣ್ಣ ಸುಮ್ಮನಿರುವುದು ಯಾಕೆ? 


ವೂಟ್‌ ಸೆಲೆಕ್ಟ್‌ನಲ್ಲಿ ಮೊದಲ ಬಾರಿಗೆ ಬಿಗ್ ಬಾಸ್ ಕನ್ನಡ ಪ್ರಸಾರವಾಗುತ್ತಿದೆ. ಸೀಸನ್ 1 ಹೇಗಿರುತ್ತೆ ಗೊತ್ತಿಲ್ಲ ಎನ್ನುತ್ತಿದ್ದ ವೀಕ್ಷಕರು 24*7 ಲೈವ್ ನೋಡಿ ಥ್ರಿಲ್ ಆಗುತ್ತಿದ್ದಾರೆ. ಮನೋರಂಜನೆ ಒಂದೇ ಉದ್ದೇಶ ಇಟ್ಟುಕೊಂಡು ಎಪಿಸೋಡ್ ನೋಡುತ್ತಿರುವವರಿಗೆ ತಲೆ ಕೆಟ್ಟಿದೆಯಂತೆ.  ಅದರಲ್ಲೂ ಲವ್ ಟ್ರಯಾಂಗಲ್, ಲವ್ ಬ್ರೇಕಪ್, ಕ್ರಶ್‌ - ಪದೇ ಪದೇ ಇದೇ ಕೇಳಿ ಕೇಳಿ ಮನೆಯಲ್ಲಿ ಯಾರ ನಡುವೆ ಏನು ನಡೆಯುತ್ತಿದೆ ಅನ್ನೋದೇ ಬಿಗ್ ಕನ್ಫ್ಯೂಷನ್ ಆಗಿದೆ. 

ಆರಂಭದಿಂದಲ್ಲೂ ಉದಯ್‌ ಎಲ್ಲಾ ಸ್ಪರ್ಧಿಗಳ ಜೊತೆ ಒಳ್ಳೆಯ ಬಾಂಧವ್ಯ ಹೊಂದಿದ್ದಾರೆ. ಏನೇ ವಿಚಾರ ಇದ್ದರೂ ಶೇರ್ ಮಾಡಿಕೊಳ್ಳುತ್ತಾರೆ. ಕ್ಲೋಸ್‌ನೆಸ್‌ ಇದ್ದ ಕಾರಣ ಚೈತ್ರಾ ಬಳಿ ಸಾನ್ಯ ಮತ್ತು ಜಶ್ವಂತ್ ವ್ಯಕ್ತಿತ್ವದ ಬಗ್ಗೆ ಮಾತನಾಡಿದ್ದಾರೆ. ಸಾನ್ಯ ಗೇಮ್ ಪ್ಲ್ಯಾನ್ ಬೇರೆನೇ ಇದೆ. ಬಿಬಿ ಮನೆ ಪ್ರವೇಶ ಮಾಡುವ ಮುನ್ನವೇ ಹೇಗಿರಬೇಕು ಎಂದು ನಿರ್ಧಾರ ಮಾಡಿಕೊಂಡು ಬಂದಿದ್ದಾಳೆ.ರೂಪೇಶ್‌ ಜೊತೆ ತುಂಬಾನೇ ಕ್ಲೋಸ್ ಇದ್ದಾಳೆ ಅವನನ್ನು ಕೂಡ ಚೆನ್ನಾಗಿ ಬಳಸಿಕೊಳ್ಳುತ್ತಿದ್ದಾರೆ. ಸಾನ್ಯ ಒಂದು ಹೆಜ್ಜೆ ಇಟ್ಟರೆ ನಾನು ಎರಡು ಹೆಜ್ಜೆ ಇಡುವೆ ಹೀಗಾಗಿ ನನ್ನಿಂದ ದೂರ ನಡೆದಿದ್ದಾಳೆ ಎಂದು ಸಾನ್ಯ ಬಗ್ಗೆ ಹೇಳಿದ್ದಾರೆ.

Tap to resize

Latest Videos

ಬಿಗ್ ಬಾಸ್ ಮನೆಯಲ್ಲಿ ಮೊದಲ ಬಾರಿ ಪೇರ್ ಪ್ರವೇಶ ಮಾಡಿರುವುದು. ನಂದು ಮತ್ತು ಜಶ್ವಂತ್ ಏನೇ ಇದ್ದರೂ ಹಂಚಿಕೊಂಡು ಮಾಡಬೇಕು ಏಕೆಂದರೆ ಇಬ್ಬರೂ ಸೇರಿಕೊಂಡು ಒಂದು ಸ್ಪರ್ಧಿ ಎನ್ನುವ ಲೆಕ್ಕದಲ್ಲಿ ಪ್ರವೇಶ್ ಪಡೆದುಕೊಂಡಿದ್ದಾರೆ. ಜಶ್ವಂತ್ ಕ್ಯಾಮೆರಾ ಮುಂದೆ ಹೇಗೆ ವರ್ತಿಸುತ್ತಾನೆ ಕ್ಯಾಮೆರಾ ಹಿಂದೆ ಹೇಗೆ ವರ್ತಿಸುತ್ತಾನೆ ಅನ್ನೋದು ನನಗೆ ಗೊತ್ತಿದೆ. ಹೊರಗಡೆ ಅವನ ಆಟಗಳನ್ನು ನಾನು ನೋಡಿದ್ದೀನಿ ಕ್ಯಾಮೆರಾ ಆಫ್ ಆಗಲಿ. ನಂದು ಇದ್ದಾಗ ಒಂದು ರೀತಿ ವರ್ತಿಸುತ್ತಾನೆ ಇಲ್ಲದಾಗ ಸಾನ್ಯಳನ್ನು ಮುಟ್ಟುಕೊಂಡು ಓಡಾಡುತ್ತಾನೆ ಹಿಂದುಗಡೆ ಹೊಡೆದಿದ್ದಾನೆ ಎಂದು ಜಶ್ವಂತ್ ಬಗ್ಗೆ ಉದಯ್ ಮಾಡಿರುವ ಕಾಮೆಂಟ್‌ನ ಚೈತ್ರಾ ರಿವೀಲ್ ಮಾಡುತ್ತಾರೆ. 

ನನ್ನ ತಾಯಿ ಡಬಲ್‌ ಡಿವೋರ್ಸಿ, ತಂದೆನೇ ನನ್ನ ಬೆಡ್‌ರೂಮ್‌ ವಿಡಿಯೋ ಲೀಕ್‌ ಮಾಡಿದ್ರು: ಸಾನಿಯ ಅಯ್ಯರ್

ರೂಪೇಶ್ ಸೈಲೆಂಟ್ ವ್ಯಕ್ತಿ ಅಲ್ವೇ ಅಲ್ಲ ನಾನು ಸಾನ್ಯಳನ್ನು ದೂರ ಮಾಡಿರುವುದಕ್ಕೆ ಅವರಿಬ್ಬರೂ ಒಂದಾಗಿರುವುದು. ಸಾನ್ಯ ರೂಪೇಶ್‌ನ ಚೆನ್ನಾಗಿ ಬಳಸಿಕೊಳ್ಳುತ್ತಿದ್ದಾಳೆ ಎಂದು ಉದಯ್ ಹೇಳಿರುವುದನ್ನು ಕೇಳಿ ರೂಪೇಶ್ ಕೆಂಡಾಮಂಡಳ ಕಾರಿದ್ದಾರೆ. 'ನಾನೇನು ಟಿಶು ಪೇಪರಾ? ನನ್ನ ಯಾಕೆ ಬಳಸಿಕೊಳ್ಳುತ್ತಾರೆ? ನಾನು ಎಲ್ಲರ ಜೊತೆ ಚೆನ್ನಾಗಿರುವೆ ಈ ಕಾರಣ ಇಟ್ಕೊಂಡು ಬಳಸಿಕೊಳ್ಳುತ್ತಿರುವೆ ಎಂದು ಹೇಳುವುದು ಸುಳ್ಳು. ನೀನು ಸದಾ ಡಬಲ್ ಮೀನಿಂಗ್ ಜೋಕ್ ಮಾಡುವ ಕಾರಣ ನಾನು ದೂರ ಉಳಿಯುತ್ತಿದ್ದೆ' ಎಂದು ರೂಪೇಶ್ ಹೇಳಿದ್ದಾರೆ.

ಸುಮಾರು 2-3 ಗಂಟೆಗಳ ಕಾಲ Character assassination ಆಗಿರುವುದರ ಬಗ್ಗೆ ಚೈತ್ರಾ, ಜಯಶ್ರೀ, ಜಶ್ವಂತ್, ನಂದು, ರೂಪೇಶ್, ಉದಯ್ ಮತ್ತು ಸಾನ್ಯ ಮಾತನಾಡಿದ್ದಾರೆ. ಚೈತ್ರಾ ಹೇಳುತ್ತಿರುವುದು ಸುಳ್ಳು ಎಂದು ಉದಯ್ ವಾದ ಮಾಡಿರುವುದಕ್ಕೆ ಜಯಶ್ರೀ ಪ್ರವೇಶಿಸಿ ಕ್ಲಾರಿಟಿ ಕೊಡುತ್ತಾರೆ. ಟಾಯ್ಲೆಟ್‌ನಲ್ಲಿದ್ದ ಸೋನು ಮತ್ತು ಅಕ್ಷತಾ ಮಜಾ ನೋಡೋ ಬಾ ಎಂದು ಬೆಡ್‌ರೂಮ್‌ಗೆ ಓಡಿ ಹೋಗುತ್ತಾರೆ. ಏನಾಯ್ತು ಎಂದು ಗುರೂಜೀ ಪ್ರಶ್ನೆ ಮಾಡಲು ಮುಂದಾದಾಗ ಯಾರೂ ಪ್ರವೇಶ ಮಾಡಬೇಡಿ ಎನ್ನುತ್ತಾರೆ. 

ಲವ್ ಟೈಮ್‌ವೇಸ್ಟ್‌, ಫ್ರೆಂಡ್‌ಶಿಪ್‌ ಮುಖ್ಯ: ಪ್ರೀತಿ ಪಾಠ ಮಾಡಿದ ಸೋನು ಶ್ರೀನಿವಾಸ್ ಗೌಡ

ಬಿಬಿ ಮನೆಯಲ್ಲಿ Character assassination ಬಗ್ಗೆ ಚರ್ಚೆ ಆಗುತ್ತಿದ್ದರೆ ಸೋಮಣ್ಣ ಒಬ್ಬೊರನ್ನು ಕರೆದುಕೊಂಡು ಬಂದು ತಾವು ಮಾಡಿರುವ ತಪ್ಪುಗಳ ಬಗ್ಗೆ ಚರ್ಚೆ ಮಾಡಿ ಕ್ಷಮೆ ಕೇಳುತ್ತಾರೆ. ನಿನ್ನೆ ಎಪಿಸೋಡ್‌ ನೋಡಿದ ನಂತರ ವೀಕ್ಷಕರು ಫುಲ್ ಕನ್ಫ್ಯೂಸ್ ಆಗಿದ್ದಾರೆ. ಜಗಳ ನೋಡಿ ನೋಡಿ ಸ್ಪರ್ಧಿಗಳು ನಮಗೆ ಕನೆಕ್ಟ್‌ ಆಗುತ್ತಿಲ್ಲ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

click me!