ಈ ವಾರ ಬಿಗ್ ಮನೆಯ ಕ್ಯಾಪ್ಟನ್ ಆಗಿದ್ದ ಅನುಪಮಾ ಗೌಡಗೆ ಉಳಿದ ಸ್ಪರ್ಧಿಗಳು ಕಳಪೆ ಪಟ್ಟ ನೀಡಿದರು.
ಬಿಗ್ ಬಾಸ್ ಕನ್ನಡ ಸೀಸನ್ 9, 6ನೇ ವಾರವು ಯಶಸ್ವಿಯಾಗಿ ಮುಗಿತಾ ಬಂದಿತೆ. ಈ ವಾರದ ಕ್ಯಾಪ್ಟನ್ ಆಗಿ ಅನುಪಮಾ ಗೌಡ ಆಯ್ಕೆಯಾಗಿದ್ದರು. ಈ ವಾರವೂ ಕಿತ್ತಾಟ, ಜಗಳ ಬಿಗ್ ಮನೆಯಲ್ಲಿ ತಾರಕಕ್ಕೇರಿತ್ತು. ಬಿಗ್ ಮನೆಯಿಂದ ಈಗಾಗಲೇ 5 ಮಂದಿ ಸ್ಪರ್ಧಿಗಳು ಔಟ್ ಆಗಿದ್ದಾರೆ. ಈ ವಾರ ಮುಗಿತಾ ಬಂದಂತೆ ಉತ್ತಮ ಮತ್ತು ಕಳಪೆ ಪಟ್ಟ ವಿಚಾರವಾಗಿ ಬಿಗ್ ಮನೆಯಲ್ಲಿ ಮುನಿಸು ಶುರುವಾಗಿದೆ. ಕ್ಯಾಪ್ಟನ್ ಆಗಿದ್ದ ಅನುಪಮಾ ಗೌಡ ವಿರುದ್ಧ ಉಳಿದ ಸ್ಪರ್ಧಿಗಳು ಕಳಪೆ ಪಟ್ಟ ನೀಡಿದ್ದಾರೆ.
ಅನುಪಮಾ ಗೌಡ ಕ್ಯಾಪ್ಟನ್ ಆಗಿ ಸರಿಯಾದ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಉಳಿದ ಸ್ಪರ್ಧಿಗಳು ಮುಗಿಬಿದಿದ್ದಾರೆ. ಎಲ್ಲಾ ಸ್ಪರ್ಧಿಗಳು ಕಳಪೆ ಪಟ್ಟ ಅನುಪಮಾ ಗೌಡಗೆ ನೀಡಿದ್ದಾರೆ. ಸ್ಪರ್ಧಿಗಳ ನಿರ್ಧಾರ ಅನುಪಮಾ ಗೌಡಗೆ ಶಾಕ್ ನೀಡಿದೆ. ಪ್ರತಿಯೊಬ್ಬ ಸ್ಪರ್ಧಿಗಳು ಕಳಪೆ ಪಟ್ಟಕ್ಕೆ ಅನುಪಮಾ ಹೆಸರನ್ನು ಸೂಚಿಸಿದ್ದಾರೆ. ಅರುಣ್ ಸಾಗರ್ ಮತ್ತು ಕಾವ್ಯಾ ಗೌಡ ಇಬ್ಬರೂ ಅನುಪಮಾ ಎಡವಿದೆಲ್ಲಿ ಎಂದು ಚರ್ಚೆ ಮಾಡುತ್ತಿದ್ದಾರೆ. ಅನುಪಮಾ ಮತ್ತು ಕ್ಯಾಪ್ಟನ್ ನಡುವೆ ಒಂದು ಗೆರೆ ಇರುತ್ತೆ. ಆದರೆ ಅನುಪಮಾ ಹಾಗೆ ಮಾಡಿಲ್ಲ ಎಂದು ಅರುಣ್ ಸಾಗರ್ ಹೇಳಿದ್ರೆ, ಅನುಪಮಾ ಗೌಡ ಆಗಿದ್ರು ಕ್ಯಾಪ್ಟನ್ ಆಗಿರಲಿಲ್ಲ ಎಂದು ಕಾವ್ಯಾ ಗೌಡ ಹೇಳುತ್ತಿದ್ದರು. ಒಟ್ನಲ್ಲಿ ಈ ವಾರ ಎಲ್ಲರೂ ಅನಪಮಾ ವಿರುದ್ಧ ಮುಗಿಬಿದ್ದಿರುವುದು ಅನುಗೆ ಅಚ್ಚರಿ ಮೂಡಿಸಿದೆ.
BBK9 ನಕ್ಕರೆ ಬೈಯುತ್ತಿದ್ದರು, ಆಗ ತಾಯಿಗೆ ಆಗೋ ನೋವು ಅಷ್ಟಿಷ್ಟಲ್ಲ: ವಿನೋದ್ ಗೊಬ್ಬರಗಾಲ
ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ಸ್ಪರ್ಧಿಗಳು
ಬಿಗ್‌ಬಾಸ್ 9 ಸೆಪ್ಟೆಂಬರ್ 24ರಿಂದ ಆರಂಭವಾಗಿದೆ. ಈ ಬಾರಿಯ ಬಿಗ್ ಬಾಸ್‌ನಲ್ಲಿ ಅರುಣ್ ಸಾಗರ್, ಅಶ್ವಿನ ನಕ್ಷತ್ರದ ಮೂಲಕ ಮನೆ ಮಾತಾಗಿದ್ದ ನಟಿ ಮಯೂರಿ, ದೀಪಿಕಾ ದಾಸ್, ನವಾಜ್, ದಿವ್ಯಾ ಉರುಡುಗ, ದರ್ಶ್ ಚಂದ್ರಪ್ಪ, ಪ್ರಶಾಂತ್ ಸಂಬರಗಿ, ಅಮೂಲ್ಯ ಗೌಡ, ಸನ್ಯಾ ಅಯ್ಯರ್, ರೂಪೇಶ್ ಶೆಟ್ಟಿ, ವಿನೋದ್ ಗೊಬ್ರಗಾಲ (ಕಾಮಿಡಿ ಕಿಲಾಡಿಗಳು), ಲಕ್ಷ್ಮಿ ಬಾರಮ್ಮ ಸೀರಿಯಲ್ ಖ್ಯಾತಿಯ ನೇಹಾ ಗೌಡ, ನಾನು ಅಂದ್ರೆ ನಂಬರ್, ನಂಬರ್ ಅಂದ್ರೆ ನಾನು ಎನ್ನುವ ಆರ್ಯವರ್ಧನ್ ಗುರೂಜಿ, ರಾಕೇಶ್ ಅಡಿಗ, ಐಶ್ವರ್ಯಾ(ಬೈಕ್ ರೈಡರ್), ರೂಪೇಶ್ ರಾಜಣ್ಣ, ಮಂಗಳ ಗೌರಿಯ ಕಾವ್ಯಶ್ರೀ, ನಿರೂಪಕಿ ಅನುಪಮಾ ಗೌಡ ಸ್ಪರ್ಧಿಗಳಾಗಿ ಭಾಗಿಯಾಗಿದ್ದರು.
BBK9 ಅಮ್ಮಾ ಅಂದಾಗ ರೆಸ್ಪಾಂಡ್ ಮಾಡಲು ಯಾರೂ ಇಲ್ಲ, ಈ ನೋವು ಯಾರಿಗೂ ಬೇಡ: ಅಮೂಲ್ಯ ಗೌಡ
ಮನೆಯಿಂದ ಹೊರಹೋಗಿರುವ ಸ್ಪರ್ಧಿಗಳು
ಬಿಗ್ ಬಾಸ್ ಸೀಸನ್ 9ರ ಮೊದಲ ವಾರ ಐಶ್ವರ್ಯಾ ಪಿಸೆ ಮನೆಯಿಂದ ಹೊರಹೋಗಿದ್ದರು. 2ನೇ ವಾರ ನವಾಜ್ ಎಲಿಮಿನೇಟ್ ಆಗಿದ್ದಾರೆ. 3ನೇ ವಾರ ದರ್ಶ್ ಚಂದ್ರಪ್ಪ ಮನೆಯಿಂದ ಹೊರ ಹೋಗಿದ್ದಾರೆ. 4ನೇ ವಾರ ಮಯೂರಿ ಹಾಗೂ 5ನೇ ವಾರ ನೇಹಾ ಗೌಡ ಬಿಗ್ ಬಾಸ್ ಮನೆಯಿಂದ ಔಟ್ ಆಗಿದ್ದಾರೆ. ಸದ್ಯ ಬಿಗ್ ಬಾಸ್ ಮನೆಯಲ್ಲಿ 13 ಮಂದಿ ಇದ್ದಾರೆ. 6ನೇ ವಾರ ಯಾರು ಹೊರ ಹೋಗುತ್ತಾರೆ ಎಂದು ಕಾದು ನೋಡಬೇಕಿದೆ.