BBK9 ಅಮ್ಮಾ ಅಂದಾಗ ರೆಸ್ಪಾಂಡ್ ಮಾಡಲು ಯಾರೂ ಇಲ್ಲ, ಈ ನೋವು ಯಾರಿಗೂ ಬೇಡ: ಅಮೂಲ್ಯ ಗೌಡ

Published : Nov 03, 2022, 03:04 PM IST
BBK9 ಅಮ್ಮಾ ಅಂದಾಗ ರೆಸ್ಪಾಂಡ್ ಮಾಡಲು ಯಾರೂ ಇಲ್ಲ, ಈ ನೋವು ಯಾರಿಗೂ ಬೇಡ: ಅಮೂಲ್ಯ ಗೌಡ

ಸಾರಾಂಶ

ಕನ್ನಡ ರಾಜ್ಯೋತ್ಸವ ದಿನ ಅಮ್ಮನ ಜೊತೆ ಕಳೆದ ಕ್ಷಣಗಳನ್ನು ನೆನಪು ಮಾಡಿಕೊಂಡು ಕಣ್ಣೀರಿಟ್ಟ ಅಮೂಲ್ಯ ಗೌಡ. 

ಬಿಗ್ ಬಾಸ್ ಸೀಸನ್ 9ರಲ್ಲಿ ಕನ್ನಡ ರಾಜ್ಯೋತ್ಸವ ದಿನವನ್ನು ಅದ್ಧೂರಿಯಾಗಿ ಆಚರಿಸಿದ್ದರು. ಕನ್ನಡ ಅಕ್ಷರಮಾಲೆಯಲ್ಲಿ ಬರುವ ಮೊದಲ ಅಕ್ಷರ ಅ. ಅ ಅಂದ್ರೆ ಅಮ್ಮ. ಹೀಗಾಗಿ ಪ್ರತಿಯೊಬ್ಬರೂ ತಮ್ಮ ಭಾಷೆ ಮತ್ತು ತಾಯಿ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ ಅಮೂಲ್ಯ ಗೌಡ ತಾಯಿಯ ಕೊನೆ ಕ್ಷಣಗಳನ್ನು ನೆನಪಿಸಿಕೊಂಡಿದ್ದಾರೆ. 

'ಈ ಸಂಜೆ ನಾನು ಎಮೋಷನಲ್ ಆಗಿದ್ದು ಕಾರಣ ಇಷ್ಟೆ ನನ್ನ ತಾಯಿ ನನ್ನ ಜೊತೆಗಿಲ್ಲ ಅವರು ತೀರಿಕೊಂಡು 6 ವರ್ಷ ಆಯ್ತು. ತಾಯಿ ತೀರಿಕೊಂಡ ಮೇಲೆ ನಾನು ಯಾವತ್ತೂ ಈ ವಿಚಾರದ ಬಗ್ಗೆ ಮಾತನಾಡಿಲ್ಲ. 6 ವರ್ಷಗಳಿಂದ ಕಂಟ್ರೋಲ್ ಮಾಡಿದ್ದ ಭಾವನೆ ಇವತ್ತು ಹೊರ ಬಂತು. ಸಾಮಾನ್ಯವಾಗಿ ನಾನು ಯಾರ ಮುಂದೆನೂ ಅಳುವುದಕ್ಕೆ ಇಷ್ಟ ಪಡುವುದಿಲ್ಲ ಆದರೆ ಈ ಸಂಜೆ ಎಲ್ಲರೂ ತಾಯಿ ಬಗ್ಗೆ ಮಾತನಾಡುತ್ತಿದ್ದ ಕಾರಣ ಕಂಟ್ರೋಲ್ ಇಲ್ಲದಂತೆ ಆಯ್ತು.' ಎಂದು ತಾಯಿ ಬಗ್ಗೆ ಅಮೂಲ್ಯ ಮಾತನಾಡಿದ್ದಾರೆ.

BBK9 ಮನೆಯಲ್ಲಿ ಕಳ್ಳತನ ಮಾಡುತ್ತಿದ್ದ ಅಮೂಲ್ಯ ಗೌಡ; ಜೇಬ್‌ ಕತ್ತರಿಸಿ 6 ಸಾವಿರ ಕದ್ದ ಸ್ಟೋರಿ ಲೀಕ್!

'ನನ್ನ ತಾಯಿ ಬಗ್ಗೆ ಹೇಳಬೇಕು ಅಂದ್ರೆ ನನ್ನ ತಾಯಿ ನನ್ನ ಬೆಸ್ಟ್‌ ಫ್ರೆಂಡ್. ಸ್ಕೂಲ್ ಹಾಲಿಡೇ ಅಂತ ಬಂತಾಗ ಎಲ್ಲಾ ಮಕ್ಕಳು ಫ್ರೆಂಡ್‌ ಅಂತ ಹೋಗ್ತಾರೆ ಅಥವಾ ಅಜ್ಜಿ ಮನೆಗೆ ಹೋಗುತ್ತಾರೆ ಆದರೆ ನಾನು ಅಮ್ಮನ ಜೊತೆ ಇರುತ್ತಿದ್ದೆ ಅದಿಕ್ಕೆ ಎಲ್ಲರೂ ಅಮ್ಮನ ಸೆರಗು ಎಂದು ಕರೆಯುತ್ತಿದ್ದರು. ಮದುವೆ ಆದ್ಮೇಲೆ ನೀನು ಗಂಡನ ಮನೆಗೆ ಅಮ್ಮನ ಕರ್ಕೊಂಡು ಹೋಗ್ತೀಯಾ ಎಂದು ರೇಗಿಸುತ್ತಿದ್ದರು. ಜೀವನ ಚೆನ್ನಾಗಿರುವಾಗ ಒಂದು ದಿನ ತಿಳಿಯುತ್ತದೆ ನನ್ನ ತಾಯಿಗೆ ಕಿಡ್ನಿ ಫೇಲ್ ಆಗಿರುತ್ತದೆ ಎಂದು. ನಮ್ಮಲ್ಲಿ ಯಾರಿಗೂ ಈ ವಿಚಾರ ಗೊತ್ತಿರಿವುದಿಲ್ಲ ಒಂದು ದಿನ ತಿಳಿಯುತ್ತದೆ, ಅವತ್ತಿನಿಂದ ಲೈಫ್ ಹೇಗಿರುತ್ತೆ ಅಂದ್ರೆ ನನ್ನ ತಾಯಿ ಎಷ್ಟು ದಿನ ಬೇಕಿದ್ದರೂ ಇರಬಹುದು ಯಾವತ್ತಾದರೂ ಹೋಗಬಹುದು' ಎಂದು ಅಳುತ್ತಲೇ ಅಮೂಲ್ಯ ಹೇಳಿದ್ದಾರೆ.

'ಒಂದು ವಾರ ಐಸಿಯುನಲ್ಲಿ ಇರುತ್ತಾರೆ ಅದು ಅಮ್ಮ ಸಾಯುವ ಕೊನೆ ಕ್ಷಣ. ಅವರಿಗೆ ಗೊತ್ತಿರುತ್ತೆ ಅವರು ಇರೋಲ್ಲ ಅಂತ ಈ ವಿಚಾರ ಅಣ್ಣ ಅಪ್ಪಂಗೂ ಗೊತ್ತಿರುತ್ತೆ ಆದರೆ ನನಗೆ ಮಾತ್ರ ಗೊತ್ತಿರುವುದಿಲ್ಲ. ನನ್ನ ತಾಯಿಗೂ ತುಂಬಾನೇ ಅಟ್ಯಾಚ್ ಆಗಿದ್ದೆ ಈ ಸತ್ಯವನ್ನು ಒಪ್ಪಿಕೊಳ್ಳುವುದಿಲ್ಲ ಈ ವಿಚಾರವನ್ನು ಹೇಗೆ ತೆಗೆದುಕೊಳ್ಳುತ್ತೀನಿ ಅನ್ನೋ ಭಯದಲ್ಲಿ ಹೇಳಿರಲಿಲ್ಲ. ಪ್ರತಿ ದಿನ ನಾನು ಐಸಿಯುನಲ್ಲಿ ಅವರ ಜೊತೆ ಕುಳಿತುಕೊಂಡು ಮಾತನಾಡುವಾಗ ನಗು ನಗುತ್ತ ಮಾತನಾಡುತ್ತಿದ್ದರು. ನನ್ನ ತಾಯಿ ಜೊತೆ ನನಗಿರುವ ಕೊನೆ ನೆನಪು ಏನೆಂದರೆ  ಆಸ್ಪತ್ರೆಯಲ್ಲಿ ಕೊಡುತ್ತಿದ್ದ ಚಪಾತಿನ ರೋಲ್ ಮಾಡಿ ಅವರಿಗೆ ತಿನ್ನಲು ಕೊಡುತ್ತಿದ್ದೆ, ಈ ಸಮಯದಲ್ಲಿ ನನ್ನ ದಿನ ಹೇಗಿತ್ತು ಫ್ರೆಂಡ್ಸ್‌ ಜೊತೆ ಏನೆಲ್ಲಾ ಮಾಡಿದ ದಿನ ಹೇಗೆ ಕಳೆದು ಎಂದು ಚರ್ಚೆ ಮಾಡುತ್ತಿದ್ದೆ. ಯಾವತ್ತೂ ಯಾವ ಕ್ಷಣದಲ್ಲೂ ಅವರ ಪ್ರಾಣ ಹೋಗುತ್ತದೆ ಎಂದು ತೋರಿಸಿಕೊಂಡಿರಲಿಲ್ಲ' ಎಂದಿದ್ದಾರೆ ಅಮೂಲ್ಯ.

BBK9 ಅಮೂಲ್ಯ ಗೌಡ ಕೈಯಲ್ಲಿದೆ 3 ಇರುವೆ ಟ್ಯಾಟೂ; ರೂಪೇಶ್ ಶೆಟ್ಟಿ ಶಾಕಿಂಗ್ ರಿಯಾಕ್ಷನ್

'ಇಷ್ಟು ಒಳ್ಳೆಯ ತಾಯಿಯನ್ನು ಪಡೆಯುವುದಕ್ಕೆ ನಾನು ಪುಣ್ಯ ಮಾಡಿರುವೆ. ಎಲ್ಲರಿಗೂ ಅವರ ತಾಯಿ ಅಂದ್ರೆ ತುಂಬಾನೇ ಇಷ್ಟ. ಇಷ್ಟು ವರ್ಷದಿಂದ ನೀವು ಅಮ್ಮ ಅಂತ ಕರೆದಿರುತ್ತೀರಾ ಒಂದು ದಿನ ನಿಮಗೆ ಅಮ್ಮ ಅಂತ ಕರೆದಾಗ  ವಾಪಸ್‌ ರೆಸ್ಪಾಂಡ್ ಮಾಡಲು ಯಾರೂ ಇರುವುದಿಲ್ಲ ನೋವಾಗುತ್ತದೆ. ಅಮ್ಮ ಐ ಮಿಸ್ ಯು ನೀನು ಹೋಗಬಾರದಿದ್ದು ಅಂತ ಯಾವಾಗಲೂ ಅನಿಸುತ್ತದೆ. ಕೆಲವೊಂದು ಸಲ ನೀನು ಬೇಕೇ ಬೇಕು ಅನಿಸುತ್ತದೆ ಆದರೆ  ಒಬ್ಬರು ಸತ್ತ ಮೇಲೆ ವಾಪಸ್ ತರಲು ಆಗುವುದಿಲ್ಲ ಅಮ್ಮ ಬೇಕು ಅಂದ್ರೂ ಏನು ಮಾಡಲು ಆಗಲ್ಲ ಆದರೆ ಈ ನೋವು ಯಾರ್ಗೂ ಬೇಡ ಅಂತ ಕೇಳಿಕೊಳ್ಳುತ್ತೀನಿ' ಎಂದು ಅಮೂಲ್ಯ ಮಾತನಾಡಿದ್ದಾರೆ.
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಪದೇ ಪದೇ ಕಿಚ್ಚ ಸುದೀಪ್‌ ಹೇಳ್ತಿರುವಂತೆ ರಜತ್‌ ವೈರಲ್ ವಿಡಿಯೋ ಅಸಲಿ ವಿಷಯ ಏನು? ಅಂಥದ್ದೇನಿದೆ?
ಏನೂ ಮಾಡದೆ ಸ್ಪಂದನಾ ಸೋಮಣ್ಣ Bigg Boss ಮನೇಲಿ ಇರೋದು ಹೇಗೆ? ಕಿಚ್ಚ ಸುದೀಪ್‌ ಬಿಚ್ಚಿಟ್ಟ ಸತ್ಯ ಏನು?