ಬಿಗ್‌ಬಾಸ್ ಮನೆಯಲ್ಲಿ ಜಗದೀಶ್ ಹೇಳಿದ್ದು ಸುಳ್ಳಾ ? ಅಣ್ಣ ರಾಜು ಬಿಚ್ಚಿಟ್ಟ ರಹಸ್ಯ!

Published : Oct 21, 2026, 08:25 AM IST
Jagadish

ಸಾರಾಂಶ

ಬಿಗ್‌ಬಾಸ್ ಮನೆಯಲ್ಲಿ ತನಗೆ ಹೆಂಡತಿ ಇಲ್ಲ ಎಂದಿದ್ದ ಜಗದೀಶ್ ಅವರ ಅಸಲಿ ಸತ್ಯವನ್ನು ಅವರ ಅಣ್ಣ ರಾಜು ಬಿಚ್ಚಿಟ್ಟಿದ್ದಾರೆ. ಜಗದೀಶ್ ಅವರ ಪತ್ನಿ ಇರೋದು ಎಲ್ಲಿ? ಇಬ್ಬರ ನಡುವೆ ನಡೆದಿದ್ದೇನು ಎಂಬುದರ ಮಾಹಿತಿಯನ್ನು ರಾಜು ರಿವೀಲ್ ಮಾಡಿದ್ದಾರೆ.

ಬೆಂಗಳೂರು: ಬಿಗ್‌ಬಾಸ್ ಮನೆಯಲ್ಲಿರುವ ಜಗ್ಗ ಮಮ್ಮಿ ಉರ್ಫ್ ಜಗದೀಶ್ ಅವರು ತಮ್ಮ ಆಟದ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಸೋನಿಕಾ ಮುಂದೆ ನನಗೆ ಹೆಂಡ್ತಿ ಇಲ್ಲ, ಮಗಳಿಗೆ ತಾಯಿ ಇಲ್ಲ ಎಂದು ಹೇಳಿಕೊಂಡಿದ್ದರು. ಇದೀಗ ಜಗದೀಶ್ ಅವರ ಅಣ್ಣ ರಾಜು, ಯುಟ್ಯೂಬ್ ವಾಹಿನಿ ಜೊತೆ ಮಾತನಾಡಿದ್ದಾರೆ. ಈ ಸಂದರ್ಶನದಲ್ಲಿ ಹಲವು ವಿಷಯಗಳನ್ನು ರಾಜು ಹಂಚಿಕೊಂಡಿದ್ದಾರೆ. ಕೆಲಸಕ್ಕೆ ಹೋಗುತ್ತಿದ್ದೀನಿ, ಬರೋದು ಲೇಟ್ ಆಗುತ್ತೆ ಎಂದು ಹೇಳಿ ಹೋಗಿದ್ದರು. ಎರಡು ದಿನ ಮುಂಚೆಯಷ್ಟೇ ನಮಗೆ ಜಗದೀಶ್ ಬಿಗ್‌ಬಾಸ್‌ಗೆ ಹೋಗುತ್ತಿರುವ ವಿಷಯ ಹೇಳಿದನು ಎಂದು ಹೇಳಿದರು.

ಅಕ್ಕನ ಮಗಳು ಸಂಜನಾಳನ್ನೇ ಜಗದೀಶ್ ಮದುವೆಯಾಗಿದ್ದಾರೆ. ನನಗೆ ತಂಗಿ ಮಗಳು. ಸದ್ಯ ಅಜ್ಜಿ ಮನೆಯಲ್ಲಿದ್ದು, ಬಿಗ್‌ಬಾಸ್ ನೋಡುತ್ತಾರೆ. ಮನೆ ಅಂದ್ಮೇಲೆ ಸಣ್ಣಪುಟ್ಟ ಗಲಾಟೆ ಇದ್ದೇ ಇರುತ್ತೆ ಅಲ್ಲವಾ? ಹಾಗೆ ಇಲ್ಲಿಯೋ ಅದೇ ಇರೋದು. ಹೆಂಡ್ತಿ, ಮಗಳು ತನ್ವಿ ಎಲ್ಲರೂ ಜಗದೀಶ್‌ಗೆ ಇದ್ದಾರೆ ಎಂದು ಸೋದರ ರಾಜು ಹೇಳುತ್ತಾರೆ.

ಹಣ ಕೊಟ್ಟು ವೋಟ್ ಮಾಡುವಂತೆ ಹೇಳಲ್ಲ!

ಕಾರ್ಯಕ್ರಮ ಆರಂಭಕ್ಕೂ ಮುನ್ನ ಅಂದ್ರೆ ಎರಡು ದಿನ ಮುಂದೆ ಬರಬೇಕೆಂದು ಕಾಲ್ ಮಾಡಿದ್ದರು. ನಾವು ಸಹ ಹೋಗಿದ್ದೀವಿ. ಮತ್ತೆ ಕಾಲ್ ಬಂದಿಲ್ಲ. ಸೋದರ ಜಗದೀಶ್ ಬಿಗ್‌ಬಾಸ್ ಮನೆಯಲ್ಲಿರೋದು ನೋಡಿದ್ರೆ ಖುಷಿಯಾಗುತ್ತೆ. ಕೊನೆಯವರೆಗೂ ಬಿಗ್‌ಬಾಸ್ ಮನೆಯಲ್ಲಿರಲಿ ಎಂಬುದಷ್ಟೇ ನಮ್ಮಾಸೆ. ಸಿಕ್ಕವರಿಗೆ ವೋಟ್ ಮಾಡಿ ಅಂತ ಹೇಳ್ತೀವಿ. ವೋಟ್ ಮಾಡೋದಕ್ಕೆ ಹಣ ಕೊಡೋದೆಲ್ಲಾ ನಮಗೆ ಗೊತ್ತಿಲ್ಲ ಎಂದರು.

ಜಗದೀಶ್ ತಾಯಿ ಆರೋಗ್ಯ ಹೇಗಿದೆ?

ಕೆಲ ದಿನಗಳ ಹಿಂದೆ ಅಮ್ಮನ ಆರೋಗ್ಯದಲ್ಲಿ ಕೊಂಚ ವ್ಯತ್ಯಾಸ ಆಗಿತ್ತು. BPಯಲ್ಲಿ ಏರುಪೇರು ಆಗಿ ಸ್ಟ್ರೋಕ್ ರೀತಿಯಾಗಿತ್ತು. ಚಿಕಿತ್ಸೆ ಬಳಿಕ ಚೇತರಿಸಿಕೊಂಡಿದ್ದಾರೆ ಎಂದು ರಾಜು ಮಾಹಿತಿ ನೀಡಿದರು.

ಇಲ್ಲಿಂದ ಹೋಗುವಾಗಲೇ ತನಗೆ ಬೇಕಾದ ಬಟ್ಟೆಯನ್ನು ತೆಗೆದುಕೊಂಡು ಹೋಗಿದ್ದಾನೆ. ಅತನ ಸ್ನೇಹಿತರೇ ಬಟ್ಟೆ ಕೊಡುವ ಕೆಲಸ ಮಾಡ್ತಾರೆ. ಸ್ನೇಹಿತರ ಬಳಿಯಲ್ಲಿಯೇ ಮೊಬೈಲ್ ಕೊಟ್ಟು ಹೋಗಿದ್ದಾನೆ. ಇಲ್ಲಿಂದ ನಾವು ಯಾವುದೇ ಬಟ್ಟೆ ಕಳುಹಿಸಲ್ಲ. ಬಹುಶಃ ಮೊದಲ ವಾರ ಎಲ್ಲರಿಗೂ ಬಟ್ಟೆ ಬಂದಿರೋದನ್ನು ನೋಡಿ ನನಗೆ ಡ್ರೆಸ್ ಬಂದಿಲ್ಲ ಅಂತ ಹೇಳಿರಬೇಕು ಎಂದರು.

ವಿನ್ ಆಗ್ತಾನೆ!

ಬಿಗ್‌ಬಾಸ್ ರಿಯಾಲಿಟಿ ಶೋಗೆ ಇದೇ ಮೊದಲ ಬಾರಿಗೆ ಹೋಗಿದ್ದಾನೆ. ಅವನೇ ಬಿಗ್‌ಬಾಸ್ ಟ್ರೋಫಿ ತೆಗೆದುಕೊಂಡು ಬರಲಿ. ಮೊದಲ ದಿನವೇ ಸುದೀಪ್ ಅವರೇ ನಾನೇ ವಿನ್ನರ್ ಅಂತ ಹೇಳಬೇಕು ಅಂದ್ರು. ಅವರಿಂದಲೇ ಆ ಮಾತು ಬಂದಿರೋದರಿಂದ ಗೆಲ್ಲುತ್ತಾನೆ ಎಂದು ರಾಜು ವಿಶ್ವಾಸ ವ್ಯಕ್ತಪಡಿಸಿದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

9 ವರ್ಷಗಳ ಬಳಿಕ ಶಿಲ್ಪಾ ಅಯ್ಯರ್ ಕನಸು ಈಡೇರಿದ್ದೇಗೆ? ನಂದಗೋಕುಲಕ್ಕೆ ಬರ್ತಿದ್ದಂತೆ ನನಸು!
ವ್ಲಾಗಿಂಗ್‌ನಿಂದಲೇ ಕೋಟ್ಯಧಿಪತಿ! ₹5 ಕೋಟಿ ಕಾರು ಕಲೆಕ್ಷನ್, ತಿಂಗಳಿಗೆ ₹3 ಕೋಟಿ ಆದಾಯ? ಯಾರು ಈ Gen-Z ಯೂಟ್ಯೂಬರ್?