ಸೀರಿಯಲ್​ಗಳಲ್ಲಿ ಮನರಂಜನೆಯ ಅಂಬಾರಿ: ನಟಿ ಸುಧಾರಾಣಿ ಎಂಟ್ರಿ- ಧಾರಾವಾಹಿಗಳ ಟ್ವಿಸ್ಟ್​ ರಿವೀಲ್​

Published : Oct 20, 2026, 01:18 PM IST
Sudharani

ಸಾರಾಂಶ

ದಸರಾ ಹಬ್ಬದ ಪ್ರಯುಕ್ತ ಜೀ ಕನ್ನಡದ ಅಮೃತಧಾರೆ, ಅಣ್ಣಯ್ಯ ಮತ್ತು ನಾ ನಿನ್ನ ಬಿಡಲಾರೆ ಸೀರಿಯಲ್‌ಗಳಲ್ಲಿ ಬರಲಿರುವ ರೋಚಕ ತಿರುವುಗಳನ್ನು ನಟಿ ಸುಧಾರಾಣಿ ರಿವೀಲ್ ಮಾಡಿದ್ದಾರೆ. ಗೌತಮ್‌ಗೆ ಸತ್ಯ ತಿಳಿಯುವುದು, ಅಣ್ಣಯ್ಯ ಧಾರಾವಾಹಿಯಲ್ಲಿ ಅಮ್ಮ-ಮಗ ಒಂದಾಗುವುದು ಹಾಗೂ ನಾ ನಿನ್ನ ಬಿಡಲಾರೆ ಸೀರಿಯಲ್‌ನಲ್ಲಿ ಹಿತಾಳಿಂದ ಅಪ್ಪ-ಅಮ್ಮ ಸೇರುವ ಕಥೆಯ ಸುಳಿವು ನೀಡಿದ್ದಾರೆ.

ದಸರಾ ಹಬ್ಬದ ಹಿನ್ನೆಲೆಯಲ್ಲಿ, ಮೈಸೂರಿನಲ್ಲಿ ಅಂಬಾರಿ ಕಳೆಗಟ್ಟಿದಂತೆ ಜೀ ಕನ್ನಡದ ಮೂರು ಸೀರಿಯಲ್​ಗಳಲ್ಲಿಯೂ ಮನರಂಜನೆಯ ಅಂಬಾರಿ ಕಳೆಗಟ್ಟಿದೆ ಎಂದು ತಿಳಿಸಿದ್ದಾರೆ ನಟಿ ಸುಧಾರಾಣಿ. ಮೂರು ಸೀರಿಯಲ್​ಗಳ ಕಥೆಗಳನ್ನು ಹೇಳಿರುವ ನಟಿ, ಭರಪೂರ ಮನರಂಜನೆ ಇರುವುದಾಗಿ ತಿಳಿಸಿದ್ದಾರೆ. ಅಮೃತಧಾರೆ, ಅಣ್ಣಯ್ಯ ಸೀರಿಯಲ್​ ಮತ್ತು ನಾ ನಿನ್ನ ಬಿಡಲಾರೆ ಸೀರಿಯಲ್​ಗಳಲ್ಲಿನ ರೋಚಕ ಟ್ವಿಸ್ಟ್​ ಕುರಿತು ನಟಿ ರಿವೀಲ್​ ಮಾಡಿದ್ದು, ಅದನ್ನು ಜೀ ವಾಹಿನಿ ಪ್ರೊಮೋದಲ್ಲಿ ಶೇರ್​ ಮಾಡಿಕೊಂಡಿದ್ದಾರೆ.

ಅಮೃತಧಾರೆ ಸೀರಿಯಲ್​ ಕುರಿತು...

ಈಗ ಒಂದೊಂದೇ ಸೀರಿಯಲ್​ ವಿಷಯಕ್ಕೆ ಬರುವುದಾರೆ, ಅಮೃತಧಾರೆ ಸೀರಿಯಲ್​ (Amruthadhaare Serial)ನಲ್ಲಿ ಗೌತಮ್​ ವಾಪಸ್​ ಬಂದಾಗಿದೆ. ದೀಪಿಕಾಗೂ ಎಲ್ಲರ ಕುತಂತ್ರ ಅರಿವಾಗಿದೆ. ಭೂಮಿಕಾ- ದೀಪಿಕಾ ಒಂದಾಗಿದ್ದಾರೆ. ಇನ್ನು ಗೌತಮ್​ಗೆ ಜೈದೇವನ ಬಗ್ಗೆ ಇದಾಗಲೇ ತಿಳಿದಿದ್ದು, ತಾಯಿ ಶಕುಂತಲಾ ಬದಲಾಗಿದ್ದಾಳೆ ಎಂದುಕೊಂಡಿದ್ದ. ಆದರೆ, ಭೂಮಿಕಾಳನ್ನು ಸಾಯಿಸಲು ಸ್ಕೆಚ್​ ಹಾಕಿದ್ದು, ಅವಳ ಜಾಗದಲ್ಲಿ ನಕಲಿ ಭೂಮಿಕಾ ತಂದಿರುವುದು ತಿಳಿದರೆ, ಅಲ್ಲಿಗೆ ಶಕುಂತಲಾ ಮತ್ತು ಜೈದೇವ್ ಕಥೆ ಮುಗಿದಂತೆ. ಇನ್ನಾವ ಕಾರಣಕ್ಕೂ ಆತ ಅವರನ್ನು ಕ್ಷಮಿಸುವುದಿಲ್ಲ. ಅದರ ಕಥೆಯನ್ನು ಹೇಳಿರೋ ಸುಧಾರಾಣಿ, ದೀಪಿಕಾ ಗುಟ್ಟು ಬದಲಾಗುವ ಟೈಮ್​ಬಂದಾಯ್ತು. ದೀಪಿಕಾ-ಭೂಮಿಕಾ ಅಸಲಿ ಮುಖಕ್ಕೆ ಖುದ್ದು ಗೌತಮ್​ ಸಾಕ್ಷಿಯಾಗ್ತಾನೆ ಎಂದಿದ್ದಾರೆ.

ಅಣ್ಣಯ್ಯ ಸೀರಿಯಲ್​​ (Annaya Serial) ಏನಾಗಲಿದೆ?

ಇನ್ನೊಂದು ಸೀರಿಯಲ್​ ಅಣ್ಣಯ್ಯ. ಇದರಲ್ಲಿ ಶಿವು ತನ್ನ ತಾಯಿಯ ಮೇಲೆ ಕೋಪ ಮಾಡಿಕೊಂಡಿದ್ದಾರೆ.ಮಾವನ ಮಾತನ್ನು ನಂಬಿ ಹೆತ್ತಮ್ಮನನ್ನು ಮನೆಯಿಂದ ಹೊರಕ್ಕೆ ಹಾಕಿದ್ದಾನೆ. ಈಗ ಆತನ ತಾಯಿ ಅಮಾಯಕಿ ಎನ್ನುವ ಮಹತ್ತರ ಸಾಕ್ಷಿಯೊಂದು ಪಾರು ಕೈ ಸೇರಿದೆ. ಅಮ್ಮ- ಮಗನನ್ನು ಒಂದು ಮಾಡಲು ಹರಸಾಹಸ ಪಡುತ್ತಿರುವ ಪಾರುವಿಗೆ ಈ ಸಾಕ್ಷಿ ಸಿಕ್ಕಿದ್ದರಿಂದ ವಿಲನ್​ಗಳ ಮುಖವಾಡ ಬಯಲಾಗಲಿದೆ. ಅಮ್ಮ-ಮಗ ಒಂದಾಗಲಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ನಟಿ ಸುಧಾರಾಣಿ (Sudharani) ಅಮ್ಮ ಮತ್ತು ಮಗನ ಒಂದುಗೂಡಿಸಲು ಇದ್ದ ಒಂದೇ ಸಾಕ್ಷಿ ಪಾರು ಕೈಸೇರಾಯ್ತು ಎನ್ನುವ ಮೂಲಕ ಈ ಸೀರಿಯಲ್​ ಬಗ್ಗೆ ರಿವೀಲ್​ ಮಾಡಿದ್ದಾರೆ.

ನಾ ನಿನ್ನ ಬಿಡಲಾರೆ (Naa Ninna Bidalaare Serial) ಟ್ವಿಸ್ಟ್​

ಅದೇ ರೀತಿ ನಾನಿನ್ನ ಬಿಡಲಾರೆ. ಈ ಸೀರಿಯಲ್​ ಈಗ ಪಾರ್ಟ್​-2 ರೀತಿಯಲ್ಲಿ ನಡೆಯುತ್ತಿದೆ. ಪತಿಯ ರಕ್ಷಣೆಗಾಗಿ, ಆತನಿಂದ ದೂರವಾಗಿದ್ದಾಳೆ ದುರ್ಗಾ. ಆ ಸಮಯದಲ್ಲಿ ಆಕೆ ಗರ್ಭಿಣಿಯಾಗಿದ್ದಳು. ಆದರೆ ಇದು ಶರತ್​ಗೆ ತಿಳಿದಿಲ್ಲ. ಮಗಳೀಗ ದೊಡ್ಡವಳಾಗಿದ್ದಾಳೆ. ಅದೇ ಇನ್ನೊಂದೆಡೆ ಪುಟಾಣಿ ಹಿತಾ ಕೂಡ ದೊಡ್ಡವಳಾಗಿದ್ದು, ದೈವಾಂಶ ಸಂಭೂತೆಯಾಗಿದ್ದಾರೆ. ಹಿತಾ ಪುಟ್ಟಿಯಿಂದಲೇ ಅಪ್ಪ-ಅಮ್ಮ ಒಂದಾಗ್ತಾರೆ ಎನ್ನುವ ಸ್ಟೋರಿ ರಿವೀಲ್​ ಮಾಡಿದ್ದಾರೆ ನಟಿ ಸುಧಾರಾಣಿ. ಶರತ್​ನಿಂದ ದೂರವಾಗಿರುವ ದುರ್ಗಾಳ ಹೊಸ ಬದುಕು ಶುರುವಾಗಿದೆ. ದೈವಾಂಶ ಸಂಭೂತೆಯಾಗಿರುವ ಕಂದಮ್ಮ ಒಡೆದ ಗೂಡನ್ನು ಮತ್ತೆ ಒಂದಾಗಿಸುತ್ತಾಳೆ ಎನ್ನುವ ಮೂಲಕ ಸೀರಿಯಲ್​ ಟ್ವಿಸ್ಟ್ ಹೇಳಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

"ತೋಳ ಬಂತು! ತೋಳ ಬಂತು!" ಗಾನವಿ ಮೋಸದ ಆಟಕ್ಕೆ ಸಿಲುಕಿ ಮನೆಮಂದಿ ಮುಂದೆ ಬಕ್ರಾ ಆದ ಆಸಿಯಾ!
Bigg Boss 13ನಿಂದ ಎಲಿಮಿನೇಟ್​ ಆದ ನಟಿ ಕಾವ್ಯಾ ಗೌಡಗೆ ಸಿಕ್ಕ ಸಂಭಾವನೆ ಎಷ್ಟು