BBK 12: RJ ಅಮಿತ್‌ಗೆ ಇನ್‌ಸ್ಟಂಟ್‌ ಕರ್ಮ ಹೇಗಿರತ್ತೆ ಅಂತ ತೋರಿಸಿದ ಕಿಚ್ಚ ಸುದೀಪ್!

Published : Oct 05, 2025, 02:10 AM IST
rj amith bigg boss

ಸಾರಾಂಶ

Bigg Boss Kannada Rj Amith: ಬಿಗ್‌ ಬಾಸ್‌ ಎನ್ನೋದು cringe show ಅಂಥ ಆರ್‌ಜೆ ಅಮಿತ್‌ ಹೇಳಿದ್ದರು. ಈಗ ಅವರು ಅದೇ cringe show ಸ್ಪರ್ಧಿ. ಈ ಬಾರಿ ಕಿಚ್ಚ ಸುದೀಪ್‌ ಮತ್ತೆ cringe show ನೆನಪು ಮಾಡಿಕೊಟ್ಟಿದ್ದಾರೆ. 

ಬಿಗ್‌ ಬಾಸ್‌ ಎನ್ನೋದು cringe show with least iq ಎಂದು ಆರ್‌ಜೆ ಅಮಿತ್‌ ಒಮ್ಮೆ ಹೇಳಿದ್ದರು. ಈಗ ಅವರೇ ಬಿಗ್‌ ಬಾಸ್‌ ಸ್ಪರ್ಧಿಯಾಗಿದ್ದಾರೆ. ಇದರ ಬಗ್ಗೆ ಕಿಚ್ಚ ಸುದೀಪ್‌, ಅಮಿತ್‌ ಜೊತೆಯೇ ಮಾತನಾಡಿದ್ದರು. ಈಗ ಕಿಚ್ಚನ ಪಂಚಾಯಿತಿಯಲ್ಲಿ ಮತ್ತೆ cringe show with least iq ಪದದ ಬಗ್ಗೆ ಮಾತನಾಡಿ, ಅಮಿತ್‌ ಮಾತನಾಡಿದ್ದು ತಪ್ಪು ಎಂದು ಮನವರಿಕೆ ಮಾಡಿಕೊಟ್ಟಿದ್ದಾರೆ.

ಬಿಗ್‌ ಬಾಸ್‌ನಲ್ಲಿ ಹೀಗೆ ಆಯ್ತು!

ಬಿಗ್‌ ಬಾಸ್‌ 19 ಶೋನಲ್ಲಿ ಪ್ರಣೀತ್‌ ಮೋರ್‌ ಎನ್ನುವ ಕಾಮಿಡಿಯನ್‌ ಭಾಗಿಯಾಗಿದ್ದರು. ಅವರು ಕೂಡ ಸಲ್ಮಾನ್‌ ಖಾನ್‌ ಅವರನ್ನು ಸಿಕ್ಕಾಪಟ್ಟೆ ಟ್ರೋಲ್‌ ಮಾಡಿದ್ದರು. ಈಗ ಅವರು ಅದೇ ಶೋ ಸ್ಪರ್ಧಿ. ಬಿಗ್‌ ಬಾಸ್‌ ವೇದಿಕೆಯಲ್ಲಿ ಸಲ್ಮಾನ್‌ ಖಾನ್‌ ಅವರು, ತನ್ನ ಹೆಸರು ಹೇಳಿಕೊಂಡು ಹೊಟ್ಟೆ ತುಂಬಿಸಿಕೊಂಡಿದ್ದ ಪ್ರಣೀತ್‌ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು, ಪದೇ ಪದೇ ಟ್ರೋಲ್‌ ವಿಷಯ ತೆಗೆದು ಪ್ರಣೀತ್‌ ಅವರು ತಪ್ಪು ಎನ್ನುವಂತೆ ಮಾಡಿದ್ದರು.

ಕಿಚ್ಚನ ಪಂಚಾಯಿತಿಯಂದು ಕಿಚ್ಚ ಸುದೀಪ್‌ ಹಾಗೂ ಆರ್‌ಜೆ ಅಮಿತ್‌ ನಡುವಿನ ಮಾತುಕತೆ ಹೀಗಿದೆ..

ಆರ್‌ಜೆ ಅಮಿತ್: ಹುಡುಗಿ ಚೆನ್ನಾಗಿದ್ದಾಳೆ, ಈ ಹುಡುಗಿ ಕ್ಯೂಟ್‌ ಇದ್ದಾಳೆ ಅಂತ ಅನಿಸತ್ತೆ ಅಂದರೆ ಆಮೇಲೆ ನೀತಿ ಪಾಠ ಹೇಳ್ತಾರೆ. ಐದು ನಿಮಿಷಕ್ಕೆ ನನಗೆ‌ ಮೋಟಿವೇಶನಲ್ ಪಾಠ ಸಿಗತ್ತೆ

ಕಿಚ್ಚ ಸುದೀಪ್:‌ ಕಳ್ಳ ಬಯಸಿದ್ದು ಸಿಗತ್ತೆ. cringe show with least iq. ನಾನು ನಿಮಗೆ ಇನ್‌ಸ್ಟಾ ಕರ್ಮ, ಇನ್‌ಸ್ಟಂಟ್‌ ಕರ್ಮ ಅಂತ ಅಂದು ವೇದಿಕೆ ಮೇಲೆ ಹೇಳಿದೆ.

Rj ಅಮಿತ್:‌ ನನಗೆ ಬಿತ್ತು, ಅರ್ಥ ಆಯ್ತು

ಕಿಚ್ಚ ಸುದೀಪ್;‌ ಅರ್ಥ ಮಾಡಿಸೋದು ತುಂಬ ಇದೆ, ನನಗಂತೂ ತುಂಬ ಖುಷಿ ಆಯ್ತು. ವೇದಿಕೆ ಮೇಲಿದ್ದಾಗ ನಾನು ದೇವರಿದ್ದರೆ ತೋರಿಸು ಅಂತ ಹೇಳುತ್ತಿದ್ದೆ, ಅದೀಗ ನಿಜವಾಯ್ತು. Welcome to cringe show with least iq, called bigg boss

ಆರ್‌ಜೆ ಅಮಿತ್:‌ ಸಿಕ್ಕಾಪಟ್ಟೆ ಎಂಜಾಯ್‌ ಮಾಡ್ತಿದ್ದೀನಿ, ನಾನು ಕೂಡ ಕ್ರಿಂಜ್‌ ಅಭ್ಯರ್ಥಿ

ಕಿಚ್ಚ ಸುದೀಪ್:‌ ನೀವು ಈಗ ಬಿಗ್‌ ಬಾಸ್‌ ಅಭ್ಯರ್ಥಿ

ಈ ಹಿಂದೆ ಆರ್‌ಜೆ ಅಮಿತ್‌ ಅವರು ಬಿಗ್‌ ಬಾಸ್‌ ಕನ್ನಡ ಶೋವನ್ನು ಟ್ರೋಲ್‌ ಮಾಡಿದ್ದರು. ಬಿಗ್‌ ಬಾಸ್‌ ಎನ್ನೋದು cringe show with least iq ಎಂದು ಹೇಳಿದ್ದರು. ಇದರ ಬಗ್ಗೆ ಕಿಚ್ಚ ಸುದೀಪ್‌ ಅವರು ಬಿಗ್‌ ಬಾಸ್‌ ಪ್ರೀಮಿಯರ್‌ನಲ್ಲಿ ಹೇಳಿದ್ದರು. ಆಗ ಅಮಿತ್‌ ತಮ್ನನ್ನು ಸಮರ್ಥಿಸಿಕೊಂಡಿದ್ದರು. ಅಂದಹಾಗೆ ಡ್ರಾಮಾ ಮಾಡೋದು ಸೀರಿಯಲ್‌ನವರ ಕೆಲಸ ಅಂತ ಕೂಡ ಹೇಳಿಕೊಂಡು ಒಳಗಡೆ ಹೋಗಿದ್ದರು.

“ಇಲ್ಲಿ ಎಲ್ಲರನ್ನು ಮಾತನಾಡಿಸಬೇಕು, ಎಲ್ಲರ ಜೊತೆ ಮಾತನಾಡೋದು ಸ್ವಲ್ಪ ಕಷ್ಟವಾಗಿತ್ತು. ಆರ್‌ಜೆ ನೀನು ಮಾತನಾಡಲ್ಲ ಎಂದು ಕೆಲವರು ನನ್ನನ್ನು ನಾಮಿನೇಟ್‌ ಮಾಡಿದ್ದರು. ಆದರೆ ಕರಿಬಸಪ್ಪ ಅವರು ಫಿಲಾಸಫಿ ಮಾತನಾಡ್ತಾರೆ, ಅವರ ಜೊತೆ ಜಿಮ್‌ ಹೋಗೋದು, ಅಲ್ಲೇ ಕಳೆಯೋದು ಆಗಿದೆ. ಇವರ ಜೊತೆಯೇ ಇದ್ದೇನೆ” ಎಂದು ಆರ್‌ಜೆ ಅಮಿತ್‌ ಹೇಳಿದ್ದರು.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

2 ಸತ್ಯ ಬಯಲು ಮಾಡಿದ 'ಲಕ್ಷ್ಮೀ ನಿವಾಸ' ನಿರ್ದೇಶಕರು, ವೀಕ್ಷಕರು ಫುಲ್ ಹ್ಯಾಪಿ
BBK 12: ಟಾಸ್ಕ್ ಆಡದೇ ಈ ವಾರದ ‘ಕ್ಯಾಪ್ಟನ್’ ಆದ ಸ್ಪಂದನಾ.. ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್!