
ಬಿಗ್ ಬಾಸ್ ಮನೆಗೆ ಬರುವ ಮುನ್ನ ನೂರು ಸಿನಿಮಾಗಳಲ್ಲಿ ವಿಧ ವಿಧವಾದ ವಿಲನ್ ಪಾತ್ರ ಮಾಡಿದ್ದ ಕಾಕ್ರೋಚ್ ಸುಧಿ ಅವರು, ರಿಯಲ್ ಆಗಿಡ ಡೈಲಾಗ್ ಹೇಳೋದರಲ್ಲಿ ಎತ್ತಿದ ಕೈ. ಇವರ ಡೈಲಾಗ್ ಕೇಳಿ, ನಟ ವಿನೋದ್ ಪ್ರಭಾಕರ್ ಕೂಡ ಮುಂದಿನ ಸಿನಿಮಾಗೆ ಡೈಲಾಗ್ ಬರೆಸುತ್ತೀವಿ ಎಂದು ಹೇಳಿದ್ದರು. ದೊಡ್ಮನೆಗೆ ಹೋಗುವಾಗ ವೇದಿಕೆಯಲ್ಲಿ ಕೂಡ ಸುಧಿ ಅಬ್ಬರದ ಮಾತುಗಳನ್ನಾಡಿದ್ದರು. ಈಗ ಬಿಗ್ ಬಾಸ್ ಮನೆಯೊಳಗಡೆ ಹುಡುಗಿಯರು ಹೇಗೆ ಇರಬೇಕು ಎಂದು ಹೇಳಿದ್ದರು.
ಇಂದು ಹುಡುಗಿಯರು ಜೀರೋ ಫಿಗರ್ ಇರಬೇಕು ಎಂದು ಸಿಕ್ಕಾಪಟ್ಟೆ ವರ್ಕೌಟ್ ಮಾಡುತ್ತಾರೆ, ವಿಧ ವಿಧವಾದ ಡಯೆಟ್ ಕೂಡ ಮಾಡುತ್ತಾರೆ. ಫಿಟ್‌ನೆಸ್ ಎಂದು ವರ್ಕೌಟ್, ಆರೋಗ್ಯಕ್ಕೆಂದು ಡಯೆಟ್ ಮಾಡೋದರಲ್ಲಿ ತಪ್ಪಿಲ್ಲ, ಆದರೆ ತೀರ ಸಣ್ಣಗಾಗೋದು, ಬಾಡಿ ಬಿಲ್ಡ್ ಮಾಡೋದು ಚೆನ್ನಾಗಿರಲ್ಲ ಎಂದು ಸುಧಿ ಹೇಳಿದ್ದಾರೆ.
ಹೌದು, ಬೆಡ್ ರೂಮ್ ಏರಿಯಾದಲ್ಲಿ ನಿರೂಪಕಿ ಜಾಹ್ನವಿ, ಕಾಕ್ರೋಚ್ ಸುಧಿ, ಅಶ್ವಿನಿ ಗೌಡ ಅವರು ಮಾತನಾಡುತ್ತಿದ್ದರು. ಆ ವೇಳೆ ಸುಧಿ ಅವರು ಹೆಣ್ಣು ಹೂವಿನ ಥರ ಇರಬೇಕು ಎಂದಿದ್ದಾರೆ.
ಕಾಕ್ರೋಚ್ ಸುಧಿ: ಹುಡುಗಿಯರು ಅಂದರೆ ಹೂವು ಥರ ಇರಬೇಕು, ಬಿಸಿ ನೀರಿನಲ್ಲಿ ನೆನೆ ಹಾಕೋ ಥರ ಇದ್ದರೆ ಏನು ಮಾಡೋದು. ಸಂಜೆ ನಾವು ಮುದ್ದು ಮಾಡ್ತೀವಿ ಅಂದರೆ ಹೂವು ಥರ ಇರಬೇಕು. ಸಂಜೆ ಮುದ್ದು ಮಾಡುವ ಹೂವಿನ ಥರ ಫೀಲ್ ಆಗಬೇಕು, ಚಪ್ಪಡಿ ಕಲ್ಲಿನ ಥರ ಫೀಲ್ ಆದರೆ ಏನು ಮಾಡೋದು? ಸಂಜೆ ಮನೆಗೆ ಬರ್ತಿದೀವಿ, ನೀವು ಬಿಸಿನೀರಿನಲ್ಲಿ ನೆನೆ ಹಾಕೊಬಿಡು?
ಅಶ್ವಿನಿ: ನಿಮ್ಮಂಥ ನಾಟಿಗಳಿಗೆ ಪಾಪದ ಹೆಣ್ಣು ಮಕ್ಕಳು ಸಿಗ್ತಾರೆ
ಕಾಕ್ರೋಚ್ ಸುಧಿ: ಓದು ಓದು ಅಂದರೆ ಓದೋಕೆ ಇಷ್ಟ ಆಗಲಿಲ್ಲ, ಆಮೇಲೆ ನನ್ನ ಮಗ ಹುಟ್ಟಿದ, ನಾನಾದರೂ ಪರವಾಗಿಲ್ಲ, ಅವನು ನಮಗಿಂತ ದೊಡ್ಡ ಟ್ರಬಲ್. ಇವಳು ಏನೇನೋ ಮಾಡ್ತಾಳೆ. ಬೇವಿನ ಬೀಜ ಬಿತ್ತಿದಮೇಲೆ ಬೇವಿನ ಮರ ಆಗೋದು ಅಂತ ನಾನು ಹೇಳಿದರೆ ಕೇಳೋದಿಲ್ಲ. ಆದರೆ ನನ್ನ ಹೆಂಡ್ತಿ ಮಾವಿನ ಮರ ಮಾಡಬೇಕು ಅಂತ ನೋಡ್ತಿದ್ದಾಳೆ, ಅದು ಆಗೋದಿಲ್ಲ. ನಿಮ್ಮ ಥರ ಆಡ್ತಾನೆ ಅಂತ ನನ್ನ ಹೆಂಡ್ತಿ ಅಳ್ತಾಳೆ. ಹೀಗಾಗಿ ಅವನನ್ನು ಹಾಸ್ಟೆಲ್‌ಗೆ ಹಾಕಬೇಕು ಅಂತ ಹೇಳಿದ್ದಳು. ಇರೋದು ಒಬ್ಬ ಮಗ, ಅವನು ಚಿಕ್ಕವನು, ಹಾಸ್ಟೆಲ್‌ಗೆ ಕಳಿಸೋದು ಬೇಡ, ನನ್ನ ಮಗ ಹಾಸ್ಟೆಲ್‌ಗೆ ಹೋಗಿದ್ರೆ ಅವನಿಗೆ ತಿಂಗಳು ಆ ತಿಂಡಿ ಈ ತಿಂಡಿ ತಗೊಂಡು ಹೋಗುತ್ತಿದ್ದೆವು. ಅದರ ಬದಲು ನಾನೇ ಪಿಜಿಗೆ ಹೋಗ್ತೀನಿ, ನನಗೆ ನೀವು ಪ್ರತಿ ತಿಂಗಳು ಏನಾದರೊಂದು ತಿಂಡಿ ತಗೊಂಡು ಬಾ ಅಂತ ಹೇಳಿದ್ದೆ. ನನ್ನ ಮಗ ನನ್ನ ಥರ ಆಗಬಾರದು ಅಂತ ಅವಳು ಹೇಳೋದು
ಈ ವಾರ ಕಿಚ್ಚ ಚಪ್ಪಾಳೆ ಕರ್ನಾಟಕ ಜನತೆಗೆ ಸಿಕ್ಕಿದೆ. ಅಂದಹಾಗೆ ಟಾಸ್ಕ್ ಅರ್ಥಮಾಡಿಕೊಂಡು ಆಟ ಆಡಿಲ್ಲ ಎಂದು ಸ್ಪರ್ಧಿಗಳಿಗೆ ಅವರು ಕಿವಿಮಾತು ಹೇಳಿದ್ದಾರೆ. ಇನ್ನು ಮಲಗಿರುವ ಸ್ಪರ್ಧಿಗಳಿಗೆ ಎಚ್ಚರಿಕೆಯನ್ನು ಕೂಡ ನೀಡಿದ್ದಾರೆ.
ಅಂದಹಾಗೆ ಈ ವಾರ ಯಾರು ಎಲಿಮಿನೇಟ್ ಆಗ್ತಾರೆ ಎಂದು ಕಾದು ನೋಡಬೇಕಿದೆ. ಆರ್‌ಜೆ ಅಮಿತ್, ಕರಿಬಸಪ್ಪ, ಧನುಷ್, ಮಲ್ಲಮ್ಮ, ಗಿಲ್ಲಿ ನಟ, ಕಾವ್ಯ ಶೈವ, ಅಭಿಷೇಕ್ ಶ್ರೀಕಾಂತ್, ಕರಿಬಸಪ್ಪ ಅವರು ಎಲಿಮಿನೇಶನ್‌ಗೆ ನಾಮಿನೇಟ್ ಆಗಿದ್ದರು. ಈಗ ಮಲ್ಲಮ್ಮ ಫಸ್ಟ್ ಸೇಫ್ ಆದ ಅಭ್ಯರ್ಥಿ ಎಂದು ಕರೆಸಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.