ಈ ಬಾರಿ ಬಾಯ್ಸ್ ವರ್ಸಸ್ ಗರ್ಲ್ಸ್ ಶೋನಲ್ಲಿ ಹನುಮಂತು ಡಿಫರೆಂಟ್ ಸ್ಟೈಲ್ ನಲ್ಲಿ ಮಿಂಚಿದ್ದಾರೆ. ಅವರ ನಟನೆಗೆ ಸ್ಪರ್ಧಿಗಳು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ.
ಬಿಗ್ ಬಾಸ್ ಕನ್ನಡ 11 (Bigg Boss Kannada 11) ರ ವಿಜೇತ, ಎಲ್ಲರ ಅಚ್ಚುಮೆಚ್ಚಿನ ಹನುಮಂತು (Hanumantu) ಬಾಯ್ಸ್ ವರ್ಸಸ್ ಗರ್ಲ್ಸ್ (Boys vs Girls) ಶೋನಲ್ಲಿ ವೀಕ್ಷಕರ ಗಮನ ಸೆಳೆಯುತ್ತಿದ್ದಾರೆ. ಈ ಬಾರಿ ಹೊಸ ಸ್ಟೈಲ್ ನಲ್ಲಿ ಹನುಮಂತು ವೀಕ್ಷಕರ ಮುಂದೆ ಬಂದಿದ್ದಾರೆ. ಕವಿರತ್ನ ಕಾಳಿದಾಸನಾಗಿ ಬಂದ ಹನುಮಂತನ ಮಾತಿಗೆ ಸ್ಪರ್ಧಿಗಳು ಬಿದ್ದು ಬಿದ್ದು ನಕ್ಕಿದ್ದಾರೆ. ಹೆಗಲ ಮೇಲೆ ಕಂಬಳಿ ಹಾಕಿ, ಕೈನಲ್ಲೊಂದು ಕೋಲು ಹಿಡಿದು, ಅಣ್ಣವ್ರ ಬೆಳ್ಳಿ ಮೂಡಿತೋ ಹಾಡಿಗೆ ಹೆಜ್ಜೆ ಹಾಕುವ ಹನುಮಂತು ಸ್ಟೈಲ್ ವೀಕ್ಷಕರಿಗೆ ಇಷ್ಟವಾಗಿದೆ. ಫುಲ್ ಎಪಿಸೋಡ್ ವೀಕ್ಷಣೆ ಮಾಡುವ ಕಾತುರದಲ್ಲಿ ಫ್ಯಾನ್ಸ್ ಇದ್ದಾರೆ. ವೇದಿಕೆ ಮೇಲೆ ಬಂದ ಹನುಮಂತು, ಶಾಕುಂತಲೆ ಯಾರು ಅನ್ನೋದನ್ನೇ ಮರೆತಿದ್ದಾರೆ. ಇವರು ಯಾರು ಗೊತ್ತಾ ಅಂದ್ರೆ ಅಕ್ಕ ಅಂತ ಉತ್ತರ ನೀಡ್ತಾರೆ.
ಹನುಮಂತ ಕಾಳಿದಾಸನ ವೇಷದಲ್ಲಿ ಬಂದ್ರೆ ನಟಿ ಚಂದನಾ ಗೌಡ ಶಾಕುಂತಲೇ ರೂಪದಲ್ಲಿ ಬಂದಿದ್ದಾರೆ. ಪ್ರಿಯತಮಾ, ಪ್ರಿಯತಮಾ ಅಂತ ಚಂದನಾ ಹನುಮಂತನ ಹೆಗಲ ಮೇಲೆ ಕೈ ಹಾಕಿದ್ರೆ, ಹನುಮಂತು ಡೈಲಾಗ್ ಹೇಳ್ದೆ ಬಿದ್ದು ಬಿದ್ದು ನಗ್ತಿದ್ದಾರೆ. ನಿಮಗೆ ನನ್ನ ನೆನಪಿಲ್ಲವೇ ಎನ್ನುವ ಚಂದನಾ ಪ್ರಶ್ನೆಗೆ ತಮ್ಮದೇ ರೀತಿಯಲ್ಲಿ ಉತ್ತರ ನೀಡುವ ಹನುಮಂತು, ರಿಜಿಸ್ಟರ್ ಮ್ಯಾರೇಜ್ ಆಗಿದ್ದೀವಾ ಎನ್ನುತ್ತಾರೆ. ಹನುಮಂತು ಮಾತಿಗೆ ಸ್ಪರ್ಧಿಗಳು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ.
'ಯಜಮಾನ' ಸೀರಿಯಲ್ ಮೊದಲರಾತ್ರಿ ಶೂಟಿಂಗ್ನಲ್ಲಿ ತೆರೆಮರೆಯಲ್ಲಿ ನಡೆದದ್ದೇನು? ವಿಡಿಯೋ ವೈರಲ್
ಕಲರ್ಸ್ ಕನ್ನಡ ತನ್ನ ಸೋಶಿಯಲ್ ಮೀಡಿಯಾದಲ್ಲಿ ಪ್ರೋಮೋ ಬಿಟ್ಟಿದೆ. ಇದನ್ನು ಈಗಾಗಲೇ ಸಾವಿರಾರು ಮಂದಿ ಲೈಕ್ ಮಾಡಿದ್ದಾರೆ. ಮಂಕಿಡಿದಿರೋ ಪ್ರಿಯತಮನಿಗೆ ನೆನಪು ಬರಿಸೋದಾದ್ರೂ ಹೇಗೆ ಎಂಬ ಶೀರ್ಷಿಕೆ ಅಡಿ ಹನುಮಂತು ಹಾಗೂ ಚಂದನ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಇದಕ್ಕೆ ಅನೇಕರು ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ. ಹನುಮಂತು ಸೂಪರ್, ಕರ್ನಾಟಕ ಜನತೆಯನ್ನು ಪೆದ್ದು ಮಾಡಿದ ಜಾಣ ಎಂಬೆಲ್ಲ ಕಮೆಂಟ್ ಬಂದಿದೆ.
ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗ್ತಿರುವ ಬಾಯ್ಸ್ ವರ್ಸಸ್ ಗರ್ಲ್ಸ್ ರಿಯಾಲಿಟಿ ಶೋನಲ್ಲಿ ಈ ಬಾರಿ ಸ್ಯಾಂಡಲ್ವುಡ್ ಸೆಲೆಬ್ರೇಷನ್ ರೌಂಡ್ ಆಚರಿಸಲಾಗ್ತಿದೆ. ಸ್ಪರ್ಧಿಗಳು, ಸ್ಯಾಂಡಲ್ವುಡ್ ಕಲಾವಿದರ ಗೆಟಪ್ನಲ್ಲಿ ವೇದಿಕೆ ಮೇಲೆ ಬಂದಿದ್ದಾರೆ. ರಜತ್ ಶಿವಣ್ಣನ ಸ್ಟೈಲ್ ನಲ್ಲಿ ಬಂದ್ರೆ, ಚೈತ್ರಾ ಕುಂದಾಪುರ ನಾಗವಲ್ಲಿಯಾಗಿ ಬಂದಿದ್ದಾರೆ. ಮಂಜು ಪಾವಗಡ, ರವಿಚಂದ್ರನಾಗಿ ಮಿಂಚಲಿಸ್ದಾರೆ.
ತುಳಸಿಯನ್ನು ತಾಯಿ ಮಾಡಿ ಮಿಲಿಯನ್ ಡಾಲರ್ ಪ್ರಶ್ನೆ ಸೃಷ್ಟಿಸಿದ ʼಶ್ರೀರಸ್ತು ಶುಭಮಸ್ತು ಧಾರಾವಾಹಿʼ; ಏನದು?
ಬಾಯ್ಸ್ ವರ್ಸಸ್ ಗರ್ಲ್ಸ್ ರಿಯಾಲಿಟಿ ಶೋವನ್ನು ಅನುಪಮಾ ಗೌಡ ನಡೆಸಿಕೊಡ್ತಿದ್ದಾರೆ. ಕೆಲ ದಿನಗಳ ಹಿಂದಷ್ಟೆ ಅನುಪಮಾ ಹುಟ್ಟುಹಬ್ಬ ಆಚರಿಸಿಕೊಂಡಿದ್ದು, ಬಾಯ್ಸ್ ವರ್ಸಸ್ ಗರ್ಲ್ಸ್ ತಂಡ ಅವರಿಗೆ ವೇದಿಕೆ ಮೇಲೆ ಸರ್ಪ್ರೈಸ್ ನೀಡಿದೆ. ಈ ಶೋನಲ್ಲಿ ವಿನಯ್ ಬಾಯ್ಸ್ ಟೀಂ ನಾಯಕನಾದ್ರೆ ಶುಭಾ ಪೂಂಜಾ ಗರ್ಲ್ಸ್ ನಾಯಕಿ. ಇಬ್ಬರ ಮಧ್ಯೆ ಜಿದ್ದಾಜಿದ್ದಿನ ಫೈಟ್ ನಡೆಯುತ್ತಿದೆ. ಪ್ರತಿ ಬಾರಿ ಸ್ಪರ್ಧೆ ಮಾತ್ರ ನಡೆಸ್ತಿದ್ದ ಸ್ಪರ್ಧಿಗಳು ಈ ಬಾರಿ ಕಲರ್ ಫುಲ್ ಆಗಿ ಮಿಂಚಲಿದ್ದಾರೆ.
ಬಿಗ್ ಬಾಸ್ ಶೋ ನಂತ್ರ ಹನುಮಂತು, ರಜತ್, ಧನರಾಜ್ ಹಾಗೂ ಚೈತ್ರಾ ಬಾಯ್ಸ್ ವರ್ಸಸ್ ಗರ್ಲ್ ಶೋ ಸ್ಪರ್ಧಿಗಳಾಗಿ ಬಂದಿದ್ದಾರೆ. ಆರಂಭದಲ್ಲಿ ಸ್ವಲ್ಪ ದಿನ ಶೋನಲ್ಲಿದ್ದ ಹನುಮಂತು ಆಗಾಗ ಕಾಣಿಸಿಕೊಳ್ಳುವ ಗೆಸ್ಟ್ ಅಂದ್ರೂ ತಪ್ಪಾಗೋದಿಲ್ಲ. ಎರಡು ವಾರಗಳ ಕಾಲ ಹನುಮಂತು ಮಿಸ್ ಆಗಿದ್ರು. ಬೇರೆ ಕೆಲಸದಲ್ಲಿ ಬ್ಯುಸಿಯಿದ್ದ ಹನುಮಂತು ಮತ್ತೆ ರಿಯಾಲಿಟಿ ಶೋಗೆ ಮರಳಿದ್ದಾರೆ.ಹನುಮಂತು ಜೊತೆ ಶಾಕುಂತಲೆಯಾಗಿ ಮಿಂಚಿರುವ ನಟಿ ಚಂದನಾ ಗೌಡ, ಜೀ ಕನ್ನಡದಲ್ಲಿ ಪ್ರಸಾರವಾಗ್ತಿರುವ ಅಮೃತಧಾರೆ ಸೀರಿಯಲ್ ಮೂಲಕ ಪ್ರಸಿದ್ಧಿಗೆ ಬಂದವರು. ಅಲ್ಲಿ ಅಶ್ವಿನಿ ಪಾತ್ರದ ಮೂಲಕ ಮನೆ ಮಾತಾದವರು.