ಬಿಗ್ ಬಾಸ್ ಕನ್ನಡ 11: ಮೊದಲ ಟಾಸ್ಕ್‌ನಲ್ಲಿ ಗೆದ್ದ ಭವ್ಯಾ ತಂಡ, ಸೋಲಾಗಿದ್ದಕ್ಕೆ ಶೋಭಾ ಶೆಟ್ಟಿ ಕಣ್ಣೀರು!

By Gowthami K  |  First Published Nov 20, 2024, 11:40 PM IST

ಬಿಗ್ ಬಾಸ್ ಕನ್ನಡ 11ರಲ್ಲಿ ಭವ್ಯಾ ಗೌಡ ಮತ್ತು ಶೋಭಾ ಶೆಟ್ಟಿ ನೇತೃತ್ವದ ತಂಡಗಳ ನಡುವೆ ಟವರ್ ಕಟ್ಟುವ ಟಾಸ್ಕ್ ನಡೆದಿದ್ದು, ಭವ್ಯಾ ತಂಡ ಗೆಲುವು ಸಾಧಿಸಿದೆ. ಶೋಭಾ ಶೆಟ್ಟಿ ತಂಡದಲ್ಲಿ ಒಗ್ಗಟ್ಟಿನ ಕೊರತೆ ಕಂಡುಬಂದಿದ್ದು, ಉಗ್ರಂ ಮಂಜು ಮತ್ತು ರಜತ್ ನಡುವೆ ವಾಗ್ವಾದ ನಡೆದಿದೆ. ಇನ್ನು ಐಶ್ವರ್ಯಾ ಅವರ ಹಣವನ್ನು ಚೈತ್ರಾ ಕದ್ದ ಘಟನೆಯೂ ನಡೆದಿದೆ.


ಬಿಗ್ ಬಾಸ್ ಕನ್ನಡ 11ರಲ್ಲಿ ಕ್ಯಾಪ್ಟನ್‌ ಭವ್ಯಾ ಗೌಡ ಮತ್ತು  ಶೋಭಾ ಶೆಟ್ಟಿ ಎರಡು ತಂಡಗಳನ್ನು ಮಾಡಲಾಗಿದೆ. ಒಂದೊಂದು ತಂಡಕ್ಕೆ 11 ಸಾವಿರ ರೂ ಬಿಬಿ ಪಾಯಿಂಟ್‌ ನೀಡಲಾಗಿದೆ.  ಶಿಶಿರ್, ತ್ರಿವಿಕ್ರಮ್, ಸುರೇಶ್, ಧರ್ಮ, ಮೋಕ್ಷಿತಾ ಮತ್ತು ಐಶ್ವರ್ಯ ಕ್ಯಾಪ್ಟನ್‌ ಭವ್ಯಾ ಗೌಡ ಟೀಂ ನಲ್ಲಿದ್ದರೆ, ಉಗ್ರಂ ಮಂಜು, ರಜತ್, ಹನುಮಂತ, ಧನ್‌ರಾಜ್ ಚೈತ್ರಾ ಮತ್ತು ಗೌತಮಿ ಅವರು ಶೋಭಾ ಶೆಟ್ಟಿ ಟೀಂನಲ್ಲಿ ಮೆಂಬರ್ ಆಗಿದ್ದಾರೆ. ತಂಡದ ನಾಯಕರು ಒಬ್ಬೊಬ್ಬರಿಗೆ 1 ಸಾವಿರ ನೀಡಿ ಟೀಂ ಕಟ್ಟಿದ್ದಾರೆ.

ಇನ್ನು ಬಿಗ್‌ಬಾಸ್‌ ಮೊದಲ ಟಾಸ್ಕ್ ಆಗಿ ಟವರ್ ಬಂತು ಟವರ್ ನೀಡಿದ್ದರು. ಮರದ ಬಿಲ್ಲೆಗಳನ್ನು ಸಂಗ್ರಹಿಸಿ ಟವರ್‌ ಕಟ್ಟಬೇಕಾಗಿತ್ತು. ಈ ಟಾಸ್ಕ್‌ ನಲ್ಲಿ ಭವ್ಯಾ ಅವರ ನೀಲಿ ಬಣ್ಣದ ಟೀಂ ಗೆಲುವು ಕಂಡಿದೆ. ಈ ಮೂಲಕ  ಗೆದ್ದು ಬಂದ ಬಿಬಿ ಪಾಯಿಂಟ್‌ ಅನ್ನು ಟೀಂ ಗೆ ಭವ್ಯಾ ಸಮನಾಗಿ ಹಂಚಿದ್ದಾರೆ.

Tap to resize

Latest Videos

undefined

ಎ.ಆರ್. ರೆಹಮಾನ್ ವಿಚ್ಚೇದನ: ಸಾಯಿರಾ ಬಾನು ಜತೆ ಮದುವೆಗೂ ಮುನ್ನ 3 ಷರತ್ತು ವಿಧಿಸಿದ್ದ ಸಂಗೀತಗಾರ!

ಬಿಗ್ ಬಾಸ್ ಮನೆಗೆ ವೈಲ್ಡ್​ ಕಾರ್ಡ್​ ಮೂಲಕ ಬಂದ ಬಳಿಕ ಮೊದಲ ಆಟದಲ್ಲೇ ಶೋಭಾ ಶೆಟ್ಟಿಗೆ ಸೋಲಾಗಿದೆ. ಆಟದಲ್ಲಿ ಅವರಿಗೆ ಹಿನ್ನಡೆ ಆಗಿದ್ದಕ್ಕೆ ಬೇಸರ ಮಾಡಿಕೊಂಡು ಶೋಭಾ ಅತ್ತಿದ್ದಾರೆ. ಈ ವೇಳೆ ಮನೆಯ ಸದಸ್ಯರು ಧೈರ್ಯ ಹೇಳಿದ್ದಾರೆ. ಇನ್ನು ಈ ವಾರದ ಟಾಸ್ಕ್‌ ನಲ್ಲಿ ಯಾವ ಟೀಂ ಗೆದ್ದು ಕ್ಯಾಪ್ಟನ್ಸಿ ಗೆ ಯಾರು ಹೋಗುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಎ.ಆರ್. ರೆಹಮಾನ್-ಸಾಯಿರಾ ವಿಚ್ಚೇದನ: ಅಪ್ಪ-ಅಮ್ಮ ಬೇರೆಯಾದ ಬಗ್ಗೆ ಮಗ ಅಮೀನ್ ಭಾವುಕ ಪೋಸ್ಟ್!

ಇನ್ನು ಟಾಸ್ಕ್‌ ಮುಗಿದ ಬಳಿಕ ಬೆಡ್‌ ರೂಂ ನಲ್ಲಿ ಕುಳಿತುಕೊಂಡು ಮಾತನಾಡುತ್ತಿದ್ದ ಐಶ್ವರ್ಯಾ ಅವರ ಬ್ಯಾಗ್‌ ನಿಂದ ಎದುರಾಳಿ ಕೆಂಪು ತಂಡ ಸದಸ್ಯೆ ಚೈತ್ರಾ ಕುಂದಾಪುರ 2000 ರೂ ಬಿಬಿ ಪಾಯಿಂಟ್‌ ಹಣವನ್ನು ಕದ್ದಿದ್ದಾರೆ. ಹೀಗಾಗಿ ಐಶ್ವರ್ಯಾ ಅವರಲ್ಲಿ ಈಗ ಯಾವುದೇ ಹಣ ಉಳಿದಿಲ್ಲ.

ಇನ್ನು ಶೋಭಾ ಶೆಟ್ಟಿ ಅವರ ಟೀಂ ನಲ್ಲಿ ಒಗ್ಗಟ್ಟಿಲ್ಲ. ಉಗ್ರಂ ಮಂಜು ಮತ್ತು ರಜತ್ ಮಧ್ಯೆ ಗಲಾಟೆ ನಡೆದಿದೆ. ವೀಕ್‌ , ಸ್ಟ್ರಾಂಗ್‌ ಎಂಬ ವಿಚಾರವಾಗಿ ನಡೆದ ಚರ್ಚೆ ಕೊನೆಗೆ ವಾದಕ್ಕೆ ಕಾರಣವಾಯ್ತು. ನೀವು ಹೇಳಿದ ಮಾತು ನಾವು ವೀಕ್‌ ಅನ್ನುವಂತೆ ಆಯ್ತು ಎಂದು ಮಂಜು ಮೊದಲು ಹೇಳಿದ್ರು. ಇದು ಇಬ್ಬರ ನಡುವೆ ವಾಗ್ವಾದಕ್ಕೆ ಕಾರಣವಾಯ್ತು.    

click me!