
2017ರಲ್ಲಿ ನಟ ಕಿಚ್ಚ ಸುದೀಪ್-ದರ್ಶನ್ ಮಧ್ಯೆ ಮನಸ್ತಾಪ ಆಗಿ ಇವರ ಸ್ನೇಹ ಅಂತ್ಯವಾಗಿತ್ತು. ಇವರಿಬ್ಬರು ಒಂದಾಗಲಿ ಅಂತ ಅನೇಕರು ಇಂದು ಬಯಸುತ್ತಿದ್ದಾರೆ. ಅವರಲ್ಲಿ ʼಬಿಗ್ ಬಾಸ್ ಕನ್ನಡ 11ʼ ಖ್ಯಾತಿಯ ರಜತ್ ಕೂಡ ಒಬ್ಬರು.
ರಜತ್ ಹೇಳಿದ್ದೇನು?
ದರ್ಶನ್, ಕಿಚ್ಚ ಸುದೀಪ್ ಅವರ ಮನಸ್ತಾಪದ ಬಗ್ಗೆ ಖಾಸಗಿ ವಾಹಿನಿಯೊಂದು ಪ್ರಶ್ನೆ ಮಾಡಿತ್ತು. ಆಗ ರಜತ್ ಅವರು “ನಾನು ದರ್ಶನ್, ಸುದೀಪ್ ಬಗ್ಗೆ ಮಾತನಾಡುವಷ್ಟು ದೊಡ್ಡವನಲ್ಲ, ಒಂದು ವೇಳೆ ಆ ಮಟ್ಟಕ್ಕೆ ಬೆಳದರೂ ನಾನು ಮಾತನಾಡೋದಿಲ್ಲ. ಅವರಿಬ್ಬರು ಒಂದಾದರೆ ಖುಷಿ. ಅವರಿಬ್ಬರು ಒಂದಾದರೆ ನಾನು ತಿರುಪತಿಗೆ ಹೋಗಿ ಗುಂಡು ಹೊಡೆಸಿಕೊಂಡು ಬರ್ತೀನಿ” ಎಂದು ಹೇಳಿದ್ದರು.
BBK 11: ಅಂದು ರಾತ್ರಿ ಬಿಗ್ ಬಾಸ್ ಮನೆಯಲ್ಲಿ ಭವ್ಯಾ ಗೌಡ ಜೊತೆ ನಡೆದ ಸಂಭಾಷಣೆ ಏನು? ಸತ್ಯ ಹೇಳಿದ ತ್ರಿವಿಕ್ರಮ್!
ಕಿಚ್ಚ ಸುದೀಪ್, ದರ್ಶನ್ ಮಧ್ಯೆ ಏನು ನಡೆಯಿತು?
ಹೌದು, 201 7ರಲ್ಲಿ ನಟ ಕಿಚ್ಚ ಸುದೀಪ್ ಅವರು ಸಂದರ್ಶನವೊಂದರಲ್ಲಿ “ನನಗೆ ಮೆಜೆಸ್ಟಿಕ್ ಸಿನಿಮಾ ಆಫರ್ ಬಂದಿತ್ತು. ನಾನು ಅದನ್ನು ರಿಜೆಕ್ಟ್ ಮಾಡಿದೆ. ನಾನೇ ದರ್ಶನ್ ಹೆಸರನ್ನು ಸೂಚಿಸಿದೆ” ಎಂದು ಹೇಳಿದ್ದರು. ಈ ಮಾತು ದರ್ಶನ್ ಅವರಿಗೆ ಬೇಸರ ತಂದಿತ್ತು. ದರ್ಶನ್ ಈ ಮಾತನ್ನು ಒಪ್ಪಲಿಲ್ಲ. ಈ ಸಿನಿಮಾ ನಿರ್ಮಾಪಕ ಎಂಜಿ ರಾಮಮೂರ್ತಿ, ನಿರ್ದೇಶಕ ಪಿ ಎನ್ ಸತ್ಯ, ಭಾ ಮ ಹರೀಶ್ ಅವರು ಈ ವಿಚಾರದ ಬಗ್ಗೆ ಒಂದೊಂದು ಹೇಳಿಕೆ ನೀಡಿದರು.
ರಸಿಕ ಟೈಟಲ್ ಸಿಕ್ಕಿದ್ದಕ್ಕೆ Bigg Boss Kannada 11 ರಜತ್ ಏನಂದ್ರು?
ಮುಖಾಮುಖಿ ಆಗಿಲ್ಲ..!
ಇನ್ನು ದರ್ಶನ್ ಅವರು “ನಾನು, ಕಿಚ್ಚ ಸುದೀಪ್ ಇನ್ಮುಂದೆ ಸ್ನೇಹಿತರಲ್ಲ. ನಾವಿಬ್ಬರು ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುವ ಕಲಾವಿದರು ಅಷ್ಟೇ, ಗಾಸಿಪ್ ಹಬ್ಬಿಸಬೇಡಿ” ಎಂದು ಟ್ವೀಟ್ ಮಾಡಿದ್ದರು. ಅಲ್ಲಿಂದ ದರ್ಶನ್ ಬಗ್ಗೆ ಸುದೀಪ್ ಆಗಲೀ, ಸುದೀಪ್ ಬಗ್ಗೆ ದರ್ಶನ್ ಆಗಲೀ ಮಾತನಾಡಿಲ್ಲ. ಅಷ್ಟೇ ಅಲ್ಲದೆ ದರ್ಶನ್ ಇದ್ದಲ್ಲಿ ಸುದೀಪ್ ಬರೋದಿಲ್ಲ, ಸುದೀಪ್ ಇದ್ದಲ್ಲಿ ದರ್ಶನ್ ಬರೋದಿಲ್ಲ. ಒಟ್ಟಿನಲ್ಲಿ ಅಂದಿನಿಂದ ಇಲ್ಲಿಯವರೆಗೆ ಕಿಚ್ಚ ಸುದೀಪ್ ಹಾಗೂ ದರ್ಶನ್ ಮುಖಾಮುಖಿ ಆಗಿಲ್ಲ. ದರ್ಶನ್ ಅವರ ಕುರಿತಂತೆ ಪ್ರಶ್ನೆಗಳು ಬಂದಾಗಲೂ ಕಿಚ್ಚ ಸುದೀಪ್ ಪ್ರತಿಕ್ರಿಯೆ ಕೊಟ್ಟಿರಲಿಲ್ಲ.
BBK 11: ಭವ್ಯಾಗೊಂದೇ ಅಲ್ಲ, ಅನುಗೆ ಐ ಲವ್ ಯು ಅಂದಿದ್ದೆ: ನಟ ತ್ರಿವಿಕ್ರಮ್ ಮುಕ್ತ ಮಾತು!
ರಜತ್‌ಗೆ ಡಿ ಬಾಸ್ ಅಂದರೆೆ ಇಷ್ಟ
ಇನ್ನೊಂದು ಕಡೆ ಇವರಿಬ್ಬರು ಒಂದಾಗಲಿ ಅಂತ ಅನೇಕರು ಬಯಸುತ್ತಿದ್ದಾರೆ. ನಾನು ದರ್ಶನ್ ಅಭಿಮಾನಿ. “ದರ್ಶನ್ ನಮ್ಮ ಬಾಸ್. ಎಷ್ಟೇ ಸವಾಲು ಬರಲೀ, ಕಷ್ಟಗಳು ಬರಲೀ, ನಮ್ಮ ಬಾಸ್ ದರ್ಶನ್ ಬೌನ್ಸ್ ಬ್ಯಾಕ್ ಆಗ್ತಾರೆ. ಯಾವುದನ್ನು ಅವರು ತಲೆಗೆ ತಗೊಳೋದಿಲ್ಲ. ಅದಿಕ್ಕೆ ನನಗೆ ಅವರು ಅಂದ್ರೆ ತುಂಬ ಇಷ್ಟ” ಎಂದು ರಜತ್ ಅವರು ಹೇಳಿದ್ದರು. ಇನ್ನು ರಜತ್ ಅವರ ರೆಸಾರ್ಟ್ ಉದ್ಘಾಟನೆಗೆ ದರ್ಶನ್ ಆಗಮಿಸಿದ್ದರು. ಇನ್ನು ʼಬಿಗ್ ಬಾಸ್ʼ ಮನೆಗೆ ಎಂಟ್ರಿಕೊಟ್ಟಿದ್ದ ರಜತ್ ಅವರು ಕಿಚ್ಚ ಸುದೀಪ್ ಅವರನ್ನು ಕೂಡ ಗೌರವಿಸುತ್ತಾರೆ.
ʼಬಿಗ್ ಬಾಸ್ʼ ಮನೆಗೆ ವೈಲ್ಡ್‌ಕಾರ್ಡ್ ಎಂಟ್ರಿ ಕೊಟ್ಟಿದ್ದ ರಜತ್ ಅವರು ಸಖತ್ ಆಗಿ ಆಟ ಆಡಿದ್ದರು. ನೇರವಾಗಿ ಮಾತನಾಡುತ್ತ, ಅನ್ಯಾಯ-ತಪ್ಪನ್ನು ಖಂಡಿಸುತ್ತ, ಡ್ಯಾನ್ಸ್ ಮಾಡಿ, ಹಾಡು ಹಾಡಿ ಒಟ್ಟಿನಲ್ಲಿ ರಜತ್ ಅವರು ಈ ಮನೆಗೆ ಗೇಮ್ ಚೇಂಜರ್ ಆಗಿದ್ದಾರೆ. ರಜತ್ ಅವರು ಈ ಶೋಗೆ ಎಂಟ್ರಿ ಕೊಟ್ಟ ಬಳಿಕ ಆಟದ ರೀತಿ ಬದಲಾಯಿತು, ಮೆರುಗು ಸಿಕ್ಕಿತು ಎನ್ನಬಹುದು. ಈಗಾಗಲೇ ʼಗೀತಾಂಜಲಿʼ ಧಾರಾವಾಹಿಯಲ್ಲಿ ನಟಿಸಿ, ʼರಾಜಾ ರಾಣಿʼ ಶೋನಲ್ಲಿ ಭಾಗವಹಿಸಿದ್ದ ರಜತ್ ಮುಂದೆ ಏನು ಮಾಡ್ತಾರೆ ಅಂತ ಕಾದು ನೋಡಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.