ಎಂಟ್ರಿ ಕೊಟ್ಟ ಸಿಹಿಯ ಸಹೋದರಿ: ಬಾಲಕಿಯ ಹೊಸ ಲುಕ್‌ ಹೀಗಿದೆ ನೋಡಿ... ಮುಂದಿದೆ ಟ್ವಿಸ್ಟ್‌!

By Suchethana D  |  First Published Nov 23, 2024, 9:42 AM IST

ಸಿಹಿ ಸಾಯುತ್ತಿದ್ದಾಳೆ, ಸಿಹಿಯ ಸಹೋದರಿ ಕಾಣಿಸಿಕೊಂಡಿದ್ದಾಳೆ. ಆಕೆ ಹೊಸ ರೂಪ ಹೇಗಿದೆ? ಏನಿರಲಿದೆ ಟ್ವಿಸ್ಟ್‌? 
 


 ಸೀರಿಯಲ್‌ಗಳಲ್ಲಿ  ಏನು ಬೇಕಾದ್ರೂ ಆಗ್ಬೋದು, ಯಾವ ಕ್ಷಣ ಯಾರು ಬೇಕಾದ್ರೂ ಸಾಯ್ಬೋದು, ಹಿಂದೆ ಇಲ್ಲದೇ ಇರೋ ಹೊಸ ಎಂಟ್ರಿಗಳೂ ಆಗ್ಬೋದು. ಯಾಕೆಂದ್ರೆ ಇದು ಕಥೆಯಷ್ಟೇ. ಆದ್ರೆ ಈ ಕಥೆಯನ್ನೇ ರಿಯಲ್‌ ಲೈಫ್‌ ಎಂದು ಬಗೆದು ಆ ಸೀರಿಯಲ್‌ಗಳ ಆಳಕ್ಕೆ ಹೋಗಿ ಅದನ್ನು ತಮ್ಮ ಜೀವನದ ಅವಿಭಾಜ್ಯ ಅಂಗ ಎಂದೇ ಮಾಡಿಕೊಂಡಿರೋ ಬಹುತೇಕ ವೀಕ್ಷಕರ ಕಥೆ?  ಒಂದು ಸೀರಿಯಲ್ ಟಿಆರ್‍‌ಪಿಯನ್ನು ಹೆಚ್ಚಿಸುವುದಕ್ಕಾಗಿಯೋ, ಅಥವಾ ಟಿಆರ್‍‌ಪಿ ಕಡಿಮೆಯಾಗುತ್ತಿದೆ ಎಂದು ಕಾಣಿಸುತ್ತಿರುವ ಸಂದರ್ಭಗಳಲ್ಲಿ ಧಾರಾವಾಹಿಗಳಿಗೆ ಅನಿರೀಕ್ಷಿತ ತಿರುವು ನೀಡಲಾಗುತ್ತದೆ. ಸೀರಿಯಲ್‌ಗಳನ್ನು ವರ್ಷಗಟ್ಟಲೆ ಎಳೆಯುವುದಕ್ಕಾಗಿ ಏನೇನೋ ದೃಶ್ಯಗಳನ್ನು ತುರುಕಿಸಲಾಗುತ್ತದೆ. ಇದೀಗ ಸೀತಾರಾಮ ಸೀರಿಯಲ್‌ ಕಥೆಯೂ ಅದೇ ರೀತಿಯಾಗಿದೆ.

ಇಲ್ಲಿ ಸಿಹಿ ಸಾಯುತ್ತಿದ್ದಾಳೆ. ಸತತ ಕಾನೂನು ಹೋರಾಟದ ಬಳಿಕ ಕೊನೆಗೂ ಸಿಹಿ ಸೀತಾಳ ಮಡಿಲು ಸೇರಿದ್ದಾಳೆ. ಕಾನೂನಿಗಿಂತಲೂ ಮಾತೃ ವಾತ್ಸಲ್ಯವೇ ದೊಡ್ಡದು ಎನ್ನುವುದು ಸಾಬೀತಾಗಿದೆ. ಸೀತಾಳ ಮೇಲಿನ ಜಿದ್ದಿನಿಂದ, ಸಿಹಿಯನ್ನು ತನ್ನ ವಶಕ್ಕೆ ಪಡೆಯಲು ಹವಣಿಸುತ್ತಿದ್ದ ಶಾಲಿನಿಗೆ ಮುಖಭಂಗವಾಗಿದೆ. ಸೀತಾಳಿಗೆ ಸಿಹಿಯನ್ನು ಕೊಟ್ಟುಬಿಡಿ ಎಂದುಕಣ್ಣೀರು ಹಾಕ್ತಿದ್ದ ವೀಕ್ಷಕರಿಗೆ ಕೊನೆಗೂ ಖುಷಿಯ ಸಮಾಚಾರ ಸಿಕ್ಕಿತ್ತು. ಸಿಹಿ ಸೀತಾ-ರಾಮರನ್ನು ಸೇರಿದ್ದಳು. ಆದರೆ ಈಗ? ಈಗ ಮತ್ತೆ ತಿರುವು! ಸಿಹಿ ಅಪಘಾತದಲ್ಲಿ ಸತ್ತಂತೆ ತೋರಿಸಿರುವ ಪ್ರೊಮೋ ಒಂದು ಕೆಲ ತಿಂಗಳ ಹಿಂದೆ ಜೀಕನ್ನಡ ವಾಹಿನಿ ಶೇರ್‍‌ ಮಾಡಿಕೊಂಡಿತ್ತು. ಆದರೆ ಈ ದೃಶ್ಯ ಬರದೇ ಇದ್ದುದಕ್ಕೆ ವೀಕ್ಷಕರು ಖುಷಿ ಪಟ್ಟುಕೊಂಡಿದ್ದರು. ಆದರೆ ಆ ಘಳಿಗೆ ಕೊನೆಗೂ ಬಂದಂತೆ ಕಾಣುತ್ತಿದೆ. ಸಿಹಿ ಅಪಘಾತದಲ್ಲಿ ಸಾಯುವ ಕ್ಷಣ ಹತ್ತಿರ ಬಂದಿದೆ. ಹಾಗಂತ ಸಿಹಿಯನ್ನು ಇನ್ನೊಂದು ರೂಪದಲ್ಲಿ ನೋಡುವ ಅವಕಾಶವನ್ನು ನಿರ್ದೇಶಕರು ನೀಡಿದ್ದಾರೆ.

Tap to resize

Latest Videos

undefined

ನೋಡಲು ಥೇಟ್‌ ಬಾಲ್ಯದ ಅಪ್ಪು ಈ ಬಾಲಕ! ದನಿ ಕೂಡ ಸೇಮ್‌ ಟು ಸೇಮ್‌... ಅವನ ಮಾತು ಕೇಳಿ...

ಸಿಹಿಗೆ ಅವಳಿ ತಂಗಿ ಇದ್ದಾಳೆ! ಈ ವಿಷಯ ಇಲ್ಲಿಯವರೆಗೆ ಸೀರಿಯಲ್‌ನಲ್ಲಿ ತಂದೇ ಇರಲಿಲ್ಲ. ಆದರೆ ಈಗ ಅದು ಬಹಿರಂಗಗೊಂಡಿದೆ. ಕಾರಿನಲ್ಲಿ ಬರುವ ಸಮಯದಲ್ಲಿ ರಾಮ್‌ ಸಿಹಿಗೆ ಚಾಕಲೇಟ್‌ ನೀಡಿದ್ದಾಗ, ಆಕೆ ತನಗೂ ಒಬ್ಬಳು ಅಕ್ಕ-ತಂಗಿ ಇದ್ರೆ ಶೇರ್‍‌ ಮಾಡಬಹುದಿತ್ತು ಇದನ್ನು ಎಂದಾಗ, ಸೀತಾ, ಹೌದು ಇವಳ ಅವಳಿ ಸಹೋದರಿ ಬದುಕಿದ್ದರೆ ಚೆನ್ನಾಗಿತ್ತು ಎಂದಿದ್ದಾಳೆ. ಆಗಲೇ ವೀಕ್ಷಕರಿಗೆ ಸಿಹಿಯ ಇನ್ನೊಂದು ರೂಪ ಬರುತ್ತದೆ ಎನ್ನುವ ಅರಿವು ಆಗಿತ್ತು. ಅದರೆ ಅದಕ್ಕಾಗಿ ಸಿಹಿಯನ್ನೇ ಸಾಯಿಸುವುದು ಮಾತ್ರ ವೀಕ್ಷಕರಿಗೆ ಸಹಿಸಲು ಆಗುತ್ತಿಲ್ಲ.

ಇದೀಗ ವಾಹಿನಿ ಸಿಹಿಯ ತಂಗಿಯ ಪ್ರೊಮೋ ರಿಲೀಸ್‌ ಮಾಡಿದೆ. ಇದರಲ್ಲಿ ರೀತು ಸಿಂಗ್‌ ಪಕ್ಕಾ ಹಳ್ಳಿಯ ಹುಡುಗಿ ರೀತಿ ಕಾಣಿಸಿಕೊಂಡಿದ್ದಾಳೆ. ಇಲ್ಲಿಯವರೆಗೆ ಪಟ್ಟಣದ ಹುಡುಗಿಯಾಗಿದ್ದ ರೀತು, ಈಗ ಹಳ್ಳಿಹುಡುಗಿಯ ಪಾತ್ರ ಹೇಗೆ ನಿಭಾಯಿಸುತ್ತಾಳೆ ಎಂದು ನೋಡುವ ಕುತೂಹಲ ವೀಕ್ಷಕರಿಗೆ ಇದೆ. ಆದರೆ ಅದೇ ವೇಳೆ ಸಿಹಿಯನ್ನು ಸಾಯಿಸಿರುವ ಬಗ್ಗೆ ಹಲವರು ಅಸಮಾಧಾನ ತೋಡಿಕೊಳ್ಳುತ್ತಿದ್ದಾರೆ. ದಯವಿಟ್ಟು, ಸಿಹಿಯ ತಂಗಿಯನ್ನು ಮೇಘಶ್ಯಾಮ್‌-ಶಾಲಿನಿಗೆ ಕೊಟ್ಟು ಸಿಹಿಯನ್ನು ಸೀತಾ-ರಾಮ ಬಳಿ ಉಳಿಸಿ ಎಂದು ಕಣ್ಣೀರು ಹಾಕುತ್ತಿದ್ದಾರೆ. ಮುಂದೆ ಏನಾಗುತ್ತದೆ ಎನ್ನುವುದು ಸೀರಿಯಲ್‌ನಿಂದ ತಿಳಿದುಬರಬೇಕಿದೆ. 

ಸೀತಾರಾಮದ ಸುಲೋಚನಾ ಪಾತ್ರದಿಂದ ಜೀವನದಲ್ಲಿ ಫಸ್ಟ್‌ ಟೈಮ್ ಮಾಸ್ಕ್‌ ಹಾಕ್ಕೊಂಡು ತಿರಗ್ತಾ ಇದ್ದೇನೆ!

click me!