ಸ್ಟಾಪ್ ಸ್ಟಾಪ್ ಅಂದ್ರೆ ಹಾಲು ಉಕ್ಕೋದಿಲ್ವಾ? ಮಜವಾಗಿದೆ ರಚನಾ ಜೀವಾ ಜಗಳ

By Roopa Hegde  |  First Published Nov 23, 2024, 10:42 AM IST

ನಿನಗಾಗಿ ಸೀರಿಯಲ್ ನಲ್ಲಿ ಜೀವಾ ಹಾಗೂ ರಚನಾ ಕೋಳಿ ಜಗಳ ಶುರುವಾಗಿದೆ. ಏನೋ ಮಾಡೋಕೆ ಹೋಗಿ ಇನ್ನೇನೋ ಮಾಡುವ ರಚನಾಳನ್ನು ಜೀವಾ ಸಹಿಸಿಕೊಳ್ತಿದ್ದಾನೆ. ಈಗ ಜೀವಾ ಮನೆಯಲ್ಲಿ ಹಾಲುಕ್ಕಿಸಿದ್ದಾಳೆ ರಚನಾ.  
 


ಕಲರ್ಸ್ ಕನ್ನಡ (Colors Kannada )ದಲ್ಲಿ ಪ್ರಸಾರವಾಗ್ತಿರುವ ನಿನಗಾಗಿ ಸೀರಿಯಲ್ (Ninagaagi Serial) ಟ್ವಿಸ್ಟ್ ಮಧ್ಯೆ ರೋಮ್ಯಾಂಟಿಕ್ ತಿರುವು ಪಡೆದಿದೆ. ತಾನೇ ತಾಳಿ ಕಟ್ಟಿಕೊಂಡು, ಜೀವಾ ಮತ್ತು ಕೃಷ್ಣರನ್ನು ಒಂದು ಮಾಡಿರುವ ರಚನಾಗೆ ಏನೂ ಕೆಲಸ ಬರೋದಿಲ್ಲ. ರಚನಾಳನ್ನು ಮನೆಗೆ ತಂದಿಟ್ಟುಕೊಂಡಿರುವ ಜೀವಾಗೆ ಎರಡು ಮಕ್ಕಳನ್ನು ಸಂಭಾಳಿಸುವ ಪರಿಸ್ಥಿತಿ ಬಂದಿದೆ. ರಚನಾ ಮುದ್ದು ಮುದ್ದಾಗಿ ಮಾಡುವ ತಪ್ಪುಗಳು ಜೀವಾ ಮನಸ್ಸು ಕದಿಯುತ್ತಿದೆ. ವೀಕ್ಷಕರು ಕೂಡ ಜೀವಾ ಹಾಗೂ ರಚನಾ ಜೋಡಿಯನ್ನು ಅಪ್ಪಿಕೊಂಡಿದ್ದಾರೆ.

ಹಾಲ (milk) ನ್ನು ಎಲ್ಲಿ ಕಾಯಿಸ್ಬೇಕು, ಹಾಲು ಉಕ್ಕದ ಹಾಗೆ ಹೇಗೆ ನೋಡ್ಕೊಳ್ಬೇಕು ಎಂಬುದೇನೂ ರಚನಾಗೆ ಗೊತ್ತಿಲ್ಲ. ಜೀವಾಗೆ ಸಹಾಯ ಮಾಡ್ತೇನೆ ಅಂತ ರಚನಾ ಅಡುಗೆ ಮನೆಗೆ ಬರ್ತಾಳೆ. ನಾನು ನಿಮಗೆ ಸಹಾಯ ಮಾಡ್ಲಾ ಅಂತ ಕೇಳ್ತಾಳೆ. ಹೇಗೆ ಅಂತ ಜೀವಾ ಕೇಳೋ ಪ್ರಶ್ನೆಗೆ, ಪಾತ್ರೆ ತೊಳೆದುಕೊಡಲಾ ಅಂತಾಳೆ ರಚನಾ. ನಿನ್ನೆಯಿಂದ ನಮ್ಮನ್ನು ತೊಳೆದಿದ್ದು ಸಾಕು. ನಿಮ್ಮ ಕಣ್ಣು ಈ ಪಾತ್ರೆ ಮೇಲೆ ಬಿದ್ದಿದೆ ಅಂದ್ರೆ ಈ ಪಾತ್ರೆ ಆಯಸ್ಸು ಮುಗಿದಂತೆ. ಸರ್ವನಾಶ ಗ್ಯಾರಂಟಿ ಅಂತ ಜೀವಾ ಹೇಳ್ತಿದ್ದಂತೆ ಹುಸಿ ಮುನಿಸು ತೋರಿಸುವ ರಚನಾ, ಯಾಕೆ ಹಾಗೆಲ್ಲ ಮಾಡ್ತೀರಾ, ಹೆಲ್ಪ್ ಮಾಡ್ತಿನಿ ಅಂತ ತಾನೇ ನಾನು ಹೇಳಿದ್ದು ಅಂತ ಆವಾಜ್ ಹಾಕ್ತಾಳೆ. ನೀವು ಮಾಡಿರೋ ಸಹಾಯ ತಡೆದುಕೊಳ್ಳೋಕೆ ಒಂದು ಜನ್ಮನಾದ್ರೂ ಬೇಕು. ಅದನ್ನು ತಡೆಯೋ ಶಕ್ತಿ ನಮಗಿಲ್ಲ ಅಂದ್ರೂ ರಚನಾ ಬಿಡೋದಿಲ್ಲ. ವಿಧಿಯಿಲ್ಲದೆ ಜೀವಾ, ರಚನಾಗೆ ಒಂದು ಕೆಲ್ಸ ನೀಡ್ತಾನೆ. ಹಾಲು ಕಾಯ್ತಾ ಇದೆ ನೋಡ್ತಾ ಇರಿ ಅಂತಾನೆ. ಇದನ್ನು ಕೇಳಿದ ರಚನಾ ಒಮ್ಮೆ ಕನ್ಫ್ಯೂಸ್ ಆಗ್ತಾಳೆ. ನಂತ್ರ ಗ್ಯಾಸ್ ಆನ್ ಆಗಿದೆ, ಓಕೆ ಓಕೆ ಅಂತ ಹಾಲನ್ನೇ ನೋಡ್ತಾ ನಿಲ್ತಾಳೆ. ಹಾಲು ಉಕ್ಕದಿರುವಂತೆ ನೋಡ್ಕೊಳ್ಬೇಕು ಅಂತ ಜೀವಾ ಕಂಡೀಷನ್ ಏನೋ ರಚನಾ ಒಪ್ಪಿಕೊಳ್ತಾಳೆ. ಆದ್ರೆ ಮುಂದೆ ಆಗೋದು ಮಾತ್ರ ವೀಕ್ಷಕರ ಮುಖದಲ್ಲಿ ಗೊತ್ತಿಲ್ಲದೆ ನಗು ತರಿಸುತ್ತೆ.

Tap to resize

Latest Videos

undefined

ರೀಯಲ್ ಆಗಿ ಮಲ್ಲಿಗೆ ಪ್ರಪೋಸ್ ಮಾಡಲು ಹೋದ ಜೈ ದೇವ್, ನಾನು ಎಂಗೇಜ್ಡ್ ಎಂದ ರಾಧಾ!

ಹಾಲು ಇನ್ನೇನು ಉಕ್ಕುತ್ತಿದೆ ಎನ್ನುವಾಗ ಏನ್ ಮಾಡ್ಬೇಕು ಎಂಬುದು ರಚನಾಗೆ ತಿಳಿಯೋದಿಲ್ಲ. ಹಾಲು ಉಕ್ಕುತ್ತಿದ್ದಂತೆ ಸ್ಟಾಪ್ ಸ್ಟಾಪ್ ಅಂತ ಹಾಲಿಗೆ ಹೇಳ್ತಾಳೆ ರಚನಾ. ಇದನ್ನು ನೋಡಿ ಓಡಿ ಬರುವ ಜೀವಾ, ಗ್ಯಾಸ್ ಬಂದ್ ಮಾಡಿ, ರಚನಾ ನೋಡ್ತಿದ್ದಂತೆ ಬೇರೆ ಏನಾದ್ರೂ ಹೆಲ್ಪ್ ಮಾಡ್ಲಾ ಅಂತ ರಚನಾ ಕೇಳ್ತಾಳೆ. ಕೋಪದಲ್ಲಿ ಪಾತ್ರೆ ಮೇಲೆತ್ತುವ ಜೀವಾನಿಂದ ತಪ್ಪಿಸಿಕೊಂಡು ಓಡ್ತಾಳೆ ರಚನಾ. ಕಲರ್ಸ್ ಕನ್ನಡ ಇನ್ಸ್ಟಾಗ್ರಾಮ್ (Instagram)ನಲ್ಲಿ ಪೋಸ್ಟ್ ಆಗಿರುವ ಪ್ರೋಮೋ ನೋಡಿದ ವೀಕ್ಷಕರು, ನಿಮ್ಮಿಬ್ಬರನ್ನು ಒಟ್ಟಿಗೆ ನೋಡಲು ಖುಷಿಯಾಗುತ್ತೆ. ನಿಮ್ಮಿಬ್ಬರ ಜಗಳ ಸೂಪರ್ ಅಂತ ಕಮೆಂಟ್ ಮಾಡಿದ್ದಾರೆ. 

ಕರಿಷ್ಮಾ ಕಪೂರ್ ಮಾತ್ರವಲ್ಲ, sandalwood ಮಿಲನಾ ಸಹ ಮಗು ಆಗ್ತಿದ್ದಂತೆ ಕೆಲಸದಲ್ಲಿ ತಲ್ಲೀನ

ಜೀವಾ ಹಾಗೂ ಕೃಷ್ಣ ಜೀವನದಲ್ಲಿ ಹೊಸದಾಗಿ ಬಂದಿದ್ದು ರಚನಾ. ಅಪ್ಪ ಮಗಳು ದೂರವಾಗ್ಬಾರದು ಹಾಗೆ ಅಶ್ವಿನ್ ಜೊತೆ ಮದುವೆಯಾಗೋದನ್ನು ತಪ್ಪಿಸಿಕೊಳ್ಳಬೇಕು ಎನ್ನುವ ಉದ್ದೇಶದಿಂದ ಚಿಕ್ಕಪ್ಪನ ಮಾತು ಕೇಳಿ, ತನಗೆ ತಾನೇ ತಾಳಿ ಕಟ್ಟಿಕೊಂಡು, ಕೋರ್ಟ್ನಲ್ಲಿ ಎಲ್ಲರ ಮುಂದೆ ನಾನು ಜೀವಾ ಪತ್ನಿ ಎಂದು ನಂಬಿಸಿರುವ ರಚನಾ ಹಾಗೂ ಜೀವಾ ಸತ್ಯ ಅಶ್ವಿನ್ ಗೆ ಗೊತ್ತಾಗಿದೆ. ಕುಡಿದ ಮತ್ತಿನಲ್ಲಿ ಎಲ್ಲ ಮಾತುಗಳನ್ನು ಅಶ್ವಿನ್ ಕೇಳಿಸಿಕೊಂಡಿದ್ದಲ್ಲದೆ ಅದನ್ನು ಮೀಡಿಯಾ ಮುಂದೆ ಹೇಳಿದ್ದಾನೆ. ಆದ್ರೆ ನಶೆ ಇಳಿದ್ಮೇಲೆ ಏನಾಗಿತ್ತು ಎಂಬುದು ಮರೆತು ಹೋಗಿದೆ. ಈ ಬಗ್ಗೆ ವಜ್ರೇಶ್ವರಿ ಪ್ರಶ್ನೆ ಕೇಳ್ತಿದ್ದರು ಅಶ್ವಿನ್ಗೆ ಏನೂ ನೆನಪಿಗೆ ಬರ್ತಿಲ್ಲ. 

click me!